14th January 2025
Share

TUMAKURU:SHAKTHIPEETA FOUNDATION

ವಿದ್ಯುತ್ ಎಲ್ಲಿ ಬೇಕಾದರೂ, ಎಷ್ಟು ಬೇಕಾದರೂ ತಯಾರಿಸಬಹುದು, ಆದರೇ ಕುಡಿಯುವ ನೀರು ಬಹಳ ಕಷ್ಟ, ಆದ್ದರಿಂದ ಬೆಂಗಳೂರಿಗೆ ಲಿಂಗನಮಕ್ಕಿ ನೀರು ತರಲು ಆಲೋಚನೆ ಮಾಡುತ್ತಿದ್ದೇನೆ ಎಂದು ಬಹಿರಂಗವಾಗಿ ಘೋಷಣೆ ಮಾಡಿರುವ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಶ್ರೀ ಡಿ. ಕೆ. ಶಿವಕುಮಾರ್ ರವರ ಹೇಳಿಕೆ ನಿಜಕ್ಕೂ ಸ್ವಾಗತಾರ್ಹ.

ಅವರಿಗೆ ಸಂಪೂರ್ಣ ಬೆಂಬಲ ನೀಡುವುದು ರಾಜ್ಯದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಪರಿಸರವಾದಿಗಳು ಮತ್ತು ಇಂಜಿನಿರ್‍ಗಳು ಪರಸ್ಪರ ಕುಳಿತು ಸಾಧಕ-ಭಾಧಕಗಳ ಬಗ್ಗೆ  ಸಮಾಲೋಚನೆ ಮಾಡುವುದು ಸೂಕ್ತವಾಗಿದೆ.

ಪಶ್ಚಿಮಾಭಿಮುಖವಾಗಿ ಹರಿಯುವ ನೀರು ಸುಮಾರು 2000-2500 ಟಿಎಂಸಿ ಅಡಿ ನೀರು, ಇದರಲ್ಲಿ ಶೇ 25 ಕ್ಕಿಂತ ಹೆಚ್ಚು  ನೀರನ್ನು  ಬಯಲು ಪ್ರದೇಶಗಳಿಗೆ  ತರುವುದು ಅನಿವಾರ್ಯವಾಗಿದೆ.

ಪಶ್ಚಿಮಘಟ್ಟಗಳಲ್ಲಿ  ಹೊಸದಾಗಿ ಡ್ಯಾಂ ಕಟ್ಟುವುದು ಕಷ್ಟ. ಬಯಲು ಪ್ರದೇಶದಲ್ಲಿ ಡ್ಯಾಂ ನಿರ್ಮಾಣ ಮಾಡಿ ಮಳೆಗಾಲದ ಪ್ರವಾಹದ ನೀರು ತಂದರೂ ಸಾಕು.

ಲಿಂಗನಮಕ್ಕಿ ಡ್ಯಾಂ ಅನ್ನು ಯಾರೋ ಪುಣ್ಯಾತ್ಮರು ನಿರ್ಮಾಣ ಮಾಡಿದ್ದಾರೆ, ಭಧ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆಗಳ ಕಾಲುವೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗ ಕೆಲವು ಕಡೆ ಈ ಎರಡು ಕಾಲುವೆಗಳಿಗೆ ನೀರಿನ ಸಂಪರ್ಕ ಮಾಡುವುದಷ್ಟೆ ಲಿಂಗನಮಕ್ಕಿ ಯೋಜನೆ ಕೆಲಸ.

ಡ್ಯಾಂ ನಿರ್ಮಾಣ ಮಾಡುವ ಹಾಗಿಲ್ಲ, ಸುಮಾರು ಶೇ 80 ರಷ್ಟು ಕಾಲುವೆ ಇದೆ, ಕೇವಲ ಶೇ 20 ರಷ್ಟು ಕಾಲುವೆ ಹಾಗೂ ಪೈಪ್ ಲೈನ್ ಮಾತ್ರ ಮಾಡಬೇಕಾಗ ಬಹುದು, ಪಕ್ಕಾ ಸಮೀಕ್ಷೆ ಆದ ನಂತರ ಸ್ಪಷ್ಟ ಮಾಹಿತಿ ತಿಳಿಯುವುದು.

 ಈ ನೀರನ್ನು ತಂದು ವಾಣಿ ವಿಲಾಸ, ತುಮಕೂರು ಜಿಲ್ಲೆಯಲ್ಲಿ ನಿರ್ಮಾಣ ಮಾಡಬಹುದಾದ ಗೂಬೆಹಳ್ಳ, ದೊಡ್ಡಬೆಟ್ಟ  ಅಥವಾ ಜಾಲಗುಣಿ ಡ್ಯಾಂಗಳಲ್ಲಿ ಸಂಗ್ರಹ ಮಾಡಬಹುದಾಗಿದೆ.

ಪರ-ವಿರೋಧ ಹೋರಾಟಗಳು ಆರಂಭವಾಗಿವೆ. ನೋಡೋಣ ಮುಂದೆ.