3rd December 2024
Share

TUMAKURU:SHAKTHI PEETA FOUNDATION

ಊರಿಗೊಂದು ಕೆರೆ _ ಆ ಕೆರೆಗೆ ನದಿ ನೀರು’ ನಮ್ಮ ಬಹಳ ದಿನಗಳ ಕನಸು, ತುಮಕೂರು ಲೋಕಸಭಾ ಸದಸ್ಯರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರು ಮಾನ್ಯ ಮುಖ್ಯಮಂತ್ರಿಯವರಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಬರೆದ ಪತ್ರದ ಆಧಾರದ ಮೇಲೆ ಕೈಗೊಂಡಿರುವ ಕ್ರಮಗಳ ಮಾಹಿತಿ ಪಡೆದು, ವಿಳಂಭ ಧೋರಣೆಗಾಗಿ ನ್ಯಾಯಾಲಯಕ್ಕೆ ‘ಪಿಐಎಲ್’ ಹಾಕಲು ಯೋಚಿಸಿದ್ದು, ಈ ಬಗ್ಗೆ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಕಾರ್ಯದರ್ಶಿಯವರಿಗೆ 20 ವಿಷಯಗಳ ಬಗ್ಗೆ ಮನವಿ ಮಾಡಲಾಗಿದೆ.

ಜೊತೆಗೆ ಪ್ರತ್ಯೇಕವಾಗಿ 20 ವಿಷಯಗಳ ಬಗ್ಗೆಯೂ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಕೋರಲಾಗಿದೆ, ಅಪೂರ್ಣ ಮಾಹಿತಿಗಳ ಬಗ್ಗೆ ಪತ್ರ ಬರೆಯಲಾಗಿದೆ.

‘ಈ ಪತ್ರವನ್ನು ಕರ್ನಾಟಕ ರಾಜ್ಯ ಸರ್ಕಾರದ, ಈಗಿನ ಕಾನೂನು ಸಚಿವರಾಗಿರುವ ಶ್ರೀ ಹೆಚ್.ಕೆ.ಪಾಟೀಲ್ ರವರ ಮನೆಯಲ್ಲಿ ನನ್ನ ಬರವಣಿಗೆ ತಿದ್ಧಿ ಸಿದ್ಧಪಡಿಸಲಾಗಿತ್ತು ಎಂಬ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.