TUMAKURU:SHAKTHIPEETA FOUNDATION
ಬಿಜೆಪಿ 2024 ರ ಲೋಕಸಭಾ ಚುನಾವಣೆಯ ಪ್ರಣಾಳಿಕೆ ಮೋದಿ ಗ್ಯಾರಂಟಿಯಲ್ಲಿ ರಾಷ್ಟ್ರೀಯ ಹಿರಿಯ ನಾಗರೀಕರ ಪೋರ್ಟಲ್ ಮೂಲಕ ಹಿರಿಯ ನಾಗರಿಕರಿಂದ ಜ್ಞಾನ ವಿನಿಮಯಕ್ಕೆ ಅನುಕೂಲ ಕಲ್ಪಿಸುವುದು.( Facilitating knowledge sharing by senior citizens: We will introduce a national senior citizens portal to honour the wisdom and experience of our elders by providing them with a plotform for sharing their stories,insights and knowledge) ಸೇರ್ಪಡೆ ಮಾಡಿದ್ದಾರೆ.
ನಮ್ಮ ಪರಿಕಲ್ಪನೆ ‘ನಾಲೇಡ್ಜ್ ಬ್ಯಾಂಕ್ @ 2047’ ಇದಾಗಿದೆ. ನಿಜಕ್ಕೂ ಇದೊಂದು ಬಹಳ ಒಳ್ಳೆಯ ನಿರ್ಧಾರ. ಸುಮಾರು 2 ವರ್ಷದ ನಮ್ಮ ಕನಸಿನ ಕೂಗು ಪ್ರಧಾನಿ ಶ್ರೀ ನರೇಂದ್ರಮೋದಿಯವರ, ರಾಷ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾರವರ, ಬಿಜೆಪಿ ಪ್ರಣಾಳಿಕೆ ಅಧ್ಯಕ್ಷರಾದ ಶ್ರೀ ರಾಜನಾಥ್ ಸಿಂಗ್ ರವರ ಗಮನಕ್ಕೆ ಬಿದ್ದಿರುವುದು ನಿಜಕ್ಕೂ ಹರ್ಷ ತಂದಿದೆ. ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ.
ಕಳೆದ 2 ವರ್ಷಗಳಿಂದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳ ಗಮನ ಸೆಳೆಯಲಾಗಿತ್ತು. ಹಲವಾರು ಪಕ್ಷಗಳ, ವಿವಿಧ ಸಂಘ ಸಂಸ್ಥೆಗಳ, ಉನ್ನತ ಮಟ್ಟದವರ ಗಮನಕ್ಕೆ ತರಲಾಗಿತ್ತು. ವಿವಿಧ ಸಮೀಕ್ಷೆಗಳ ಪ್ರಕಾರ ಕೇಂದ್ರದಲ್ಲಿ ಎನ್.ಡಿ.ಎ ಸರ್ಕಾರ ಬರಲಿದೆಯಂತೆ. ಅಂದು ಕೊಂಡಂತೆ ಆದಲ್ಲಿ ಕೇಂದ್ರ ಸರ್ಕಾರವೇ, ಈ ಪೋರ್ಟಲ್ ಆರಂಭಿಸಿದರೆ, ಆಸಕ್ತ ಜ್ಞಾನಿಗಳು ‘ವಿಕಸಿತ ಭಾರತ @ 2047’ ಕ್ಕೆ ಆನೇಕ ವಿಚಾರಗಳ ಬಗ್ಗೆ ಜ್ಞಾನದಾನ ಮಾಡಲಿದ್ದಾರೆ.
ನಮ್ಮ ಸಂಸ್ಥೆಯಿಂದ ದಿನಾಂಕ:10.05.2024 ರಂದು, ಆರಂಭ ಮಾಡಲು ಉದ್ದೇಶಿರುವ ದೇಶದಲ್ಲಿಯೇ ಮೊದಲ ‘ನಾಲೇಡ್ಜ್ ಬ್ಯಾಂಕ್ @ 2047’ ರ ಪರಿಕಲ್ಪನೆಗೆ ಬೆಲೆ ಬರಲಿದೆ. ಈ ಬಗ್ಗೆ ಜನ ಜಾಗೃತಿ ಅಗತ್ಯವಾಗಿದೆ.
ಈಗಾಗಲೇ ಹಿಂದಿನ ನಮ್ಮ ರಾಜ್ಯ ಸರ್ಕಾg, ನಮ್ಮ ಮನವಿ ಮೇರೆಗೆ, ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೆ ಪತ್ರ ಬರೆಯುವ ಮೂಲಕ ಚಾಲನೆ ನೀಡಿದೆ.