23rd April 2025
Share

TUMAKURU:SHAKTHI PEETA FOUNDATION

  ತುಮಕೂರು ನಗರದ   ANANYA INSTITUTE OF COMMERCE AND MANAGEMENT  ಕಾಲೇಜಿನ ವಿದ್ಯಾರ್ಥಿಗಳೊಂದಿಗೆ 4 ಗಂಟೆಗಳ ಕಾಲ INSTITUTIONAL SOCIAL RESPONSIBILITY  ಕಾರ್ಯಕ್ರಮದ ಪಿಪಿಟಿ ಪ್ರದರ್ಶನದ ಜೊತೆಗೆ, ಪ್ರತಿಯೊಂದು ವಿದ್ಯಾರ್ಥಿ ತಂಡದ, ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಪ್ರಶ್ನೆ ಕೇಳುವ ಮೂಲಕ ಅವರಲ್ಲಿ ಅಡಗಿರುವ ಅಗಾಧವಾದ ಜ್ಞಾನದ ಬೆಳಕು ಚೆಲ್ಲುವ ಅವಕಾಶ ದೊರಕಿತ್ತು.

ನಂಬರ್ ಒನ್ ಕರ್ನಾಟಕ @ 2047 ಮತ್ತು 1008 ಕೃಷಿ ಆಶ್ರಮಗಳ ಪರಿಕಲ್ಪನೆಯ ಬಗ್ಗೆಯೂ ವಿಷಯ ಹಂಚಿಕೊಳ್ಳಲಾಯಿತು.

  ರಾಜ್ಯಾಧ್ಯಾಂತ ಇರುವ ಪ್ರತಿಯೊಂದು ಕೃಷಿ ಆಶ್ರಮಗಳು ಸಹ ತಮ್ಮ ಸಮೀಪವಿರುವ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ಊರಿಗೊಂದು/ಬಡಾವಣೆಗೊಂದು ಪುಸ್ತಕ @ 2047 ಹಾಗೂ ಕೃಷಿ ಆಶ್ರಮಗಳ ಪರಿಕಲ್ಪನೆಗಳ ಬಗ್ಗೆ ಉಪನ್ಯಾಸ ಮತ್ತು ವಿದ್ಯಾಥಿಗಳೊಂದಿಗೆ ಸಂವಾದ ಮಾಡುವುದು ಅಗತ್ಯವಾಗಿದೆ.

ಜೊತೆಗೆ ತಮ್ಮ ಕೃಷಿ ಆಶ್ರಮಗಳಿಗೆ ವಿದ್ಯಾರ್ಥಿಗಳನ್ನು ಕರೆಸಿಕೊಂಡು, ಲೈವ್ ಆಗಿ ತಮ್ಮ ಚಟುವಟಿಕೆಗಳ ಮಾಹಿತಿ ನೀಡಿ, ಮೌಲ್ಯವರ್ಧನೆ ಉತ್ಪನ್ನಗಳ ರುಚಿ ನೋಡಿಸುವ ಕೆಲಸವೂ ಒಳ್ಳೆಯ ಬ್ರ್ಯಾಂಡ್ ಆಗಲಿದೆ.

ಹಾವೇರಿ ಜಿಲ್ಲೆಯ ಪುಣ್ಯಕೋಟಿ ಕೃಷಿ ಆಶ್ರಮದ ಶ್ರೀ ಈರಣ್ಣನವರು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿಗಳ ಕಾರ್ಯಕ್ರಮ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಅವರ ಉತ್ಪನ್ನಗಳ ಅಂಬಲಿಯನ್ನು ಕುಡಿಸುತ್ತಿದ್ದಾರೆ.

ಸುಮಾರು 20 ಕ್ಕೂ ಹೆಚ್ಚು ತಂಡಗಳು, ವಿವಿಧ ಯೋಜನೆಗಳಾದ ಅನಾಥಾÀಶ್ರಮ, ಗಿಡಹಾಕುವುದು, ಬೀದಿ ಬದಿ ವ್ಯಾಪಾರಿಗಳ, ಕೊಳಚೆ ಪ್ರದೇಶಗಳ ಜೀವನ, ಅನಕ್ಷರತೆ, ಸ್ಕಿಲ್, ರೋಗಿಗಳ ಭೇಟಿ, ರೈತರ ಭೇಟಿ, ಅಂಗವಾಡಿಗಳ ಭೇಟಿ ಹೀಗೆ ಹಲವಾರು ವಿಷಯಗಳ ಬಗ್ಗೆ ಚಟುವಟಿಕೆ ಮಾಡಿದ್ದಾರೆ. ಬಹಳ ಉತ್ತಮವಾಗಿ ಅಟೆಂಪ್ಟ್ ಮಾಡಿದ್ದಾರೆ,

ನನಗಂತೂ 4 ಗಂಟೆಗಳ ಕಾಲ ಅವರೊಂದಿಗೆ ಚರ್ಚೆ ಮಾಡಿದಾಗ, ಕಳೆದ ಸಮಯದ ಅರಿವೆ ಇಲ್ಲದಂತಾಗಿತ್ತು. ಈ ಕಾರ್ಯಕ್ರಮ ಆರಂಭವಾಗುವ ಮೊದಲೇ, ಒಂದು ಕಾರ್ಯಾಗಾರ ನಡೆಸಿದ್ದರೆ, ಇನ್ನೂ ಅತ್ಯುತ್ತಮ ಪಲಿತಾಂಶ ಬರುತಿತ್ತು ಎನಿಸಿತು.

ಅತ್ತುತ್ತಮ ಪಿಪಿಟಿ ಪ್ರದರ್ಶನ ಮಾಡಿದ ತಂಡದೊಂದಿಗೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಯೊಬ್ಬರ, ಶ್ರೀಮತಿಯವರು ಈ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಆ ಅಧಿಕಾರಿ ನನ್ನನ್ನು ಕರೆಯಲು ತಿಳಿಸಿದ್ದರಂತೆ. ನಾನು ಆ ಅಧಿಕಾರಿಯವರಿಗೆ ತಿಳಿಸಿದೆ, ಪ್ರತಿ ವರ್ಷ ಕಡೇ ಪಕ್ಷ ಜಿಲ್ಲೆಗೊಂದು ಈ ವಿಷಯದ ಬಗ್ಗೆ ಕಾಯಾಗಾರ ನಡೆಸಲು ಕೃಷಿ ಆಶ್ರಮಗಳು, ಜಿಲ್ಲೆಯ ಎಲ್ಲಾ ಕಾಲೇಜುಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ ನಡೆಯುವುದು ಸೂಕ್ತವಾಗಿದೆ. ಈ ಬಗ್ಗೆ ಗಮನ ಹರಿಸಿ ಎಂದು ಮನವಿ ಮಾಡಿದೆ.

ಕನ್ನೇರಿ ಶ್ರೀಗಳ ನೇತೃತ್ವದಲ್ಲಿ, ಕರ್ನಾಟಕ ರಾಜ್ಯದ್ಯಾಂತ ಕೃಷಿ ಆಶ್ರಮಗಳು ಪಂಚಭೂತಗಳ ಮೇಲೆ ಆಗುತ್ತಿರುವ ಅತ್ಯಾಚಾರದ ಕಡೆ ವಿಶೇಷ ಗಮನ ಹರಿಸುತ್ತಿವೆ ಎಂಬ ಬೆಳಕು ಚೆಲ್ಲಿದೆ.