1st June 2025
Share

TUMAKURU:SHAKTHIPEETA FOUNDATION

 ದಿನಾಂಕ:04.05.2025 ರಂದು ತುಮಕೂರಿನ ಶಕ್ತಿಭವನದಲ್ಲಿ ನಡೆದ, ರಾಜ್ಯ ಮಟ್ಟದ 1008 ಕೃಷಿ ಆಶ್ರಮಗಳ ಸಮಾಲೋಚನಾ ಸಭೆಯಲ್ಲಿ, ಕೃಷಿ ಆಶ್ರಮಕ್ಕೆ ಒಂದು ತಳಿ ಗಿಡದ ಹೊಣೆಗಾರಿಕೆ ಬಗ್ಗೆ ನಿರ್ಣಯ ಮಾಡಲಾಗಿದೆ.

1.            ಆ ತಳಿಯ ಬಗ್ಗೆ ಇದೂವರೆಗೂ ಅಧ್ಯಯನ ಮಾಡಿರುವವರ, ಬೆಳೆಗಾರರ, ಮಾರಾಟಗಾರರ, ಬಳಸುವವರ ನಾಲೇಡ್ಜ್ ಬ್ಯಾಂಕ್ @ 2047

2.            ಆ ತಳಿಯ ಸಂಶೋಧನೆ.

3.            ಆ ತಳಿಯ ಲೈವ್ ಪ್ರಾತ್ಯಾಕ್ಷಿಕೆ.

4.            ಆ ತಳಿಯ ಮ್ಯೂಸಿಯಂ.

5.            ಆ ತಳಿಯ ಸ್ಟಾರ್ಟ್‍ಅಫ್.

6.            ಆ ತಳಿಯನ್ನು ರಾಜ್ಯದ್ಯಾಂತ ಬೆಳೆಯುವ ರೈತರ ಡಾಟಾ ಬೇಸ್.

7.            ಆ ತಳಿಯ ಉತ್ತಮ ಬೀಜ ಮಂದಿರ ಹಾಗೂ ನರ್ಸರಿ.

8.            ಆ ತಳಿಯ ಮೌಲ್ಯ ವರ್ಧನೆ.

9.            ಆ ತಳಿಯ ಬಳಕೆ

10.         ಆ ತಳಿಯ ಪ್ರಪಂಚಾದ್ಯಾಂತ ಮಾರು ಕಟ್ಟೆ.

11.         ಆ ತಳಿಯ ಕೆಮಿಕಲ್ ಕೃಷಿಯಿಂದ ಸಾವಯವ/ಸಹಜ/ನೈಸರ್ಗಿಕ/ 0 ಕಲ್ಟಿವೇಷನ್ ಬದಾಲಾವಣೆ ಮಾಡಿದಾಗ ಆಗುವ ಬದಲಾವಣೆ.

12.         ಆ ತಳಿಯ ಬೆಳೆಗೆ ಕೆಮಿಕಲ್ ಕೃಷಿಗೆ ಖರ್ಚು ಮಾಡುತ್ತಿರುವ ವೆಚ್ಚಗಳನ್ನು ಸಾವಯವ/ಸಹಜ/ನೈಸರ್ಗಿಕ/ 0 ಕಲ್ಟಿವೇಷನ್ ರೈತರಿಗೆ ನೀಡುವ ಕುರಿತು ಅಧ್ಯಯನ.

13.         ಆ ತಳಿಯ ಕೃಷಿಗೆ ಅದೇ ಜಮೀನಿನನಲ್ಲಿ ಸಿದ್ಧಪಡಿಸುವ ಸಾವಯವ ಗೊಬ್ಬರ, ಸಿಂಪರಣೆ ಇತ್ಯಾದಿ.

  ಈ ಮೇಲ್ಕಂಡ  ಅಂಶಗಳ ಬಗ್ಗೆ ವಿವರವಾದ ಮಾಹಿತಿ ಸಂಗ್ರಹದ ಅಗತ್ಯವಿದೆ  ಈ ಅಂಶಗಳ ಜೊತೆಗೆ ಇನ್ನೂ ಯಾವುದಾದರೂ ಅಂಶ ಸೇರ್ಪಡೆ ಮಾಡಬೇಕಿದ್ದರೆ, ಸೇರ್ಪಡೆ ಮಾಡುವುದು ಅಥವಾ ಕೈಬಿಡುವ ಅಂಶಗಳಿದ್ದರೆ ಕೈಬಿಡಬೇಕಿದೆ. ಕೇಂದ್ರ ಮತ್ತು ರಾಜ್ಯ ಸಕರ್ಲಾರಗಳು ನೀಡುವ ಎಲ್ಲಾ ಸವಲತ್ತುಗಳನ್ನು ಬಳಸಿಕೊಳ್ಳಲು ಮುಂದಾಗಬೇಕಿದೆ.

  ಸ್ವಾತಂತ್ರ್ಯ ಪೂರ್ವದಿಂದ, ಸ್ವಾತಂತ್ರ್ಯ ನಂತರದ ಅಂದರೆ 1947 ರಿಂದ 2025 ರವರೆಗಿನ ಬೆಳೆ ಪದ್ಧತಿ, ಮುಂದೆ 2047 ರ ವರೆಗೆ ಹೇಗೆ ಬದಲಾವಣೆ ಮಾಡಬೇಕು ಎಂಬ ಬಗ್ಗೆ ದೂರದೃಷ್ಠಿ ಸಂಶೋಧನೆ ಮಾಡಲು ಒಬ್ಬ ವಿಜ್ಞಾನಿ-ಒಬ್ಬ ಅಧಿಕಾರಿ-ಒಬ್ಬ ರೈತರ’ ಸಹಭಾಗಿತ್ವದ ಜೊತೆಗೆ, ರಾಜ್ಯದ್ಯಾಂತ ಆ ತಳಿ, ಬೆಳೆಯುವ, ಮೌಲ್ಯವರ್ಧನೆ ಮಾಡುವ , ಮಾರಾಟ ಮಾಡುವ, ಬಳಸುವ ಆಸಕ್ತ ರೈತರ/ಜನತೆಯ ಗುಂಪು ಗೂಡಿಸುವಿಕೆ ಅಗತ್ಯವಿದೆ.

 ಈ ಹಿನ್ನಲೆಯಲ್ಲಿ ಶೀಘ್ರದಲ್ಲಿ 1008 ಗಿಡಗಳ ಲೈವ್ ಮ್ಯೂಸಿಯಂ ? ಸ್ಥಾಪನೆ ಮಾಡಲು, ಮುಂದೆ ಬರುವ  ಕೃಷಿ ಆಶ್ರಮದಲ್ಲಿ ಒಂದು ಸಮಾಲೋಚನಾ ಸಭೆ ನಡೆಸುವ ಆಲೋಚನೆ ಇದೆ. ಆದ್ದರಿಂದ ಒಂದು ಸಾವಿರ ಹಣ್ಣಿನ ಗಿಡಗಳ ಸಂಶೋಧಕ, ತುಮಕೂರು ಜಿಲ್ಲೆಯ ಶ್ರೀ ಪ್ರದೀಪ್‍ರವರೊಂದಿಗೆ -9513015051 ಉಚಿತವಾಗಿ ನೊಂದಾಯಿಸಿ ಕೊಳ್ಳಿ.

 1008 ಗಿಡಗಳ ಲೈವ್ ಮ್ಯೂಸಿಯಂ ? ನಲ್ಲಿ ಈ ಕೆಳಕಂಡ ಯಾವುದೇ ಗಿಡಗಳು ಬರಲಿವೆ. ಕೃಷಿ ಆಶ್ರಮಗಳು ಆಯ್ಕೆ ಮಾಡಿಕೊಳ್ಳುವ ಗಿಡಗಳು ಇರಲಿವೆ. ಸಭೆಯ ಸ್ಥಳ ಮತ್ತು ದಿನಾಂಕವನ್ನು ಕೃಷಿ ಆಶ್ರಮಗಳ ತಜ್ಞ ಶ್ರೀ ಬಿ.ಎಂ..ನಾಗಭೂಷಣ್ ಭೀಮಸಮುದ್ರರವರು ನಿಗಧಿ ಮಾಡಿ ತಿಳಿಸಲಿದ್ದಾರೆ.

1.            ಕೃಷಿ ಇಲಾಖೆ ಬೆಳೆಗಳು.

2.            ತೋಟಗಾರಿಕಾ ಇಲಾಖೆ ಬೆಳೆಗಳು.

3.            ಅರಣ್ಯ ಇಲಾಖೆ ಕಾಡು ಕೃಷಿ ಬೆಳೆಗಳು.

4.            ಆಯುಷ್ ಇಲಾಖೆ ಔಷಧಿ ಗಿಡಗಳು.

5.            ರೇಷ್ಮೆ ಇಲಾಖೆ ಬೆಳೆಗಳು.

6.            ಸಾಂಭಾರು ಪದಾರ್ಥಗಳ ವಿವಿಧ ಬೋರ್ಡ್‍ಗಳ ವ್ಯಾಪ್ತಿಗೆ ಬರುವ ಬೆಳೆಗಳು.

7.            ಪಶುವೈಧ್ಯಕೀಯ ಇಲಾಖೆ ಪ್ರಾಣಿಗಳಿಗೆ ಮೇವು ಬೆಳೆಗಳು.

8.            ಮೀನುಗಾರಿಕಾ ಇಲಾಖೆ ಮೇವು ಬೆಳೆಗಳು.

9.            ಇದೂವರೆಗೂ ಯಾವುದೇ ಇಲಾಖೆಯ ಅಡಿಯಲ್ಲಿ ಬರದ ಕಳೆ ಬೆಳೆಗಳು.

ಬಗ್ಗೆ ತಮ್ಮ ಬರಹಗಳು ಇದ್ದರೆ ಪ್ರಕಟಣೆ ಮಾಡಲಾಗುವುದು. ಉತ್ತಮ ಬರಹ ಮತ್ತು ಸಂಗ್ರಹಗಳಿಗೆ ಬಹುಮಾನ ನೀಡಲಾಗುವುದು.