21st November 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ : ದಿನಾಂಕ:22.03.2024 ರಿಂದ ಶಕ್ತಿಪೀಠಗಳ ನಿಖರವಾದ ಮಾಹಿತಿ ಸಂಗ್ರಹಿಸಲು ಸುಮಾರು 108 ಕ್ಕೂ ಹೆಚ್ಚು ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಪತ್ರಗಳನ್ನು ರವಾನಿಸಲಾಗಿದೆ.

ಅಭಿವೃದ್ಧಿ ಪೀಠ : ಇದೂವರೆಗೂ, ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ, ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ, ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ ಭಾರತ ದೇಶದ ವ್ಯಾಪ್ತಿಯಲ್ಲಿ ಆಗ ಬೇಕಾದ ಯೋಜನೆಗಳಿಗೆ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕಳೆದ 40 ವರ್ಷಗಳಿಂದ ಪ್ರಯತ್ನ ಮಾಡಿರುವ ಬಗ್ಗೆ, ವಿವಿಧ ಕಚೇರಿಗಳ ದಾಖಲೆಗಳ ಸಂಗ್ರಹಕ್ಕಾಗಿ ಮಾಹತಿ ಹಕ್ಕು ಅಧಿನಿಯಮದ ಪ್ರಕಾರ ಪತ್ರ ಬರೆಯಲು ಗುರಿ ಹಾಕಿಕೊಳ್ಳಲಾಗಿದೆ.

ಶ್ರೀ ಟಿ.ಆರ್.ರಘೊತ್ತಮರಾವ್ ರವರ ನಾಯಕತ್ವದಲ್ಲಿ,  ಶ್ರೀ ನೌಮನ್ ಅಹಮ್ಮದ್ ರವರ ತಂಡ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಸಂಗ್ರಹ ಮಾಡಲು ಸಿದ್ಧತೆ ಆರಂಭಿಸಲಿದೆ. ಈ ವಾರದೊಳಗೆ ಎಂ.ಓ.ಯು ಮಾಡಿಕೊಳ್ಳಲಾಗುವುದು.

ಮಾಜಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರ ಒಂದು ಹೇಳಿಕೆ ಗಮನಿಸಿದ್ದೆ, ಎಂ.ಪಿ ಗಳಿಗೆ ಒಂದು ಲಿಮಿಟೇಷನ್ ಇರುತ್ತದೆ, ಹೇಳಿದ್ದೆಲ್ಲಾ ಮಾಡಲು ಕಷ್ಟ. ಇದು ಸತ್ಯ ಆದರೆ ಪ್ರಯತ್ನ ಮುಖ್ಯ ಅಲ್ಲವೇ?

ಮಾಜಿ ಸಂಸದರಾದ ಶ್ರೀ ಎಸ್.ಪಿ.ಮುದ್ದು ಹುಮೇಗೌಡರವರ ಒಂದು ಹೇಳಿಕೆ ಗಮನಿಸಿದ್ದೆ, ಎಂ.ಪಿ ಯವರು ಪತ್ರ ಬರೆದ ಮಾತ್ರಕ್ಕೆ ಯೋಜನೆಗಳ ಸಾಧನೆಯಲ್ಲ ಎಂಬುದಾಗಿತ್ತು. ಹೌದು ಆಗಂತ ಪ್ರಯತ್ನ ಮಾಡದೇ ಇದ್ದರೆ ಹೇಗೆ?

ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕಲ್ಲು ಎಸೆಯೋಣ, ಯಾವುದಾದರೂ ಬೀಳಲಿ,ಪತ್ರ ಬರೆಯೋಕೆ ಏನು ಸಮಸ್ಯೆ, ದೇವರು ನಿಮಗೆ ಕಲೆ ಕೊಟ್ಟವನೇ, ಬರೆಯಿರಿ ರಾಯರೇ ಎನ್ನುತ್ತಾರೆ, ಹೌದು ಇದು ಒಂದು ಕಲೆ ಅಲ್ಲವೇ?

 ಒಂದೊಂದು ಸಲ ಅವರು ಬೇಜಾರು ಮಾಡಿಕೊಳ್ಳುತ್ತಾರೆ ಅಂತ ಕಣ್ಣು ಮುಚ್ಚಿಕೊಂಡು ಸೈನ್ ಹಾಕುತ್ತೇನೆ, ಯಾವುದು ಆಗುತ್ತೋ, ಇಲ್ಲವೋ ಎಂಬ ಮಾತನ್ನು ಹೇಳಿದ್ದಾರೆ, ಎಂಬ ಮಾತು ಕಿವಿಗೆ ಬಿದ್ದಿದೆ.

1947 ರಿಂದ ಇದೂವರೆಗೂ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಯಾವ ಎಂ.ಪಿಯವರು, ಏನೇನು ಮಾಡಿದ್ದಾರೆ ಎಂಬ ನಿಖರವಾದ ದಾಖಲೆ ಸಂಗ್ರಹ ಮಾಡಬೇಕಲ್ಲವೇ? ಜೊತೆಗೆ, ಮುಂದಿನ ಎಂ.ಪಿಯವರು ಏನು ಮಾಡಬೇಕು ಎಂಬ ಡಾಟಾವನ್ನು ನೀಡುವುದು ಅಭಿವೃದ್ಧಿ ಪರ ಚಿಂತಕರ ಕೆಲಸ. ಇದೇ ಮತದಾರರ ಪ್ರಣಾಳಿಕೆಯ ಸಾರಾಂಶ,

 ನಮ್ಮ ತಂಡಕ್ಕೆ, ಕೆಲವು ಟೀಕಾಕಾರರ ತಂಡ ಅಣಕವಾಡುತ್ತಿರುವ ಅಂಶಗಳು, ಅನನುಭವಿಗಳು, ಯಾವುದು ಒಂದನ್ನು ಮಾಡುವುದಿಲ್ಲ, ಎಲ್ಲಾ ಮಾಡಲು ಕೈ ಚಾಚುತ್ತಾರೆ, ಯಾವುದೂ ಪೂರ್ಣಗೊಳ್ಳುವುದಿಲ್ಲ, ಎಲ್ಲಾ ಅರ್ಧ ಭರ್ದ, ಹೌದು ದೇವರು ಅವರಿಗೆ ಬುದ್ದಿಕೊಟ್ಟಿರುವದನ್ನು ಅವರು ಹೇಳುತ್ತಾರೆ. ನಾವೇಕೆ ತಲೆ ಕೆಡಿಸಿಕೊಳ್ಳಬೇಕು.

ಒಮ್ಮೆ, ದಿ. ಕೆ.ಆರ್.ನಾಯಕ್ ರವರು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಭೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ಮಾಡಿದ್ದರು. ಕುಂದರನಹಳ್ಳಿ ರಮೇಶ್ ರವರಿಗೆ, ದೇವಿಯ ವಿಶೇಷ ಆಶಿರ್ವಾದ ಇದೆಯಂತೆ, ಅವರು ಏನು ಮಾಡುತ್ತೇವೆ ಎಂದರು ನಾವು ಅಡ್ಡ ಹೋಗಬಾರದು, ನಮ್ಮತ್ರ ಅವರು ದುಡ್ಡು ಕೇಳಿಲ್ಲವಲ್ಲ, ಇರುವ ಜ್ಞಾನ ದಾನ ಮಾಡಲು ನಮಗೆ ಏನು ತೊಂದರೆ, ಪ್ರಯತ್ನ ಮಾಡಲು ಹಿಂಜರಿಕೆ ಏಕೆ? ಎಂದು ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

ನನ್ನ ಜೊತೆ ಇದೂವರೆಗೂ ಶ್ರಮಿಸಿರುವ ಸಾವಿರಾರು ಜನರ ಸಹಕಾರವೂ ದಾಖಲೆಯಲ್ಲಿ ಸೇರಬೇಕಲ್ಲವೇ ? ಇದೇ ಇತಿಹಾಸ. ತುಮಕೂರು ಜಿಲ್ಲೆಯಲ್ಲಿ ಆಡು ಮುಟ್ಟದ ಸೊಪ್ಪಿಲ್ಲಫೋರಂ ಕೈಹಾಕದ ಕೆಲಸವಿಲ್ಲ ಎಂಬ ಮಾತು ಇದೆ. ಅಭಿವೃದ್ಧಿ ಮ್ಯೂಸಿಯಂನಲ್ಲಿ ಸಂಗ್ರಹ ಮಾಡಿದ ದಾಖಲೆ ನಂತರ, ಯಾರು ಯಾರು ಯಾವ ರೀತಿ ಪ್ರತಿಕ್ರೀಯೆ ವ್ಯಕ್ತ ಪಡಿಸುತ್ತಾರೆ, ಕಾದು ನೋಡೋಣ.

ಈಗ ನಾವು ಇದೂವರೆಗೂ ಏನು ಮಾಡಿದ್ದೇವೆ ಎಂಬ ಡಿಜಿಟಲ್ ದಾಖಲೆ ನೀಡವುದು ನಮ್ಮ ಕರ್ತವ್ಯ. ಕಳೆದ 40 ವರ್ಷಗಳ ಅವಧಿಯ ಜಿ.ಎಸ್.ಬಸವರಾಜ್ ರವರ ಅನುಭವ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅನುಭವ, ಕಳೆದ 36 ವರ್ಷಗಳ ನನ್ನ ಅನುಭವ, ಕಳೆದ 23 ವರ್ಷಗಳಿಂದ ನಮ್ಮ ಜೊತೆ ನಿರಂತರವಾಗಿ ಶ್ರಮಿಸುತ್ತಿರುವ ರಘೋತ್ತಮರಾವರ್ ರವರ ಅನುಭವ ಹಾಗೂ ಜಿಲ್ಲೆಯ ಎಲ್ಲಾ ರಾಜಕಾರಣಿಗಳ ಮತ್ತು ಸಾವಿರಾರು ಜನ ಚಿಂತಕರ ಸಹಕಾರದ ಡಿಜಿಟಲ್ ದಾಖಲೆಯನ್ನು ಡಾಟಾ ವಿಜ್ಞಾನಿ ಕೆ.ಆರ್.ಸೋಹನ್ ಮಾಡಲು ಆಲೋಚಿಸಿದ್ದಾರೆ.

ಬಹುಷಃ ಇದು ಒಂದು ರಾಷ್ಟ್ರದಲ್ಲಿಯೇ ವಿಶೇಷ ಅಭಿವೃದ್ಧಿ ಮ್ಯೂಸಿಯಂ’ ಅಗಲಿದೆ. ವಿಶಿಷ್ಠವಾದ ತುಮಕೂರು ಲೋಕಸಭಾ ಕ್ಷೇತ್ರದ ಅಧ್ಯಯನ ಪೀಠ’ವಾಗಲಿದೆ.

ತಮ್ಮ ಜ್ಞಾನ ದಾನಕ್ಕಾಗಿ ಮನವಿ.