23rd June 2024
Share

TUMAKURU:SHAKTHIPEETA FOUNDATION

ಅಕ್ಷಯಪಾತ್ರೆಯಲ್ಲಿ ಶ್ರೀ ನರೇಂದ್ರಮೋದಿಯವರ ಕಾಲದಲ್ಲಿ ಕರ್ನಾಟಕ ರಾಜ್ಯಕ್ಕೆ ರೂ 7 ಲಕ್ಷಕೋಟಿ ಅನುದಾನ ನೀಡಿದ್ದಾರೆ.ಇದು ಭಾರÀತೀಯ ಜನತಾ ಪಕ್ಷ ಕರ್ನಾಟಕ, ಮಾದ್ಯಮಗಳಲ್ಲಿ ಪ್ರಕಟಣೆ ನೀಡಿರುವುದು,

 ಚೊಂಬು ವಿನಲ್ಲಿ ಕರ್ನಾಟಕ ಸರ್ಕಾರದಿಂದ ನೀಡಿರುವ ತೆರಿಗೆಯಲ್ಲಿ 100 ರೂಗಳಿಗೆ ಕೇವಲ 13 ರೂ ಮಾತ್ರ ಕೇಂದ್ರ ಸರ್ಕಾರ ಅನುದಾನ ನೀಡಿದ್ದಾರೆ. ಇದು ಕರ್ನಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾದ್ಯಮಗಳಲ್ಲಿ ಪ್ರಕಟಣೆ ನೀಡಿರುವುದು,

ಈ ಎರಡು ಪಕ್ಷಗಳ ಪ್ರಕಟಣೆಯಲ್ಲಿ ಯಾವ ಪಕ್ಷದ್ದು ಸತ್ಯ, ಯಾವ ಪಕ್ಷದ್ದು ಸುಳ್ಳು, ಎಂಬ ಮಾಹಿತಿ ಕರ್ನಾಟಕ ರಾಜ್ಯದ ಮತದಾರರಿಗೆ ತಿಳಿಯಲೇಬೇಕು. ಎರಡು ಪಕ್ಷಗಳು ಒಂದು ಪಕ್ಷಕ್ಕಿಂತ, ಇನ್ನೊಂದು ಪಕ್ಷ ನಿಖರವಾಗಿದೆ ಎಂಬ ಖಾತರಿಯೊಂದಿಗೆ ಪ್ರಕಟಣೆ ನೀಡಿದೆ.

‘ಮಾಧ್ಯಮಗಳು ಮಾತ್ರ ಜಾಹಿರಾತುವಿನಲ್ಲಿ ಇರುವ ಮಾಹಿತಿಗಳು ರಾಜಕೀಯ ಪಕ್ಷದ ಅಭಿಪ್ರಾಯಗಳಾಗಿರುತ್ತವೆ, ಇದರಲ್ಲಿನ ಸತ್ಯಾಸತ್ಯತೆಗೆ ರಾಜಕೀಯ ಪಕ್ಷವೇ ಹೊಣೆಗಾರಿಕೆಯಾಗಿರುತ್ತದೆ’ ಎಂದಿರುವುದು ನೋಡಿದರೆ,  ಇವರ ಪ್ರಕಟಣೆ ಬಗ್ಗೆ ಮಾಧ್ಯಮಗಳಿಗೂ ನಿಖರವಾದ ಮಾಹಿತಿ ಇಲ್ಲ.

‘ನಾಲೇಡ್ಜ್ ಬ್ಯಾಂಕ್ @ 2047 ಈ ಬಗ್ಗೆ ಎರಡು ಪಕ್ಷಗಳ ಪ್ರಕಟಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅಧ್ಯಯನ ವರದಿ ಸಿದ್ಧಪಡಿಸಲು ಚಿಂತನೆ ನಡೆಸಿದೆ, ಆಸಕ್ತರು ಸಹಕರಿಸಬಹುದು.