21st December 2024
Share

TUMAKURU:SHAKTHIPEETA FOUNDATION

 ‘ವಿಕಸಿತ ಭಾರತ @ 2047’ ಎಂಬ ಘೋಷಣೆಯಡಿಯಲ್ಲಿ, 2047 ಕ್ಕೆ ಭಾರತ ದೇಶ ಪ್ರಪಂಚದಲ್ಲಿಯೇ, ನಂಬರ್ ಒನ್ ಆಗಲು ಶ್ರಮಿಸೋಣ ಎಂದು ನಮ್ಮ ಪ್ರಧಾನಿ ಶ್ರೀ ನರೇಂದ್ರಮೋದಿಯವರು ಕರೆ ನೀಡುತ್ತಿದ್ದಾರೆ.

 ನಮ್ಮ ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು  ಕರ್ನಾಟಕ ರಾಜ್ಯ ಅಭಿವೃದ್ಧಿ ಮಾದರಿ’ ದೇಶಕ್ಕೆ ವಿಭಿನ್ನವಾಗಿರಲಿದೆ ಎಂದು 2024-2025 ರ ಆಯವ್ಯಯದ ಭಾಷಣದಲ್ಲಿ ಹೇಳಿದ್ದಾರೆ.

 ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್‍ರವರು ಎರಡು ಘೋಷಣೆಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಲು ನಾಲೇಡ್ಜ್ ಬ್ಯಾಂಕ್ @ 2047’  ಆರಂಭಿಸಬೇಕು ಎಂಬ ಕನಸನ್ನು ಹೊತ್ತಿದ್ದಾರೆ.

ಈಗಾಗಲೇ ಅವರು ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾಗಿದ್ದಾಗ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾಗಿದ್ದ ಶ್ರೀ ಎಸ್.ಆರ್.ಉಮಾಶಂಕರ್ ರವರಿಗೆ ಬರೆದ ಪತ್ರದ ಹಿನ್ನಲೆಯಲ್ಲಿ, ಅವರು ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೆ ಪತ್ರ ಬರೆದು ನಾಲೇಡ್ಜ್ ಬ್ಯಾಂಕ್ @ 2047’  ರ ಸ್ಥಾಪನೆ ಬಗ್ಗೆ ಸಲಹೆ ನೀಡಲು ಸೂಚಿಸಿದ್ದಾರೆ.

ನಾನು ಈಗಾಗಲೇ ರಾಜ್ಯಾಧ್ಯಂತ ಹಲವಾರು ಶಾಲಾ ಕಾಲೇಜುಗಳು, ವಿಶ್ವ ವಿದ್ಯಾನಿಲಯಗಳು ಮತ್ತು ಸಂಘಸಂಸ್ಥೆಗಳಲ್ಲಿ ಉಪನ್ಯಾಸ, ಸಮಾಲೋಚನೆ ನಡೆಸಿದಾಗ ನನಗೆ ಅನಿಸಿದ್ದು  ನಾವು ಹೇಳಿದ ಹಾಗೆ ಮಾಡಿ ಅನ್ನುವುದಕ್ಕಿಂತ ನಾವು ಮಾಡಿದ ಹಾಗೆ ಮಾಡಿ’ ಎನ್ನುವುದು ಒಳ್ಳೆಯ ಬೆಳವಣಿಗೆ ಎಂಬ ದೂರದೃಷ್ಠಿಯಿಂದ, ‘ತುಮಕೂರು ವಿಶ್ವ ವಿದ್ಯಾನಿಲಯದ ಮೂಲಕ ದೇಶದ ಪ್ರಥಮ ನಾಲೇಡ್ಜ್ ಬ್ಯಾಂಕ್ @ 2047’  ಸ್ಥಾಪಿಸಲು ಮನವಿ ಮಾಡಲಾಗಿದೆ.

ತುಮಕೂರು ವಿಶ್ವ ವಿದ್ಯಾನಿಲಯ ದಿನಾಂಕ:02.10.2023 ರಂದು ತುಮಕೂರು ರೀಸರ್ಚ್ ಫೌಂಡೇಷನ್ @ 2047’  ರಚಿಸಿ, ಆರಂಭಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ.  ಜೊತೆಗೆ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲುರವರು ಮತ್ತು ಅವರ ತಂಡ ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಮಧ್ಯಂತರ ವರದಿಯ ಕರಡು ಪ್ರತಿಯನ್ನು ಬಹಳ ಆಳವಾದ ಅಧ್ಯಯನ ಮಾಡಿದೆ.

 ‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುಮತಿ’ ಯ ಮೇರೆಗೆ, ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ರಚಿಸುವ  ಕರ್ನಾಟಕ ರೀಸರ್ಚ್ ಫೌಂಡೇಷನ್’   ಸಹಭಾಗಿತ್ವದಲ್ಲಿ,   2047 ರವರೆಗೆ ನಿರಂತರವಾಗಿ ಶ್ರಮಿಸಲು, ರಾಜ್ಯದ್ಯಾಂತ ಒಂದು ತಂಡವನ್ನೇ ಕಟ್ಟಲು, ಅಂದರೆ ಉದ್ದೇಶಿತ 555 ಅಧ್ಯಯನ ಮತ್ತು ಸಂಶೋಧನಾ ಪೀಠ/ನಾಲೇಡ್ಕ್ ಬ್ಯಾಂಕ್ @ 2047 ಸ್ಥಾಪಿಸಲು ಮತ್ತು ನಿರ್ವಹಣೆ ಮಾಡಲು ಚಿಂತನೆ ಆರಂಭಿಸಿದೆ. ‘ಪರಿಕಲ್ಪನಾ ವರದಿ’ ಯನ್ನು ಸಿದ್ಧ ಗೊಳಿಸುತ್ತಿದೆ.

ಇವುಗಳ ಸ್ಥಾಪನೆಗೆ  ದೇಶದ ಪ್ರಥಮ ನಾಲೇಡ್ಜ್ ಬ್ಯಾಂಕ್ @ 2047’  ಮೊದಲ ಮೆಟ್ಟಿಲು ಆಗಲಿದೆ. ಜೊತೆಗೆ ಫೈಲಟ್ ಯೋಜನೆಯೂ, ಆಗಿ ದೇಶಕ್ಕೆ ಸಮರ್ಪಣೆ ಮಾಡುವ ಆಲೋಚನೆಯಿದೆ. ಶಕ್ತಿಪೀಠ ಫೌಂಡೇಷನ್, ಈ ಯೋಜನೆಯ ‘ಮೆಂಟರ್’ ಆಗಿ ಕಾರ್ಯನಿರ್ವಹಿಸಲಿದೆ.

ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಹಭಾಗಿತ್ವದ ‘ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ’ ದ ಎಂ.ಓ.ಯು, ಬಹುತೇಕ ಈ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಈ ಬಗ್ಗೆ ಒಂದು ವಿಷನ್ ಡಾಕ್ಯುಮೆಂಟ್ ಅನ್ನು ಈಗಾಗಲೇ ಪ್ರಕಟಗೊಳಿಸಲಾಗಿತ್ತು. ಈ ಪೀಠದ ಮೂಲಕವೇ ಚಾಲನೆ ನೀಡಬಹುದಾಗಿದೆ.

ರಾಜ್ಯದ ಹಲವಾರು ವಿಶ್ವ ವಿದ್ಯಾನಿಲಯಗಳಲ್ಲಿ 115 ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರಗಳು ಈಗಾಗಲೇ ಕಾರ್ಯನಿರ್ವಹಿಸಲಿವೆ. ಇವುಗಳನ್ನು ಕೆಲವರು ಸಮಾಧಿ ಪೀಠ’ ಗಳು ಎನ್ನುತ್ತಾರೆ.

 ಈ ಆರೋಪದಿಂದ ಹೊರಬಂದು 115 ಅಧ್ಯಯನ ಪೀಠಗಳು ಹಾಗೂ ಖಾಸಗಿ ಸಂಶೋಧನಾ ಘಟಕಗಳು ಸಹ, ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ರೀಸರ್ಚ್ ಫೌಂಡೇಷನ್’   ಸಹಭಾಗಿತ್ವದಲ್ಲಿ ಮುನ್ನಡೆಯಲು ರೂಪುರೇಷೆ ಸಿದ್ಧಪಡಿಸ ಬೇಕಿದೆ. 

  ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಶ್ರೀ ಎನ್.ಎಸ್. ಭೋಸೆರಾಜ್  ರವರು ಮತ್ತು ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ತುಮಕೂರು ವಿಶ್ವ ವಿದ್ಯಾನಿಲಯದ ಪರಿಕಲ್ಪನಾ ವರದಿ’ ಗೆ ಯಾವ ರೀತಿ ಸ್ಪಂಧಿಸುತ್ತಾರೆ  ಕಾದು ನೋಡಬೇಕಿದೆ.

ದಿನಾಂಕ:02.10.2024 ರೊಳಗೆ ಅಂದರೆ ತುಮಕೂರು ರೀಸರ್ಚ್ ಫೌಂಡೇಷನ್ @ 2047’ ನ ಪ್ರಥಮ ವಾರ್ಷಿಕೋತ್ಸವದ ವೇಳೆÀಗೆ ಪ್ರಸ್ತಾವನೆಯನ್ನು ಸರ್ಕಾರಗಳಿಗೆ ಸಲ್ಲಿಸಿ, ನಂತರ ಚುನಾಯಿತ ಜನಪ್ರತಿನಿಧಿಗಳಿಗೂ ಸಲ್ಲಿಸಲಿದೆ.

ತುಮಕೂರು ಜಿಲ್ಲೆಯ ಸರ್ವಪಕ್ಷಗಳ ಚುನಾಯಿತ ಜನ ಪ್ರತಿನಿಧಿಗಳು, ಪಕ್ಷಬೇಧ ಮರೆತು ಸ್ಪಂಧಿಸಿದರೆ, ಅಂತರ ರಾಷ್ಟ್ರೀಯ ಮಟ್ಟದ ಬಹುಪಯೋಗಿ ಬೃಹತ್ ಕ್ಯಾಂಪಸ್’ ಸ್ಥಾಪನೆಯಾಗುವುದರ ಜೊತೆಗೆ, ರಾಜ್ಯದ್ಯಾಂತ 555 ಅಧ್ಯಯನ ಪೀಠಗಳ ನಿರ್ವಹಣೆ ಹೊಣೆಗಾರಿಕೆ ಹೊರಲಿದೆ.

ಈ ಯೋಜನೆಯಿಂದ ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆಗಳ ಡಾಟಾ ಮಿತ್ರರು ಸೇರಿದಂತೆ ಸುಮಾರು 30000 ಕ್ಕೂ ಹೆಚ್ಚು ಉದ್ಯೋಗ ದೊರೆಯಲಿದೆ. ಕೇಂದ್ರ ಸರ್ಕಾರ ಸ್ಥಾಪಿಸಿರುವ ನ್ಯಾಷನಲ್ ರೀಸರ್ಚ್ ಫೌಂಡೇಷನ್’ ನಿಂದ ಹೆಚ್ಚು ಅನುದಾನ ಪಡೆಯಬಹುದಾಗಿದೆ.

ರಾಜ್ಯದ ಎಲ್ಲಾ ಶಾಸPರು, ಸಂಸದರು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಸಹ ಒಂದೊಂದು ಪೀಠದ ನೇತೃತ್ವ ವಹಿಸಿ, ಅವರವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ, ‘ತಾಜಾ ಡಾಟಾ’ ದೊಂದಿಗೆ ‘ನಿಖರವಾದ ಮಾಹಿತಿ’ ಗಳ, ಆಧಾರದ ಮೇಲೆ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ದೊರಕಿಸುವ ಮೂಲಕ ವಿಶ್ವದ ಗಮನ’ ಸೆಳೆಯಲಿದ್ದಾರೆ.

ಕುಂದರನಹಳ್ಳಿ ರಮೇಶ್,