8th May 2025
Share

TUMAKURU:SHAKTHIPEETA FOUNDATION

  ಕರ್ನಾಟಕ ರಾಜ್ಯದ್ಯಾಂತ ರಚನೆಯಾಗುತ್ತಿರುವ 1008 ಕೃಷಿ ಆಶ್ರಮಗಳ ಸಲಹೆಗಳ ಬಗ್ಗೆ ವಿಧಾನಸೌಧದಲ್ಲಿ ಧ್ವನಿಯಾಗುವೆ ಎಂದು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಘೋಷಣೆ ಮಾಡಿದರು.

ಅವರು ದಿನಾಂಕ:04.05.2025 ರಂದು ತುಮಕೂರಿನ ಶಕ್ತಿಭವನದಲ್ಲಿ ನಡೆದ, ರಾಜ್ಯ ಮಟ್ಟದ 1008 ಕೃಷಿ ಆಶ್ರಮಗಳ ಸಮಾಲೋಚನಾ ಸಭೆಯಲ್ಲಿ, ಕೇಂದ್ರ ಸರ್ಕಾರದ ಉದ್ದೇಶಿತ 30 ನದಿಜೋಡಣೆಯ ನಕ್ಷೆಯನ್ನು ಅನಾವರಣ ಮಾಡಿ ಮಾತನಾಡಿದರು.

ಇಲ್ಲಿ ರಾಜ್ಯದ್ಯಾಂತ ಉತ್ತಮವಾದ ವಿಜ್ಞಾನಿಗಳು, ವಿಷಯವಾರು ತಜ್ಞರು, ರೈತ ಸಂಶೋಧಕರು ಭಾಗವಹಿಸಿದ್ದೀರಿ, ಈ ರೀತಿಯ ಚಿಂತನೆಗಳು ಪ್ರಧಾನಿ ಶ್ರೀ ನರೇಂದ್ರಮೋದಿಯವರ ವಿಕಸಿತ ಭಾರತ @ 2047’ ಕ್ಕೆ ಪೂರಕವಾಗಿವೆ.

  ಕುಂದರನಹಳ್ಳಿ ರಮೇಶ್ ರವರು ದಿನಾಂಕ: 04.05.2001 ರಲ್ಲಿ ನಮ್ಮ ತಂದೆ, ತುಮಕೂರಿನ ಮಾಜಿ ಲೊಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ 60 ನೇ ಜನ್ಮ ದಿನದ ಅಂಗವಾಗಿ, ತುಮಕೂರು ನಗರದ ಸಮಗ್ರ ಅಭಿವೃದ್ಧಿಗೆ ಆರಂಭಿಸಿದ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಇಂದು 25 ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂದರ್ಭದಲ್ಲಿ, ರಾಜ್ಯದ ಕೃಷಿ ಆಶ್ರಮಗಳ ಸಹಭಾಗಿತ್ವದಲ್ಲಿ ನಂಬರ್ ಒನ್ ಕರ್ನಾಟಕ @ 2047’ ಗೆ ಶ್ರಮಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ.

ತಾವೆಲ್ಲಾ ಜ್ಞಾನಿಗಳಿದ್ದೀರಿ ತಾವು ನೀಡುವ ಸಲಹೆಗಳ ಬಗ್ಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಂಧಿಸುವ ರೀತಿ ಕಾರ್ಯನಿರ್ವಹಿಸಲು ಸಲಹೆ ನೀಡಿದರು. ಇಂದು ತಮ್ಮ ಜ್ಞಾನವನ್ನು ಯುಜನತೆಗೆ ಧಾರೆ ಎರೆಯುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಹಿರಿಯರ ಜೊತೆ ವಿದ್ಯಾರ್ಥಿಗಳನ್ನು, ಈ ಸಭೆಗೆ ಸೇರ್ಪಡೆ ಮಾಡಿರುವ ಉದ್ದೇಶವೂ ಉತ್ತಮವಾಗಿದೆ ಎಂದರು.

ಸಮಾಲೋಚನಾ ಸಭೆಯಲ್ಲಿ ಕೃಷಿ ಆಶ್ರಮಗಳ ತಜ್ಞ ಬೆಂಗಳೂರು ನಗರ ಜಿಲ್ಲೆಯ  ಶ್ರೀ ಬಿ.ಎಂ.ನಾಗಭೂಷಣ್, ಬಳ್ಳಾರಿ ಜಿಲ್ಲೆಯ ಧಾರ್ಮಿಕ ವನಗಳ ತಜ್ಞ ಶ್ರೀ ಜಗನ್ನಾಥ್ ರಾವ್, ವಿಜಯನಗರ ಜಿಲ್ಲೆಯ ಬೆಲವತ್ತ ಹಣ್ಣಿನ ತಜ್ಞ ಶ್ರೀ ವಿಶ್ವೇಶ್ವರÀ ಸಜ್ಜನ್, ಯಾದಗಿರಿ ಜಿಲ್ಲೆಯ ಮಣ್ಣು ತಜ್ಞರಾದ ಶ್ರೀ ಮಾರುತಿರಾವ್, ಬೀದರ್ ಜಿಲ್ಲೆಯ  ವನಲೋಕದ ಶ್ರೀ ಸಂತೋóಷ್, ಚಿತ್ರದುರ್ಗ ಜಿಲ್ಲೆಯ ಶ್ರೀ ರವಿತೇಜ, ಕೋಲಾರ ಜಿಲ್ಲೆಯ ಶ್ರೀ ಬಿ.ಎಂ.ಜನಾರ್ಧನ, ಚಿಕ್ಕಾಬಳ್ಳಾಪುರ ಜಿಲ್ಲೆಯ ಶ್ರೀ ಶಿವಣ್ಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 5 ಎಸ್ ತಜ್ಞ ಶ್ರೀ ಸಿದ್ಧಗಂಗಪ್ಪ, ತುಮಕೂರು ಜಿಲ್ಲೆಯ ಟಿ.ಆರ್.ರಘೋತ್ಮರಾವ್, ಮಹೇಶ್, ರಾಜೇಶ್, ಆದರ್ಶ, ರೂಪೇಶ್, ಗೋವಿಂದಪ್ಪ, ವೆಂಕಟೇಶ್, ಸುಷ್ಮಾ ಮೂರ್ತಿ, ಗಗನ ಸೇರಿದಂತೆ  ರಾಜ್ಯದ್ಯಾಂತ ಸುಮಾರು 41  ಜನ ಭಾಗವಹಿಸಿದ್ದರು.