21st May 2024
Share

TUMAKURU:SHAKTHIPEETA FOUNDATION

 ರಾಜ್ಯದ ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿರುವ, ತುಮಕೂರಿನ ಲಕ್ಷಾಂತರ ಮತದಾರರು ಬೆಂಗಳೂರಿನಲ್ಲಿ ವಾಸವಿದ್ದರೆ, ಹಲವಾರು ಜನ ರೈಲಿನಲ್ಲಿ ಓಡಾಟ ಮಾಡುತ್ತಿದ್ದಾರೆ. ಅವರ ಬೇಡಿಕೆ ನಮಗೂ ಬೆಂಗಳೂರಿನಲ್ಲಿ  ಮನೆ ಕೊಡಿಸಿ, ನೀವು ಹೇಳಿದವರಿಗೆ ಮತ ಹಾಕುತ್ತೇವೆ.

ಕೂಲಿ ಕಾರ್ಮಿರಿಂದ ಆರಂಭಿಸಿ, ಮಧ್ಯಮ ವರ್ಗದವರು, ಕೋಟ್ಯಾಧಿಪತಿಗಳು ತುಮಕೂರು ಅನಿವಾಸಿಗಳಾಗಿದ್ದಾರೆ.  ಯಾವುದೇ ಸರ್ಕಾರಿ ಕಚೇರಿಗೆ ಹೋದರೂ ಒಬ್ಬಲ್ಲ, ಒಬ್ಬ ತುಮಕೂರಿನ ಡಿ.ದರ್ಜೆ ನೌಕರ ಸಿಕ್ಕೇ ಸಿಗುತ್ತಾರೆ. ಬಹುತೇಕ ಇವರೆಲ್ಲಾ ಸೋಶಿಯಲ್ ಮೀಡಿಯಾಗಳ ಮಿತ್ರರಾಗಿದ್ದಾರೆ. ಹಲವಾರು ಗುಂಪುಗಳನ್ನು ರಚಿಸಿಕೊಂಡಿದ್ದಾರೆ.

ಅವರ ತಂಡದವರ ಬೇಡಿಕೆ ಸಾರ್, ನೀವೂ ಈಗ ಬೆಂಗಳೂರಿನಲ್ಲಿ ಇದ್ದೀರಿ, ನಮ್ಮ ಕಷ್ಟ ನಿಮಗೂ ಅರ್ಥವಾಗುತ್ತದೆ. ನಮ್ಮ ಮತಗಳು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಇವೆ, ನಮಗೂ ಒಂದು ಸೂರಿನ ಭಾಗ್ಯಕ್ಕೆ ಯೋಜನೆ ರೂಪಿಸಿ,  ನೀವೂ ಕೈಹಾಕಿದರೆ ಸಾಮಾನ್ಯವಾಗಿ ಬಿಡುವುದಿಲ್ಲ. ನಾವೆಲ್ಲಾ ನಿಮ್ಮ ಪರವಾಗಿ ಇರುತ್ತೇವೆ ಎಂಬ ಬೇಡಿಕೆ ಇಟ್ಟಿದ್ದಾರೆ.

ನಾನು ಕಳೆದ 2009 ರಿಂದಲೂ ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ, ಮತದಾರರ ಪ್ರಣಾಳಿಕೆ ರಚಿಸುತ್ತಿದ್ದರೂ, ಯಾರೂ ಸಹ ಈ ಬೇಡಿಕೆ ಬಗ್ಗೆ ಸಮಾಲೋಚನೆ ಮಾಡಿರಲಿಲ್ಲ. ನನಗೂ ಅವರ ಬೇಡಿಕೆ ಸರಿ ಎನಿಸಿತು.

ಮನೆ ಮಂಜೂರು ಮಾಡುವ ನಿಯಮದ ಪ್ರಕಾರ ಒಟ್ಟಿಗೆ ಸೇರಿ ಶ್ರಮಿಸೋಣ, ನೀವೂ ಮತಹಾಕುವುದರ ಜೊತೆಗೆ ನಿಮಗೆ ಪರಿಚಯವಿರುವವರ, ಸಂಭಂಧಿಕರ ಮತದಾರರಿಂದಲೂ ಮತದಾನ ಮಾಡಿಸಿ.  ನಾವು ನಿಮ್ಮೊಂದಿಗೆ ಇರುತ್ತೇವೆ ಎಂಬ ಭರವಸೆಯನ್ನು ನೀಡಲಾಯಿತು.

ಅದರಲ್ಲಿ ಒಬ್ಬರು ಸಾರ್ ನೀವೂ ತುಮಕೂರಿನ ಮೆಟ್ರೋ ಮಾರ್ಗದ ಸ್ಟೇಷನ್‍ಗಳ ಬಳಿ, ಒಂದೊಂದು ಲೇ ಔಟ್ ನಿರ್ಮಿಸಲು ಸರ್ಕಾರಕ್ಕೆ ಸಲಹೆ ನೀಡಿದ್ದೀರಿ, ಶಕ್ತಿಪೀಠ ಇ ಪೇಪರ್‍ನಲ್ಲಿ ಒದಿದ್ದೇನೆ, ಅಲ್ಲಿ ಅಥವಾ ರೈಲ್ವೇ ಸ್ಟೇಷನ್ ಬಳಿ ಲೇಔಟ್ ಮಾಡಿಸಿದರೆ ಅನೂಕೂಲವಾಗುತ್ತದೆ ಸಾರ್ ಎಂದಾಗ ನಾನೇ ಸುಸ್ತಾದೆ. ನನ್ನ ಬರವಣಿಗೆ ಬಗ್ಗೆ ನನ್ನನ್ನೆ ಕಟ್ಟಿಹಾಕಿದ ಪ್ರಸಂಗ ಅಲ್ಲವೇ?