TUMAKURU:SHAKTHIPEETA FOUNDATION
ಕಳೆದ ಲೋಕಸಭಾ ಚುನಾವಣೆಗೂ ಮುನ್ನ ‘ವಾರಣಾಸಿ ಮಾಡೆಲ್ ಅಭಿವೃದ್ದಿ ಪಡಿಸುತ್ತೇನೆ, ರೂ 10000 ಕೋಟಿ ಅನುದಾನ ತರಲು ಶ್ರಮಿಸುತ್ತೇನೆ’ ಎಂದು ಕೇಂದ್ರ ಜಲಶಕ್ತಿ ಹಾಗಹೂ ರೈಲ್ವೆ ಸಚಿವರಾದ ಶ್ರೀ ವಿ.ಸೋಮಣ್ಣನವರು ಪ್ರಕಟಿಸಿದ್ದರು.
ಈಗ ಅವರ ಸ್ಪೀಡ್ ನೋಡಿದರೆ, ರಾಜ್ಯ ಸರ್ಕಾರವೂ ಸ್ಪಂಧಿಸಿದರೆ, ರೂ 10000 ಕೋಟಿಗೂ ಮೀರಲಿದೆ. ‘ವಾರಾಣಾಸಿ ಮಾಡೆಲ್’ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರೇ ಹೇಳ ಬೇಕು, ನನ್ನ ಅನುಭವ ಹಾಗೂ ದಿಶಾ ಸಮಿತಿಯಲ್ಲಿ ನಿರ್ಣಯ ಕೈಗೊಂಡಿರುವ ಪ್ರಕಾರ ‘ತುಮಕೂರು ಮಾಡೆಲ್’ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಳ್ಳುತ್ತೇನೆ.
ಏನಿದು ‘ತುಮಕೂರು ಮಾಡೆಲ್’ ?
- ಉದ್ದೇಶಿತ ಇನ್‍ಪ್ರಿನ್ಸಿಪಲ್ ಪ್ರೂವಲ್ ಆಗಿರುವ ತುಮಕೂರು ರಿಂಗ್ ರಸ್ತೆ ಸುಮಾರು 44 ಕಿ.ಮೀ- ರೂ —–
- ಉಳಿದ ಇನ್ನೂ ಉಳಿದಿರುವ ಅರ್ದಭಾಗದ ರಿಂಗ್ ರಸ್ತೆ ಸುಮಾರು 50 ಕಿ.ಮೀ. ರೂ —
- ತುಮಕೂರು ನಗರದಿಂದ ಉದ್ದೇಶಿತ ರಿಂಗ್ ರಸ್ತೆವರೆಗೆ ಹೈ ಗುಣಮಟ್ಟದ ರೇಡಿಯಲ್ ರಿಂಗ್ ರಸ್ತೆಗಳು, ಕಿ.ಮೀ ರೂ ——-
- ಬೆಂಗಳೂರು – ತುಮಕೂರು ವರೆಗೆ ಪೈಓವರ್/ ಎಲಿವೇಟೆಡ್ ರಸ್ತೆ ರೂ——-
- ತುಮಕೂರು ನಗರದ ಸುತ್ತ ಬರುವ ಸುಮಾರು 100 ಕೀ.ಮೀ. ರಿಂಗ್ ರಸ್ತೆ ಪಕ್ಕ, ಉದ್ದೇಶಿತ ಕಮ್ಯೂಟರ್ ರೈಲು ರಿಂಗ್ ಮಾರ್ಗ, ಬೆಂಗಳೂರು ಮಾದರಿಯಲ್ಲಿ ರೂ—–
- ಉದ್ದೇಶಿತ ರೈಲ್ವೇ ಯಾರ್ಡ್ ಮತ್ತು ಗೋಡಾನ್ ರೂ—–
- ತುಮಕೂರು ನಗರದ ಸುತ್ತ ಬರುವ ಸುಮಾರು 100 ಕೀ.ಮೀ. ರಿಂಗ್ ರಸ್ತೆ ಪಕ್ಕ, ಉದ್ದೇಶಿತ ಮೆಟ್ರೋ ಮಾರ್ಗ, ಬೆಂಗಳೂರು ರೂ —–
- ತುಮಕೂರು ನಗರದ ಸುತ್ತ ಬರುವ ಸುಮಾರು 100 ಕೀ.ಮೀ. ರಿಂಗ್ ರಸ್ತೆ ಪಕ್ಕ, ಉದ್ದೇಶಿತ ಅಂತರ್ಜಲ ಅಭಿವೃದ್ಧಿ ಕಾರಿಡಾರ್ ಮತ್ತು ವಾಟರ್ ವೇಸ್, ಮಳೆಗಾಲದಲ್ಲಿ ನಾಲೆಗಳ ಮತ್ತು ಮಳೆ ನೀರು, ಬೇಸಿಗೆಯಲ್ಲಿ ಪರಿಷ್ಕರಣೆ ಮಾಡಿದ ನೀರು ಹಾಗೂ ಡ್ಯಾಂ ನೀರಿನ ಯೋಜನೆ ರೂ —–
- ಜಾಲಗುಣಿ ಡ್ಯಾಂ, ಶರಾವತಿ ಅಥವಾ ಬೇರೆ ನದಿ ಮೂಲದನೀರಿನ ಯೋಜನೆ.ರೂ—-
- ಬೆಂಗಳೂರಿನಿಂದ ತುಮಕೂರುವರೆಗೆ ಉದ್ದೇಶಿತ ಮೆಟ್ರೋ ಮಾರ್ಗ,ರೂ——–
- ಉದ್ದೇಶಿತ ಅಂತರರಾಷ್ಟ್ರೀಯ ಮಟ್ಟದ ಏರ್ ಪೋರ್ಟ್ ರೂ ——-
- ಉದ್ದೇಶಿತ ರಿಂಗ್ ರಸ್ತೆ ಮದ್ಯೆ ಬರುವ ಎಲ್ಲಾ ಕೆರೆಗಳಿಗೆ ನದಿ ನೀರು ರೂ——
- ಉದ್ದೇಶಿತ ರಿಂಗ್ ರಸ್ತೆ ಮದ್ಯೆ ಬರುವ ರೈತರ ಎಲ್ಲಾ ಜಮೀನುಗಳಿಗೆ ಹೇಮಾವತಿ ನದಿಯಿಂದ ಮೈಕ್ರೋ ಇರ್ರಿಗೇಷನ್ ಯೋಜನೆ ರೂ——
- ಉದ್ದೇಶಿತ ರಿಂಗ್ ರಸ್ತೆ ಮದ್ಯೆ ಬರುವ ಸರ್ಕಾರಿ ಜಮೀನನ್ನು ನಿಯಾಮುನುಸಾರ ಯಾರಿಗೂ ಮಂಜೂರು ಮಾಡಲು ಬರುವುದಿಲ್ಲಾ, ಸುಮಾರು 2500 ಎಕರೆಗೂ ಹೆಚ್ಚು ಸರ್ಕಾರಿ ಜಮೀನು ಇದೆ, ಒಂದು ಗುಂಟೆಯಿಂದ ನೂರಾರು ಎಕರೆ ವರೆಗೂ ಅಲ್ಲಲ್ಲಿ ಇದೆ. ಇಲ್ಲಿ ಸ್ವಯಂ ಉದ್ಯೋಗಿಗಳಿಗೆ ಕೈಗಾರಿಕೆ ಹಾಗೂ ಕ್ಲಸ್ಟರ್ ಚಟುವಟಿಕೆ. ರೂ—
- ಉದ್ದೇಶಿತ ರಿಂಗ್ ರಸ್ತೆ ಮದ್ಯೆ ಬರುವ ಸರ್ಕಾರಿ ಜಮೀನನಲ್ಲಿ ಸರ್ಕಾರಿ ಕಟ್ಟಡಗಳು. ರೂ-
- ಉದ್ದೇಶಿತ ರಿಂಗ್ ರಸ್ತೆ ಮದ್ಯೆ ಮತ್ತು ಅಕ್ಕ ಪಕ್ಕ ಬರುವ ಕಡೆ ಹಲವಾರು ಪ್ರವಾಸಿ ಕೇಂದ್ರಗಳು ಹಾಗೂ ಹೆರಿಟೇಜ್ ಸ್ಥಳಗಳ ಅಭಿವೃದ್ಧಿ ರೂ—–
- ಉದ್ದೇಶಿತ ರಿಂಗ್ ರಸ್ತೆ ಮದ್ಯೆ ಮತ್ತು ಅಕ್ಕ ಪಕ್ಕ ಹಾಗೂ ತುಮಕೂರು ನಗರವೂ ಸೇರಿದಲ್ಲಿ ಬರುವ ರಾಜಕಾಲುವೆಗಳ ಸಮಗ್ರ ಅಭಿವೃದ್ಧಿ ರೂ—–
- ಉದ್ದೇಶಿತ ಮಾಸ್ಟರ್‍ಪ್ಲಾನ್‍ನಲ್ಲಿ ಬರುವ ರಸ್ತೆಗಳ ಸಮಗ್ರ ಅಭಿವೃದ್ಧಿ ರೂ—–
- ಉದ್ದೇಶಿತ ಮಾಸ್ಟರ್‍ಪ್ಲಾನ್‍ನಲ್ಲಿ ಬರುವ ಎಲ್ಲಾ ಸರ್ವೇನಂಬರ್‍ವಾರು ಯೋಜನೆಗಳ ಸಮಗ್ರ ಅಭಿವೃದ್ಧಿ ರೂ—–
- ಉದ್ದೇಶಿತ ಮಾಸ್ಟರ್‍ಪ್ಲಾನ್‍ನಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿ ಬಯಸುವ ಯೋಜನೆಳಿಗೆ ಆರ್ಥಿಕ ನೆರವು ರೂ—–
- ಉದ್ದೇಶಿತ ಮಾಸ್ಟರ್‍ಪ್ಲಾನ್‍ನಲ್ಲಿ ಬರುವ ಪ್ರತಿಯೊಂದು ಕುಟುಂಬ ಬಯಸುವ ಯೋಜನೆಳಿಗೆ ಆರ್ಥಿಕ ನೆರವು ರೂ—–
- ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿ ಎಷ್ಟು ಜನಸಂಖ್ಯೆಗೆ ಒಂದು ಯೋಜನೆ ಇರಬೇಕೋ ಅಂತಹ ಯೋಜನೆಗಳು ರೂ—-
- ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿ ಎಷ್ಟು ವ್ಯಾಪ್ತಿಗೆ ಒಂದು ಯೋಜನೆ ಇರಬೇಕೋ ಅಂತಹ ಯೋಜನೆಗಳು ರೂ—-
- ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿನ ಎಲ್ಲಾ ಯೋಜನೆಗಳ ಪ್ರಾತ್ಯಾಕ್ಷಿಕೆ ಯೋಜನೆಗಳು ರೂ—-
- ಉದ್ದೇಶಿತ ರಿಂಗ್ ರಸ್ತೆ ಮದ್ಯೆ ಮತ್ತು ಅಕ್ಕ ಪಕ್ಕ ಬರುವ ಸರ್ಕಾರಿ ಜಮೀನನಲ್ಲಿ ಟೌನ್ ಷಿಪ್ ರೂ—–
- ಉದ್ದೇಶಿತ ರಿಂಗ್ ರಸ್ತೆ ಮದ್ಯೆ ಮತ್ತು ಅಕ್ಕ ಪಕ್ಕ ಬರುವ ಸರ್ಕಾರಿ ಜಮೀನನಲ್ಲಿ ಎಲ್ಲಾ ಜಾತಿಯವರ ಹಾಸ್ಟೆಲ್ ನಿರ್ಮಾಣ ರೂ—–
- ಉದ್ದೇಶಿತ ರಿಂಗ್ ರಸ್ತೆ ಮದ್ಯೆ ಮತ್ತು ಅಕ್ಕ ಪಕ್ಕ ಬರುವ ಬೆಟ್ಟ-ಗುಡ್ಡಗಳ ಸಮಗ್ರ ಅಭಿವೃದ್ಧಿ ರೂ—–
- ಉದ್ದೇಶಿತ ರಿಂಗ್ ರಸ್ತೆ ಮದ್ಯೆ ಮತ್ತು ಅಕ್ಕ ಪಕ್ಕ ಬರುವ ಅರಣ್ಯ ಪ್ರದೇಶಗಳ ಸಮಗ್ರ ಅಭಿವೃದ್ಧಿ ರೂ—–
- ಇಂಡಸ್ಟ್ರಿಯಲ್ ನೋಡ್ ಮುಂದುವರೆದ ಕಾಮಗಾರಿ ರೂ—-
- ಪವರ್ ಗ್ರಿಡ್ ಮುಂದುವರೆದ ಕಾಮಗಾರಿ ರೂ—-
- ಮೆಷಿನ್ ಟೂಲ್ ಪಾರ್ಕ್ ಮುಂದುವರೆದ ಕಾಮಗಾರಿ ರೂ—-
- ಜಪಾನೀಸ್ ವಿಲೇಜ್ ಮುಂದುವರೆದ ಕಾಮಗಾರಿ ರೂ—-
- ಪ್ರೈಟ್ ವಿಲೇಜ್ ರೂ——
- ಉದ್ದೇಶಿತ ರಿಂಗ್ ರಸ್ತೆ ಸುತ್ತಲೂ ನಿಲ್ಧಾಣಗಳಲ್ಲಿ ಟೌನ್‍ಷಿಪ್ ರೂ—–
- ಇಸ್ರೋ ಘಟಕ ರೂ———-
- ತುಮಕೂರು ವಿಶ್ವ ವಿದ್ಯಾನಿಲಯದ ಮುಂದುವರೆದ ಕಾಮಗಾರಿ ರೂ—-
- ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ತುಮಕೂರು ವಿಶ್ವ ವಿದ್ಯಾನಿಲಯದ ಸಹಭಾಗಿತ್ವದಲ್ಲಿ ತುಮಕೂರು ರೀಸರ್ಚ್ ಫೌಂಡೇಷನ್ @ 2047 ಬಹುಪಯೋಗಿ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪಸ್ ರೂ—-
- ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ರೂ—-
- ಅಂತರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡಾ ಕೋರ್ಟ್‍ಗಳ ನಿರ್ಮಾಣ ರೂ—-
- ಅಂತರಾಷ್ಟ್ರೀಯ ಮಟ್ಟದ ಮೆಡಿಕಲ್ ಹಬ್ ರೂ—–
- ಅಂತರಾಷ್ಟ್ರೀಯ ಮಟ್ಟದ ಎಜುಕೇಷನ್ ಹಬ್ ರೂ—–
- ಅಂತರಾಷ್ಟ್ರೀಯ ಮಟ್ಟದ ಎಕ್ಸ್‍ಪೋರ್ಟ್ ಹಬ್ ರೂ—–
- ಅಂತರಾಷ್ಟ್ರೀಯ ಮಟ್ಟದ ಡಿಸ್ಟಿಕ್ಟ್ ಒನ್- ಪ್ರಾಡಕ್ಟ್ ಒನ್ / ಕೋಕನಟ್ ಸ್ಪೆಷಲ್ ಎಕನಾಮಿಕ್ ಝೋನ್ ರೂ—–
- ಅಂತರಾಷ್ಟ್ರೀಯ ಮಟ್ಟದ ರೈಸ್ ಮಿಲ್ ಕ್ಲಸ್ಟರ್ ರೂ—–
- ಅಂತರಾಷ್ಟ್ರೀಯ ಮಟ್ಟದ ಕ್ರಷರ್ ಕ್ಲಸ್ಟರ್ ರೂ—–
- ಅಂತರಾಷ್ಟ್ರೀಯ ಮಟ್ಟದ ಘನ ತ್ಯಾಜ್ಯ ವಸ್ತು ಘಟಕ ರೂ—–
- ಅಂತರಾಷ್ಟ್ರೀಯ ಮಟ್ಟದ ಕೊಳಚೆ ನೀರು ಪರಿಷ್ಕರಣೆ ಘಟಕ ರೂ—–
- ಹಸಿರು-ತುಮಕೂರು ಮುಂದುವರೆದ ಯೋಜನೆ ರೂ——-
- ವಿದ್ಯುತ್ ಲೈನ್‍ರಹಿತ ನಗg, ಎಲ್ಲಾ ವ್ಯಾಪ್ತಿಗೂÀ ವಿದ್ಯುತ್ ಕೇಬಲ್ ಅಳವಡಿಕೆ ರೂ—
- ಎಲ್ಲಾ ವ್ಯಾಪ್ತಿಗೂÀ ಸೋಲಾರ್ ವ್ಯವಸ್ಥೆ ರೂ—-
- ಎಲ್ಲಾ ವ್ಯಾಪ್ತಿಗೂÀ ಡಾಟಾ ನಗರ ರೂ———-
- ಎಲ್ಲಾ ವ್ಯಾಪ್ತಿಗೂÀ ಡಿಜಿಟಲ್ ನಗರ ರೂ———-
- ತುಮಕೂರು ರೈಲ್ವೇ ಸ್ಟೇಷನ್ ಏರ್ ಪೋರ್ಟ್ ಮಾದರಿ ಅಭಿವೃದ್ಧಿ ರೂ—–
- ರೈಲ್ವೇ ಸೇತುವೆಗಳು ರೂ———–
- ತುಮಕೂರು- ಬೆಂಗಳೂರು ರೈಲ್ವೇ 4 ಮಾರ್ಗಗಳು ರೂ———
‘ತುಮಕೂರು ಲೋಕಸಭಾ ಕ್ಷೇತ್ರ ಅಥವಾ ತುಮಕೂರು ಜಿಲ್ಲೆಯ ಯೋಜನೆಗಳಲ್ಲ ಇವು. ಕೇವಲ ತುಮಕೂರು ನಗರದ ಸುತ್ತ–ಮುತ್ತ ಬರುವ ಬೃಹತ್ ಯೋಜನೆಗಳು, ಇನ್ನೂ ಹಲವಾರು ಯೋಜನೆಗಳು ಬರಲಿವೆ.’
ಎಲ್ಲಾ ಇಲಾಖೆಗಳ ಅಧಿಕಾರಿಗಳಿಂz ಇನ್ನೂ ಯಾವ ಯೋಜನೆ ಜಾರಿಗೊಳಿಸ ಬಹುದು ಎಂಬ ಬಗ್ಗೆ ಮಾಹಿತಿÀ ಸಂಗ್ರಹಿಸಿ, ನಂತರ ಡಿ.ಪಿ.ಆರ್ ಮಾಡಲು ಆರಂಭಿಸಿದರೆ, ಇದೇ ಅಂತರಾಷ್ಟ್ರೀಯ ಮಟ್ಟದ ‘ತುಮಕೂರು ಮಾಡೆಲ್ @ 2047’ ಯೋಜನೆಯಾಗಲಿದೆ.
ಮೊದಲನೇ ಹಂತದಲ್ಲಿ 2047 ರವೆಗೂ ಎಷ್ಟು ಮೊತ್ತದ ಯಾವ ಯೋಜನೆಗಳನ್ನು ಜಾರಿಗೊಳಿಸಿಸ ಬೇಕು ಎಂಬ ‘ಮಾಸ್ಟರ್ ಪ್ಲಾನ್’ ಸಿದ್ಧವಾಗಲಿ. ಲೋಕಲ್ ಇನ್ವೆಸ್ಟರ್ಸ್ ಮೂಲಕವೇ ಸಾವಿರಾರು ಕೋಟಿ ಹೂಡಿಕೆಯಾಗಲಿದೆ.
ಎರಡನೇ ಹಂತದಲ್ಲಿ ಜಿಲ್ಲಾ ಮಟ್ಟದ ಯೋಜನೆಗಳ ಕಡೆ ಗಮನ ಹರಿಸುವುದು ಸೂಕ್ತವಾಗಿದೆ.
–ಕುಂದರನಹಳ್ಳಿ ರಮೇಶ್