22nd December 2024
Share

TUMAKURU:SHAKTHIPEETA FOUNDATION

ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಇಂಡಿಯಾ ಫಂಡ್ಸ್

 ದಿನಾಂಕ:04.06.2024 ರಂದು ಲೋಕಸಭಾ ಚುನಾವಣೆ ಪಲಿತಾಂಶದ ದಿವಸ, ತುಮಕೂರಿನ ಶಕ್ತಿಭವನದಲ್ಲಿ  ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಇಂಡಿಯಾ ಫಂಡ್ಸ್ ಕರ್ನಾಟಕ ರಾಜ್ಯದಿಂದ ನೂತನವಾಗಿ ಆಯ್ಕೆಯಾಗುವ 28 ಜನ ಲೋಕಸಭಾ ಸದಸ್ಯರು, ಹಾಲಿ ಇರುವ 12 ಜನ ರಾಜ್ಯಸಭಾ ಸದಸ್ಯರು, ಇಬ್ಬರು ನಾಮನಿರ್ದೇಶಿತ ಸದಸ್ಯರು, ಇಬ್ಬರು ದೆಹಲಿ ಪ್ರತಿನಿಧಿಗಳು ಸೇರಿದಂತೆ ಸುಮಾರು 44 ಜನರ ಭಾವಚಿತ್ರ ಅನಾವರಣ ಮಾಡುವ ಮೂಲಕ ಆರಂಭಿಸಲಾಗುವುದು.

ಅವರವರ ಅವಧಿವರೆಗೆ, ಪ್ರತಿಯೊಬ್ಬರೂ ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸಲು ಪ್ರಯತ್ನ ಮಾಡುತ್ತಿರುವ, ಪ್ರತಿಯೊಂದು ಯೋಜನೆಗಳ ಮಾಹಿತಿಯನ್ನು ನಿರಂತರವಾಗಿ, ಅಫ್ಡೇಟ್ ಮಾಡಲಾಗುವುದು.

1947 ರಿಂದ ಅವರವರ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ ಯೋಜನೆಗಳ ಮಾಹಿತಿಯನ್ನು ಸಂಗ್ರಹಿಸಲು ಗುರಿಹೊಂದಲಾಗಿದೆ.

ಪ್ರತಿ  ವರ್ಷ ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಇಂಡಿಯಾ ಫಂಡ್ಸ್ ಆರಂಭದ ದಿವಸವನ್ನು ಕೇಂದ್ರ ಸರ್ಕಾರದ ಮಲತಾಯಿ ದಿನಾಚರಣೆ ದಿವಸ ವಾಗಿ ಆಚರಿಸಲಾಗುವುದು.

ಯಾವುದೇ ಪಕ್ಷವಿರಲಿ, ಆಡಳಿತ ಪಕ್ಷದವರ ಅಭಿಪ್ರಾಯ ಮತ್ತು ವಿರೋಧ ಪಕ್ಷಗಳ ಅಭಿಪ್ರಾಯಗಳು ದಾಖಲೆ ಸಹಿತ ಮುಕ್ತ ಚರ್ಚೆ ಆಗುವುದರ ಜೊತೆಗೆ, ಆಯಾ ವರ್ಷ ಮತದಾರರ ಮುಂದೆ, ಎಂಪಿಗಳ ಕರ್ತವ್ಯದ ಬಗ್ಗೆ ಪಾರದರ್ಶಕವಾಗಿ ಜಾಗೃತಿ ಮೂಡಿಸಲಾಗುವುದು. ರೂಪುರೇಷೆಗಳ ಸಿದ್ಧತೆ ಆರಂಭವಾಗಿದೆ.

ಆಸಕ್ತರು ಸಹಕರಿಸ ಬಹುದು.