26th July 2024
Share

ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಫೈಲಟ್ ಯೋಜನೆ

1.            ಕಳೆದ 4-5 ವರ್ಷಗಳಿಂದ ರಚಿಸಿರುವ 545 ಶಕ್ತಿಪೀಠ ಫ್ಯಾಮಿಲಿಗಳ ತಂಡ, ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ, ಪ್ರತಿಯೊಂದು ಗ್ರಾಮ/ಬಡಾವಣೆಗಳ ಕನಿಷ್ಠ  200 ಜನ ಮತದಾರರ ಸಂಪರ್ಕಕ್ಕೆ ಗುರಿ, 545 ಜನರು ಸ್ವಂತ ವಾಹನದಲ್ಲಿ ಪ್ರವಾಸ ಮಾಡಿ,   ‘ಕನಿಷ್ಠ =1,09,000  ಮತದಾರರ ಸಂಪರ್ಕ’ ಮಾಡುತ್ತಿದ್ದಾರೆ. 2029 ರ ಲೋಕಸಭಾ ಚುನಾವಣೆ ವೇಳೆಗೆ, ಒಂದು ತಂಡದಿಂದ ಕನಿಷ್ಠ 2000 ಮತದಾರರ ಸಂಪರ್ಕದಂತೆ, ಕನಿಷ್ಠ 10,90,000 ಮತದಾರರ ಸಂಪರ್ಕ’ ಮಾಡಲು ಗುರಿ ಹಾಕಿಕೊಳ್ಳಲಾಗಿದೆ.

2.            ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಮುಖಾಂತರ, ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ ಸಿದ್ಧತೆಗೆ, ಡಾಟಾ ಮಿತ್ರರಿಗೆ ಮತ್ತು ಜಿಐಎಸ್ ಆಧಾರಿತ ಡಾಟಾ ವಿಶ್ಲೇಕರಿಗೂ ಸೇರಿ, ಪುಸ್ತಕವೊಂದಕ್ಕೆ ತಲಾ ರೂ 50000 ಮಂಜೂರಾತಿಗೆ ಪ್ರಯತ್ನ.

3.            ತುಮಕೂರು ವಿಶ್ವ ವಿದ್ಯಾನಿಲಯ ಈಗಾಗಲೇ ಆರಂಭಿಸಿರುವ ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ ಸಿದ್ಧತೆಗೆ, 1000 ಜನ ಉಪನ್ಯಾಸಕರು/ಅಧ್ಯಾಪಕರು/ನೌಕರರಿಗೆ, ತಲಾ 3 ಊರು/ಬಡಾವಣೆ ಹಂಚಿಕೆ ಮಾಡಿ, ವಿವಿಧ ಸವಲತ್ತುಗಳೊಂದಿಗೆ ಸರ್ಕಾರಗಳಿಂದ ಹೊಣೆಗಾರಿಕೆ.

4.            ಊರಿಗೊಬ್ಬ/ಬಡಾವಣೆಗೊಬ್ಬ ಸುಮಾರು 3500 ಡಾಟಾ ಮಿತ್ರರರಿಗೆ,  ಸರ್ಕಾರಗಳಿಂದ ವಿವಿಧ ಸವಲತ್ತುಗಳೊಂದಿಗೆ ಡಾಟಾ ಮಿತ್ರ ಸರ್ಟಿಫಿಕೇಟ್ ನೀಡಲು ಪ್ರಯತ್ನ.

5.            ಶಕ್ತಿಪೀಠ ಫ್ಯಾಮಿಲಿಗಳಿಗೆ, ಡಾಟಾ ಮಿತ್ರರರಿಗೆ ಅಥವಾ ಅವರು ಸೂಚಿಸುವವರಿಗೆ ರಫ್ತು ಉದ್ದಿಮೆಗೆ ಪ್ರೋತ್ಸಾಹ. ತುಮಕೂರು ಜಿಲ್ಲೆಯ ವಸಂತಾನರಸಾ ಪುರದ ಕೈಗಾರಿಕಾ ವಸಾಹತುವಿನಲ್ಲಿ, ರೂ 3-5 ಕೋಟಿ ವೆಚ್ಚದಲ್ಲಿ ಶಕ್ತಿಪೀಠ ಡಾಟಾ ಪಾರ್ಕ್ ರಫ್ತು ಭವನ ನಿರ್ಮಾಣ, ಬಾಡಿಗೆ ಹಣದಲ್ಲಿ 2047 ರವರೆಗೂ ಡಾಟಾ ಮಿತ್ರರ ಬಳಿ ಯಾವುದೇ ಸೇವಾ ಶುಲ್ಕ ಸಂಗ್ರಹ ಮಾಡದೇ ನಿರ್ವಹಣೆಗೆ ಚಿಂತನೆ.

ಕರ್ನಾಟಕ ರಾಜ್ಯ ವ್ಯಾಪ್ತಿ

6.            ಪ್ರಧಾನಿ ಶ್ರೀ ನರೇಂದ್ರಮೋದಿಯವರು ಮುಂದಿನ 5 ವರ್ಷಗಳ ಅಧ್ಯಯನ ಮತ್ತು ಸಂಶೋಧನೆಗಾಗಿ ರೂ ಒಂದು ಲಕ್ಷ ಕೋಟಿ ಹಣವನ್ನು ಮೀಸಲಿಟ್ಟಿದ್ದಾರೆ. ವಿಕಸಿತ ಭಾರತ @ 2047 ಅಧ್ಯಯನ, ಸಂಶೋಧನೆ ಮತ್ತು ಕೇಂದ್ರ ಸರ್ಕಾರದ ಅನುದಾನ ಮಂಜೂರಾತಿ ಕಡತಗಳ ಅನುಸರಣೆಗಾಗಿ, ವಿಶ್ವದ 108 ಶಕ್ತಿಪೀಠಗಳ ಪೂಜಿಸಿ, ರಾಜ್ಯದ ಯಾವುದೇ ಪಕ್ಷದ 28 ಜನ ಸಂಸದರು, 12 ಜನ ರಾಜ್ಯಸಭಾ ಸದಸ್ಯರು, ಇಬ್ಬರು ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರು ಮತ್ತು ಇಬ್ಬರು ದೆಹಲಿ ವಿಶೇಷ ಪ್ರತಿನಿಧಿಗಳು ಸೇರಿ 44 ಜನರ ನೇತೃತ್ವದಲ್ಲಿ, ಕರ್ನಾಟಕ ರಾಜ್ಯಕ್ಕೆ ಕೆಳಕಂಡ ಯೋಜನೆಗಳಿಗಾಗಿ ಅನುದಾನ ಮಂಜೂರು ಮಾಡಿಸಲು ಪ್ರಯತ್ನ.

7.            ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ಕಾರ್ಯತಂತ್ರ ರೂಪಿಸುವ ಸಲುವಾಗಿ, ರಾಜ್ಯಾಧ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲೂ’ ಕನಿಷ್ಠ 2 ಅಧ್ಯಯನ ಪೀಠದಂತೆ 545 ಅಧ್ಯಯನ ಪೀಠಗಳಿಗೆ ತಲಾ 5 ಕೋಟಿ ಸರ್ಕಾರಗಳಿಂದ ಅನುದಾನ ಮಂಜೂರಾತಿಗೆ ಶ್ರಮ. 545*5=2725 ಕೋಟಿ ಮಂಜೂರಾತಿಗೆ ಪ್ರಯತ್ನ.

  ಆಯಾ ವ್ಯಾಪ್ತಿಯ 1947 ರಿಂದ 2047 ರವರೆಗಿನ ಅಭಿವೃದ್ಧಿ ಯೋಜನೆಗಳ ಮ್ಯೂಸಿಯಂ, ವಿಶ್ಲೇಷಣೆ ಮತ್ತು ಅಧ್ಯಯನ ಪೀಠಗಳನ್ನು ಸ್ಥಾಪಿಸಲು ಆಸಕ್ತಿ ಇರುವ ವಿಶ್ವ ವಿದ್ಯಾನಿಲಯಗಳು, ಎನ್.ಜಿ.ಓ ಗಳು, ಸಹಕಾರಿ ಸಂಸ್ಥೆಗಳು, ಜಾತಿ ಸಂಘಟನೆಗಳು, ಮಾಧ್ಯಮ ಸಂಘಟನೆಗಳು, ಧಾರ್ಮಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಪರಿಣಿತ ವ್ಯಕ್ತಿ, ಸ್ಟಾಟ್ ಅಫ್ ಕಂಪನಿಗಳು, ಲೋಕಲ್ ಇನ್‍ವೆಸ್ಟರ್ ಗಳಿಗೆ ಸೂಕ್ತ ತರಬೇತಿ ನೀಡಲಾಗುವುದು. ಟ್ರಂಕಿ ಬೇಸಿಸ್ ನಲ್ಲಿ ಮಂಜೂರಾತಿಗೆ ಶ್ರಮ.

8.            ವಿಕಸಿತ ಭಾರತ @ 2047 ರವರೆಗೆ, 23 ವರ್ಷಗಳ ನಿರ್ವಹಣೆಗೆ, ವಾರ್ಷಿಕ ಅಧ್ಯಯನ ಪೀಠಕ್ಕೆ ತಲಾ ಒಂದು ಕೋಟಿಯಂತೆ. 545*23=12535 ಕೋಟಿ ಅನುದಾ£ವನ್ನು ಸರ್ಕಾರಗಳಿಂದ À ಮಂಜೂರಾತಿಗೆ ಪ್ರಯತ್ನ.

9.            ರಾಜ್ಯ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿಗಳ ಟೆಂಪ್ಲೇಟ್ ರಚನೆ, ರ್ಯಾಂಕಿಂಗ್ ರೂಪುರೇಷೆ ಸಿದ್ಧಪಡಿಸುವ ಮುಖಾಂತರ, ಎರಡನೇ ಹಂತದಲ್ಲಿ ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ ರಾಜ್ಯ ಮಟ್ಟಕ್ಕೆ ವಿಸ್ತರಣೆ.

545 ಅಧ್ಯಯನ ಪೀಠಗಳ ಜನ ಜಾಗೃತಿ ಆಂದೋಲನ- 2024 ರಿಂದ 2047.

ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ವರದಿಯಲ್ಲಿ ಸರ್ಕಾರಗಳಿಗೆ ಸಲಹೆ ನೀಡಿರುವ ಉದ್ದೇಶಿತ 545 ಅಧ್ಯಯನ ಪೀಠಗಳ ಸ್ಥಾಪನೆಗಾಗಿ ಜನ ಜಾಗೃತಿ.

 ರಾಜ್ಯದ ಎಲ್ಲಾ ವರ್ಗದ ವಿಶ್ವ ವಿದ್ಯಾನಿಲಯಗಳಲ್ಲಿ ಹಾಲಿ ಇರುವ 111 ಅಧ್ಯಯನ ಪೀಠಗಳು ಸೇರಿದಂತೆ, 545 ಅಧ್ಯಯನ ಪೀಠಗಳ ರಚನೆಗೆ ಸರ್ಕಾರ ಚಿಂತಿಸಬೇಕಿದೆ. ರಾಜ್ಯದಲ್ಲಿರುವ ಎಲ್ಲಾ ವಿಶ್ವ ವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳು ಮತ್ತು ಸಂಶೋದನಾ ಸಂಸ್ಥೆಗಳು ಒಂದೊಂದು ಅಧ್ಯಯನ ಪೀಠದ ಹೆಚ್ಚುವರಿ ಹೊಣೆಗಾರಿಕೆ ಪಡೆಯಬಹುದಾಗಿದೆ.

ಕ್ರಸಂ                          ವಿವರ                                                                      ಸಂಖ್ಯೆ

1             ಕರ್ನಾಟಕ ರಾಜ್ಯದಲ್ಲಿರುವ ವಿಧಾನಸಭಾ ಸದಸ್ಯರು          225

2             ಕರ್ನಾಟಕ ರಾಜ್ಯದಲ್ಲಿರುವ ವಿಧಾನಪರಿಷತ್ ಸದಸ್ಯರು    75

3             ಕರ್ನಾಟಕ ರಾಜ್ಯದ ಲೋಕಸಭಾ ಸದಸ್ಯರು           28

4             ಕರ್ನಾಟಕ ರಾಜ್ಯದ ರಾಜ್ಯಸಭಾ ಸದಸ್ಯರು             12

5             ರಾಜ್ಯದ ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರು 1

6             ದೆಹಲಿ ಪ್ರತಿನಿಧಿ               1

7             31 ಜಿಲ್ಲೆಗಳ ಜಿಲ್ಲಾಧಿಕಾರಿಗಳು     31

8             31 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು          31

9             31 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು      31

10           ರಾಷ್ಟ್ರಪತಿಯವರ ಕಚೇರಿ            1

11           ಪ್ರಧಾನ ಮಂತ್ರಿಯವರ ಕಚೇರಿ   1

12           ರಾಜ್ಯಪಾಲರ ಕಚೇರಿ      1

13           ಮುಖ್ಯ ಮಂತ್ರಿಯವರ ಕಚೇರಿ     1

14           ವಿರೋಧ ಪಕ್ಷದ ನಾಯಕರ ಕಚೇರಿ           1

15           ಎಲ್ಲಾ ರಾಜಕೀಯ ಪಕ್ಷಗಳು         1

16           ಎಲ್ಲಾ ಜಾತಿ ಸಂಘಟನೆಗಳು        

17           ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸಚಿವಾಲಯಗಳ ಕ್ಲಸ್ಟರ್.           62

18           ವಿಶ್ವ ಸಂಸ್ಥೆ        1

20           ಭಾರತ ದೇಶದ ವಿವಿದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಯೋಜನೆಗಳು.      37

21           ಪ್ರಪಂಚದ ವಿವಿಧ ದೇಶಗಳ ಯೋಜನೆಗಳು.          1

22           ಅಭಿವೃದ್ಧಿ ನಾಲೇಡ್ಜ್ ಬ್ಯಾಂಕ್     1

23           ದಿಶಾ ಮಾನಿಟರಿಂಗ್ ಸೆಲ್            1

               ಒಟ್ಟು  545

ವಿಕಸಿತ ತುಮಕೂರು @ 2047 ಶಕ್ತಿಪೀಠ ಘೋಷಣೆ

ದಿನಾಂಕ:04.06.2024ರಂದು ಪಲಿತಾಂಶ ಪ್ರಕಟವಾದ ತಕ್ಷಣ, ತುಮಕೂರು ಲೋಕಸಭಾ ಕ್ಷೇತ್ರದ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಆರಂಭ.

1.            ತುಮಕೂರು ಜಿ.ಐ.ಎಸ್ ಅಪ್ ಡೇಟ್.

2.            ತುಮಕೂರು ಎಂ.ಪಿ ಪೋರ್ಟಲ್ ಅಪ್ ಡೇಟ್.

3.            ತುಮಕೂರು ಡಾಟಾ ಜಿಲ್ಲೆ ಘೋಷಣೆ

4.            ತುಮಕೂರು ಸ್ಮಾರ್ಟ್ ಸಿಟಿಯ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್ ಎ ಟು ಝಡ್ ಬಳಕೆ- ಬೋಗಸ್ ಡಾಟಾಕ್ಕೆ ಕಡಿವಾಣ.

5.            ಜನರ ಬೆರಳ ತುದಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಮಾಹಿತಿ.

ಭಾರತ ದೇಶದಲ್ಲಿಯೇ ನಂಬರ್-1, ತುಮಕೂರು ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಲಮಿತಿ ಜಿಐಎಸ್ ಮಾರ್ಗಸೂಚಿ.

 5 ವರ್ಷದಲ್ಲಿ ಆಧ್ಯತೆ ಮೇಲೆ ಅನುಷ್ಠಾನಕ್ಕೆ ಶ್ರಮ – 2047 ಗುರಿ

1.            ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿರುವ ಹಲವಾರು ಯೋಜನೆಗಳ ಅನುಷ್ಠಾನ

2.            1947 ಕ್ಕೆ ಮುಂಚೆ- 2024 ರವರೆಗೆ- 2047 ರ ವೇಳೆಗೆ ಆಗ ಬೇಕಾದ ಯೋಜನೆಗಳ ಅಭಿವೃದ್ಧಿ  ಮ್ಯೂಸಿಯಂ ಸ್ಥಾಪನೆ.

3.            ಕೇಂದ್ರ, ರಾಜ್ಯ ಸರ್ಕಾರ ಮತ್ತು  ವಿಶ್ವ ವಿದ್ಯಾನಿಲಯದ ಸಹಭಾಗಿತ್ವದ, ವಿಕಸಿತ ಭಾರತ @ 2047 ಯೋಜನೆ.

4.            ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ಪ್ರಸ್ತಾವನೆಯ, ಫೈಲಟ್ ಯೋಜನೆಯಾಗಿ, ಈಗಾಗಲೇ ತುಮಕೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ಇಂಟರ್ನ್‍ಶಿಪ್ ಅಡಿಯಲ್ಲಿ, ಸಿದ್ಧಪಡಿಸುತ್ತಿರುವ ‘ಊರಿಗೊಂದು ಪುಸ್ತಕ/ಬಡಾವಣೆಗೊಂದು ಪುಸ್ತಕ- ವಿಷನ್ ಡಾಕ್ಯುಮೆಂಟ್ @ 2047’ ಹಾಗೂ ಉದ್ದೇಶಿತ ಊರಿಗೊಂದು /ಬಡಾವಣೆಗೊಂದು ವಿಡಿಯೋ ಡಾಕ್ಯುಮೆಂಟ್ @2047’ ಪರಿಕಲ್ಪನೆ ಅಡಿಯಲ್ಲಿ, 3 ಗ್ರಾಮಗಳಿಗೆ/ಬಡಾವಣೆಗಳಿಗೆ ಒಬ್ಬ ಉಪನ್ಯಾಸಕರಂತೆ ಸುಮಾರು ‘1000’ ಜನರಿಗೆ  ಯುಜಿಸಿ ಸೌಲಭ್ಯಗಳೊಂದಿಗೆ ಹೊಣೆಗಾರಿಕೆ’, ಅಭಿವೃದ್ಧಿ ಆಂದೋಲನದಲ್ಲಿ ಸುಮಾರು ‘100000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಾಗಿ’. 

5.            ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ಮತ್ತು 2047 ರ ವೇಳೆಗೆ, ಎಲ್ಲಾ ರಂಗದಲ್ಲೂ ಜಿಐಎಸ್ ಆಧಾರಿತ, ನಿಖರವಾದ ತಾಜಾ ಡಾಟಾ’ ದೊಂದಿಗೆ, ‘ಶೇ 100 ರಷ್ಟು ಪ್ರಗತಿ’ ಗಾಗಿ, ಟೋಪೋಶೀಟ್, ರೆವಿನ್ಯೂ ಸರ್ವೇ ಮ್ಯಾಪ್ ಮತ್ತು ಗೂಗಲ್ ಇಮೇಜ್‍ಗಳ ಪಕ್ಕಾ ಮಾಹಿತಿಗಳೊಂದಿಗೆ ನಿರಂತರ ಶ್ರಮ.

6.            ಆಯಾ ಗ್ರಾಮ/ಬಡಾವಣೆಯ ವಿದ್ಯಾರ್ಥಿಗಳು, ಗ್ರಾಮದಲ್ಲಿ ವಾಸವಿರುವ ಸರ್ವಧರ್ಮಗಳ, ಎಲ್ಲಾ ಜಾತಿ/ಉಪಜಾತಿಯ, ಮನೆತನವಾರು ಪ್ರತಿನಿಧಿಗಳು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಆಯಾ ವ್ಯಾಪ್ತಿಯ ಅಧಿಕಾರಿ/ನೌಕರರರು ಮತ್ತು ಜ್ಞಾನಿಗಳೇ ಆಯಾ ಗ್ರಾಮ/ಬಡಾವಣೆಯ ವಿಷನ್ ಡಾಕ್ಯುಮೆಂಟ್ @ 2047 ರ ಯಜಮಾನರು/ವಾರಸುದಾರರು’.

7.            ಪ್ರತಿಯೊಬ್ಬ ವ್ಯಕ್ತಿ’ಗೆ ಸರ್ಕಾರಗಳಿಂದ ಪಡೆಯಬಹುದಾದ ಯೋಜನೆಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನಕ್ಕೆ ಜನಜಾಗೃತಿ.

8.            ಪ್ರತಿಯೊಂದು ಕುಟುಂಬ’ಗಳಿಗೆ  ಸರ್ಕಾರಗಳಿಂದ ಪಡೆಯಬಹುದಾದ ಯೋಜನೆಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನಕ್ಕೆ ಜನಜಾಗೃತಿ.

9.            ಪ್ರತಿಯೊಂದು ಗ್ರಾಮದ/ಬಡಾವಣೆಯ, ಪ್ರತಿಯೊಂದು ಸರ್ವೆನಂಬರ್’ ಗಳಿಗೂ  ಸರ್ಕಾರಗಳಿಂದ ಪಡೆಯಬಹುದಾದ ಯೋಜನೆಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನಕ್ಕೆ ಜನಜಾಗೃತಿ.

10.         ಪ್ರತಿಯೊಂದು ಇಲಾಖೆಗಳ ಮಾನದಂಡಗಳ ಪ್ರಕಾರ ವಿಸ್ಥೀರ್ಣವಾರು’ ಪ್ರದೇಶಗಳಿಗೆ ಸರ್ಕಾರಗಳಿಂದ ಪಡೆಯಬಹುದಾದ ಯೋಜನೆಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನಕ್ಕೆ ಜನಜಾಗೃತಿ.

11.         ಪ್ರತಿಯೊಂದು ಇಲಾಖೆಗಳ ಮಾನದಂಡಗಳ ಪ್ರಕಾರ ‘ಜನಸಂಖ್ಯೆವಾರು’ ಪ್ರದೇಶಗಳಿಗೆ ಸರ್ಕಾರಗಳಿಂದ ಪಡೆಯಬಹುದಾದ ಯೋಜನೆಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನಕ್ಕೆ ಜನಜಾಗೃತಿ.

12.         ಯೋಜನೆಗಳ  ಪಟ್ಟಿಯನ್ನು, ಆಯಾ ಗ್ರಾಮದ/ಬಡಾವಣೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಮತ್ತು ಅಧಿಕಾರಿಗಳ ಸಹಭಾಗಿತ್ವದಲ್ಲಿ, ಆಧ್ಯತಾ ವಯಲಯಗಳ ಮೇಲೆ ಸೀನಿಯಾರಿಟಿ’ ಘೋಷಣೆ ಮಾಡಿ, ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ.

13.         ಪ್ರತಿ ವರ್ಷದ ಪ್ರಗತಿಯನ್ನು, ಗ್ರಾಮಸ್ಥರ/ಬಡಾವಣೆಯ ಜನತೆಯ ನೇತೃತ್ವದಲ್ಲಿ  ಗ್ರಾಮಗ¼/ಬಡಾವಣೆಗಳ ‘ಅಭಿವೃದ್ಧಿ ಹಬ್ಬ @2047 ’ ಮೂಲಕ ಅವಲೋಕನ.

14.         ಪ್ರತಿಯೊಂದು ಗ್ರಾಮದಲ್ಲೂ ಪವಿತ್ರ ವನ’ ನಿರ್ಮಾಣ ಮಾಡಿ, ಪಂಚವಟಿ ಗಿಡ ಮತ್ತು ಆಯುರ್ವೆದ ಗಿಡ ಹಾಕಿಸಿ, ಆಯಾ ಗ್ರಾಮದ ಥೀಮ್ ಪಾರ್ಕ್’ ಸ್ಥಾಪಿಸಿ, ಪ್ರತಿಯೊಂದು ಗ್ರಾಮದ/ಬಡಾವಣೆವಾರು ಅಭಿವೃದ್ಧಿ ಯೋಜನೆಗಳ ಪ್ರಾತ್ಯಾಕ್ಷಿಕೆ ನಿರ್ಮಾಣ ಮಾಡಿ, ನ್ಯಾಷನಲ್ ರೀಸರ್ಚ್ ಫೌಂಡೇಷನ್ ಯೋಜನೆ ಅಡಿಯಲ್ಲಿ, ಆಯಾ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್,   ವಿಷನ್ ಗ್ರೂಪ್ ಮತ್ತು ಪ್ರಷರ್ ಗ್ರೂಪ್ ರಚಿಸಿ, ಎಲ್ಲಾ ಮಾಹಿತಿಗಳನ್ನು ಜನತೆಗೆ, ಚುನಾಯಿತ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ಮನವರಿಕೆ.

15.         ಊರಿಗೊಬ್ಬ/ಬಡಾವಣೆಗೊಬ್ಬ ಡಾಟಾ ಮಿತ್ರ @ 2047’ ನೇಮಿಸಿ, ಅವರಿಗೆ ಸರ್ಕಾರದಿಂದ ನಿರ್ಧಿಷ್ಠ ಸಂಭಾವನೆ/ವೇತನ/ ಕಮೀಷನ್ ಆಧಾರಿತ ದುಡಿಮೆ ನೀಡುವ ಮೂಲಕ, ಮನೆ, ಮನೆಗೆ ಸರ್ಕಾರಿ ವ್ಯವಸ್ಥೆ ತಲುಪಿಸಲು ಪ್ರಯತ್ನ.

ತುಮಕೂರು ಲೋಕಸಭಾ ಕ್ಷೇತ್ರದ ಜನರ ಬೇಡಿಕೆಗಳಾದ ಶೇ 100 ರಷ್ಟು ಅಂದರೆ

1.            ಅರ್ಜಿ ಹಾಕಿದ ಪ್ರತಿಯೊಬ್ಬರಿಗೂ ನಿವೇಶನ

2.            ಅರ್ಜಿ ಹಾಕಿದ ಪ್ರತಿಯೊಬ್ಬರಿಗೂ ಮನೆ.

3.            ಅರ್ಜಿ ಹಾಕಿದ ಪ್ರತಿಯೊಬ್ಬರಿಗೂ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ

4.            ಪ್ರತಿಯೊಬ್ಬರಿಗೂ ಆಯುಷ್ಮಾನ್ ಭಾರತ್ ಕಾರ್ಡ್

5.            ಅರ್ಜಿ ಹಾಕಿದ ಪ್ರತಿಯೊಬ್ಬರಿಗೂ ವಿಶ್ವಕರ್ಮ ಯೋಜನೆಯಡಿ ಸಾಲ.

6.            ಅರ್ಜಿ ಹಾಕಿದ ಪ್ರತಿಯೊಬ್ಬರಿಗೂ ಸ್ಟಾಟ್ ಅಪ್ ಮಂಜೂರು.

7.            ಯಾರು ಏನು ಬೇಡಿಕೆ ಇಡುತ್ತಾರೋ, ಆ ಯೋಜನೆಗೆ ನಿಯಮ ಬದ್ಧ ಮಂಜೂರಾತಿ.

8.            ಪ್ರತಿಯೊಂದು ಗ್ರಾಮ ಮತ್ತು ಬಡಾವಣೆಗಳ ನೀಡ್ ಬೇಸ್ಡ್ ಯೋಜನೆಗೆ ಪ್ರಾಶತ್ಯ.

9.            ಇತ್ಯಾದಿ ಯೋಜನೆಗಳು 

ಇಲಾಖೆಗೊಂದು/ ಯೋಜನೆಗೊಂದು ವಿಷನ್ ಗ್ರೂಪ್ ರಚನೆ.

ಕೇಂದ್ರ ಸರ್ಕಾರದಿಂದ ಯಾವುದೇ ಯೋಜನೆ ಅನುಷ್ಠಾನಕ್ಕೆ ಮೊದಲು ಒಂದು ಪರಿಣಿತರ ವಿಷನ್ ಗ್ರೂಪ್’ ರಚಿಸಿ, ನಿರ್ಧಿಷ್ಠ ರೂಪುರೇಷೆ ನಿರ್ಧರಿಸಿ ಶೇ 100 ಜಾರಿಗೆ ಕ್ರಮ.

ವಿಶ್ವದ ಅತ್ತುತ್ತಮ ನಗರ ತುಮಕೂರು  @ 2047 ನಮ್ಮ ಪರಿಕಲ್ಪನೆ.

ತುಮಕೂರು ನಗರದಿಂದ 10 ಕೀಮೀ ಸುತ್ತ-ಮುತ್ತ ಅಲ್ಲಲ್ಲಿ ಸುಮಾರು 2500 ಕ್ಕೂ ಹೆಚ್ಚು ಸರ್ಕಾರಿ ಭೂಮಿ ಇದ್ದು, ರೇಡಿಯಲ್ ರಸ್ತೆ ನಿರ್ಮಾಣ ಮಾಡುವ ಮೂಲಕ ತುಮಕೂರು ನಗರವನ್ನು ಮಾನ್ಯು ಯಕ್ಚರಿಂಗ್ ಹಬ್/ಗ್ರೇಟರ್ ತುಮಕೂರು/ಬ್ರ್ಯಾಂಡ್ ತುಮಕೂರು/ವಿಶ್ವದ ಅತ್ತುತ್ತಮ ನಗರ ಮಾದರಿ’ ಯೋಜನೆ

1.            ವಿವಿಧ ಜನಾಂಗದ ಹಾಸ್ಟೆಲ್‍ಗಳ ನಿರ್ಮಾಣ.

2.            ವಿವಿಧ ಕ್ಲಸ್ಟರ್ ಗಳ ನಿರ್ಮಾಣ.

3.            ಕೇಂದ್ರ ಸರ್ಕಾರದ ವಿವಿಧ ಶಿಕ್ಷಣ ಸಂಸ್ಥೆಗಳ ನಿರ್ಮಾಣ

4.            ವಿವಿಧ ಕ್ರೀಢಾಂಗಣಗಳ ನಿರ್ಮಾಣ.

5.            ವಿವಿಧ ಕೈಗಾರಿಕೆಗಳ ನಿರ್ಮಾಣ.

6.            ವಿಶ್ವ ಕರ್ಮ ಯೋಜನೆಯಡಿ ಗುಡಿ ಕೈಗಾರಿಗಳ ಕ್ಲಸ್ಟರ್ ನಿರ್ಮಾಣ

7.            ವಿವಿಧ ಸರ್ಕಾರಿ ಕಚೇರಿಗಳ ನಿರ್ಮಾಣ.

8.            ಟೌನ್ ಶಿಪ್

9.            ಉಧ್ಯಾನವನಗಳು.

10.         ಎಲ್ಲಾ ಕೆರೆಗಳಿಗೆ ನದಿ ನೀರು.

11.         ಹಸಿರು ತುಮಕೂರು

12.         ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಗಳ ಪ್ರಾತ್ಯಾಕ್ಷಿಕೆ ಅನುಷ್ಠಾನ

13.         ರೀಸರ್ಚ್ ಹಬ್.

14.         ಜನರ ನೀಡ್ ಬೇಸ್ಡ್ ಯೋಜನೆಗಳು.

15.         ಇತ್ಯಾಧಿ ಯೋಜನೆಗಳ ಅನುಷ್ಠಾನ

ವಿಶೇಷ ಯೋಜನೆಗಳು

ಕನ್ನಡ-ಕನ್ನಡಿಗ-ಕರ್ನಾಟಕ ಅಭಿವೃದ್ಧಿಗೆ ಬದ್ಧ- ಯಾವುದೇ ತ್ಯಾಗಕ್ಕೂ ಸಿದ್ಧ’.

1.            ಕೇಂದ್ರ ಸರ್ಕಾರದಿಂದ ‘ರಾಜ್ಯಕ್ಕೆ ಹೆಚ್ಚಿನ ಅನುದಾನ ಮಂಜೂರಾತಿ’ ಗೆ ವಿಶಿಷ್ಠ ಯೋಜನೆ.

2.            ತುಮಕೂರಿನಲ್ಲಿ ಅಭಿವೃದ್ಧಿ ಮ್ಯೂಸಿಯಂ’ ಸ್ಥಾಪನೆಗೆ ಪ್ರಯತ್ನ.

3.            ಬೆಂಗಳೂರಿನಲ್ಲಿ  ರಾಜ್ಯ ಮಟ್ಟದ ಅಭಿವೃದ್ಧಿ ಮ್ಯೂಸಿಯಂ’ ಸ್ಥಾಪನೆಗೆ ಪ್ರಯತ್ನ.

4.            ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಸ್ಟೆಲ್ ಮತ್ತು ಅಭಿವೃದ್ಧಿ ಮ್ಯೂಸಿಯಂ’ ಸ್ಥಾಪನೆಗೆ ಪ್ರಯತ್ನ.

5.            ವಿಕಸಿತ ಭಾರತ @ 2047’ ಸುಸಜ್ಜಿತ ರಾಜ್ಯ ಮಟ್ಟದ ಕ್ಯಾಂಪಸ್ ಸ್ಥಾಪನೆಗೆ ಪ್ರಯತ್ನ.

6.            ನಿರುದ್ಯೋಗ ರಹಿತ ಕ್ಷೇತ್ರಕ್ಕಾಗಿ ಸ್ಟೂಡೆಂಟ್ ಸ್ಪೆಷಲ್ ಎಕನಾಮಿಕ್ ಝೋನ್’ ಸ್ಥಾಪನೆ.

7.            ಕ್ಷೇತ್ರದ ಎಲ್ಲಾ ಗ್ರಂಥಾಲಯಗಳನ್ನು ನಾಲೇಡ್ಜ್ ಬ್ಯಾಂಕ್ @ 2047’ ಆಗಿ ಮಾರ್ಪಾಡು.

8.            ಪ್ರತಿಯೊಂದು ಯೋಜನೆಯ ರೂಪುರೇಷೆಗಳ  ‘ಪಾರದರ್ಶಕತೆ’ ಗೆ ಆಧ್ಯತೆ.

9.            ಆಯಾ ಗ್ರಾಮ/ಬಡಾವಣೆಯ ಅನಿವಾಸಿಗಳಿಗೆ ಹುಟ್ಟೂರಿನ ಅಭಿವೃದ್ಧಿ ಹೊಣೆ’.

ಶಕ್ತಿಪೀಠ

ವಿಶ್ವದ 7-8 ದೇಶಗಳ 108 ಶಕ್ತಿಪೀಠಗಳ ಅಧ್ಯಯನ ಮತ್ತು ಸಂಶೋಧನೆ.

ಜಲಪೀಠ

ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಅಧ್ಯಯನ ಮತ್ತು ಸಂಶೋಧನೆ

ಅಭಿವೃದ್ಧಿ ಪೀಠ

  ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವ ಕಾರ್ಯತಂತ್ರದ ಹಾಗೂ ಸೆಂಟರ್ ಆಫ್ ಎಕ್ಸ್‍ಲೆನ್ಸ್ ಕ್ಯಾಪ್ಚರಿಂಗ್ ಗೌವ್ರ್ನಮೆಂಟ್ ಆಫ್ ಇಂಡಿಯಾ ಫಂಡ್ಸ್ ಅಧ್ಯಯನ ಮತ್ತು ಸಂಶೋಧನೆ

ನಿರ್ಧಿಷ್ಠ ಗುರಿ.

             ದಿನಾಂಕ:01.08.2024 ರೊಳಗೆ ಶಕ್ತಿಭವನ’ಲೋಕಾರ್ಪಣೆ.

             ದಿನಾಂಕ:01.08.2026 ರೊಳಗೆ ‘ಶಕ್ತಿಪೀಠ ಡಾಟಾ ಪಾರ್ಕ್’  ಲೋಕಾರ್ಪಣೆ.

             ದಿನಾಂಕ:01.08.2028 ರೊಳಗೆ ‘ಶಕ್ತಿಪೀಠ ಕ್ಯಾಂಪಸ್’  ಲೋಕಾರ್ಪಣೆ.

             ದಿನಾಂಕ:01.08.2029 ರೊಳಗೆ ‘ ಶಕ್ತಿಪೀಠ ಸಂಶೋದನಾ ಸ್ಮಾರ್ಟ್ ಗ್ರಾಮ’  ಲೋಕಾರ್ಪಣೆ.

             ದಿನಾಂಕ:01.08.2047 ರೊಳಗೆ ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ’ ಕರಡು ಪ್ರತಿಯ ಎಲ್ಲಾ ಅಂಶಗಳ ಅನುಷ್ಠಾನಕ್ಕೆ ನಿರಂತರ ಶ್ರಮ.

ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಇಂಡಿಯಾ ಫಂಡ್ಸ್

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ತರುವ ಕಾರ್ಯತಂತ್ರದ’ ರೂಪುರೇಷೆ ನಿರ್ಧರಿಸಲು, ಫಿಸ್ಕಲ್ ಪಾಲಿಸಿ ಇನ್‍ಸ್ಟಿಟ್ಯೂಟ್’   ಮಾದರಿಯಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಪ್ ಇಂಡಿಯಾ ಫಂಡ್ಸ್’ ಸಂಸ್ಥೆ ಆರಂಭಿಸಲು ಅಧ್ಯಯನ ಆರಂಭವಾಗಿದೆ.

ನಾಲೇಡ್ಜ್ ಬ್ಯಾಂಕ್ @ 2047

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ವಿಕಸಿತ ಭಾರತ @ 2047’, ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರ ಕರ್ನಾಟಕ ಅಭಿವೃದ್ಧಿ ಮಾದರಿ’ ಮತ್ತು ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ರವರ ‘ಬ್ರ್ಯಾಂಡ್ ಬೆಂಗಳೂರು’ ಬಗ್ಗೆ ವಿವಿಧ ಯೋಜನೆಗಳ ಐಡಿಯಾ ಕೊಡುವವರು ನಾಲೇಡ್ಜ್ ಬ್ಯಾಂಕ್’ ಸದಸ್ಯರಾಗ ಬಹುದು. ಯಾವುದೇ ಶುಲ್ಕ ಇರುವುದಿಲ್ಲ.  ಆಸಕ್ತರು ಕರೆ ಮಾಡಿದರೆ ಉಚಿತ ನೊಂದವಣೆಗಾಗಿ ಗೂಗಲ್ ಫಾರಂ ರವಾನಿಸಲಾಗುವುದು.

ಅಧ್ಯಯನ ಪೀಠ ಏಕೆ? ಹೇಗೆ?

  2027 ಕ್ಕೆ ಭಾರತ ವಿಶ್ವ ಗುರು ಆಗಬೇಕಾದರೆ, ದೇಶದ ಪ್ರತಿಯೊಬ್ಬರೂ ಶ್ರಮಿಸಲೇ ಬೇಕಿದೆ. ಪ್ರತಿಯೊಬ್ಬ ಚುನಾಯಿತ ಜನಪ್ರತಿನಿಧಿ ಮತ್ತು ಅಧಿಕಾರಿಗಳ ಕಾರ್ಯಕ್ರಮಗಳು ಜನರಿಗೆ ತಲುಪಬೇಕಿವೆ.

ಒಬ್ಬ ಶಾಸಕ/ಸಂಸದ ಮಾಜಿ ಆದ ಮೇಲೆ ಅವರ ಕಾರ್ಯಕ್ರಮಗಳ ಮಾಹಿತಿ, ಮುಂದೆ ಬರುವವರಿಗೆ ದೊರೆಯುವಂತಾಗಬೇಕು, ಯಾರೇ ಬರಲಿ ಅಧ್ಯಯನ ಪೀಠ ಹೊಸಬರ ಮುಂದಿನ ಹೊಣೆಗಾರಿಕೆ ಆಗಬೇಕು.

1947 ರಿಂದ 2047 ರವರೆಗಿನ ಆಯಾ ವ್ಯಾಪ್ತಿಯ ಎಲ್ಲಾ ಮಾಹಿತಿ ಅಧ್ಯಯನ ಪೀಠದಲ್ಲಿ ಇರಬೇಕು.

ಅಧ್ಯಯನ ಪೀಠಗಳಿಗೆ ಗೌರ್ವನಿಂಗ್ ಕೌನ್ಸಿಲ್ ಸಮಿತಿಯ ಅಧ್ಯಕ್ಷರು, ಶಾಸಕರು/ಸಂಸದರು/ಆಯಾ ಇಲಾಖೆಯ ಅಧಿಕಾರಿಗಳು.

ಅಂದಾಜು ವೆಚ್ಚ

1.            ಭೂಮಿ ಸರ್ಕಾರದ ಜಮೀನು ಅಥವಾ ಲೋಕಲ್ ಇನ್ವೆಸ್ಟರ್

2.            ಕಟ್ಟಡ ರೂ 3.00 ಕೋಟಿ ಸರ್ಕಾರದ ಅನುದಾನ ಅಥವಾ ಲೋಕಲ್ ಇನ್ವೆಸ್ಟರ್

3.            ಮೂಲಭೂತ ಸೌಕರ್ಯ ರೂ 1.00 ಕೋಟಿ, ಸರ್ಕಾರದ ಅನುದಾನ

4.            ವಾರ್ಷಿಕ ನಿರ್ವಹಣೆ ರೂ 1.00 ಕೋಟಿ ಸರ್ಕಾರದ ಅನುದಾನ. ಮುಂದಿನ 23 ವರ್ಷಗಳವರೆಗೆ ಮುಂದುವರಿಕೆ.

5.            ಫೈಲಟ್ ಅಧ್ಯಯನ ಪೀಠ: ತುಮಕೂರಿನಲ್ಲಿ ಶಕ್ತಿಪೀಠ ಫೌಂಡೇಷನ್ ಸ್ಥಾಪಿಸುತ್ತಿರುª ಮಾದರಿ. ರೂಪುರೇಷೆಗಳು ಸಿದ್ಧವಾಗುತ್ತಿವೆ.

6.            ಆಸಕ್ತಿ ಇರುವ 545 ಜನರು ಬ್ಯಾಚ್ ಮೇಲೆ, ಇದೇ ಕಟ್ಟಡದಲ್ಲಿ ಕುಳಿತು ತರಬೇತಿ ಪಡೆದು, ಅಡುಗೆ ಮಾಡಿಕೊಂಡು ಊಟ ಮಾಡಿ, ಇಲ್ಲಿಯೇ ಮಲಗಿ, ಅಂತಿಮ ರೂಪುರೇಷೆ ನಿರ್ಧರಿಸಲು ಗುರಿಹೊಂದಲಾಗಿದೆ.

7.            ಕೇಂದ್ರ ಸರ್ಕಾರ ಮುಂದಿನ 5 ವರ್ಷಗಳಿಗೆ ಅಧ್ಯಯನ ಪೀಠಗಳಿಗೆ ರೂ ಒಂದು ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದೆ, ರಾಜ್ಯ ಸರ್ಕಾರದ ಪಾಲು/ ಸಿ.ಎಸ್.ಆರ್ ಫಂಡ್ ನ ವ್ಯವಸ್ಥೆಗಳಿಗೆ ಸರ್ಕಾರದ ಮುದ್ರೆಗಾಗಿ ಪ್ರಾಮಾಣಿಕ ಪ್ರಯತ್ನ 545 ಜನರಿಂದ ಆಗಬೇಕಿದೆ.

8.            545 ಸ್ಥಳಗಳ ಜಿ.ಐ.ಎಸ್ ಲೇಯರ್ ಆರಂಭವಾಗಿದೆ. ಲೋಕಸಭಾ ಚುನಾವಣೆ-2024  ನಂತರ ವೇಗ ದೊರೆಯಲಿದೆ.

9.            36 ವರ್ಷಗಳ ‘ದುಃಖ-ಸುಖ’ ಗಳ ಅನುಭವದ ಮೇರೆಗೆ, ಮುಂದಿನ 23 ವರ್ಷಗಳ ಕಾಲ ನಿರಂತರವಾಗಿ ಶ್ರಮಿಸುವ ಭರವಸೆ ನಮ್ಮದಾಗಿದೆ. 36 ವರ್ಷಗಳ ಸಾಧನೆ ಅಭಿವೃದ್ಧಿ ಮ್ಯೂಸಿಯಂ ನಲ್ಲಿ ಅನಾವರಣ ಗೊಳ್ಳಲಿವೆ. ನಮ್ಮ ಸಾಧನೆಯೇ ಪ್ರೇರಣೆ ?

ನನ್ನ ಜೀವನಕ್ಕೆ ನಾನೇ ಶಿಲ್ಪಿ, ಯಾರಾದರೂ ನನ್ನನ್ನು ಶಿಲ್ಪಿಯಾಗಿ ಮಾಡುತ್ತಾರೆ, ಎಂದು ಕಾಯುತ್ತಾ ಕೂರುವನೇ ಮೂರ್ಖ’

ಇದೊಂದು ಕರಡು ಪ್ರಣಾಳಿಕೆ ತಮ್ಮ ಸಲಹೆಗಾಗಿ

–              ಕುಂದರನಹಳ್ಳಿ ರಮೇಶ್.