14th April 2025
Share

TUMAKURU:SHAKTHI PEETA FOUNDATION

ಮಹಾರಾಷ್ಟ್ರ ರಾಜ್ಯದ, ಕೊಲ್ಲಾಪುರ ಜಿಲ್ಲೆ, ಕರವೀರ ತಾಲ್ಲೂಕಿನ ಕನ್ನೇರಿ ಸಿದ್ಧಗಿರಿ ಮಹಾಸಂಸ್ಥಾನದಲ್ಲಿ  ಇದೇ ತಿಂಗಳು ಏಫ್ರಿಲ್ 10,11 ಮತ್ತು 12 ರಂದು ಮೂರು ದಿವಸಗಳ ಕಾಲ ನಡೆದ, ‘108 ಕೃಷಿ ಆಶ್ರಮಗಳ ಕಾರ್ಯಾಗಾರ’ ದಲ್ಲಿ ಕೃಷಿಕರ ಸ್ವಾಮಿಜಿಯವರಾದ  ಕನ್ನೇರಿ ಶ್ರೀಗಳು ಕೃತಿ ಮಾತನಾಡ ಬೇಕು’ ಎಂದು ಮಾರ್ಮಿಕವಾಗಿ ನುಡಿದರು.

108 ಕೃಷಿ ಆಶ್ರಮಗಳು ಹಂತ ಹಂತವಾಗಿ ಕರ್ನಾಟಕದ ಪ್ರತಿಯೊಂದು ಗ್ರಾಮ/ಬಡಾವಣೆಗಳಲ್ಲೂ ರಚನೆಯಾಗಬೇಕು. ಸ್ಪರ್ಧಾ ಮನೋಭಾವದಿಂದ ಒಂದಕ್ಕೊಂದು ಉತ್ತಮವಾಗಿ ಕಾರ್ಯನಿರ್ವಹಿಸಬೇಕು.

ಕೇಂದ್ರ ಮತ್ತು ರಾಜ್ಯಸರ್ಕಾರಗಳು ಪಾಲಿಸಿ ಮಾಡುವಾಗ, ಕೃಷಿ ಆಶ್ರಮಗಳ ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಅವರ ಮಾತಾನಾಡಿದ ಪ್ರಮುಖ ಅಂಶಗಳು.

1.            ಈ ವರ್ಷದಲ್ಲಿ ಒಂದು ಲಕ್ಷ ಎಕರೆ ಸಾವಯವ ಕೃಷಿ  ಮಾಡಲು ಪಣತೊಡಲಾಗಿದೆ.

2.            ಯಾವುದೇ ರೈತರು ಅವರ ಜಮೀನನ್ನು ಗುತ್ತಿಗೆ ನೀಡಿದರೂ ಸಾವಯವ ಕೃಷಿ  ಮಾಡಿಸಲಾಗುವುದು.

3.            ರೈತರೇ ಸಾವಯವ ಕೃಷಿ  ಮಾಡಿದರೆ, ಸಾವಯವ ಬೀಜ, ಗೊಬ್ಬರ, ಔಷಧಿ ನೀಡಲಾಗುವುದು.

4.            ಮಣ್ಣಿನ ಪರೀಕ್ಷೆ ಮಾಡಿಸಲಾಗುವುದು.

5.            ಅಗತ್ಯವಿದ್ದರೇ ಮಣ್ಣನ್ನು ಮೂಲ ಸ್ಥಿತಿಗೆ  ಸಜ್ಜು ಗೊಳಿಸಲಾಗುವುದು.

6.            ಕಾಲ ಕಾಲಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲಾಗುವುದು.

7.            ರೈತರಿಗೆ ಅಗತ್ಯವಾಗಿದ್ದರೆ, ಕೆಲಸದ ಆಳುಗಳನ್ನು ಕಳುಹಿಸಲಾಗುವುದು.

8.            ಉತ್ತಮವಾದ ಬೆಲೆ ಬಂದರೆ ರೈತರೇ ನೇರವಾಗಿ ಮಾರಾಟ ಮಾಡಬಹುದು.

9.            ಬೆಲೆ ಸಿಗದಿದ್ದರೆ ಸಿದ್ದಗಿರಿ ಬ್ರ್ಯಾಂಡ್’ ಅಡಿ ಮಾರಾಟ ಮಾಡಿಸಿ, 24 ಗಂಟೆಯೋಗೆ ರೈತರಿಗೆ ನೇರವಾಗಿ ಡಿಬಿಟಿ ಮೂಲಕ ಹಣ ಪಾವತಿ ಮಾಡಲಾಗುವುದು.

10.         ಕೆಮಿಕಲ್ ಕೃಷಿಗಿಂತ ಹೆಚ್ಚಿಗೆ ಬೆಳೆ ತೆಗೆಯಲಾಗುವುದು.

11.         ಸಾವಯವ ದಂಧೆ, ಮೋಸ ಮಾಡಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು.

12.         ನೂರಾರು ಪರಿಣಿತ ತಜ್ಞರು, ಸಾವಿರಾರು ಕೆಲಸಗಾರರು ಸಾವಯವ ಕೃಷಿ ಸೈನಿಕರಂತೆ ಸಿದ್ಧವಾಗುತ್ತಿದ್ದಾರೆ.

13.         ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸಲಿದ್ದಾರೆ.

14.         ದೇಶದ ಪ್ರತಿ ಜಿಲ್ಲೆಯಲ್ಲೂ ಕಾರ್ಯನಿರ್ವಹಿಸಲಾಗುವುದು.

15.         ಕೃಷಿ ಆಶ್ರಮಗಳು ಸಾವಯವ ಟಾಸ್ಕ್ ಪೋರ್ಸ್ ನಂತೆ ಕಾರ್ಯನಿರ್ವಹಿಸಲು ಸಲಹೆ ನೀಡಿದರು.

ಇದೊಂದು ನಮ್ಮ ಸಂಕಲ್ಪ ಎಂದು ಘೋಶಿಸಿದರು. ವಿಜ್ಞಾನಿ ಡಾ.ಬಿ.ಎಂ.ನಾಗಭೂಷಣ ಭೀಮಸಮುದ್ರರವರು ಮತ್ತು ಅವರ ತಂಡಕ್ಕೆ ಶೀಘ್ರವಾಗಿ ರೂಪುರೇಷೆ ನಿರ್ಧರಿಸಿ, ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಆಶೀರ್ವದಿಸಿದರು.

ರಾಜ್ಯದ ಎಲ್ಲಾ ಭಾಗದಿಂದ ಸುಮಾರು 250 ಕ್ಕೂ ಹೆಚ್ಚು ಅನುಭವಿ ಕೃಷಿ ತಜ್ಞರು, ಸಂಶೋಧಕರು, ಸಾಧಕರು, ಜ್ಞಾನಿಗಳು ಭಾಗವಹಿಸಿದ್ದರು.

ಮೂರು ದಿವಸಗಳ ಕಾರ್ಯಾಗಾರ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ಗಳಂತೆ ಪ್ರಾಯೋಜಕರು ನಿರ್ವಹಿಸಿದ ರೀತಿ ವಿಶಿಷ್ಠವಾಗಿತ್ತು.

ಕೃತಿ ಮಾತನಾಡ ಬೇಕು’  ಸ್ವಾಮೀಜಿಗಳ ವಾಣಿಯನ್ನೇ ಕೃಷಿ ಆಶ್ರಮಗಳ ಘೋಷ ವಾಕ್ಯ’ ಮಾಡಿಕೊಳ್ಳಲು ಎಲ್ಲರೂ ಸಹಮತ ವ್ಯಕ್ತ ಪಡಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 75 ಕ್ಕೂ ಹೆಚ್ಚು ಜನರಿಗೆ, ಎರಡನೇ ಹಂತದಲ್ಲಿ ಕೃಷಿ ಆಶ್ರಮಗಳನ್ನು ಆರಂಭಿಸಲು ಸಂಕಲ್ಪ ಪತ್ರ ವಿತರಣೆ ಮಾಡಿದರು.