TUMAKURU:SHAKTHIPEETA FOUNDATION
ಶಕ್ತಿಪೀಠ ಕ್ಯಾಂಪಸ್ ಮತ್ತು ನನ್ನ ಸಹೋದರ ಶ್ರೀ ಎಸ್.ಪಿ.ರಾಜೇಶ್ ರವರ ಜಮೀನನ್ನು ‘ನೇಚರ್ ಈಸ್ ಗಾಡ್’ ಎಂಬ ಘೋಷಣೆಯೊಂದಿಗೆ, ಎಲ್ಲಾ ಜಾತೀಯ ಮರಗಳನ್ನು ನೈಸರ್ಗಿಕವಾಗಿ ಬೆಳೆಸಲು ಯೋಚಿಸಲಾಗಿದೆ.
ನಮ್ಮ ಜಮೀನು ಇರುವ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು ಬಗ್ಗನಡು ಕಾವಲ್‍ಗೆ, ಅತ್ಯಂತ ಕಳಪೆ ಭೂಮಿ, ಇಲ್ಲಿ ಯಾವುದೇ ಬೆಳೆ ಅಥವಾ ಮರಗಿಡ ಬೆಳೆಯುವುದಿಲ್ಲಾ, ಯಾರೋ ಡ್ಯೂಪ್ ಬಿದ್ದಿದ್ದಾರೆ, ಎಂಬ ಮಾತು ಅಲ್ಲಿನ ರೈತರದ್ದಾಗಿತ್ತು. ಇದೊಂದು ‘ಪ್ರವಾಸಿ ಕೇಂದ್ರ’ವಾಗಿ ಅಭಿವೃದ್ಧಿ ಪಡಿಸುವ ಪರಿಕಲ್ಪನೆ ನಮ್ಮದಾಗಿತ್ತು.
ಶಕ್ತಿಪೀಠ ಕ್ಯಾಂಪಸ್ ಎಂದರೆ ದೇವಾಲಯ ಕಟ್ಟುತ್ತಾರೆ ಎಂಬ ಭ್ರಮೆ ಕೆಲವರದ್ದಾಗಿತ್ತು. ನಾನು ಮೊದಲು ‘ಗಂಗಾಮಾತಾ ದೇವಾಲಯ’ ನಿರ್ಮಾಣ ಮಾಡಿ, ಒಂದು ಕೋಟಿ ಲೀಟರ್ ಮಳೆ ನೀರು ನಿಲ್ಲಿಸಿ, ಆ ಊರಿನ ಅಂತರ್ಜಲ ಅಭಿವೃದ್ಧಿ ಜೊತೆಗೆ, ವಿಶ್ವದ 108 ಶಕ್ತಿಪೀಠಗಳನ್ನು ಗಂಗೆಯ ರೂಪದಲ್ಲಿ ನೋಡುವುದಾಗಿತ್ತು. ನನ್ನ ಆಸೆ ನೆರವೇರಿತು. ನಂತರದ ಕನಸು ದೇವಾಲಯ?
ಎರಡನೇ ಆಧ್ಯತೆ ಧಾರ್ಮಿಕ ಗಿಡಗಳು ಸೇರಿದಂತೆ, ಕನಿಷ್ಟ ಒಂದು ಸಾವಿರ ಜಾತಿಯ ಮರ, ಗಿಡ, ಬಳ್ಳಿ, ಹೂ, ಹಣ್ಣು, ತೋಟಗಾರಿಕೆ, ಕೃಷಿ, ಕಾಡು, óಔಷಧಿ ಗಿಡ ಬೆಳೆಸುವದಾಗಿತ್ತು, ಸುಮಾರು 300-400 ಜಾತೀಯ ಗಿಡಹಾಕಲಾಯಿತು. ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕ ಹಾಕದೇ ಬೆಳೆಸಲು ಆರಂಭಿಸಿದೆವು. ಈಗ ಕಡೆ ಪಕ್ಷ ನೆರಳಾದರೂ ಬರುವ ಆಸೆ ಚಿಗುರಿತು.ಸಂಜೆ ಹಕ್ಕಿಗಳ ‘ಚಿಲಿ-ಪಿಲಿ ಶಬ್ಧ ಖುಷಿ’ ಕೊಡುತ್ತಿದೆ.
ಸುಮಾರು 25 ಎಕರೆ ಜಮೀನಿನಲ್ಲಿ ಹಲವಾರು ಜಾತೀಯ ಸುಮಾರು 3000 ಕ್ಕೂ ಹೆಚ್ಚು ಗಿಡಗಳು ಬೆಳೆಯುತ್ತಿವೆ. ಈಗ 1000 ಜಾತಿಯ ಗಿಡ ಪೂರೈಸುವ ಗುರಿ ನಮ್ಮದಾಗಿದೆ.
ಈ ಹಿನ್ನಲೆಯಲ್ಲಿ, ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು ಬಬ್ಬೂರು ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಮುಖ್ಯಸ್ಥರಾದ ಶ್ರೀ ಡಾ.ಕುಮಾರ್ ಓ ರವರು ಮತ್ತು ವಿಜ್ಞಾನಿ ಶ್ರೀ ಮಹಾಂತೇಶ್ ರವರೊಂದಿಗೆ ಸಮಾಲೋಚನೆ ನಡೆಸಿದೆ.


ಇದೂವರೆಗೂ ನಾವು ಮಾಡಿರುವ ತಪ್ಪುಗಳನ್ನು ಸರಿಪಡಿಸಿ ಅಥವಾ ತಪ್ಪುಗಳಲ್ಲಿಯೇ ಆದಾಯ ಬರುತ್ತದೆಯೇ ಎಂಬ ಪ್ರಯೋಗ ಮಾಡಬೇಕಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಸಲಹೆ ಮೇರೆಗೆ, ಗಿಡ ಬೆಳೆಸುವ ಆಲೋಚನೆ ಇದೆ. ಆರ್ಥಿಕ ಆದಾಯವೂ ಬರಬೇಕಲ್ಲವೇ ? ಮೌಲ್ಯವರ್ಧನೆ ಮಾಡುವ ಆಲೋಚನೆಯೂ ಇದೆ.
ಖುಷಿಗೆ ತೋಟ ಮಾಡುವವರಿಗೆ, ಅನುಭವದೊಂದಿಗೆ ಒಳ್ಳೆಯ ತರಭೇತಿ ನೀಡುವ ಕನಸು ಇದೆ. ವಿಜ್ಞಾನಿಗಳು ನನಗೆ ಹೇಳಿದ ಮಾತು, ಒಂದು ಮೇಳವಿದೆ, ಆ ಮೇಳ ಮುಗಿದ ತಕ್ಷಣ ನಾವು ನಿಮ್ಮ ಜಮೀನಿಗೆ ಬರುತ್ತೇವೆ ಎಂದಿದ್ದಾರೆ. ಜೊತೆಗೆ ಅವರು ಅಲ್ಲಿಯೇ ಇದ್ದ ಕೃಷಿ ಮತ್ತು ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳಿಗೆ ನಿಮ್ಮ ಜಮೀನು ಒಂದು ವಿನೂತನವಾದ ‘ಪ್ರಯೋಗ ಶಾಲೆಯೇ’ ಆಗುವದೇ ಎಂಬ ಹಿಂಗಿತವನ್ನು ವ್ಯಕ್ತಪಡಿಸಿದರು.
ನಾನು ಇಂದಿನಿಂದ ಪ್ರಗತಿಪರ ರೈತರ ಅನುಭವದ ಸಲಹೆಗಳು ಸೇರಿದಂತೆ, ಸಂಭಂದಿಸಿದ ಎಲ್ಲಾ ಇಲಾಖೆಗಳ ವಿಜ್ಞಾನಿಗಳ ಮತ್ತು ಅಧಿಕಾರಿಗಳ ಸಲಹೆಯೊಂದಿಗೆ ಒಂದು ‘ಹುಚ್ಚಾಟ’ ಆಡಲು ಆರಂಭಿಸಿದ್ದೇನೆ.
ದೇವರು ಪ್ರತಿಯೊಬ್ಬರನ್ನೂ ‘ಜೀವನ ಎಂಬ ಆಟ ಆಡಲು’ ಸ್ವಲ್ಪ ದಿವಸ ಬಾಡಿಗೆ ಆಧಾರದಲ್ಲಿ ಭೂಮಿಗೆ ಕಳುಹಿಸಿದ್ದಾನೆ. ಕೆಲವರಿಗೆ ‘ಜೀವನದ ಆಟದ ಜೊತೆಗೆ ಹೆಚ್ಚುವರಿ ಹುಚ್ಚಾಟ’ ಆಡಲು ಅವಕಾಶ ನೀಡಿದ್ದಾನೆ. ಇದೂವರೆಗೂ ನಾನು ಎರಡನೆಯ ಹುಚ್ಚಾಟ ಆಯ್ಕೆ ಮಾಡಿಕೊಂಡಿದ್ದೇನೆ.
ಈಗ ನೈಸರ್ಗಿಕ ಕೃಷಿ ನನ್ನ ಹುಚ್ಚಾಟದ ಬಹುತೇಕ ಕೊನೆಯ ಅಧ್ಯಯವಾಗಿದೆ. ಡಾ.ಕುಮಾರ್ ಓ ರವರು ನನಗೆ ಓದಲು ‘ಕೃಷಿ ಸಖಿಯರಿಗೆ ನೈಸರ್ಗಿಕ ಕೃಷಿ’ ಎಂಬ ಪುಸ್ತಕವನ್ನು ಕೊಟ್ಟಿದ್ದಾರೆ. ಓದುತ್ತಿದ್ದೇನೆ.
ಅಲ್ಲಿಂದ ಕಸ್ತೂರಿ ರಂಗಪ್ಪನಹಳ್ಳಿಯ ಪ್ರಗತಿ ಪರ ರೈತ ಶ್ರೀ ವೇದಮೂರ್ತಿಯವರ ಜಮೀನು ನೋಡಲು ಹೇಳಿದರು, ಅವರೊಂದಿಗೆ ಸಮಾಲೋಚನೆ ನಡೆಸಿದಾಗ ಅವರು ಬಹಿರಂಗವಾಗಿ ಹೇಳದ ಒಂದು ಸತ್ಯವನ್ನು ಹೇಳಿದರು. ನನಗೆ ಎಲ್ಲವೂ ಅರಿವಿದೆ. ಇದೊಂದು ಸಂಶೋದನಾ ವರದಿಯ ಭಾಗವಾಗಿದೆ ಎಂಬ ಅಂಶವನ್ನು ಅವರಿಗೆ ತಿಳಿಸಿದೆ.


ಆಸಕ್ತರು ಸಲಹೆ ನೀಡಬಹುದಾಗಿದೆ.