27th July 2024
Share

TUMAKURU:SHAKTHIPEETA FOUNDATION

ತುಮಕೂರು ಏರ್‍ಪೋರ್ಟ್ ರಾಜ್ಯ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆಯೇ ಇಲ್ಲ, ಎಂದು ಬೃಹತ್ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ರವರು ಸ್ಪಷ್ಟ ಪಡಿಸಿದರು.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರು ಮತ್ತು ರಾಜ್ಯ ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್ ರವರು ಸಚಿವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದಾಗ ಈ ವಿಚಾರ ತೀಸಿದರು.

ತುಮಕೂರು ಏರ್ ಪೋರ್ಟ್ ಮಾಡುವುದಾದರೇ ಯಾವುದೇ ಅಡೆತಡೆ ಇಲ್ಲ, ಆದರೇ ಬೆಂಗಳೂರು ಇಂಟರ್ ನ್ಯಾಷನಲ್ ಏರ್‍ಪೋರ್ಟ್-2 ಮಾಡುವುದಾದರೆ, ದೂರದ ಬಗ್ಗೆ ವಿಶೇಷ ಗಮನ ಹರಿಸಬೇಕಾಗುವುದು.

ಕೆಂಪೇಗೌಡ ಏರ್‍ಪೋರ್ಟ್‍ಗೆ ಹತ್ತಿರವೇ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು. ಏರಿಯಲ್ ಡಿಸ್ಟೆನ್ಸ್ ಎಷ್ಟಿದೆ, ಬೆಂಗಳೂರಿನಿಂದ ದೂರ ಎಷ್ಟಿದೆ, ಇತ್ಯಾದಿ ಮಾಹಿತಿಗಳ  ಸಮೀಕ್ಷೆ ಆಗಬೇಕಿದೆ.

ಜಿಲ್ಲಾಧಿಕಾರಿಗಳಿಂದ 8000 ಕ್ಕೂ ಹೆಚ್ಚು ಎಕರೆ ಜಮೀನು ಗುರುತಿಸಲಾಗಿದೆ ಎಂದು ಪತ್ರ ಬರೆದರೆ, ಏರ್‍ಪೋರ್ಟ್ ಪ್ರಸ್ತಾವನೆ ಆಗುವುದಿಲ್ಲ, ಎಲ್ಲರೂ ಈ ಬಗ್ಗೆ ಕೇಳುವವರೇ ಆಗಿದ್ದಾರೆ. ಸಚಿವನಾಗೆ ನನಗೆ ಮಾಹಿತಿ ಇಲ್ಲ, ಅದು ನಿಮ್ಮ ಸಲಹೆ ಅಷ್ಟೆ ಎಂದು ಖಡಕ್ ಆಗಿ ಹೇಳಿದರು.

ಬಸವರಾಜ್ ರವರು ಮೊದಲು ಸಾಧಕ-ಭಾದಕಗಳ ಬಗ್ಗೆ ಸಮೀಕ್ಷೆ ನಡೆಸಿದ ನಂತರ ನಿರ್ಧಾರಕ್ಕೆ ಬರೋಣ ಎಂಬ ಸಲಹೇ ನೀಡಿದರು.

ಕೇಂದ್ರ ಸರ್ಕಾರದಿಂದ ತುಮಕೂರಿನ ವಸಂತಾನರಸಾಪುರಕ್ಕೆ ವಿವಿಧ ಯೋಜನೆ ಮಂಜೂರಾತಿ ಬಗ್ಗೆ ಪ್ರಸ್ತಾವನೆ ಸಲ್ಲಿಸುವ ಸಂದರ್ಭದಲ್ಲಿ ಈ ಮಾತುಕತೆ ನಡೆಯಿತು.

ಕೂಡಲೇ ಈ ಯೋಜನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು.ಅಲ್ಲಿ ಮಂಜೂರು ಮಾಡಿಸಿಕೊಂಡು ಬರುವುದು ನಿಮಗೆ ಬಿಟ್ಟಿದ್ದು, ಮಾರ್ಚ್ ತಿಂಗಳಲ್ಲಿ ಅಥವಾ ಚುನಾವಣೆ ಘೋಷಣೆಯಾಗುವ ಮುನ್ನ ಏನುಬೇಕಾದರೂ ಆಗಬಹುದು, ಎಂದು ಹೇಳುವ ಮೂಲಕ ಚಟಾಕಿ ಹಾರಿಸಿದರು.