25th November 2024
Share

TUMAKURU:SHAKTHIPEETA FOUNDATION

  ರಾಜ್ಯ ಸರ್ಕಾರದ ಹಿರಿಯ ಐ.ಎ.ಎಸ್ ಅಧಿಕಾರಿಯೊಬ್ಬರ ಕನಸು, ಸಾಂಸ್ಕøತಿಕ ರಾಯಭಾರಿ ವಿಶ್ವಗುರು ಬಸವಣ್ಣ ಅಧ್ಯಯನ ಪೀಠ ಸ್ಥಾಪನೆ. ಅವರು ಕಳೆದ 3-4 ವರ್ಷಗಳಿಂದ ಈ ಬಗ್ಗೆ ಕುಂದರನಹಳ್ಳಿ ರಮೇಶ್ ರವರೊಂದಿಗೆ, ಸಮಾಲೋಚನೆ ನಡೆಸುತ್ತಿದ್ದರಂತೆ. ಇದಕ್ಕೆ ಒಂದು ಸ್ಪಷ್ಟ ತಿರುವು ದೊರಕಿರಲಿಲ್ಲವಂತೆ.

 ಬೆಂಗಳೂರಿನಲ್ಲಿ ಸ್ಥಾಪಿಸುವುದೋ ಅಥವಾ ತುಮಕೂರಿನಲ್ಲಿ ಸ್ಥಾಪಿಸುವುದೋ ಎಂಬ ಚರ್ಚೆ ಈಗ ಆರಂಭವಾಗಿದೆ. ವಿಶ್ವಗುರು ಬಸವಣ್ಣನವರನ್ನು, ಕರ್ನಾಟಕ ರಾಜ್ಯ ಸರ್ಕಾರ ಸಾಂಸ್ಕøತಿಕ ರಾಯಭಾರಿಯಾಗಿ ಘೋಷಣೆ ಮಾಡಿದೆ.

ಉತ್ತರ ಕರ್ನಾಟಕದ ಕಾಂಗ್ರೆಸ್ ನಾಯಕರೊಬ್ಬರೊಡನೆ ಬಸವಣ್ಣವರ ಸಿದ್ಧಾಂತಗಳ ಬಗ್ಗೆ ಸಮಾಲೋಚನೆ ನಡೆಸಿದಾಗ, ಅವರು ಹೇಳಿದ ಮಾತು.

ನಮ್ಮ ಸರ್ಕಾರವೇನೋ ಸಾಂಸ್ಕøತಿಕ ರಾಯಭಾರಿಯಾಗಿ ಘೋಶಿಸಿದೆ. ಆದರೇ ಬಸವಣ್ಣವರ ಸಿದ್ಧಾಂತಗಳಿಗೂ, ಸರ್ಕಾರದ ನಡವಳಿಕೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ನಾವು ಮಾತನಾಡಬಾರದು. ಆದರೂ ಸತ್ಯ ಯಾವಾÀಗಲೂ ಸತ್ಯವೇ? ಎಂದು ಅವರು ಹೇಳಿದ ಪದಗಳು ಈ ರೀತಿ ಇವೆ.

ಜಾತಿ ರಹಿತ ಸಮಾಜ ಆದರೇ ರಾಜ್ಯ ಸರ್ಕಾರ ಜಾತಿಗಣತಿ ವಿವಾದ ಸೃಷ್ಠಿಸಿದೆ, ಎಂಬ ಆರೋಪ ಎದುರಿಸುತ್ತದೆ. ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಜಾತಿ ಪದ್ಧತಿ ಇನ್ನೂ ಮುಂದುವರೆಯಬೇಕೆ?

ಕಾಯಕವೇ ಕೈಲಾಸ; ಆದರೇ ರಾಜ್ಯ ಸರ್ಕಾರ ಗ್ಯಾರಂಟಿ, ಬಾಗ್ಯಗಳನ್ನು ನೀಡಿ, ದುಡಿಯುವ ಕೈಗಳಿಗೆ ಉದ್ಯೋಗ ನೀಡುತ್ತಿಲ್ಲ ಎಂಬ ಆರೋಪ ಎದುರಿಸುತ್ತದೆ.

ಸಾಮಾಜಿಕ ನ್ಯಾಯ/ಸಮಾನತೆ; ಈ ಆಲೋಚನೆಯತ್ತ ರಾಜ್ಯ ಸರ್ಕಾರ ಧೃಡ ಹೆಜ್ಜೆ ಇಟ್ಟಿದೆ ಎಂದರೆ ಅತಿಶಯೋಕ್ತಿಯಲ್ಲ. ಇಲ್ಲಿಯೂ ಮುಂದುವರೆದ ಜಾತಿ* ಅಹಿಂದ ಎಂಬ ಕಂದಕ ಸೃಷ್ಠಿಯಾಗಿದೆ. ಒಂದು ಸ್ಪಷ್ಠ ರೂಪುರೇಷೆ ಬೇಕಲ್ಲವೇ?

ನೋಡಿ ಈ ವಿಚಾರಗಳ ಬಗ್ಗೆ ನಂತರ ಆಲೋಚನೆ ಮಾಡೋಣ, ನಿಮ್ಮ ಅಭಿಪ್ರಾಯ ತಿಳಿಸಿ ಎಂದಾಗ ಅವರು ಹೇಳಿದ ಮಾತು. ಬಸವಣ್ಣನವರ ತತ್ವ ಸಿದ್ಧಾಂತವನ್ನು, ಅಧ್ಯಯನ ಪೀಠ ಸ್ಥಾಪನೆ ಮಾಡುವವರಾದರೂ, ಅಳವಡಿಸಿಕೊಳ್ಳವುದಾದರೇ ಮಾಡಬಹುದು. ಇಲ್ಲವಾದಲ್ಲಿ ಬಸವಣ್ಣ ನಗುತ್ತಾರೇ’, ಎನ್ನುವುದೇ ?

ಅಗೋಚರ ಶಕ್ತಿ.