7th November 2024
Share

TUMAKURU:SHAKTHIPEETA CAMPUS

  ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು, ಜೆಜಿಹಳ್ಳಿ ಹೋಬಳಿ, ಗೌಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಗ್ಗನಡು ಕಾವಲ್‍ನಲ್ಲಿ, ಶಕ್ತಿಪೀಠ ಫೌಂಡೇಷನ್ ವತಿಯಿಂದ ಆರಂಭಿಸಿರುವ ಶಕ್ತಿಪೀಠ ಕ್ಯಾಂಪಸ್‍ನಲ್ಲಿ ವಿಶ್ವದ 108 ಶಕ್ತಿಪೀಠಗಳು, ಭಾರತ ದೇಶದ ನದಿಜೋಡಣೆ ಪ್ರಾತ್ಯಾಕ್ಷಿಕೆ ಜೊತೆಗೆ ನೇಚರ್ ಈಸ್ ಗಾಡ್’ ಘೋಷಣೆಯಡಿಯಲ್ಲಿ ಹಸಿರು ಶಕ್ತಿಪೀಠ ಕ್ಯಾಂಪಸ್’ ನಿರ್ಮಾಣ ಮಾಡಿ,    ವಿವಿಧ ಧರ್ಮದವರು ಪೂಜಿಸುವ ಗಿಡಗಳು. ವಿಶ್ವದ ಎಲ್ಲಾ ಜಾತಿಯ ಔಷಧಿ ಗಿಡ, ಹಣ್ಣಿನ ಗಿಡ, ಹೂ ಗಿಡ, ಕಾಡು ಮರ,ಬೆಳೆಸಲು ಉದ್ದೇಶಿಲಾಗಿದೆ.

ಗಿಡಗಳ ಕಲೆಕ್ಷನ್ ಬಹಳ ದೊಡ್ಡ ಸಾಹಸ, ಈಗಾಗಲೇ ಅರಣ್ಯ ಅಧಿಕಾರಿಗಳು, ತುಮಕೂರಿನ ಶ್ರೀ ಸತ್ಯಾನಂದ್ ರವರು, ಶ್ರೀ ಗುರುರವರು,ಕೊರಟಗೆರೆಯ ಪಾರಂಪರಿಕ ವೈದ್ಯ ಶ್ರೀ ಗುರುಸಿದ್ಧರಾಧ್ಯರವರು, ನಿವೃತ್ತ ಅರಣ್ಣ ಅಧಿಕಾರಿ ಶ್ರೀ ಚಂದ್ರಪ್ಪನವರು, ಶಿರಾದ ಶ್ರೀ ಗೋವಿಂದಪ್ಪವರು, ಸಾಪ್ಟ್ ವೇರ್ ಇಂಜಿನಿಯರ್ ಶ್ರೀ ಎಸ್.ಪಿ.ರಾಜೇಶ್, ಕಾರೇಹಳ್ಳಿ ರ್ಯಾಬಿಟ್ ಶ್ರಿ ಸುನಿಲ್‍ರವರು, ಬೇವಿನ ಮರದ ಶ್ರೀ ಸಿದ್ಧಪ್ಪನವರು, ಶ್ರೀ ರೂಪೇಶ್ ರವರು, ಹಲವಾರು ನಾಟಿ ವೈಧ್ಯರು, ಸಾಯಿಬಾಬಾ ಶ್ರೀ ಗುರುಸಿದ್ಧಪ್ಪನವರು, ವಡ್ಡನಹಳ್ಳಿ ಶ್ರೀ ಬಸವರಾಜ್ ರವರು, ಶ್ರೀ ಮಧುಗಿರಿಶೇಖರ್ ರವರು ಸೇರಿದಂತೆ ಹಲವಾರು ಜನರು ವಿವಿಧ ಜಾತಿಯ ಗಿಡ,ಬೀಜ,ಬಳ್ಳಿ, ಕಡ್ಡಿ ನೀಡಿದ್ದಾರೆ, ಉಚಿತ ಸೇವೆ ಮಾಡಿದ್ದಾರೆ ಮತ್ತು ಸಲಹೆ ನೀಡಿದ್ದಾರೆ.

2020 ರ ಜೂನ್ ನಿಂದ 3 ವರ್ಷಗಳ ಅವಧಿಯಲ್ಲಿ, ಸುಮಾರು 400 ಕ್ಕೂ ಹೆಚ್ಚು ಜಾತಿಯ ಗಿಡಗಳನ್ನು ಹಾಕಲಾಗಿತ್ತು, ವಿವಿಧ ಕಾರಣಗಳಿಂದ ಹಲವಾರು ಜಾತಿಯ ಗಿಡಗಳು ಹಾಳಾಗಿವೆ, ತುಮಕೂರಿನ ಶಕ್ತಿಭವನ ನಿರ್ಮಾಣದ ಒತ್ತಡದಲ್ಲಿ, ಕೆಲಸ ಸ್ಥಗಿತ ಗೊಂಡಿದ್ದು, ಈಗ ಪುನ: ಗಿಡಗಳ ಸಂಗ್ರಹಣೆಗೆ ಮತ್ತು ಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ದಿನಾಂಕ:20.10.2024 ರಂದು ಮಷಣಾಪುರದ ಚನ್ನಕೇಶವ ನರ್ಸರಿಯಲ್ಲಿ ಸುಮಾರು 99 ಜಾತಿಯ 279 ಹಣ್ಣಿನ ಗಿಡಗಳನ್ನು ಸಂಗ್ರಹ ಮಾಡಲಾಯಿತು. ವದಲೂರಿನ ಶ್ರೀ ಮೋಹನ್ ರವರ ಇಟಾಚಿ ಕೆಲಸ ಮಾಡುತ್ತಿದೆ. ಕಳೆದ ಒಂದು ವಾರದಿಂದ ಕ್ಯಾಂಪಸ್ ನಲ್ಲಿಯೇ ‘ಹಸಿರು ಜೀವನ’ ಖುಷಿ ಕೊಟ್ಟಿದೆ. 2024-25 ವರ್ಷವನ್ನು ಹಸಿರು ಶಕ್ತಿಪೀಠ ಕ್ಯಾಂಪಸ್ ವರ್ಷ’ ಎಂದು ಘೋಷಣೆ ಮಾಡಿ

1.ಹಾಲಿ ಇರುವ ಗಿಡಗಳ ಡಿಜಿಟಲ್ ಗಣತಿ.

2.ವಿವಿಧ ಜಾತಿಯ ಗಿಡ,ಬೀಜ,ಬಳ್ಳಿ, ಕಡ್ಡಿ ಸಂಗ್ರಹ.

3.ಕುರಿ/ದನದ ಗೊಬ್ಬರ ಹಾಕುವುದು.

4.ಮಣ್ಣು ಹಾಕುವುದು.

5.ಕಡ್ಡಿ/ಊರುಗೋಲು ಹಾಕುವುದು.

6.ದಾರ ಕಟ್ಟುವುದು.

7.ಜೀವಾಮೃತ ಹಾಕುವುದು.

8.ಗೋ ಕೃಪಾಂಮೃತ ಹಾಕುವುದು.

9.ನಶಿಸಿಹೋಗಿರುವಂತ ವಿಶೇಷ ಜಾತಿಯ ಗಿಡಗಳ ನರ್ಸರಿ ಮಾಡುವುದು.

10.ಅಗತ್ಯ ಇರುವ ಕಡೆ ಹಸಿರು ಬೇಲಿ ನಿರ್ಮಾಣ ಮಾಡುವುದು.

11.ವಿವಿಧ ಧರ್ಮ, ಜಾತಿ ಉಪಜಾತಿಯವರು ಪೂಜಿಸುವ ಧಾರ್ಮಿಕ ಗಿಡಗಳನ್ನು ಹಾಕುವುದು.

12.ವಿವಿಧ ಧಾರ್ಮಿಕ ವನಗಳ ನಿರ್ಮಾಣ ಮಾಡುವುದು.

13.ಎಲ್ಲಾ ಗಿಡಗಳಿಗೆ ನಾಮಫಲಕ ಹಾಕುವುದು.

14.ನಾಮ ಫಲಕ ಸಹಿತ ಸೋಲಾರ್ ಲೈಟ್ ಹಾಕುವುದು.

15.ನವಗ್ರಹಗಳ ಮರಗಳು ಈಗಾಗಲೇsÀ ಲೈವ್ ಆಗಿ ಬೆಳೆಯುತ್ತಿವೆ.ಅವುಗಳಿಗೆ ಪ್ಲಾಟ್ ಫಾರಂ ಮಾಡುವುದು.

16.ನವಗ್ರಹಗಳ ಧಾನ್ಯಗಳನ್ನು ಲೈವ್ ಆಗಿ ಬೆಳೆಸಲು ಬೆಡ್/ಪ್ಲಾಟ್ ನಿರ್ಮಾಣ ಮಾಡುವುದು.

 ಸಾಪ್ಟ್ ವೇರ್ ಇಂಜಿನಿಯರ್ ಶ್ರೀ ಎಸ್.ಪಿ.ರಾಜೇಶ್ ರವರ ಜಮೀನು ಸೇರಿದಂತೆ, ಸುಮಾರು 25 ಎಕರೆ ಕ್ಲಸ್ಟರ್‍ನಲ್ಲಿ, ಕ್ಯಾಂಪಸ್ ನಲ್ಲಿಯೇ ಬೆಳೆದ ಸಾವಯವ ಬೆಳೆಯಿಂದ ಸಾವಯವ ಆಹಾರ ನೀಡಲು ಅಗತ್ಯ ಇರುವ ಬೆಳೆಗಳ ಬೆಡ್ ನಿರ್ಮಾಣ ಮಾಡುವುದು. ವಿವಿಧ ಬೆಳೆಯ ಗಿಡಗಳನ್ನು ಯಾವ ರೀತಿ ಬೆಳೆಸಬೇಕು, ಹೇಗೆ ಟ್ರಿಮ್ ಮಾಬೇಕು, ಹೇಗೆ ನಾಮಫಲಕ ಹಾಕಬೇಕು ಎಂಬ ಬಗ್ಗೆ ಜ್ಞಾನಿಗಳಿಂದ ಜ್ಞಾನ ದಾನ’ ಮಾಡಲು ಮನವಿ ಮಾಡಲಾಗಿದೆ. ಆದ್ದರಿಂದ ತಾವೂ ಸಹ ತಮ್ಮಲ್ಲಿರುವ ವಿಶೇಷ ಜಾತಿಯ ಗಿಡ,ಬೀಜ,ಬಳ್ಳಿ, ಕಡ್ಡಿ ಜೊತೆಗೆ ಹಸಿರು ದಾನ ನೀಡಲು ಮನವಿ 

ಬೆಳೆಯುತ್ತಿರುವ ಗಿಡಗಳನ್ನು ಟ್ರಿಮ್ ಮಾಡಿ ನಿವೃತ್ತ ಅರಣ್ಯ ಅಧಿಕಾರಿ, ಶಿರಾದ ಶ್ರೀ ಗೋವಿಂದಪ್ಪವರಿಂದ ಹಸಿರು ಮಂಗಳಾರತಿ’ ಮಾಡಿಸಿ ಕೊಳ್ಳಲಾಯಿತು.

ಗುಬ್ಬಿ ತಾಲ್ಲೋಕು, ಚೇಳೂರು ಶ್ರೀ ವೆಂಕಟೇಶ್ ರವರ ತೋಟಕ್ಕೆ ಭೇಟಿ ನೀಡಿದ್ದೆ, ಅವರು ಕಳೆದ 10 ವರ್ಷಗಳಿಂದ ಟ್ರಿಮ್ ಮಾಡಿರುವ ಸೀಬೆ ಗಿಡದ ಬೆಳೆ ಮಾಹಿತಿ ಸಂಗ್ರಹ ಮಾಡಲಾಯಿತು. ಅವರ ಜೊತೆಯಲ್ಲಿ ಮಂಡಿವರ್ತಕರುಗಳಾದ ಶಿವನಹಳ್ಳಿ ಶ್ರೀ ಬಸವರಾಜ್ ರವರು, ಮಾದೇನಹಳ್ಳಿ ಶ್ರೀ ರಾಜಶೇಖರ್‍ರವರು ಇದ್ದರು. ಅಲ್ಲಿಂದಲೂ ಕೆಲವು ಗಿಡ, ಕಡ್ಡಿ, ಬೀಜಗಳನ್ನು ಸಂಗ್ರಹ ಮಾಡಲಾಯಿತು.

ಚಿಕ್ಕನಾಯಕನಹಳ್ಳಿ ತಾಲ್ಲೂಕು, ಹುಳಿಯಾರು ಪಟ್ಟಣದಲ್ಲಿನ ಶ್ರೀ ಡಾ.ಸಿದ್ಧರಾಮಣ್ಣನವರು ಮತ್ತು ಶ್ರೀಮತಿ ಡಾ.ಉಮಾರವರ ಮನೆಯ ಕೈಟೋಟ ನೋಡಿದೆ.ರೈತರಿಗೂ ನಾಚಿಕೆಯಾಗುವಂತೆ ಅವರ 26 ಗುಂಟೆ ಜಮೀನಿನಲ್ಲಿ, ಮನೆ ಜೊತೆಗೆ ಸುಮಾರು 50 ಕ್ಕೂ ಹೆಚ್ಚು ಜಾತೀಯ ವಿವಿಧ ವರ್ಗದ ಗಿಡಗಳನ್ನು ತುಂಬಾ ಅಚ್ಚುಕಟ್ಟಾಗಿ ಬೆಳೆದಿದ್ದಾರೆ.