25th April 2025
Share

TUMAKURU:SHAKTHIPEETA FOUNDATION

  ದಿನಾಂಕ:01.08.1988 ರಂದು ತುಮಕೂರು ಜಿಲ್ಲೆ, ತುಮಕೂರು ಲೋಕಸಭಾ ಕ್ಷೇತ್ರ, ಗುಬ್ಬಿ ತಾಲ್ಲೋಕು, ಗುಬ್ಬಿ ವಿಧಾನಸಭಾ ಕ್ಷೇತ್ರ, ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ. ನಿಟ್ಟೂರು ಹೋಬಳಿ ಕುಂದರನಹಳ್ಳಿ ಗ್ರಾಮದಲ್ಲಿ ಕುಂಚಿಟಿಗರು ಪೂಜಿಸುವ, ನಮ್ಮೂರಿನ ಗ್ರಾಮದೇವತೆ ಶ್ರೀ ಗಂಗಮಲ್ಲಮ್ಮ ದೇವಾಲಯಕ್ಕೆ ಎಕಾಂಗಿಯಾಗಿ ಪೂಜೆ ಸಲ್ಲಿಸಿ,ನಮ್ಮೂರಿಗೆ ಹೊಂದಿಕೊಂಡಿರುವ 900 ಎಕರೆ ಬಿದರೆಹಳ್ಳ ಕಾವಲ್ ಸರ್ಕಾರಿ ಜಮೀನಿನನಲ್ಲಿ, ಯಾವುದಾದರೊಂದು ಬೃಹತ್ ಕೈಗಾರಿಕೆ ಮಾಡಿಸಲು ಶಕ್ತಿ ಕೊಡು ತಾಯಿ’ ಎಂದು ಪ್ರತಿÀಜ್ಞೆ ಮಾಡಿದ್ದು ಇತಿಹಾಸ.

   ಅಂದಿನಿಂದ ತುಮಕೂರು ಮಾಜಿ ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರೊಡಗುಡಿ, ದೇಶದ ಆನೇಕ ರಾಜಕಾರಣಿಗಳ, ಅಧಿಕಾರಿಗಳ ಮತ್ತು ಉಳುಮೆ ಮಾಡಿಕೊಂಡಿದ್ದ 1000 ಕ್ಕೂ ಅಧಿಕ ರೈತರ ಸಹಕಾರದಿಂದ ಇಂದು, ರೂ 6400 ಕೋಟಿ ವೆಚ್ಚದ, ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ, ಅಡಿಯಲ್ಲಿನ ಹೆಚ್.ಎ.ಎಲ್ ಸಂಸ್ಥೆಯಿÀಂದ ಯುದ್ದ ಹೆಲಿಕ್ಯಾಪ್ಟರ್ ತಯಾರಿಕಾ ಘಟಕ ಸ್ಥಾಪನೆಯಾಗಿ, ಹೆಲಿಕ್ಯಾಪ್ಟರ್ ಮಾರಾಟವಾಗುತ್ತಿರುವುದು ನನ್ನ ಜೀವನ ಸಾರ್ಥಕವಾಗಿದೆ.

ಹೋರಾಟ ಮಾಡುವಾಗ ಯಾರಿಂದಲೂ ಒಂದು ರೂ ಪಡೆಯದೆ, ನನ್ನ ಸ್ವಂತ ಖರ್ಚಿನಲ್ಲಿಯೇ, ಶ್ರಮಿಸಿದ್ದು ಒಂದು ಸಾಧನೆ. ಹೋರಾಟ ಇಂದು ನನ್ನ ಕನಸಿನ ‘ನಂಬರ್ ಒನ್ ಕರ್ನಾಟಕ @ 2047’ ಪರಿಕಲ್ಪನೆಗೆ ಮೊದಲ ಮೆಟ್ಟಿಲು ಆಗಿದೆ.’

ನಾನೊಬ್ಬ ರೈತ, ಈಗ ಕನ್ನೇರಿ ಶ್ರೀಗಳ ನೇತೃತ್ವದಲ್ಲಿ ಆರಂಭವಾಗುತ್ತಿರುವ ‘1008 ಕೃಷಿ ಆಶ್ರಮಗಳು, ಒಂದೊಂದು ಬೆಳೆಯಂತೆ 1008 ಬೆಳೆಗಳ ಮ್ಯೂಸಿಯಂ’ ಸ್ಥಾಪನೆ ಮಾಡಬೇಕು. ಹಾಗೂ ತಮ್ಮ ಸುತ್ತ ಮುತ್ತಲಿನ ಕನಿಷ್ಟ 6 ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ, ನಾವು ಕೇಳುವ ಅಭಿವೃದ್ಧಿ  ಮಾಹಿತಿ ನೀಡಬೇಕು. ಎಂಬುದು ನಮ್ಮ  ಮನವಿ.

ನಾನು ಶಕ್ತಿಪೀಠಗಳ ಆರಾಧಕ, ಶಕ್ತಿಪೀಠಗಳು ಎಂದರೆ 18, 52, 72 ಅಥವಾ 108 ಶಕ್ತಿಪೀಠಗಳು ಪ್ರಚಲಿತವಾಗಿದ್ದರೂ, ಈ ಭೂಮಿಯ ಮೇಲೆ ಪೂಜಿಸುವ ಎಲ್ಲಾ ಗ್ರಾಮದೇವತೆಗಳು, ಹೆಣ್ಣು ದೇವತೆಗಳು. ಶಕ್ತಿಪೀಠಗಳ ಅಂಶಗಳು. ಎಲ್ಲಾ ಧರ್ಮದವರೂ ಪೂಜಿಸುವ ಮಾತೆ.

ಈಗ ವಿಶ್ವದ 108 ಶಕ್ತಿಪೀಠಗಳನ್ನು ಪೂಜಿಸಿ, 2047 ವೇಳೆಗೆ ಕರ್ನಾಟಕ ರಾಜ್ಯ, ಇಡೀ ಪ್ರಪಂಚದಲ್ಲಿಯೇ, ಮಾನವೀಯತೆ ಸೇರಿದಂತೆ ಎಲ್ಲಾ ಮಾದರಿಯ ಅಭಿವೃದ್ಧಿಯಲ್ಲಿ ನಂಬರ್ ಒನ್ ಆಗಲೇ ಬೇಕು ಎಂಬ ಕನಸು ಕಾಣಲಾಗಿದೆ. ಪ್ರತಿಫಲ ದೇವರಿಗೆ ಬಿಟ್ಟಿದ್ದು.’

  ಮೊದಲ ಮೆಟ್ಟಿಲು ಬೆಳೆಗೊಂದರಂತೆ, 1008 ಬೆಳೆಗಳ ಮ್ಯೂಸಿಯಂ ಸ್ಥಾಪನೆ. ಕರ್ನಾಟಕ ರಾಜ್ಯದ 1008 ಕೃಷಿ ಆಶ್ರಮಗಳಲ್ಲಿ, ಶೇ 80 ರಷ್ಟು ರೈತರು ಇರುವ, ಈ ದೇಶದಲ್ಲಿ 2047 ರ ವೇಳೆಗೆ ದೇಶ ಹೇಗೆ ಅಭಿವೃದ್ಧಿ ಆಗಬೇಕು ಎಂದು ರೈತರೇ ಹೇಳಬೇಕು. ಉಳಿದವರು ಅನುಷ್ಠಾನ ಮಾಬೇಕು. ಇದು ನನ್ನ ದೃಷ್ಠಿಕೋನ ?

ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ,  ಕನಿಷ್ಠ 3 ಮ್ಯೂಸಿಯಂಗಳಂತೆ. 1008 ಕೃಷಿ ಆಶ್ರಮಗಳಲ್ಲಿ, ಒಂದು ಕೋಟಿ ವೆಚ್ಚದಲ್ಲಿ, ಬೆಳೆಗೊಂದು ಮ್ಯೂಸಿಯಂ.

ಯೋಜನೆ-1

1.            ಕೇಂದ್ರ ಸರ್ಕಾರ ರೂ 5000000 (ಐವತ್ತು ಲಕ್ಷ) ಅನುದಾನ ಮಂಜೂರು ಮಾಡಬೇಕು.

2.            ಕರ್ನಾಟಕ ರಾಜ್ಯದ 28 ಜನ ಲೋಕಸಭಾ ಸದಸ್ಯರು, 12 ಜನ ರಾಜ್ಯಸಭಾ ಸದಸ್ಯರು, ಇಬ್ಬರು ನಾಮ,ನಿರ್ದೇಶನ ರಾಜ್ಯ ಸಭಾ ಸದಸ್ಯರು, 225 ವಿಧಾನಸಭಾ ಸದಸ್ಯರು, 75 ಜನ ವಿಧಾನಪರಿಷತ್ ಸದಸ್ಯರು ಸೇರಿದಂತೆ 342 ಜನಪ್ರತಿನಿಧಿಗಳು ಸಹ ತಮ್ಮ ವ್ಯಾಪ್ತಿಯ ತಲಾ 3 ಮ್ಯೂಸಿಯಂಗಳಿಗೆ ತಲಾ ರೂ 2500000 (ಇಪ್ಪತ್ತೈದು ಲಕ್ಷ) ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಮಂಜೂರು ಮಾಡಬೇಕು.

3.            ರಾಜ್ಯ ಸರ್ಕಾರ  ರೂ 2500000 (ಇಪ್ಪತ್ತೈದು ಲಕ್ಷ) ಅನುದಾನ ಮಂಜೂರು ಮಾಡಬೇಕು.

ಅಥವಾ ಯೋಜನೆ-2

ಕೇಂದ್ರ ಸರ್ಕಾರವೇ  ಒಂದೊಂದು ಮ್ಯೂಸಿಯಂಗೂ ಒಂದೊಂದು ಕೋಟಿ ರೂ ಅನುದಾನ ಮಂಜೂರು ಮಾಡಬೇಕು.

ಅಥವಾ ಯೋಜನೆ-3

ರಾಜ್ಯ ಸಕಾರವೇ ಒಂದೊಂದು ಮ್ಯೂಸಿಯಂಗೂ ಒಂದೊಂದು ಕೋಟಿ ರೂ ಅನುದಾನ ಮಂಜೂರು ಮಾಡಬೇಕು.

ಅಥವಾ ಯೋಜನೆ-4

ಒಂದೊಂದು ಮ್ಯೂಸಿಯಂಗೂ ಒಂದೊಂದು ಕೋಟಿ ರೂ ಸಿ.ಎಸ್.ಫಂಡ್ ನಿಂದ ರೂ ಅನುದಾನ ಪಡೆಯಬೇಕು.

ಕೃಷಿ ಆಶ್ರಮಗಳು ಪಾರದರ್ಶಕವಾಗಿ ನಿರ್ವಹಣೆ ಮಾಡಬೇಕು. ಇದಕ್ಕೆ ಸರ್ಕಾರಗಳ ಮಾರ್ಗದರ್ಶಿ ಸೂತ್ರ ಇರಲಿದೆ. ಮಂಜೂರಾತಿಗಾಗಿ ಶಕ್ತಿಪೀಠ ಫೌಂಡೇಷನ್ ಸಂಪೂರ್ಣವಾಗಿ, ನಿರಂತರವಾಗಿ ಶ್ರಮಿಸಲಿದೆ.

ಆರಂಭದಲ್ಲಿ ಯಾರು ಸಹ, ಯಾವುದೇ ಸೇವಾ ಶುಲ್ಕ ಹಣ ನೀಡುವ ಆಗಿಲ್ಲ. ಶಕ್ತಿಪೀಠ ಫೌಂಡೇಷನ್ ಖರ್ಚು ವೆಚ್ಚ ಭರಿಸಲಿದೆ, ಆಸಕ್ತರು ಇಚ್ಚಿಸಿದರೆ ಡಿಜಿಟಲ್ ದಾನ 988677447 ನೀಡಬಹುದು. ನಗದು ಒಂದು ರೂಪಾಯಿಯನ್ನು ಯಾರಿಗೂ ನೀಡುವ ಆಗಿಲ್ಲ.

  ಯೋಜನೆ ಮಂಜೂರು ಆಗಿ, 1008 ಮ್ಯೂಸಿಯಂಗಳು, ಲೋಕಾರ್ಪಣೆ ಆದ ದಿವಸ, 1008 ಕೃಷಿ ಆಶ್ರಮಗಳು ಸೇರಿ ಒಂದು ಶಾಶ್ವತ ನಿಧಿ’ ಯನ್ನು,  ಯಾವುದಾದರೊಂದು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣೆ ಇಡಬೇಕು. ಇದರಿಂದ ಬರುವ ಬಡ್ಡಿ ಹಣವನ್ನು ಮಾತ್ರ ‘ನಂಬರ್ ಒನ್ ಕರ್ನಾಟಕ @ 2047’ ಪರಿಕಲ್ಪನೆಯ ಖರ್ಚುವೆಚ್ಚಗಳಿಗೆ ಬಳಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ನಿಧಿ ಬಳಸದಂತೆ ನಿಯಮ ರೂಪಿಸ ಬೇಕು.

•             ತುಮಕೂರಿನ ಶಕ್ತಿಭವನ.

•             ತುಮಕೂರು ಜಿಲ್ಲೆಯ ವಸಂತನರಾಸಪುರದ ಇಂಡಸ್ಟ್ರಿಯಲ್ ನೋಡ್‍ನಲ್ಲಿ ಆರಂಭವಾಗುವ  ಶಕ್ತಿಪೀಠ ಡಾಟಾ ಪಾರ್ಕ್

•             ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕಿನ, ಬಗ್ಗನಡು ಕಾವಲ್‍ನಲ್ಲಿ ಆರಂಭವಾಗುವ ಶಕ್ತಿಪೀಠ ಕ್ಯಾಂಪಸ್

ಚಟುವಟಿಕೆಗಳಿಗೆ ಶ್ರಮಿಸುವವರ ಕೋ ವರ್ಕಿಂಗ್ ಪ್ಲೇಸ್ ಆಗಿ ಕಾರ್ಯ ನಿರ್ವಹಿಸಲಿದೆ.

ದಿನಾಂಕ:30.04.2025 ರಂದು ವಿಶ್ವಗುರು ಬಸವಣ್ಣವರ ಜಯಂತಿ ದಿವಸ, 1008 ಕೃಷಿ ಆಶ್ರಮಗಳು ಈ ಬಗ್ಗೆ ಒಂದು ನಿರ್ಧಾರ ಕೈಗೊಳ್ಳಲು ಮನವಿ ಮಾಡಲಾಗಿದೆ. ಆದ್ದರಿಂದ 1008 ಕೃಷಿ ಆಶ್ರಮಗಳ ಗ್ರೂಪ್‍ನ ಸದಸ್ಯರು,  ಹೊಸದಾಗಿ ಕೃóóಷಿ ಆಶ್ರಮಗಳನ್ನು ತೆರೆಯಲು ಆಸಕ್ತಿ ಇರುವ ತಲಾ ಮೂರು ಜನ ರೈತರನ್ನು ಗ್ರೂಪ್‍ಗೆ ಸೇರ್ಪಡೆ ಮಾಡಲು ಮನವಿ ಮಾಡಲಾಗಿದೆ.

‘ಅಂತಿಮ ನಿರ್ಧಾರ ಕನ್ನೇರಿ ಶ್ರೀಗಳ ಪಾದಾರವಿಂದಗಳಿಗೆ ಬಿಡೋಣ. ಬಗ್ಗೆ ಉದ್ದೇಶಿತ 1008 ಕೃಷಿ ಆಶ್ರಮಗಳ ಅಥವಾ ಹಾಲಿ ಇರುವ ಕೃಷಿ ಆಶ್ರಮಗಳ ಅಭಿಪ್ರಾಯ ಸಂಗ್ರಹಿಸಿ, ವಿಜ್ಞಾನಿ ಶ್ರೀ ಬಿ.ಎಂ.ನಾಗಭೂಷಣ ಭೀಮಸಮುದ್ರವರವರು ಮತ್ತು ಶ್ರೀ ಮಾರುತಿರಾವ್‍ರವರು ಆಡ್ಮಿನ್ ಆಗಿರುವವರು ಶ್ರೀಗಳಿಗೆ ಸಲ್ಲಿಸಲು ಬಹಿರಂಗ ಮನವಿ’.

ಪರಿಸರ ತಜ್ಞ ಶ್ರೀ ಜಗನ್ನಾಥ್‍ರವರ ತಂಡ 1008 ಬೆಳೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ರೈತರಿಗೆ ಆದಾಯವೂ ಬರಬೇಕಲ್ಲವೇ ? ನೀವೂ ಕನಿಷ್ಟ 10 ಗುಂಟೆಯಲ್ಲಿ ನಿರ್ಧಿಷ್ಟ ಬೆಳೆ ಬೆಳೆಯಲೇ ಬೇಕು. ಉಳಿದಂತೆ ತಮ್ಮ ಜಮೀನಿನನಲ್ಲಿ ಯಾವುದೇ ಬೆಳೆ ಬೆಳೆಯ ಬಹುದು. ಅಧ್ಯಯನ, ಸಂಶೋದನೆ, ಗ್ರಂಥಾಲಯ ಎಲ್ಲಕ್ಕೂ ಆಗಿಂದಾಂಗ್ಗೆ ಮಾರ್ಗದರ್ಶನವನ್ನು ನಾಲೇಡ್ಜ್ ಬ್ಯಾಂಕ್ @ 2047’ ನಿಂದ ದೊರೆಯಲಿದೆ.

–              ಕುಂದರನಹಳ್ಳಿ ರಮೇಶ್, ಸಂಸ್ಥಾಪಕ ಶಕ್ತಿಪೀಠ ಫೌಂಡೇಷನ್. ತುಮಕೂರು.