15th April 2025
Share

TUMAKURU:SHAKTHI PEETA FOUNDATION

ಪ್ರತಿಯೊಂದು ಕೃಷಿ ಆಶ್ರಮದಲ್ಲಿ, ಆಯಾ ವಿಧಾನಸಭಾ ವ್ಯಾಪ್ತಿಯ ಪ್ರತಿಯೊಂದು ಗ್ರಾಮ/ಬಡಾವಣೆಯ ನಕ್ಷೆ ಸಹಿತ ನದಿ ನೀರಿನ, ಜಲಸಂಗ್ರಹಾಗಾರಗಳ ನಕ್ಷೆಯನ್ನು ಕಡ್ಡಾಯವಾಗಿ ಪ್ರದರ್ಶನ ಮಾಡಲು ಕನ್ನೇರಿ ಶ್ರೀಗಳು ಆದೇಶಿಸಿದರು.

 ರಾಜ್ಯದ ಪ್ರತಿಯೊಂದು ನದಿ ಹುಟ್ಟುವ ಪ್ರದೇಶದಲ್ಲಿ ಒಂದೊಂದು ಕೃಷಿ ಆಶ್ರಮ ಆರಂಭಿಸಬೇಕು, ಅಲ್ಲಿ ಆಯಾ ನದಿಯ ಸಂಪೂರ್ಣ ಮಾಹಿತಿ ಇರಬೇಕು.

  ರೈತರಿಗೆ ಮತ್ತು ಪ್ರತಿಯೊಬ್ಬ ಎಲ್ಲಾ ವರ್ಗದ ಜನರಿಗೆ ಶುದ್ಧ ನೀರಿನ ಅಗತ್ಯವಿದೆ. ಪಂಚಭೂತಗಳು ಶುದ್ಧವಾಗಬೇಕಿದೆ. ಈ ಹಿನ್ನಲೆಯಲ್ಲಿ ಕುಂದರನಹಳ್ಳಿ ರಮೇಶ್ ರವರು ಹೇಳಿದ ಹಾಗೆ, ಕರ್ನಾಟಕ ರಾಜ್ಯದಲ್ಲಿ ಉತ್ಪತ್ತಿಯಾಗುವ ಸುಮಾರು 3500 ಟಿ.ಎಂ.ಸಿ ಅಡಿ ನೀರು ಮತ್ತು ಕೇಂದ್ರ ಸರ್ಕಾರದ ನದಿಜೋಡಣೆಯ ನೀರಿನ ಪಾಲು ಸೇರಿದಂತೆ, ಎಷ್ಟು ಸಾದ್ಯವೋ ಅಷ್ಟು ನದಿ ನೀರನ್ನು ಬಳಸಿಕೊಳ್ಳಲು ಮತ್ತು ಮಳೆ ಕೊಯ್ಲು ಮಾಡಲು ವ್ಯಾಪಕ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿವೆ. 

ಈ ಬಗ್ಗೆ ಕೃಷಿ ಆಶ್ರಮಗಳು ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿಯೂ, ಆಯಾ ವ್ಯಾಪ್ತಿಯ ಜನರೊಂದಿಗೆ ಜನಾಂದೋಲನ ಮತ್ತು ನಿಖರವಾದ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕಿದೆ ಎಂದು ಮಾರ್ಗದರ್ಶನ ಮಾಡಿದರು.

ನದಿ ಉಗಮದಿಂದ ಸಮುದ್ರ ಸೇರುವ ತನಕ, ನದಿ ಪರಿಸರ ಮಾಲೀನ್ಯದ ಸಂಪೂರ್ಣ ವಿವರಗಳನ್ನು ಸಂಗ್ರಹಿಸ ಬೇಕು. ಈ ಬಗ್ಗೆ ರಮೇಶ್ ರವರು ಸರ್ಕಾರದ ಜೊತೆಗೂಡಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

 ಮಹಾರಾಷ್ಟ್ರ ರಾಜ್ಯದ, ಕೊಲ್ಲಾಪುರ ಜಿಲ್ಲೆ, ಕರವೀರ ತಾಲ್ಲೂಕಿನ ಕನ್ನೇರಿ ಸಿದ್ಧಗಿರಿ ಮಹಾಸಂಸ್ಥಾನದಲ್ಲಿ  ಇದೇ ತಿಂಗಳು ಏಫ್ರಿಲ್ 10,11 ಮತ್ತು 12 ರಂದು ಮೂರು ದಿವಸಗಳ ಕಾಲ ಕೃಷಿಕರ ಸ್ವಾಮೀಜಿಯವರಾದ  ಕನ್ನೇರಿ ಶ್ರೀಗಳ ನೇತೃತ್ವದಲ್ಲಿ  ನಡೆದ, ‘108 ಕೃಷಿ ಆಶ್ರಮಗಳ ಕಾರ್ಯಾಗಾರ’ ದಲ್ಲಿ 2047 ರ ವೇಳೆಗೆ ಪ್ರತಿಯೊಬ್ಬರಿಗೂ ಶುದ್ಧವಾದ ನೀರು ದೊರೆಯ ಬೇಕೆಂಬ ಶಪಥ ಮಾಡಿದಂತೆ ಇತ್ತು.

 ನಾನು ಮಾತನಾಡುವಾಗ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು, ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರೊಡಗೂಡಿ, ಕಳೆದ 28 ವರ್ಷಗಳಿಂದ ಮಾಡಿದ ನೀರಾವರಿ ಹೋರಾಟದ ಮಜಲುಗಳನ್ನು ಮತ್ತು ಮುಂದೊಇನ 2047 ರ ವೇಳೆಯ ಕನಸುಗಳನ್ನು ಸಭೆಯಲ್ಲಿ ಮಂಡಿಸಿದ ನಂತರ ಹಲವಾರು ಜನರು ‘ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ’ ದೊರೆಯ ಬೇಕಾದರೆ, ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಜಾರಿಯಾಗಲೇ ಬೇಕಿದೆ ಎಂಬ ಸಲಹೆ ನೀಡಿದರು.

 ಮೈಸೂರಿನ ಪಿರಿಮಿಡ್ ಕೃಷಿಕ ಶ್ರೀ ಗೋಪಾಲಕೃಷ್ಣರವರ ದಂಪತಿಗಳು, ನಮ್ಮ ಕೃಷಿ ಆಶ್ರಮದಲ್ಲಿ ಈ ಬಗ್ಗೆ ಒಂದು ಕಾರ್ಯಾಗಾರ ನಡೆಸೋಣ ಎಂದು ಅತ್ಯಂತ ಪ್ರೀತಿಯ ಆಹ್ವಾನ ಮಾಡಿದರು.

ವಿಜ್ಞಾನಿ ಡಾ.ಬಿ.ಎಂ.ನಾಗಭೂಷಣ ಭೀಮಸಮುದ್ರರವರು ಮತ್ತು ಅವರ ತಂಡದೊಂದಿಗೆ ದಿನಾಂಕ:18.04.2025 ರಂದು, ಈ ಬಗ್ಗೆ ಸಭೆ ನಡೆಸಿ ರೂಪು ರೇಷೆ ನಿರ್ಧರಿಸಲು ಸಮಾಲೋಚನೆ ಮಾಡಿದ್ದೇವೆ. ಸಭೆಯ ಸ್ಥಳ ಮತ್ತು ದಿನಾಂಕವನ್ನು ಶೀಘ್ರವಾಗಿ ತಿಳಿಸಲಿದ್ದೇವೆ.  ಆಸಕ್ತರು ಭಾಗವಹಿಸ ಬಹುದಾಗಿದೆ.