TUMAKURU:SHAKTHI PEETA FOUNDATION
ಕನ್ನೇರಿ ಶ್ರೀಗಳ ನೇತೃತ್ವದಲ್ಲಿ, ಕರ್ನಾಟಕ ರಾಜ್ಯದ್ಯಾಂತ ರಚನೆಯಾಗಿರುವ, ರಚನೆಯಾಗುತ್ತಿರುವ 1008 ಕೃಷಿ ಆಶ್ರಮಗಳು ರೈತ ವಿಜ್ಞಾನಿಗಳಿಗೆ ಹೃದಯಪೂರ್ವಕ ಮನವಿ. ದಿನಾಂಕ:04.05.2025 ರಂದು ತುಮಕೂರಿನ ಶಕ್ತಿಭವನದಲ್ಲಿ ನಡೆಯುವ ಸಭೆಗೆ ಮತ್ತೊಮ್ಮೆ ಆಹ್ವಾನ.
1. ಪ್ರತಿಯೊಂದು ಕೃಷಿ ಆಶ್ರಮವೂ, ವರ್ಷದ 365 ದಿನಗಳಲ್ಲಿ ತಮಗೆ ಯಾವ ದಿನ ಸೂಕ್ತ ಆ ‘ಒಂದು ದಿನ’ವನ್ನು ಆಯ್ಕೆ ಮಾಡಿಕೊಳ್ಳಿ, ಆ ದಿನ ನಾಡಹಬ್ಬವಿರಬಹುದು, ಧಾರ್ಮಿಕ ಹಬ್ಬವಿರಬಹುದು, ವಿಷಯವಾರು ರಾಷ್ಟ್ರೀಯ ದಿನಾಚರಣೆಯಿರಬಹುದು, ನಿಮ್ಮ ಮಕ್ಕಳ ಹುಟ್ಟು ಹಬ್ಬವಿರಬಹುದು, ನಿಮ್ಮ ತಂದೆ ತಾಯಿ ನನೆಪಿಡುವ ದಿನವಿರಬಹುದು. ನಿಮ್ಮ ವಿವಾಹ ದಿನವಿರಬಹುದು. 365 ಜನರ 365 ದಿನ ಮುಗಿದ ಮೇಲೆ, ಒಂದು ದಿನದ ಗುಂಪುಗಳಾಗಲಿವೆ.
2. ಅದೇ ರೀತಿ ನಿಮ್ಮ ಕೃಷಿ ಆಶ್ರಮದಲ್ಲಿ ನೂರಾರು ಜಾತಿಯ ತಳಿಯ ಬೆಳೆ, ಗಿಡ ಮರ, ಹೀಗೆ ಎಷ್ಟೇ ಬೆಳೆಸಿದ್ದರೂ, ನಿಮ್ಮ ಭೂಮಿಯಲ್ಲಿ ಚೆನ್ನಾಗಿ ಬೆಳೆಯುವ ಒಂದು ನಿರ್ಧಿಷ್ಟ ‘ಬೆಳೆ’ಯನ್ನು ಆಯ್ಕೆ ಮಾಡಿಕೊಳ್ಳಿ.
3. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಹುಟ್ಟಿ ಹರಿಯುವ ಒಂದು ನದಿ, ಹಳ್ಳ, ತಲಪುರಿಕೆ, ನಿರ್ಮಾಣ ಮಾಡಿರುವ ಡ್ಯಾಂಗಳು, ಕೆರೆ ಕಟ್ಟೆ ಸೇರಿದಂತೆ, ನಿಮ್ಮ ಹತ್ತಿರದ ಅಥವಾ ನಿಮ್ಮ ಇಷ್ಟದ ಯಾವುದೇ ಒಂದು ‘ಜಲಸಂಗ್ರಹಾರ’ಗಳನ್ನು ಆಯ್ಕೆ ಮಾಡಿಕೊಳ್ಳಿ.
4. ಅದೇ ರೀತಿ ನಿಮ್ಮ ಕೃಷಿ ಆಶ್ರಮದ ಅಕ್ಕ ಪಕ್ಕವಿರುವ ಅಥವಾ ನಿಮ್ಮ ಇಷ್ಟದ ಯಾವುದೇ ಒಂದು ‘ಪ್ರವಾಸಿ ಕೇಂದ್ರ’ವನ್ನು ಆಯ್ಕೆ ಮಾಡಿಕೊಳ್ಳಿ.
5. ಅದೇ ರೀತಿ ನಿಮ್ಮ ಕೃಷಿ ಆಶ್ರಮದ ಅಕ್ಕ ಪಕ್ಕವಿರುವ ಅಥವಾ ನಿಮ್ಮ ಇಷ್ಟದ ಯಾವುದೇ ಒಂದು ವಿಶ್ವ ವಿದ್ಯಾನಿಲಯ, ‘ಶಾಲಾ ಕಾಲೇಜು, ಹಾಸ್ಟೆಲ್’ ಆಯ್ಕೆ ಮಾಡಿಕೊಳ್ಳಿ.
ಈ ಐದು ಅಂಶಗಳು ನಿಮ್ಮ ಕೃಷಿ ಆಶ್ರಮವನ್ನು, ವಿಶ್ವ ಮಟ್ಟಕ್ಕೆ ಪರಿಚಯಿಸಲು ಮೆಟ್ಟಿಲುಗಳಾಗುತ್ತವೆ. ಯಾವ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು,ಇದರಿಂದ ಯಾವ ರೀತಿ ಪ್ರಯೋಜನ ಆಗಲಿದೆ ಎಂಬ ಬಗ್ಗೆ ಕೃಷಿ ಆಶ್ರಮದ ಮಾರ್ಗದರ್ಶಿ ಸೂತ್ರದಲ್ಲಿ ಚರ್ಚೆ ಮಾಡಿ ಒಂದು ರೂಪವನ್ನು ಕೊಡೋಣ.
ಈ ಬಗ್ಗೆ ತಮ್ಮ ಸ್ಪಷ್ಟ ಅನಿಸಿಕೆಗಳನ್ನು ಜ್ಞಾನದಾನ ಮಾಡಿ, ಡಿಜಿಟಲ್ ಮಾಧ್ಯಮದ ಮೂಲಕ ಹಂಚಿಕೊಳ್ಳಿ. ಈ ಬಗ್ಗೆ ಆಸಕ್ತಿ ಇರುವವರು ಅಂಶವಾರು 5 ಲೇಖನಗಳನ್ನು ಬರೆಯಲು ಮುಕ್ತ ಆಹ್ವಾನ.
1008 ಕೃಷಿ ಆಶ್ರಮಗಳ ಗ್ರೂಪ್ ನಲ್ಲಿರುವ 363 ಜನರೊಂದಿಗೆ, ನಯ ವಿನಯದಿಂದ ಮಾತನಾಡಿ, ಈ ಮೇಲ್ಕಂಡ ಮಾಹಿತಿಗಳನ್ನು, ಕೃಷಿ ಆಶ್ರಮಗಳ ಪಕ್ಕಾ ವಿಳಾಸಗಳನ್ನು ಸಂಗ್ರಹಿಸಲು ಆಸಕ್ತಿರುವವರು ಕೃಷಿ ಆಶ್ರಮಗಳ ತಜ್ಞ ಶ್ರೀ ಬಿ.ಎಂ.ನಾಗಭೂಷಣ್ ಭೀಮಸಮುದ್ರರವರನ್ನು ಸಂಪರ್ಕಿಸ ಬಹುದು.
ನಾಳಿನ ಸಭೆಯಲ್ಲಿ ಒಂದು ಟೆಂಪ್ಲೇಟ್/ ಗೂಗಲ್ ಫಾರಂ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ.