21st November 2024
Share

TUMAKURU:SHAKTHIPEETA FOUNDATION

  ಚುನಾವಣೆಗಳು ಬಂದಾಗ, ಕೆಲವು ರಾಜಕಾರಣಿಗಳು ಮನುಷ್ಯರ ರೀತಿ ವರ್ತಿಸುವುದಿಲ್ಲ. ದಾಖಲೆ ಇಟ್ಟುಕೊಂಡು ಮಾತನಾಡುವುದಿಲ್ಲ. ಮತಗಳ ಬೇಟೆಗೆ ಎಷ್ಟು ಬೇಕೋ ಅಷ್ಟು ಮಾತಿನ ಬಾಣ ಪ್ರಯೋಗಿಸುತ್ತಾರೆ.

ಕರ್ನಾಟಕದ ರಾಜಕಾರಣದಲ್ಲಿ  ಚೊಂಬು V/S ಅಕ್ಷಯ ಪಾತ್ರೆ V/S ಚಿಪ್ಪು  ಹೇಳಿಕೆ ಮಹತ್ವ ಪಡೆದಿವೆ. ಈ ಹೇಳಿಕೆಗಳ ಬಗ್ಗೆ ಆಳವಾದ ಅಧ್ಯಯನವನ್ನು ನಾಲೇಡ್ಜ್ ಬ್ಯಾಂಕ್ @ 2047 ನಿಂದ ಆರಂಭಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸರಣಿ ಪತ್ರಗಳ ಮೂಲಕ ಮಾಹಿತಿ ಸಂಗ್ರಹ ಮಾಡಲು ಪತ್ರಗಳು ಈಗಾಗಲೇ ರವಾನೆಯಾಗುತ್ತಿವೆ.  

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಅತಿ ಹೆಚ್ಚಿನ ಅನುದಾನ ಪಡೆದ ರಾಜ್ಯವಾಗಬೇಕು, ನಮ್ಮ ಸಂಸದರು ಪಕ್ಷಬೇಧ ಮರೆತು ಒಗ್ಗಟ್ಟಾಗಿ ಶ್ರಮಿಸಬೇಕು. ಅವರಿಗೆ ಅಗತ್ಯವಿರುವ ಮಾಹಿತಿಗಳನ್ನು ನೀಡುವುದೇ ನಮ್ಮ ಮೊದಲ ಆಧ್ಯತೆ.

ಯಾವುದೇ ಕೆಲಸವನ್ನು ಹೊಸದಾಗಿ ಆರಂಭ ಮಾಡಿದರೆ, ವಿಘ್ಞೇಶ್ವರನನ್ನು ಪೂಜಿಸಿ ಆರಂಭಿಸುವುದು ನಮ್ಮ ಸಂಪ್ರದಾಯ. ಪ್ರಸ್ತುತ ಇದರ ಜೊತೆಗೆ ಚೊಂಬು, ಚಿಪ್ಪು ಮತ್ತು ಅಕ್ಷಯ ಪಾತ್ರೆ ಗಳ ಲಾಂಛನದೊಂದಿಗೆ, ಈ ಮಾತಿಗೆ ಯಾರು ಅರ್ಹರು? ಯಾರು ಅನರ್ಹರು? ಎಂಬ ನಿಖರವಾದ ಡಾಟಾ ದೊಂದಿಗೆ ಜನತೆಯ/ಮತದಾರರಿಗೆ ಅಧ್ಯಯನ ವರದಿ ನೀಡುವುದೇ ಪ್ರಮುಖ ಉದ್ದೇಶವಾಗಿದೆ.

ದಿನಾಂಕ:10.04.2024 ರಂದು ಸಾಮಾಜಿಕ ನ್ಯಾಯದ ಹರಿಕಾರಜಾತಿ ರಹಿತ ಸಮಾಜದ ಕನಸುಗಾರಕಾಯಕವೇ ಕೈಲಾಸ ಪರಿಕಲ್ಪನೆಯ ಜನ್ಮಧಾತ ಕರ್ನಾಟಕ ರಾಜ್ಯದ ಸಾಂಸ್ಕøತಿಕ ನಾಯಕ ವಿಶ್ವ ಗುರು ಬಸವಣ್ಣನವರ ಜಯಂತಿ ಯಂದು, ತುಮಕೂರಿನ ಜಯನಗರದ ಪೂರ್ವದ, ಒಂದನೇ ಮುಖ್ಯ ರಸ್ತೆಯಲ್ಲಿನ ಶಕ್ತಿಭವನದಲ್ಲಿ ‘ನಾಲೇಡ್ಜ್ ಬ್ಯಾಂಕ್ @ 2047   ಆರಂಭ ಮಾಡಲಾಗುವುದು.  

ತಮ್ಮ ಸಲಹೆಗಳನ್ನು ನೀಡಬಹುದಾಗಿದೆ. ಆಸಕ್ತರು ಕೈಜೋಡಿಸಬಹುದಾಗಿದೆ.