21st December 2024
Share

TUMAKURU:SHAKTHIPEETA FOUNDATION

 ಕೇಂದ್ರ ಸರ್ಕಾರದ ಅನುದಾನ ಇತೀಚೆಗೆ ಒಂದು ಬ್ಲಾಂಕ್ ಚೆಕ್ ಇದ್ದ ಹಾಗೆ, ಯಾವ ರಾಜ್ಯದವರು ಸೂಕ್ತ ಪ್ರಸ್ತಾವನೆ ಸಲ್ಲಿಸಿ ಅಭಿವೃದ್ಧಿ ಲಾಭಿ ಮಾಡುತ್ತಾರೋ, ಅವರು ಹೆಚ್ಚಿಗೆ ಅನುದಾನ ಪಡೆಯ ಬಹುದಾಗಿದೆ.

ಆದ್ದರಿಂದ ನಮ್ಮ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಮಂಜೂರು ಮಾಡಿಸಿಕೊಳ್ಳಲು, ಕೆಳಕಂಡ ಕ್ರಮಗಳನ್ನು ಕಾಲಮಿತಿಯೊಳಗೆ ಕೈಗೊಳ್ಳುವುದು ಸೂಕ್ತವಾಗಿದೆ.ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

  1. ಪ್ರತಿಯೊಂದು ಯೋಜನೆಗೂ ಇಲಾಖಾವಾರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಶೇಕಡ ವಾರು ಅನುದಾನದ ಮಾಹಿತಿ ಪಟ್ಟಿ’ ಮಾಡುವುದು.
  2. ರಾಜ್ಯ ಸರ್ಕಾರದ ಶೇಕಡವಾರು ಅನುದಾನ ನೀಡುವ ಖಾತರಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಗಳ ಪರಿಕಲ್ಪನಾ ವರದಿ’ಯನ್ನು ಸಲ್ಲಿಸಲು ಇಲಾಖಾವಾರು ಒಂದು ತಿಂಗಳÀಳೊಗೆ ಕ್ರಮ ಕೈಗೊಳ್ಳುವುದು.
  3. ಪ್ರತಿಯೊಂದು ಯೋಜನಾವಾರು ಪರಿಣಿತರ ವಿಷನ್ ಗ್ರೂಪ್ ರಚಿಸುವುದು.
  4. ಪ್ರತಿಯೊಂದು ಯೋಜನಾವಾರು ಪ್ರಸ್ತಾವನೆ ಸಿದ್ಧಪಡಿಸಲು ‘ಸಲಹಾಗಾರರ ಪ್ಯಾನಲ್ ಸಿದ್ಧಪಡಿಸುವುದು.
  5. ಪ್ರತಿಯೊಂದು ಯೋಜನಾವಾರು  ನೋಡೆಲ್ ಆಫೀಸರ್ ನೇಮಕ ಮಾಡುವುದು.
  6. ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನ ಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರು, ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾಗಿರುವ ಆಯವ್ಯಯದಲ್ಲಿ ಘೋಷಣೆ ಮಾಡಿರುವ ಯೋಜನೆಗಳ ಪ್ರಸ್ತಾವನೆ ಸಲ್ಲಿಸಲು, ‘ಮಾನ್ಯ ಮುಖ್ಯ ಮಂತ್ರಿಯವರಿಂದ ಪತ್ರ’ ಬರೆಸುವುದು.
  7. ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿ ಆಯಾ ಕ್ಷೇತ್ರವಾರು ಪ್ರಸ್ತಾವನೆ ಸಲ್ಲಿಸಲು ಸೂಚಿಸುವುದು.
  8. ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಯಲ್ಲಿ, ಯಾವ ಯೋಜನೆಯನ್ನು ಯಾವ ಕ್ಷೇತ್ರದಲ್ಲಿ ಕೈಗೊಳ್ಳ ಬಹುದು ಹಾಗೂ ಯಾವ ಕ್ಷೇತ್ರಕ್ಕೆ, ಯಾವ ಯೋಜನೆಗೆ ಎಷ್ಟು ಅನುದಾನದ ಅಗತ್ಯ ಇದೆ ಎಂಬ ಬಗ್ಗೆ  ನಿರ್ಣಯ ಕೈಗೊಳ್ಳುವುದು.
  9. ದೆಹಲಿಯಲ್ಲಿ ಯಾವ ಇಲಾಖೆಯಲ್ಲಿ, ಯಾವ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗುವುÀದೋ, ಆಯಾ ಕಛೇರಿವಾರು ಜಿಐಎಸ್ ಲೇಯರ್ ಮಾಡುವುದು.
  10. ದೆಹಲಿಯಲ್ಲಿ ಇಲಾಖಾವಾರು ಒಬ್ಬೊಬ್ಬರನ್ನು ಗುರುತಿಸಿ ಸ್ನೇಹ ಬೆಳೆಸಿ ಕೊಳ್ಳುವುದು. ನಮ್ಮ ರಾಜ್ಯದವರಿದ್ದಲ್ಲಿ ಮಾಹಿತಿ ಸಂಗ್ರಹಿಸುವುದು.
  11. ಯೋಜನೆವಾರು, ಆಯಾ ಕ್ಷೇತ್ರದ ಲೋಕಸಭಾ ಸದಸ್ಯರೊಂದಿಗೆ ಕರ್ನಾಟಕ ಭವನದಲ್ಲಿರುವ ಲೈಸನಿಂಗ್ ಆಫೀಸರ್ ಕಚೇರಿಗಳಿಗೆ ಭೇಟಿ ನೀಡಿ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದು.
  12. ರಾಜ್ಯವನ್ನು ಪ್ರತಿನಿಧಿಸುವ ‘ಕೇಂದ್ರ ಸಚಿವರು ಮೂರು ತಿಂಗಳಿಗೊಮ್ಮೆ ಪ್ರಸ್ತಾವನೆಗಳ ಇಲಾಖೆಗಳ ಸಚಿವರೊಂದಿಗೆ ಸಮಾಲೋಚನೆ ನಡೆಸುವುದು.
  13. ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆವಾರು ನೋಡೆಲ್ ಆಫಿಸರ್ಗಳೊಂದಿಗೆ ಪ್ರತಿ ತಿಂಗಳು ಡಿನ್ನರ್ ಸಭೆ ನಡೆಸಿ ಸಮಾಲೋಚನೆ ನಡೆಸುವುದು ಅಥವಾ ಅವರ ಟೇಬಲ್‍ಗೆ ಭೇಟಿ ನೀಡಿ ಸಮಾಲೋಚನೆ ನಡೆಸುವುದು.
  14. ಎಲ್ಲಾ ಪ್ರಸ್ತಾವನೆಗಳ ಟೆಂಪ್ಲೇಟ್ ಮಾಡಿ, ಪ್ರತಿ ನಡವಳಿಕೆಗಳೊಂದಿಗೆ ತಾಜಾ ಡಿಜಿಟಲ್ ಮಾಹಿತಿಗಳನ್ನು  ಅಫ್ ಡೇಟ್ ಮಾಡುವುದು.
  15. ಈ ಮೇಲ್ಕಂಡ ಎಲ್ಲಾ ಅಂಶಗಳ ಬಗ್ಗೆ, ಕೇಂದ್ರ ಸರ್ಕಾರ 2024-25 ರಲ್ಲಿ ಮಂಡಿಸಿರುವ ಇಲಾಖಾವಾರು ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಲು, ಇಲಾಖಾ ಮುಖ್ಯಸ್ಥರಿಗೆ ಅಧಿಕಾರ ನೀಡಲು ರಾಜ್ಯ ಸರ್ಕಾರದ ಕ್ಯಾಬಿನೇಟ್ ಸಭೆಯಲ್ಲಿ ತಾತ್ವಿಕ ಅನುಮತಿ ಪಡೆಯುವುದು.