21st November 2024
Share

TUMAKURU:SHAKTHIPEETA FOUNDATION

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಗರ ಪ್ರದೇಶಗಳಲ್ಲಿ  24/7 ಕುಡಿಯುವ ನೀರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಲಜೀವನ್ ಮಿಷನ್ ಯೋಜನೆಗೆ ಕೋಟಿಗಟ್ಟಲೇ ಹಣ ವ್ಯಯಮಾಡಿದ್ದಾರೆ. ಫೈಪ್‍ಗಳಲ್ಲಿ ನೀರೇ ಬರುತ್ತಿಲ್ಲ. ಎಂಬ ಆರೋಪ ಕೇಳಿ ಬರುತ್ತಿದೆ.

ಹೌದು ನಿಜ ಈ ಯೋಜನೆಗಳಿಗೆ ಕೊಟ್ಟ ವಿಶೇಷ ಗಮನವನ್ನು, ಕುಡಿಯುವ ನೀರಿಗಾಗಿಯೇ ನದಿ ನೀರಿನ ಸಂಗ್ರಹಕ್ಕೆ ಸರ್ಕಾರಗಳು ಯೋಜನೆ ರೂಪಿಸಲಿಲ್ಲ ಎಂಬ ಕೊರಗು ಇದೆ. ಜಲಜೀವನ್ ಮಿಷನ್ ಕಾರಿಡಾರ್ ಯೋಜನೆ ಜಾರಿಗೊಳಿಸಿ, ವಾಟರ್ ಬ್ಯಾಂಕ್ ನಿರ್ಮಾಣ ಮಾಡಿ, ಪ್ರವಾಹ ಸಂದರ್ಭದಲ್ಲಿ ನದಿ ನೀರು ಸಂಗ್ರಹ ಮಾಡಲು ವಿಶೇಷ ಯೋಜನೆ ರೂಪಿಸುವುದು ಸೂಕ್ತವಾಗಿದೆ.

ಕೇಂದ್ರ ಸರ್ಕಾರ ನದಿ ಜೋಡಣೆ ಮಾಡುವಾಗ ಈ ಯೋಜನೆಗೆ ಆಧ್ಯತೆಗೆ ನೀಡಬೇಕು. ಕಳೆದ ಹಲವಾರು ವರ್ಷಗಳಿಂದ ನದಿ ಜೋಡಣೆ ಬಗ್ಗೆ, ಸಂಭಂಧಿಸಿದ ರಾಜ್ಯಗಳು ಒಮ್ಮತಕ್ಕೆ ಬರುತ್ತಿಲ್ಲ. ಜನಸಂಖ್ಯೆ ಆಧಾರದಲ್ಲಿ ಕುಡಿಯುವ ನೀರಿನ ಯೋಜನೆಯಾಗಿ ಜಾರಿ ಮಾಡುವತ್ತ ಗಮನ ಹರಿಸಿದರೆ ಒಳ್ಳೆಯದು.

ಬರಗಾಲ ಮತ್ತು ಚುನಾವಣೆ ಬಂದಾಗ ಮಾತ್ರ ನೀರಿನ ಬಗ್ಗೆ ಚರ್ಚೆಮಾಡುತ್ತಾರೆ, ನಂತರ ಎಲ್ಲಾ ಪಕ್ಷಗಳ ನೇತೃತ್ವದ ಸರ್ಕಾರಗಳು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.

  1. ಕರ್ನಾಟಕ ರಾಜ್ಯದ ಸುಮಾರು 6000 ಗ್ರಾಮಪಂಚಾಯಿತಿಗಳಿಗೆ ಕುಡಿಯುವ ನೀರಿಗೆ ಕೇವಲ 72 ಟಿ.ಎಂ.ಸಿ ಅಡಿ ನೀರು ಸಾಕಂತೆ.
  2. ರಾಜ್ಯದ 300 ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಿಗೆ, ಕುಡಿಯುವ ನೀರಿಗೆ ಸುಮಾರು 150 ಟಿ.ಎಂ.ಸಿ ಅಡಿ ನೀರು ಬೇಕಂತೆ.
  3. ಕೈಗಾರಿಕೆಗಳಿಗೆ, ಕೆರೆ ಕಟ್ಟೆಗಳಿಗೆ ಸುಮಾರು 350 ಟಿ.ಎಂ.ಸಿ ಅಡಿ ನೀರು ಸಾಕಂತೆ.

ಒಟ್ಟು 572 ರಿಂದ 600 ಟಿ.ಎಂ.ಸಿ ಅಡಿ ನದಿ ನೀರನ್ನು, ಯಾವುದೇ ಬೆಳೆಗಳಿಗೆ ನೀಡದೇ, ಕುಡಿಯುವ ನೀರು ಮತ್ತು ಕೆರೆ-ಕಟ್ಟೆಗಳಿಗೆ ನಿಗದಿ ಮಾಡಿ, ಹೊಸ ಯೋಜನೆ ರೂಪಿಸುವ ಗ್ಯಾರಂಟಿ ಯಾವ ಪಕ್ಷದವರು ನೀಡುತ್ತಾರೋ ಕಾದು ನೋಡಬೇಕು.

 ಈ 600 ಟಿ.ಎಂ.ಸಿ ಅಡಿ ನದಿ ನೀರಿನ ಯೋಜನೆ ರೂಪಿಸಲು ಸಾಧ್ಯಾತಾ ವರದಿ ಅಧ್ಯಯನ ಮಾಡಲು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ , ಸರ್ಕಾರ ಆಧೇಶಿಸಿದ್ದ/ಸೂಚಿಸಿದ್ದ ಕಡತ ನಿದ್ದೆಗೆ ಜಾರಿದೆ.