TUMAKURU:SHAKTHIPEETA FOUNDATION
ದಿನಾಂಕ:10.11.2014 ನವಂಬರ್‍ನಲ್ಲಿ ವಿಶ್ವದ 108 ಶಕ್ತಿಪೀಠಗಳನ್ನು ಒಂದೇ ಕಡೆ ಬರುವಂತೆ, ಒಂದು ಬಹುಪಯೋಗಿ ಕ್ಯಾಂಪಸ್ ಅನ್ನು ಮಾಡಲೇಬೇಕು, ಎಂದು ನನ್ನ ಮನಸ್ಸಿಗೆ, ನನ್ನೂರಿನ ಗ್ರಾಮದೇವತೆ, ಕಳೆದ 01.08.1988 ರಂದು ಆರಾಧಿಸುತ್ತಾ ಬಂದಿರುವ, ಕುಂದರನಹಳ್ಳಿ ಶ್ರೀ ಗಂಗಮಲ್ಲಮ್ಮ ದೇವಿ ತುಂಬಿದರು.
ತುಮಕೂರಿ£ಲ್ಲಿ ಶ್ರೀ ಜಿ.ಎಸ್.ಬಸವರಾಜ್ ರವರು ನಿರ್ಮಾಣ ಮಾಡಿಸಿರುವ ಶ್ರೀÀ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಪೂಜಿಸಿ, ಚಾಮುಂಡೇಶ್ವರಿ ಜಮೀನು ಸ್ಥಳ ಅಂತಿಮ ಗೊಳಿಸಲು ನಿರ್ಧಾರ ಆಯಿತು.
ನನ್ನ ಪ್ರಕಾರ ಇದೇ ಗಂಗಮಲ್ಲಮ್ಮನ 35 ವರ್ಷಗಳ ಕಾಯÀಕವೇ ಕೈಲಾಸ ಎಂಬ, ಭಕ್ತಿಯೇ ನಮ್ಮೂರಿಗೆ ಹೆಚ್.ಎ.ಎಲ್ ಘಟಕ ಬರಲು ಕಾರಣ ಎಂದರೆ ಅತಿಶಯೋಕ್ತಿಯಲ್ಲ.
ಚಾಮುಂಡೇಶ್ವರಿ ಜಮೀನು ಎಂದು ಏಕೆ ಬರೆದಿದ್ದೇನೆ ಎಂದರೆ, ನನಗೆ ಕಳೆದ ಸುಮಾರು 25 ವರ್ಷಗಳ ಹಿಂದೆ, ಒಂದು ಹತ್ತು ಎಕರೆ ಚಾಮುಂಡೇಶ್ವರಿ ಜಮೀನು ಇದೆ ಕೊಂಡುಕೋ ಒಂದು ಎಂಬ ಕನಸು ಬಿತ್ತು.
ನಾನು ಬೆಳಿಗ್ಗೆ ಎದ್ದು ನನ್ನ ತಾಯಿ ದಿ.ಪಾರ್ವತಿಯವರ ಬಳಿ ಹಂಚಿಕೊಂಡೆ, ಅವರು ಹೇಳಿದ ಮಾತು ಒಂದು ದಿವಸ ಕೊಂಡುಕೊಳ್ಳಬಹುದು, ಆ ದಿವಸವೂ ಬರಬಹುದು ಎಂದು ಖಚಿತವಾಗಿ ಹೇಳಿದ್ದರು. ನನಗೆ ಕನಸು ಬಿದ್ದಾಗ, ಆ ಜಮೀನಿನ ಗುಂಪು ಮರಗಳು ಇದ್ದಿದ್ದು ಕಾಣಿಸಿತ್ತು. ನಿಜಕ್ಕೂ ಅದೇ ಮರಗಳ ಗುಂಪು ಇಲ್ಲಿ ಇದೆ. ಅದು ಕಾಕತಾಳೀಯ.
ದಿನಾಂಕ:04.11.2024 ರಂದು ನಮ್ಮೂರಿನ ನನ್ನ ಸಹೋದರರಾದ ಶ್ರೀ ಚನ್ನಬಸವಣ್ಣನ ಮನೆ ಗೃಹ ಪ್ರವೇಶಕ್ಕೆ ಹೋಗಿದ್ದೆ. ಗಂಗಮಲ್ಲಮ್ಮನ ದೇವಾಲಯದ ಬಾಗಿಲು ತೆರೆದಿತ್ತು, ಪೂಜಾರರು ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ಬಾಗಿಲಲ್ಲಿ ನಿಂತು ತಾಯಿ ಏಕಮ್ಮ ನಿನ್ನ ಶಕ್ತಿಪೀಠ ಕ್ಯಾಂಪಸ್ ಈ ರೀತಿ ನರಳುತ್ತಿದೆ, ನಾನು ಏನಾದರೂ ತಪ್ಪು ಮಾಡಿದ್ದೇನೆಯೇ, ನನ್ನ ತಪ್ಪು ಮನ್ನಿಸಿ ಶಕ್ತಿಕೊಂಡು ತಾಯಿ ಎಂದು ಬೇಡಿಕೊಂಡು ಬಂದೆ.
ಮತ್ತೆ ದಿನಾಂಕ:28.10.2024 ರಂದೇ ಒಂದು ಕನಸು ಬಿದ್ದಿತ್ತು, ಕನಸಿನಲ್ಲಿ, ವಡ್ಡನಹಳ್ಳಿ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿ ಬಂದರು. ಮೊದಲು ನನ್ನ ದೇವಾಲಯದ ಪಕ್ಕ ಇರುವ, ಆ ತಿಪ್ಪೆ ಜಾಗ ಶುಚಿಗೊಳಿಸು ಎಂಬ ಆದೇಶ ಬಂತು.
ನಾನು ಕಕ್ಕಾ ಬಿಕ್ಕಿಯಾದೆ, ಯಾಕೆಂದರೆ ಆ ಜಾಗದಲ್ಲಿ ಸುಮಾರು 6-7 ಜನರು ತಿಪ್ಪೆಹಾಕಿಕೊಂಡಿದ್ದಾರೆ, ಜಮೀನು ಅಳತೆ ಮಾಡಿಸಲು ಹೇಳಿದರೂ ಇನ್ನೂ ಪಕ್ಕದ ಜಮೀನಿನವರು ಅಳತೆ ಮಾಡಿಸಿಲ್ಲ. ನಿಖರವಾದ ಅಳತೆಯಾಗಿದ್ದರೆ ಒಂದೇ ಭಾರಿ ಪಕ್ಕಾ ಮಾಡಿಸ ಬಹುದಿತ್ತು, ತಾಯಿ ಏಕೆ ಹೀಗೆ ಹೇಳಿದರು.
ನಾನು ಬೆಳಿಗ್ಗೆ ಅಂದರೆ, ದಿನಾಂಕ:29.10.2024 ರಂದೇ ಶಕ್ತಿಪೀಠ ಕ್ಯಾಂಪಸ್ ಗೆ ಹೋದೆ. ಅಲ್ಲಿಯೇ ಗಿಡಗಳನ್ನು ಹಾಕಲು ಮಿನಿ ಇಟಾಚಿ ಗುಂಡಿ ತೆಗೆಯುತ್ತಿತ್ತು. ನಾನು ಯಾರಿಗೂ ಹೇಳಲಿಲ್ಲ, ಆ ತಿಪ್ಪೆ ಇದ್ದ ಜಾಗಕ್ಕೆ ಹೋದೆ. ಅಲ್ಲಿ ಹುಲ್ಲು ಬೆಳೆದಿತ್ತು. ಸರಿ ಇಟಾಚಿ ಕರೆದು, ಇದನ್ನು ಶುಚಿಗೊಳಿಸು ಎಂದು ಹೇಳಿದೆ.
ನಾನು ಯಾರಿಗೂ ಹೇಳಲಿಲ್ಲ, ಯಾರನ್ನು ಕೇಳಲಿಲ್ಲ, ಕೆಲಸ ಮಾಡುವಾಗ ಬಂದವರು, ನಾಳೆ ಗೊಬ್ಬರ ಹೊಡೆದುಕೊಳ್ಳುತ್ತೇವೆ, ಎಂದು ಹೇಳಿದರು, ನಾನು ಕ್ಲೀನ್ ಮಾಡಿಸಿ, ಪಕ್ಕದ ಜಮೀನಿನನವರಿಗೆ ಹೇಳಿದೆ, ನಿಮ್ಮ ಜಮೀನು ಅಳತೆ ಮಾಡಿಸಿ, ರೈತರಿಗೆ ಜಮೀನಿಗೆ ಹೋಗಲು ರಸ್ತೆ ಬಿಡಬೇಕು, ರಸ್ತೆ ಪಕ್ಕಾ ಮಾಡೋಣ ಎಂದು ಹೇಳಿದೆ. ಅವರು ಸಹ ಒಪ್ಪಿದರು.
ದಿನಾಂಕ:26.11.2014 ರಂದು ಜಮೀನು ಆಯ್ಕೆ ಮಾಡಿ ಕರಾರು ಮಾಡಿ ಕೊಂಡಿದ್ದರೂ, ನಾನು ಮಾಡಿದ ತಪ್ಪು ಹಿರಿಯೂರು ತಾಲ್ಲೋಕು, ಬಗ್ಗನಡುಕಾವಲ್ ಚಾಮುಂಡೇಶ್ವರಿ ಜಮೀನಿಗೆ ಹೊಂದಿಕೊಂಡಿರುವ ವಡ್ಡನಹಳ್ಳಿ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಾಲಯವಿದೆ. ಜಮೀನಿಗೆ ಕಾಲಿಟ್ಟು 10 ವರ್ಷವಾದರೂ, ಈ ಗ್ರಾಮದೇವತೆಯನ್ನು, ಇಲ್ಲಿನ ಅಧಿವೇವತೆ ಎಂದು ಸ್ವೀಕರಿಸಿಲ್ಲ ಎಂಬ ಸಿಟ್ಟು ಚೌಡೇಶ್ವರಿಗೆ ಇದೆ.
ದಿನಾಂಕ:08.11.2024 ರಂದು ಮತ್ತೆ ವಡ್ಡನಹಳ್ಳಿ ಗ್ರಾಮದೇವತೆ ಶ್ರೀ ಚೌಡೇಶ್ವರಿ ನನ್ನ ಕನಸಿಗೆ ಬಂದರು, ನಿಮ್ಮ ಹುಟ್ಟೂರಿಗೆ ಅಧಿದೇವತೆ ಶ್ರೀ ಗಂಗಮಲ್ಲಮ್ಮ, ಈ ಊರಿಗೆ ಅಧಿದೇವತೆ ನಾನು, ಯಾವತ್ತಾದರೂ ನನ್ನನ್ನು ಗ್ರಾಮದೇವತೆ/ ಈ ಜಮೀನಿನ ಅಧಿದೇವತೆ ಎಂದು ಹೇಳಿದ್ದೀಯ. ಇದೂ ನೀನು ಮಾಡಿರುವ ತಪ್ಪು, ನನ್ನನ್ನು ಅಧಿದೇವತೆ ಎಂದು ನಿನ್ನ ಮನಸ್ಸಿಗೆ ಎಂದು ಬರುತ್ತದೆ ಎಂದು ಕಾಯುತ್ತಿದ್ದೆ.
ಆದರೇ ನಿನ್ನ ಮನಸ್ಸಿಗೆ ಬರಲೇ ಇಲ್ಲ. ಗಂಗಮಲ್ಲಮ್ಮ ಬಂದು ನನ್ನ ಭಕ್ತನಿಗೆ ಏಕೆ ಆಟ ಆಡಿಸಿತ್ತಾ ಇದ್ದೀಯ. ಎಂದು ನನಗೆ ಹೇಳುವ ಮೊದಲೇ, ನಿನಗೆ ನಾನು ಸೂಚನೆ ನೀಡಿದ್ದೆ. ನಾನು ಹೇಳಬಾರದು ನೀನೇ ಆತನಿಗೆ ಹೇಳು ಎಂದಿರುವ ಕಾರಣ, ನಾನು ನಿನಗೆ ಹೇಳುತ್ತಿದ್ದೇನೆ. ನಾನು ಇಲ್ಲಿನ ಅಧಿದೇವತೆ ಎಂದು ತಿಳಿದು ನಿನ್ನ ಕಾರ್ಯ ಮುಂದವರೆಸು ಎಂಬ ಆದೇಶ ನನಗೆ ಅಚ್ಚರಿ ಎನಿಸಿದೆ.
ಕಾಕತಾಳೀಯ ಎಂದರೆ ನಾನು ಆ ಜಮೀನಿಗೆ ಕಾಲಿಟ್ಟ 10 ವರ್ಷಕ್ಕೆ ಸರಿಯಾಗಿ ಈ ಆದೇಶ ಬಂದಿದೆ. ನಾನೊಬ್ಬ ಮೂರ್ಖನಾದೆ, ನನಗೆ ಇದು ಏಕೆ ಅರಿವಾಗಲಿಲ್ಲ. ಆದರೂ ನನ್ನದು ಏನು ಇದೆ. ಎಲ್ಲಾ ಶಕ್ತಿದೇವತೆಯ ಆಟ ಎಂದು ಕೊಂಡೆ.
ಇದೇ ಸಮಯದಲ್ಲಿ ಹಲವಾರು ಶಕ್ತಿಪೀಠ ಪ್ರವಾಸ ಮುಗಿಸಿ, ನನ್ನ ಮಗ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಶ್ರೀ ವೈಷ್ಣವೀ ದೇವಿಗೆ ಹೋಗಿದ್ದಾನೆ. ಈ ಕ್ಷಣದಿಂದಲೇ ಶಕ್ತಿಪೀಠ ಕ್ಯಾಂಪಸ್ ಅಧಿದೇವತೆ/ಗ್ರಾಮದೇವತೆ ವಡ್ಡನಹಳ್ಳಿ ಗ್ರಾಮದೇವತೆ ಶ್ರೀ ಚೌಡೇಶ್ವರಿ ಎಂದು ನನ್ನ ಮನದಾಳದಲ್ಲಿ ಸ್ವೀಕರಿಸಲಾಯಿತು.
ಕ್ಷಮಿಸಮ್ಮ ತಾಯಿ, ನಂಬುವರು ನಂಬ ಬಹುದು.