TUMAKURU:SHAKTHIPEETA FOUNDATION
ದಿನಾಂಕ:01.08.1988 ರಂದು ತುಮಕೂರು ಜಿಲ್ಲೆ, ಕುಂದರನಹಳ್ಳಿ ಗಂಗಮಲ್ಲಮ್ಮ ದೇವರ ಪೂಜಿಸಿ, ಬಿದರೆಹಳ್ಳಕಾವಲ್ ನ ಸುಮಾರು 930 ಎಕರೆ, ಸರ್ಕಾರಿ ಜಮೀನಿನನಲ್ಲಿ ಯಾವುದಾದರೂ ಕೈಗಾರಿಕೆ ಸ್ಥಾಪನೆ ಮಾಡಲು ಹೋರಾಟ ಆರಂಭಿಸಿದ ಹಿನ್ನಲೆಯಲ್ಲಿ, ಸುಮಾರು 35 ವರ್ಷಗಳ ಹೋರಾಟದ ಫಲದಿಂದ, ಈಗ ಅಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಸ್ವಾಮ್ಯದ ಹೆಚ್.ಎ.ಎಲ್ ಯುದ್ಧ ಹೆಲಿಕ್ಯಾಪ್ಟರ್ ಘಟಕ ಆರಂಭವಾಗಿದೆ.
ದಿನಾಂಕ:04.05.2001 ರಂದು ಅತ್ಯಂತ ಸರಳವಾಗಿ, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸ್ಥಾಪನೆಯಾಗಿ ದಿನಾಂಕ:04.05.2024 ರ ವೇಳೆಗೆ, 23 ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ತುಮಕೂರು ನಗರಕ್ಕೆ, ಜಿಲ್ಲೆಗೆ, ರಾಜ್ಯ ಮಟ್ಟಕ್ಕೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ನೇತೃತ್ವದಲ್ಲಿ ನೂರಾರು ಯೋಜನೆಗಳ ಜಾರಿಗೆ ಶ್ರಮಿಸಲಾಗಿದೆ. ಆ ಎಲ್ಲಾ ಮಾಹಿತಿ ‘ಅಭಿವೃದ್ಧಿ ಮ್ಯೂಸಿಯಂ’ ನಲ್ಲಿ ಸಂಗ್ರಹ ಮಾಡಲು ಉದ್ದೇಶಿಸಲಾಗಿದೆ.
ದಿನಾಂಕ:16.08.2019 ರಂದು ಆರಂಭವಾದ ಶಕ್ತಿಪೀಠ ಫೌಂಡೇಷನ್ ವತಿಯಿಂದ ದಿನಾಂಕ:10.05.2024 ರಂದು ವಿಶ್ವದ 7-8 ದೇಶಗಳ 108 ಶಕ್ತಿಪೀಠ ಪೂಜಿಸಿ, ಅತ್ಯಂತ ಸರಳವಾಗಿ ‘ನಾಲೇಡ್ಜ್ ಬ್ಯಾಂಕ್ @ 2047’ ಕಾರ್ಯಾರಂಭ ಮಾಡಲಿದೆ,
ಮುಂದಿನ 23 ವರ್ಷ ಅಂದರೆ 04.05.2047 ರವರೆಗೆ ನಿರಂತರವಾಗಿ ‘ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ತರುವ ಕಾರ್ಯತಂತ್ರದ’ ನಿರ್ದಿಷ್ಟ ಗುರಿಯೊಂದಿಗೆ ಕಾರ್ಯ ನಿರ್ವಹಿಸಲಿದೆ.
ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠ ಮೂರು ವಿಭಾಗಗಳಿಂದ ಹಲವಾರು ಯೋಜನೆಗಳ ಜಾರಿಗೆ, ರೂಪುರೇಷೆ ನಿರ್ಧರಿಸಲಾಗಿದೆ. ಕುಂದರನಹಳ್ಳಿಯಿಂದ ಆರಂಭಿಸಿ, ವಿಶ್ವ ಸಂಸ್ಥೆವರೆಗೂ ತನ್ನ ಕಾರ್ಯ ಚಟುವಟಿಕೆ ವಿಸ್ತರಣೆಯಾಗಲಿದೆ.
ಮುಂದಿನ ದಿನಗಳಲ್ಲಿ ಶಕ್ತಿ ಭವನ, ಶಕ್ತಿಪೀಠ ಡಾಟಾ ಪಾರ್ಕ್ ಮತ್ತು ಶಕ್ತಿಪೀಠ ಕ್ಯಾಂಪಸ್ ಗಳಲ್ಲಿ ಎಲ್ಲಾ ಮಾಹಿತಿ ಹಾಗೂ ಪ್ರಾತ್ಯಾಕ್ಷಿಕೆಗಳು ತಲೆ ಎತ್ತಲಿವೆ.