TUMAKURU:SHAKTHIPEETA FOUNDATION
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು ಮತ್ತು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರ ಹಾಗೂ ತುಮಕೂರು ಜಿಲ್ಲೆಯ ಎಲ್ಲಾ ಹಂತದ ಚುನಾಯಿತ ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ, ತುಮಕೂರು ಜಿಲ್ಲೆಗೊಂದು ಅಂತರ ರಾಷ್ಟ್ರೀಯ ಮಟ್ಟದ ಬೃಹತ್ ಯೋಜನೆ ಮಂಜೂರಾತಿಗೆ ಸಿದ್ಧತೆ ?
ತುಮಕೂರು ರೀಸರ್ಚ್ ಫೌಂಡೇಷನ್ @ 2047
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ,
ತುಮಕೂರು ವಿಶ್ವ ವಿದ್ಯಾನಿಲಯ.
ತುಮಕೂರು ರೀಸರ್ಚ್ ಫೌಂಡೇಷನ್ @ 2047 ಪ್ರಥಮ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆಸುವ
ತುಮಕೂರು ಜಿಲ್ಲೆ ಫೈಲಟ್ ಯೋಜನೆ ಪ್ರಸ್ತಾವನೆ ಮತ್ತು ರಾಜ್ಯ ಮಟ್ಟದ ಕಾರ್ಯಗಾರದ ಬಗ್ಗೆ.
ಮಾನ್ಯ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರಿಗೆ ತಮ್ಮ ಅಭಿಪ್ರಾಯಗಳಿಗಾಗಿ
ಕಾರ್ಯವಿಧಾನ (ಆರಂಭ : 28.08.2024 – ಅಂತಿಮ : —– )
- ತುಮಕೂರು ಜಿಲ್ಲೆಯ ಗ್ರಾಮವಾರು/ಬಡಾವಣೆವಾರು ‘ನೋಡೆಲ್ ಆಫೀಸರ್ @ 2047’ ನೇಮಕ ಮಾಡುವುದು (ಶಿಕ್ಷಕರು/ಉಪನ್ಯಾಸಕರು ಅಥವಾ ವಿಶ್ವ ವಿದ್ಯಾನಿಲಯದ ನೌಕರ/ ಯಾವುದೇ ಅಧಿಕಾರಿ) ಇವರಿಗೆ ಸರ್ಕಾರದ ಹಂತದಲ್ಲಿ ಯುಜಿಸಿ ಸೇರಿದಂತೆ, ದೊರೆಯುವ ಎಲ್ಲಾ ವಿಧವಾದ ಸವಲತ್ತು ನೀಡಿ ಗೌರವಿಸಲಾಗುವುದು. ಇವರು 2047 ರವರೆಗೆ ನಿರಂತರವಾಗಿ ಅದೇ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು ಒಳ್ಳೆಯದು.
- ತುಮಕೂರು ಜಿಲ್ಲೆಯ ಗ್ರಾಮವಾರು/ಬಡಾವಣೆವಾರು ಇರುವ ವಿದ್ಯಾರ್ಥಿಗಳ ಪಟ್ಟಿ ಮಾಡುವುದು, ‘ಅವರು ಎಲ್ಲಿ, ಏನೇ ಓದುತ್ತಿರಲಿ ಅವರು ಆಯಾ ಊರಿ£/ಬಡಾವಣೆಯÀ ರೀಸರ್ಚ್ ಫೌಂಡೇಷನ್ @ 2047 ಪ್ರತಿನಿದಿ’ ಗಳಾಗಿರುತ್ತಾರೆ.ಅವರ ಇಂಟರ್ನ್ ಶಿಪ್, ಪ್ರಾಜೆಕ್ಟ್ ವರ್ಕ್ ಮತ್ತು ಪಿ.ಹೆಚ್.ಡಿ ವರ್ಕ್‍ಗೆ ಪರಿಗಣಿಸಬೇಕು.
- ವಿದ್ಯಾರ್ಥಿಗಳ ಪಟ್ಟಿಯಲ್ಲಿ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ರಚಿಸಿರುವ ‘ನ್ಯಾಷನಲ್ ಟೂರಿಸಂ ಯೂತ್ ಕ್ಲಬ್, ಎನ್,ಎಸ್.ಎಸ್, ಸ್ಕೌಟ್ ಅಂಡ್ ಗೈಡ್, ಎನ್,ಎನ್,ಸಿ.ಸಿ, ಸೈನ್ಸ್ ಕ್ಲಬ್, ಯುವ ಕ್ಲಬ್, ರೆಡ್ ಕ್ರಾಸ್ ಕ್ಲಬ್’ ಹೀಗೆ (ಪ್ರವಾಸೋಧ್ಯಮ, ಶಿಕ್ಷಣ, ಕ್ರೀಡಾ) ಎಲ್ಲಾ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಪಟ್ಟಿ ಮಾಡುವುದು.
- ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ, ಆಯಾ ಗ್ರಾಮಪಂಚಾಯಿತಿಯ ಅಥವಾ ನಗರ ಸ್ಥಳೀಯ ಸಂಸ್ಥೆಗ¼ಲ್ಲಿ ರಚಿಸಿರುವ, ‘ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ’ ಯ (ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತ ಪೌರಾಡಳಿತ, ನಗರಾಭಿವೃದ್ಧಿ ಇಲಾಖೆ) ಸಹಭಾಗಿತ್ವದಲ್ಲಿ ಹಾಲಿ ಇರುವ ನಿಯಾಮುನುಸಾರ, ಆಯಾ ವ್ಯಾಪ್ತಿಯ ನಾಲೇಡ್ಜ್‍ಬಲ್ ಪರ್ಸನ್ ಪಟ್ಟಿ ಮಾಡುವುದು.ಅವರ ಗುಂಪುನ್ನು ‘ನಾಲೇಡ್ಜ್ ಬ್ಯಾಂಕ್ @ 2047’ ಎಂದು ನಾಮಕರಣ ಮಾಡಿ, ಪದಾಧಿಕಾರಿಗಳ ಆಯ್ಕೆ ಮಾಡುವುದು. ಇದೇ ಸಮಿತಿ ಆಯಾ ಪ್ರದೇಶದ ‘—- ರೀಸರ್ಚ್ ಫೌಂಡೇಷನ್ @ 2047’. ಆಗಿಯೂ ಕಾರ್ಯನಿರ್ವಹಿಸಲಿದೆ.
- ಈಗಾಗಲೇ ಸರ್ಕಾರ ಸ್ಥಾಪಿಸಲು ಉದ್ದೇಶಿರುವ ಊರಿಗೊಂದು ‘ಪವಿತ್ರವನ ಮಾದರಿ’ ಯಲ್ಲಿ ಗ್ರಾಮ/ಬಡಾವಣೆಗಳಲ್ಲಿ ಸ್ಥಳ ಗುರುತಿಸಿ, ಆಯಾ ಗ್ರಾಮ/ಬಡಾವಣೆಗಳಲ್ಲಿನ ‘ಥೀಮ್/ರೀಸರ್ಚ್ ಪಾರ್ಕ್ @ 2047’ ಎಂದು ನಾಮಫಲಕ ಹಾಕುವುದು. ನರೇಗ ಅನುದಾನದಲ್ಲಿ ಆವರಣ ಗೋಡೆ ಹಾಕುವುದು. ನಂತರ ಅನುದಾನ ಬಂದಾಗ ಪೂರ್ಣಗೊಳಿಸುವುದು.
- ‘ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ @ 2047 ಟೆಂಪ್ಲೇಟ್’ ಪ್ರಕಾರ ವಿದ್ಯಾರ್ಥಿಗಳು ಅಫ್‍ಡೇಟ್ ಮಾಡುತ್ತಿರುವುದು, ಆ ಡಾಟಾ ಸರ್ಕಾರ ಸೂಚಿಸುವ ವೆಬ್‍ಸೆಟ್ ನಲ್ಲಿ ಸಂಗ್ರಹ ಮಾಡುವುದು. ಎಲ್ಲಾ ಇಲಾಖೆಗಳಿಗೆ ಅಗತ್ಯವಿರುವ ಡಾಡಾ ಗಳನ್ನು ಟೆಂಪ್ಲೇಟ್ ನಲ್ಲಿ ಸೇರ್ಪಡೆ ಮಾಡುವುದು.
- ಹಾಲಿ ‘ ಸರ್ಕಾರಗಳ ಬಳಿ ಇರುವ ಎಲ್ಲಾ ಇಲಾಖೆಗಳ ಡಾಟಾಗಳನ್ನು ಸಹ ಟೆಂಪ್ಲೇಟ್ ನಲ್ಲಿ ಅಪ್ ಡೇಟ್’ ಮಾಡುವುದು. ಇದು 2047 ರವರೆಗೆ ನಿರಂತರವಾಗಿ ನಡೆಯಲಿದೆ.
- ಊರಿಗೊಬ್ಬ/ಬಡಾವಣೆಗೊಬ್ಬ ‘ಡಾಟಾ ಮಿತ್ರ’ ನೇಮಕ ಮಾಡುವುದು, ಅವರು ಎಲ್ಲಾ ಮಾಹಿತಿಗಳನ್ನು ಸೇವಾ ಶುಲ್ಕ ಆಧಾರದಲ್ಲಿ, ಪ್ರತಿಯೊಂದು ಇಲಾಖಾ ಅಧಿಕಾರಿಗಳ ಅನುಮೋದನೆಯೊಂದಿಗೆ ಖಾತರಿ ಪಡಿಸಿಕೊಳ್ಳುವುದು, ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಯ ‘ಸದಸ್ಯ ಕಾರ್ಯದರ್ಶಿ/ಪಿಡಿಓ/ಚೀಪ್ಆಫೀಸರ್/ಕಮಿಷನರ್’ ಅನುಮೋದನೆ ಮಾಡುವುದು.
- ಪ್ರತಿಯೊಬ್ಬ ವ್ಯಕ್ತಿಯ ಕನಸುಗಳ ಮಾಹಿತಿ ಸಂಗ್ರಹಿಸಿ ‘— ವ್ಯಕ್ತಿ @ 2047’ ಮಾಹಿತಿ ಸಂಗ್ರಹಿಸುವುದು.
- ಪ್ರತಿಯೊಂದು ಕುಟುಂದ ಕನಸುಗಳ ಮಾಹಿತಿ ಸಂಗ್ರಹಿಸಿ ‘— ಕುಟುಂಬ @ 2047’ ಮಾಹಿತಿ ಸಂಗ್ರಹಿಸುವುದು.
- ಪ್ರತಿಯೊಂದು ಸರ್ವೆನಂಬರ್ ವಾರು ಮಾಲೀಕರÀ ಕನಸುಗಳ ಮಾಹಿತಿ ಸಂಗ್ರಹಿಸಿ ‘— ಸರ್ವೆನಂಬರ್ @ 2047’ ಮಾಹಿತಿ ಸಂಗ್ರಹಿಸುವುದು.
- ಪ್ರತಿಯೊಂದು ಇಲಾಖಾವಾರು ‘ಜನಸಂಖ್ಯೆ ಆಧಾರಿತ ಯೋಜನೆಗಳ ಸ್ಥಳ’ ಗುರುತಿಸಿ, ‘ನಾಮಫಲಕ’ ಹಾಕುವುದು.
- ಪ್ರತಿಯೊಂದು ಇಲಾಖಾವಾರು ‘ವ್ಯಾಪ್ತಿ ಆಧಾರಿತ ಯೋಜನೆಗಳ ಸ್ಥಳ’ ಗುರುತಿಸಿ, ‘ನಾಮಫಲಕ’ ಹಾಕುವುದು.
- ಪ್ರತಿಯೊಂದು ಇಲಾಖಾವಾರು ಸೀನಿಯಾರಿಟಿ ಪಟ್ಟಿ ಮಾಡಿ, ಆಧ್ಯತೆ ಮತ್ತು ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ‘2047 ರ ವೇಳೆಗೆ 0%’ ತರಲು ನಿರಂತರವಾಗಿ ಶ್ರಮಿಸಲು ಆಯಾ ವಿಧಾನಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸುವುದು,
- ಪ್ರತಿಯೊಬ್ಬ ವಿಧಾನ ಸಭಾ ಸದಸ್ಯರ ನೇತೃತ್ವದಲ್ಲಿ ಅಧ್ಯಯನ ಪೀಠ ರಚಿಸಿಕೊಂಡು, ಒಂದು ‘ಸುಸಜ್ಜಿತವಾದ ಹೈಟೆಕ್ ಕಟ್ಟಡ ನಿರ್ಮಾಣ’ ಮಾಡಿಕೊಂಡು, ಹುದ್ದೇ ಆಧಾರಿತ ಶಾಸಕರ ಅಧ್ಯಕ್ಷತೆಯಲ್ಲಿ, 1947 ರಿಂದ 2047 ರವರೆಗಿನ ಎಲ್ಲಾ ಮಾಹಿತಿಗಳ ಒಳಗೊಂಡ ಮ್ಯೂಸಿಯಂ ನಂತಿರ ಬೇಕು. ಪ್ರತಿಯೊಂದು ಗ್ರಾಮ/ಬಡಾವಣೆ ಪ್ರತಿನಿಧಿಗಳ ಸಮಿತಿ ಇದಾಗಿರಬೇಕು. ಎಲ್ಲ ಹಂತದ ಚುನಾಯಿತ ಜನಪ್ರತಿನಿಧಿಗಳು ಏನೇನು ಮಾಡಲು ಶ್ರಮಿಸಲಾಗಿದೆ ಎಂಬ ಬಗ್ಗೆ ಡಿಜಿಟಲ್ ಮಾಹಿತಿ ಅಪ್ ಡೇಟ್ ಮಾಡಬೇಕು.
- ನಂತರ ಎರಡನೆಯ ಹಂತದಲ್ಲಿ ಶಾಸಕರ ಮಾದರಿಯಲ್ಲಿ ಲೋಕಸಭಾ ಸದಸ್ಯರ/ರಾಜ್ಯಸಭಾ ಸದಸ್ಯರ/ ವಿಧಾನ ಪರಿಷತ್ ಸದಸ್ಯರ/ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ/ ಜಿಲ್ಲಾಧಿಕಾರಿಗಳ/ಜಿಲ್ಲಾ ಪಂಚಾಯತ್ ಸಿ.ಇ.ಓ ರವರ ನೇತೃತ್ವದಲ್ಲಿಯೂ ಅವರ ವ್ಯಾಪ್ತಿಯ ಯೋಜನೆಗಳ ‘ಅಧ್ಯಯನ ಪೀಠ’ ರಚಿಸಲು ಶ್ರಮಿಸುವುದು.
- ಸುಮಾರು 100 ಎಕರೆ ಜಮೀನಿನನಲ್ಲಿ ಸುಸಜ್ದಿತವಾದ ಹೈಟೆಕ್ ‘ತುಮಕೂರು ರೀಸರ್ಚ್ ಫೌಂಡೇಷನ್ @ 2047’ ಕ್ಯಾಂಪಸ್’ ಸ್ಥಾಪನೆ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ 63 ಇಲಾಖೆಗಳ ಅಡಿಯಲ್ಲಿ 1947 ರಿಂದ 2047 ರವರೆಗಿನ, ಎಲ್ಲಾ ಸಂಶೋಧನೆ ಮತ್ತು ಅಭಿವೃದ್ಧಿ ಮಾಹಿತಿಗಳ ಫಿಸಿಕಲ್, ಡಿಜಿಟಲ್ ಮತ್ತು ಯೂಟ್ಯೂಬ್ ಮಾದರಿಯಲ್ಲಿ ಸಂಗ್ರಹಿಸುವುದು, ಮಾನಿಟರಿಂಗ್, ತರಭೇತಿ, ಸರ್ಕಾರಗಳ ಹಂತದಲ್ಲಿ ಮಾರ್ಗದರ್ಶಿ ಸೂತ್ರ, ಸರ್ಕಾರಗಳಿಂದ ಟ್ರಂಕಿ ಬೇಸಿಸ್ ಅನುದಾನ ಮಂಜೂರಾತಿ, ಗ್ರಾಮ/ಬಡಾವಣೆಯ ಉತ್ಪನ್ನಗಳನ್ನು ಎಂ.ಪಿ.ಸಿ.ಎಸ್ ಮಾದರಿಯಲ್ಲಿ ಸಂಗ್ರಹಿಸಿ, ದೇಶ ವಿದೇಶಗಳಿಗೆ ಎಕ್ಸ್‍ಪೋರ್ಟ್ ಮಾಡಲು ಪ್ಲಾಟ್ ಫಾರಂ ಮಾಡುವುದು. ಈಗಾಗಲೇ ಮಾಡಿರುವ ಭಾರತ ದೇಶದ ಎಲ್ಲಾ ಸಂಶೋಧನೆಗಳನ್ನು ಗಮನಿಸಿಕೊಂಡು, ಅರ್ಹರಿಗೆ ಅಗತ್ಯವಿರುವ ಸಂಶೋಧನೆ ಮಾಡಲು, ಕರ್ನಾಟಕ ರೀಸರ್ಚ್ ಫೌಂಡೇಷನ್À ಮತ್ತು ನ್ಯಾಷನಲ್ ರೀಸರ್ಚ್ ಫೌಂಡೇಷನ್ ವತಿಯಿಂದ ಅನುದಾನ ದೊರಕಿಸಲು ಶ್ರಮಿಸುವುದು.
- ದೆಹಲಿಯಲ್ಲಿ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು ಮತ್ತು ದೆಹಲಿ ಪ್ರತಿನಿಧಿಗಳಿಗೆ ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಅನೂಕೂಲವಾಗುª, ‘ಅಭಿವೃದ್ಧಿ ಮ್ಯಾಸಿಯಂ @ 2047 ’ ಸ್ಥಾಪಿಸುವುದು.
- ಬೆಂಗಳೂರಿನಲ್ಲಿ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಅನೂಕೂಲವಾಗುª, ‘ಅಭಿವೃದ್ಧಿ ಮ್ಯಾಸಿಯಂ @ 2047’ ಸ್ಥಾಪಿಸುವುದು.
- ಶಕ್ತಿಪೀಠ ಫೌಂಡೇಷನ್ ಆರಂಭಿಸಿರುವ ತುಮಕೂರಿನ ‘ಶಕ್ತಿಭವನ’ ದಲ್ಲಿ ‘ಪೈಲಟ್ ಅಧ್ಯಯನ ಪೀಠ’ ಆರಂಭಿಸುವುದು.
- ಶಕ್ತಿಪೀಠ ಫೌಂಡೇಷನ್ ಆರಂಭಿಸಿರುವ ತುಮಕೂರು ಇಂಸ್ಟ್ರಿಯಲ್ ನೋಡ್ ವಸಂತ ನರಸಾಪುರದಲ್ಲಿ ಪೈಲಟ್ ಎಕ್ಸ್ ಪೋರ್ಟ್ ಕೇಂದ್ರವಾಗಿ ‘ಶಕ್ತಿ ಪೀಠ ಡಾಟಾ ಪಾರ್ಕ್’ ಸ್ಥಾಪಿಸುವುದು.
- ಶಕ್ತಿಪೀಠ ಫೌಂಡೇಷನ್ ಆರಂಭಿಸಿರುವ ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್ ಹಾಗೂ ಚನೈ – ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್, ವ್ಯಾಪ್ತಿಯ ಹಿರಿಯೂರು ತಾಲ್ಲೋಕು ಬಗ್ಗನಡುವಿನಲ್ಲಿ 31 ಜಿಲ್ಲೆಗಳವಾರು ‘ಶಕ್ತಿ ಪೀಠ ಕ್ಯಾಂಪಸ್’ ಸ್ಥಾಪಿಸುವುದು.
- ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ದೂರದೃಷ್ಟಿ ಯೋಜನೆಗಳ ಮೆಂಟರ್ ಆಗಿರುವ, ಶಕ್ತಿಪೀಠ ಫೌಂಡೇಷನ್ ಕನಸುಗಳ ಅನುಷ್ಠಾನಕ್ಕೆ, ನೀರು ಬಂದರೆ ಬೋರ್‍ವೆಲ್‍ಗೆ ಹಣ ನೀಡುವ ಮಾದÀರಿಯಲ್ಲಿ, ಶಕ್ತಿಪೀಠ ಫೌಂಡೇಷನ್‍ಗೆ ‘ಎ ಟು ಝಡ್’ ನಿರ್ದಿಷ್ಟ ಯೋಜನೆಗೆ, ಯೋಜನೆ ಮಂಜೂರಾದರೆ ಮಾತ್ರ, ನಿಗದಿತ ಸೇವಾ ಶುಲ್ಕ ನೀಡುವ ಆಧಾರದಲ್ಲಿ, ಅವರ ಎಲ್ಲಾ ಸೇವೆ ಮತ್ತು ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು, ಕಾರ್ಯ ನಿರ್ವಹಿಸಲು ರೂಪುರೇಷೆ ನಿರ್ಧರಿಸುವುದು. ಈ ಎಲ್ಲಾ ಅಂಶಗಳು ‘ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ’ ದ ಎಂ.ಓ.ಯು ನಲ್ಲಿ ಅಡಕವಾಗಿವೆ.
ಈ ಹಿನ್ನಲೆಯಲ್ಲಿ 224 ವಿಧಾನಸಭಾ ಕ್ಷೇತ್ರಗಳ ಪ್ರತಿನಿಧಿಗಳನ್ನು ಒಳಗೊಂಡ, ರಾಜ್ಯ ಮಟ್ಟದ ಎರಡು ದಿವಸಗಳ ‘ಜಲಗ್ರಂಥ ಮತ್ತು ರೀಸರ್ಚ್ ಫೌಂಡೇಷನ್ @ 2047 ಪ್ರಸ್ತಾವನೆ ಕಾರ್ಯಾಗಾರ’À ನಡೆಸುವುದು. ಈ ವೆಚ್ಚಕ್ಕೂ ಒಂದು ಪ್ರಸ್ತಾವನೆ ಸಿದ್ಧಪಡಿಸುವುದು. ಉತ್ತಮವಾದ ಹೆಸರು ಸೂಚಿಸ ಬಹುದು.
‘ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿಯಲ್ಲಿನ ಕರ್ನಾಟಕ ರೀಸರ್ಚ್ ಫೌಂಡೇಷನ್ ಮತ್ತು ತುಮಕೂರು ವಿಶ್ವ ವಿದ್ಯಾನಿಲಯದ ಸಹಬಾಗಿತ್ವದ/ ಮಾಲೀಕತ್ವ’ ಯೋಜನೆಗೆ ಕೇಂದ್ರ ಸರ್ಕಾgಕ್ಕೆ ಸಲ್ಲಿಸುವ ಮೊದಲ ಹಂತದ ‘ರೂ 400 ರಿಂದ 1000 ಕೋಟಿ’ ವೆಚ್ಚದ ಅಂತರರಾಷ್ಟ್ರೀಯ ಮಟ್ಟದ ‘ತುಮಕೂರು ರೀಸರ್ಚ್ ಫೌಂಡೇಷನ್ @ 2047 ಕ್ಯಾಂಪಸ್’ ಪ್ರಸ್ತಾವನೆಯೂ, ಈ ಅಂಶಗಳಿಗೆ ಮಾತ್ರ ಸೀಮೀತವಾಗಿರಬೇಕು.
‘ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರ ಅಪ್ತ ಕಚೇರಿಯ ಅಧಿಕಾರಿಗಳ, ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಯವರ, ಯೋಜನಾ ಇಲಾಖೆಯ ಕಾರ್ಯದರ್ಶಿ ಮತ್ತು ಸಿ,ಡಬ್ಯು,ಸಿ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿದ ನಂತರದ ವರದಿ’ ಇದು ಸಂದರ್ಭಕ್ಕೆ ತಕ್ಕಂತೆ ಪರಿಷ್ಕರಣೆ ಆಗಲಿದೆ.
‘ಕೇಂದ್ರ ಸರ್ಕಾರದ ಜಲಶಕ್ತಿ ಇಲಾಖೆಯಲ್ಲಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಲ್ಲಿ ಪೆಂಡಿಗ್ ಇರುವ ರಾಜ್ಯ ಮಟ್ಟದ ಎಲ್ಲಾ ಯೋಜನೆಗಳ ಬಗ್ಗೆಯೂ ಕಾರ್ಯಾಗಾರದಲ್ಲಿ ಚರ್ಚೆ ನಡೆಯಲಿದೆ.’
–ಕೆ.ಆರ್.ಸೋಹನ್ ಮತ್ತು ಕುಂದರನಹಳ್ಳಿ ರಮೇಶ್