15th January 2025
Share

TUMAKURU:SHAKTHIPEETA FOUNDATION

  2047 ಕ್ಕೆ ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ನಂಬರ್ ಆಗಲೇ ಬೇಕು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೊಂದು ಅಧ್ಯಯನ ಕೇಂದ್ರ ಆರಂಭವಾಗಲೇ ಬೇಕು.

  ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಅಡಿಯಲ್ಲಿ ಮೀಸಟ್ಟಿರುವ ಒಂದು ಲಕ್ಷ ಕೋಟಿ ಅನುದಾನದಲ್ಲಿ ನಮ್ಮ ರಾಜ್ಯ ಸಿಂಹಪಾಲು ಪಡೆಯಲೇಬೇಕು.

 ನಮ್ಮ ಸಂಸ್ಥೆಯ ಮನವಿ ಮೇರೆಗೆ, ಯೋಜನಾ ಇಲಾಖೆಯ  ಅಪರಮುಖ್ಯ ಕಾರ್ಯದರ್ಶಿಯಾಗಿದ್ದ ಡಾ.ಶಾಲಿನಿ ರಜನೀಶ್ ರವರ ಪತ್ರದ ಮೇರೆಗೆ, ಆಗಿನ ಉನ್ನತ ಶಿಕ್ಷಣ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯಾಗಿದ್ದ ಶ್ರೀ ಎಸ್.ಆರ್.ಉಮಾಶಂಕರ್ ರವರು  ಈಗಾಗಲೇ ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೆ ಪತ್ರ ಬರೆಯುವ ಮೂಲಕ  ಚಾಲನೆ ನೀಡಿದ್ದಾರೆ.

ಡಾ.ಶಾಲಿನಿ ರಜನೀಶ್ ರವರು ಮುಖ್ಯಕಾರ್ಯದರ್ಶಿಯಾದ ಪ್ರಥಮ ದಿನವೇ ಮತ್ತೆ ಮುಂದುವರೆದ ಪತ್ರ ನೀಡಲಾಗಿದೆ. ಕಡತದ ಅನುಸರಣೆ ಪ್ರತಿ ದಿನ ನಡೆಯಲಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖಾ ಸಚಿವರಾದ ಶ್ರೀ ಎನ್.ಎಸ್.ಬೋಸರಾಜ್ ರವರ ಜೊತೆ ಖುದ್ಧಾಗಿ ಸಮಾಲೋಚನೆ ನಡೆಸಲಾಗಿದೆ.

ಮಾನ್ಯ ಮುಖ್ಯ ಮಂತ್ರಿಯವರ ನೀತಿ ಮತ್ತು ಕಾರ್ಯಕ್ರಮ ಸಲಹೆಗಾರರಾದ ಶ್ರೀ ಬಿ.ಆರ್.ಪಾಟೀಲರವರಿಗೂ ಮನವಿ ಮಾಡಲಾಗಿದೆ.

ಶೀಘ್ರದಲ್ಲಿ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಮಾನ್ಯ ಶ್ರೀ ರಾಹುಲ್ ಗಾಂಧಿರವರಿಗೂ ಮತ್ತು ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಮಾನ್ಯ ಶ್ರೀ ಎಂ.ಮಲ್ಲಿಕಾರ್ಜುನ ಖರ್ಗೆರವರಿಗೂ,  ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಲು ಮನವಿ ಮಾಡಲಾಗುವುದು.

ರಾಜ್ಯದ ವಿಶ್ವ ವಿದ್ಯಾನಿಲಯಗಳಿಗೆ ನಿರಂತರವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ದಿನಾಂಕ:16.08.2024 ರಿಂದ ಆಂದೋಲನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.