TUMAKURU:SHAKTHIPEETA FOUNDATION
ಕರ್ನಾಟಕ ರೀಸರ್ಚ್ ಫೌಂಡೇಷನ್ @ 2047 ದೇಶದಲ್ಲಿಯೇ ಮಾದರಿಯಾದ ಯೋಜನೆ ರೂಪಿಸಲು ಚಾಲನೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ ಸಲ್ಲಿಸ ಬೇಕಿದೆ.
ದಿನಾಂಕ:01.08.1988 ರಂದು ‘ಕುಂದರನಹಳ್ಳಿಯ ಗಂಗಮಲ್ಲಮ್ಮ ದೇವಿ ಪೂಜಿಸಿ’, ನಮ್ಮೂರಿಗೆ ಹೊಂದಿಕೊಂಡಿರುವ, ಬಿದರೆಹಳ್ಳ ಕಾವಲ್ ಸರ್ಕಾರಿ ಜಮೀನನಲ್ಲಿ ಯಾವುದದರೂ ಬೃಹತ್ ಕೈಗಾರಿಕೆ ಸ್ಥಾಪಿಸಲು ಆರಂಭಿಸಿದ ಹೋರಾಟಕ್ಕೆ ಮುಕ್ತಿ ದೊರಕಿದೆ. ಸುಮಾರು 6400 ಕೋಟಿಗೂ ಅಧಿಕ ವೆಚ್ಚದ ‘ಹೆಚ್.ಎ.ಎಲ್ ಘಟಕ’ ಆರಂಭವಾಗಿದೆ. ಜೊತೆಗೆ ದಿನಾಂಕ:01.08.2024 ರವರೆಗೆ ಸುಮಾರು 36 ವರ್ಷಗಳ ನೂರಾರು ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿದ ಅಭಿವೃದ್ಧಿ ಸಮಾಜ ಸೇವೆಯ ಅನುಭವದ ಹಿನ್ನಲೆಯಲ್ಲಿ.
ದಿನಾಂಕ:01.08.2024 ರಂದು ‘ವಿಶ್ವದ 108 ಶಕ್ತಿಪೀಠಗಳಿಗೆ ಪೂಜಿಸಿ,’ ಸುಮಾರು 3500 ರಿಂದ 5000 ಕೋಟಿ ವೆಚ್ಚದ ‘ಕರ್ನಾಟಕ ರೀಸರ್ಚ್ ಫೌಂಡೇಷನ್ @ 2047 ವಿಶೇಷ ಯೋಜನೆಗೆ’ ಚಾಲನೆ ನೀಡಲಾಗಿದೆ. ದಿನಾಂಕ:01.08.2047 ರವರೆಗೆ ಮುಂದಿನ ಸುಮಾರು 23 ವರ್ಷಗಳ ಅಭಿವೃದ್ಧಿ ಸೇವೆ ನಿರಂತರವಾಗಿ ಮುಂದುವರೆಸಲು ವಿಶಿಷ್ಠವಾದ ಯೋಜನೆ ರೂಪಿಸಿ, ರಾಜ್ಯಾದ್ಯಾಂತ ಒಂದು ತಂಡವನ್ನೆ ರಚಿಸಲಾಗುತ್ತಿದೆ.
ಆಸಕ್ತರು ಕೈ ಜೋಡಿಸಬಹುದಾಗಿದೆ.