TUMAKURU:SHAKTHIPEETA FOUNDATION
1. ಕೃಷಿ ಆಶ್ರಮಗಳ ಡಿಜಿಟಲ್ ಪ್ಲಾಟ್ ಫಾರಂ ಮಾಡಲು ಬೆಂಗಳೂರಿನ ಶ್ರೀ ಎಸ್.ಪಿ.ರಾಜೇಶ್ ರವರು ವಿಶೇಷ ಆಸಕ್ತಿ ವಹಿಸಿದ್ದಾರೆ,
2. ಕೃಷಿ ಆಶ್ರಮಗಳ ಜಿಐಎಸ್ ಲೇಯರ್ ಮಾಡಲು ವಿಜಯಪುರ ಜಿಲ್ಲೆಯ ಶ್ರೀ ವೀರೇಶ್ ಮನಗೋಳಿರವರು ಮತ್ತು ಧಾರವಾಡ ಜಿಲ್ಲೆಯ ಶ್ರೀ ಮಧುಕಿರಣ್ ರವರೊಂದಿಗೆ ಚರ್ಚಿಸಲಾಗಿದೆ.
3. ಕೊಪ್ಪಳ ಜಿಲ್ಲೆಯ ಶ್ರೀ ಮಂಜುನಾಥ್ ಮತ್ತು ಶ್ರೀಮತಿ ರಾಜೇಶ್ವರಿರವರು ಕೃಷಿ ಆಶ್ರಮಗಳ ಅಧ್ಯಯನ ಮಾಡಲು ಕನ್ನೇರಿ ಶ್ರೀಗಳ ಸಮ್ಮುಖದಲ್ಲಿ ಘೋಷಣೆ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಶ್ರೀ ಶಿವಕುಮಾರ್ ರವರು ಈಗಾಗಲೇ ಕೃಷಿ ಆಶ್ರಮಗಳ ಅಧ್ಯಯನ ಕೇಂದ್ರ ಎಂದು ನಾಮಫಲಕ ಹಾಕಿಕೊಂಡು ಶ್ರಮಿಸುತ್ತಿದ್ದಾರೆ.
ಮೇಲ್ಕಂಡವರು ತಮ್ಮ ರೂಪುರೇಷೆಗಳನ್ನು ಸಿದ್ಧಪಡಿಸಿ, ಪ್ರತಿಯೊಂದು ಕೃಷಿ ಆಶ್ರಮಗಳು ಏನೇನು ಮಾಹಿತಿ ನೀಡಬೇಕು ಎಂಬ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು ಅಗತ್ಯವಾಗಿದೆ.
ದಿನಾಂಕ:30.04.2025 ರ ವೇಳೆಗೆ ಇವರ ಜೊತೆ ಕೈಜೋಡಿಸುವವರು, ವಿಜ್ಞಾನಿ ಡಾ.ಬಿ.ಎಂ.ನಾಗಭೂಷಣ ಭೀಮಸಮುದ್ರರವರನ್ನು ಸಂಪರ್ಕಿಸುವುದು ಸೂಕ್ತವಾಗಿದೆ. ನಂತರ ಅಧಿಕೃತವಾಗಿ ಕನ್ನೇರಿ ಶ್ರೀಗಳ ಸಮ್ಮುಖದಲ್ಲಿ, ನಿಯಾಮುನುಸಾರ ಮೂರು ಯೋಜನೆಗಳಿಗೆ ಚಾಲನೆ ನೀಡುವುದು ಸೂಕ್ತವಾಗಿದೆ.
ಶ್ರೀ ಮಾರುತಿರಾವ್‍ರವರು ಎಲ್ಲಾ ಕೃಷಿ ಆಶ್ರಮಗಳ ವಿಧಾನಸಭಾ ಕ್ಷೇತ್ರವಾರು, ಜಿಲ್ಲಾವಾರು ಪಟ್ಟಿಮಾಡಿ, ಇವರುಗಳಿಗೆ ಮೊಬೈಲ್ ನಂಬರ್ ಸಹಿತ ನೀಡುವುದು ಅಗತ್ಯವಾಗಿದೆ.
ಎಲ್ಲಾ ಕೃಷಿ ಆಶ್ರಮಗಳು ಪ್ರಮುಖರು ತಮಗೆ ಇಷ್ಟವಾದ ಒಂದು ಬೆಳೆ ಮತ್ತು ತಮ್ಮ ಆಶ್ರಮಗಳಿಗೆ ಹತ್ತಿರ ಹುಟ್ಟುವ ಅಥವಾ ಹರಿಯುವ ನದಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮನವಿ ಮಾಡಲಾಗಿದೆ.