24th April 2025
Share

TUMAKURU:SHAKTHI PEETA FOUNDATION

   ದೆಹಲಿಯಲ್ಲಿ 3 ದಿವಸಗಳ ಕಾಲ ನಡೆದ ಸ್ಟಾಟ್ ಅಫ್ ಮಹಾಕುಂಭದಲ್ಲಿ, ಭಾರತ ದೇಶದ ಸುಮಾರು 18 ರಾಜ್ಯಗಳ ಮತ್ತು ಶ್ರೀಲಂಕಾದ ಅಗ್ರಿ ಸ್ಟಾಟ್ ಅಫ್‍ಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ ವಿಶೇಷ ಆಸಕ್ತಿ ವಹಿಸಿ ಮಾಹಿತಿ ಸಂಗ್ರಹ ಮಾಡಲಾಗಿತ್ತು.

1947 ಕ್ಕೆ ಮೊದಲಿನ ಕೃಷಿ, 1947 ರಿಂದ 2025 ರವರೆಗಿನ ಕೃಷಿ ಮತ್ತು 2047 ರ ವೇಳೆಗೆ ಕೃಷಿ ಹೇಗಿರ ಬೇಕು ಎಂಬ ದೂರದೃಷ್ಟಿಯುಳ್ಳ ಮಾಹಿತಿಗಳನ್ನು, ನೀತಿ ಆಯೋಗದ ಸಲಹೆಗಳಡಿಯಲ್ಲಿ, ಬೆಳೆವಾರು ಜ್ಞಾನಿಗಳ ನೇತೃತ್ವದಲ್ಲಿ  ಒಂದೇ ರೂಪ್‍ನಡಿ ತರುವ ಬಗ್ಗೆ ಸಮಾಲೋಚನೆ ನಡೆಸಲಾಗಿತ್ತು.

•             ಪ್ರಪಂಚದ ವಿವಿಧ ದೇಶಗಳ ಕೃಷಿ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ.

•             ಭಾರತ ದೇಶದ ಎಲ್ಲಾ ರಾಜ್ಯಗಳ ಕೃಷಿ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ.

•             ಕರ್ನಾಟಕ ರಾಜ್ಯದ ಕೃಷಿ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ.

•             ಪೈಲಟ್ ಯೋಜನೆಯಾಗಿ ತುಮಕೂರು ಜಿಲ್ಲೆಯ ಕೃಷಿ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ.

ಹೀಗೆ ನಾಲ್ಕು ಹಂತದಲ್ಲಿ, ಆಯಾ ವ್ಯಾಪ್ತಿಯ ಸರ್ಕಾರಗಳ ಯೋಜನೆಗಳ ಸಾಧಕ-ಭಾಧಕಗಳ ಬಗ್ಗೆ, ಕೆಳಕಂಡ ಇಲಾಖೆಗಳ ಎಲ್ಲಾ ಮಾಹಿತಿಗಳನ್ನು ಒಂದೇ ರೂಪ್ ನಡಿ ತರುವ ಬಗ್ಗೆ ಚರ್ಚಿಸಲಾಗಿತ್ತು.

1.            ಕೃಷಿ ಇಲಾಖೆ ಬೆಳೆಗಳು.

2.            ತೋಟಗಾರಿಕಾ ಇಲಾಖೆ ಬೆಳೆಗಳು.

3.            ಅರಣ್ಯ ಇಲಾಖೆ ಬೆಳೆಗಳು.

4.            ಆಯುಷ್ ಇಲಾಖೆ ಬೆಳೆಗಳು.

5.            ರೇಷ್ಮೆ ಇಲಾಖೆ ಬೆಳೆಗಳು.

6.            ಸಾಂಭಾರು ಪದಾರ್ಥಗಳ ವಿವಿಧ ಬೋರ್ಡ್‍ಗಳ ವ್ಯಾಪ್ತಿಗೆ ಬರುವ ಬೆಳೆಗಳು.

7.            ಇದೂವರೆಗೂ ಯಾವುದೇ ಇಲಾಖೆಯ ಅಡಿಯಲ್ಲಿ ಬರದ ಕಳೆ ಬೆಳೆಗಳು.

8.            ಪಶುವೈಧ್ಯಕೀಯ ಇಲಾಖೆ.

9.            ಮೀನುಗಾರಿಕಾ ಇಲಾಖೆ.

ದೆಹಲಿಯಲ್ಲಿ ಭೇಟಿ ಮಾಡಿದ, ತುಮಕೂರು ಜಿಲ್ಲೆಯ, ಶಿರಾ ತಾಲ್ಲೋಕಿನ ಶ್ರೀ ಭರತ್ ರವರು, ಉಪಗ್ರಹ ಆಧಾರಿತ ಬೆಳೆಗಳ ಎಕ್ಸ್ ರೇ ಮಾಡುವ ಮೂಲಕ, ಕುಳಿತಲ್ಲಿಯೇ ನಿರ್ಧಿಷ್ಟ ಬೆಳೆಗಳ ಬೆಳವಣಿಗೆಯ ಸ್ಥಿತಿ ಗತಿಗಳ ಬಗ್ಗೆ ನಕ್ಷೆ ಸಹಿತ ಮಾಹಿತಿ ನೀಡುವುದಾಗಿ ತಿಳಿಸಿದ್ದರು.

ಬೆಂಗಳೂರಿನ ಅವರ ಕಚೇರಿಗೆ ತೆರಳಿ ಮೊದಲು ನಮ್ಮ ಜಮೀನಿನ ಬೆಳೆಗಳ ಮಾಹಿತಿ ನೀಡಿ, ಹೇಗೆ, ಎಷ್ಟು ಪರ್ಸೆಂಟ್ ಹೆಚ್ಚು ಇಳುವರಿ ಮಾಡಿಸುವಿರಿ ಎಂಬ ಬಗ್ಗೆ ಪ್ರಾಯೋಗಿಕವಾಗಿ ಆರಂಭಿಸಲು ಸಮಾಲೋಚನೆ ನಡೆಸಲಾಯಿತು.

ಇದೇ ರೀತಿ ಎಲ್ಲಾ ಸ್ಟಾಟ್‍ಅಫ್‍ಗಳ ಮಾಹಿತಿಗಳನ್ನು ರೈತರಿಗೆ ಬಿ 2 ಬಿ ಮಾದರಿಯಲ್ಲಿ ಜಾಗೃತಿ ಮೂಡಿಸಲು ಮತ್ತು 224 ವಿಧಾನಸಭಾ ಕ್ಷೇತ್ರಗಳ ಆಸಕ್ತ ಕನಿಷ್ಠ 1000 ಕೃಷಿ ಆಶ್ರಮಗಳ ಅಥವಾ ಆಸಕ್ತ ರೈತರ ಜಮೀನುಗಳಲ್ಲಿ, ಸುಮಾರು 1000 ಬೆಳೆಗಳ ರೈತರ, ಸಂಶೋಧಕರ ಮತ್ತು ಅಧಿಕಾರಿಗಳ ಸಂಯುಕ್ತಾಶ್ರಯದಲ್ಲಿ, ಸಹಜ, ನೈಸರ್ಗಿಕ, ಸಾವಯವ ಕೃಷಿ ಮತ್ತು ಕೆಮಿಕಲ್ ಹೀಗೆ ಎಲ್ಲಾ ವಿಧಗಳ ಅಧ್ಯಯನ ವರದಿಗಳನ್ನು ಒಂದೇ ರೂಪ್ ನಡಿ ತರಲು ಚರ್ಚೆಗಳು ಆರಂಭವಾಗಿವೆ.

ರಾಜ್ಯದ ಯಾವುದಾದರೂ ಕೃಷಿ ಆಶ್ರಮಗಳು ಈ ಬಗ್ಗೆ ಸಭೆ ಆಯೋಜನೆ ಮಾಡಲು ಮುಂದೆ ಬಂದರೆ ಅಂತಹವರ ಕೃಷಿ ಆಶ್ರಮಗಳಲ್ಲಿ ಅಥವಾ ತುಮಕೂರು ಅಥವಾ ಬೆಂಗಳೂರಿನಲ್ಲಿ ಸರ್ಕಾರದ ಸಹಭಾಗಿತ್ವದಲ್ಲಿ ಸಭೆ ಆಯೋಜನೆ ಮಾಡಲು ಚಿಂತನೆ ನಡೆದಿದೆ.

ಸಂಶೋಧನೆ ಮತ್ತು ಅಧ್ಯಯನಕ್ಕಾಗಿ 1000 ಜಾತೀಯ ತಳಿಗಳನ್ನು ಶಕ್ತಿಪೀಠ ಕ್ಯಾಂಪಸ್‍ನಲ್ಲಿ  ಬೆಳೆಸಲು ಸಹ ಯೋಚಿಸಿ, ಹಾಲಿ  ತಳಿ ಬೆಳೆಗಳು ಎಷ್ಟಿವೆ, ಉಳಿದ ಯಾವ ತಳಿಗಳನ್ನು ಹಾಕಬೇಕು ಎಂಬ ಬಗ್ಗೆ ಪರಿಣಿತ ತಜ್ಞರು ನಾಳೆ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಸಲಹೆ ನೀಡಲಿದ್ದಾರೆ. ಈ ಬಗ್ಗೆ ಹಲವಾರು ಸ್ಟಾಟ್‍ಅಪ್‍ಗಳ ಪ್ರತಿನಿಧಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.