1st July 2025
Share

TUMAKURU:SHAKTHI PEETA FOUNDATION

 ರೈತ, ರೈತೋದ್ಯಮಿಯಾಗಬೇಕು, ಉತ್ತಮ ಆರೋಗ್ಯ ಹೊಂದಬೇಕು, ಜಮೀನಿನ ಆರೋಗ್ಯ ಕಾಪಾಡಬೇಕು. ಪಂಚಭೂತಗಳ ಸಂರಕ್ಷಣೆ ಮಾಡಬೇಕು. ಪ್ರಾಮಾಣಿಕತೆಯಿಂದ ಹೆಚ್ಚಿಗೆ ಆದಾಯ ಸಂಪಾದಿಸಬೇಕು. ತನ್ಮೂಲಕ ಸಮಾಜಕ್ಕೆ ವಿಶೇಷ ಕೊಡುಗೆ ನೀಡಬೇಕು. ಇದೊಂದು ಪ್ರ್ಯಾಂಚೈಸಿ ರೂಪ ಪಡೆದುಕೊಳ್ಳಬೇಕಾದರೇ ‘ಪ್ರಭೇದಕ್ಕೊಂದು ಸ್ಟಾಟ್ ಅಫ್’ ಮಾಡುವ ಬಗ್ಗೆ ಸುಧೀರ್ಘ ಸಮಾಲೋಚನೆ ನಡೆಯಿತು.

ದಿನಾಂಕ:17.05.2025 ರಂದು ಶಕ್ತಿಪೀಠ ಕ್ಯಾಂಪಸ್‍ನಲ್ಲಿ  ನಂಬರ್ ಒನ್ ಕರ್ನಾಟಕ @ 2047’ ಘೋಷಣೆ ಮಾಡಬೇಕಾದರೆ, ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆ ಅಭಿವೃದ್ಧಿ ಆಗಬೇಕಾದರೆ. ಕೃಷಿ ಆಶ್ರಮಗಳು ಮಹತ್ತರ ಪಾತ್ರ ವಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು.

ಬಳ್ಳಾರಿ ಜಿಲ್ಲೆಯ ಪರಿಸರ ತಜ್ಞ ಶ್ರೀ ಜಗನ್ನಾಥ್ ರಾವ್ ರವರು, ಬೀದರ್ ಜಿಲ್ಲೆಯ ವನಲೋಕದ ಶ್ರೀ ಸಂತೋóಷ್ ರವರು, ನಾಲೇಡ್ಜಲ್ ಪರ್ಸನ್ ಗಳಾದ ಶಿವಮೊಗ್ಗ ಜಿಲ್ಲೆಯ ಶ್ರೀ ದಿಲೀಪ್ ರವರು, ಬೆಂಗಳೂರಿನ  ಶ್ರೀ ಮಹದೇವ್ ರವರು, ಶ್ರೀ ವೆಂಕಟೇಶ್ ರವರು, ಚಿತ್ರದುರ್ಗ ಜಿಲ್ಲೆಯ ಶ್ರೀಗಂಧ ಕೃಷಿ ಆಶ್ರಮದ ಶ್ರೀ ಎಸ್.ಪಿ.ರಾಜೇಶ್ ರವರು, ತುಮಕೂರು ಜಿಲ್ಲೆಯ ತುಮಕೂರು ಸ್ಟಾಟ್  ಅಫ್ ನ ಶ್ರೀ ಸುಹೃತ್ ಉಜ್ಜನಿರವರು ಭಾಗವಹಿಸಿದ್ದರು.

ಶ್ರೀಗಂಧ ಕೃಷಿ ಆಶ್ರಮ ಒಂದು ವೃಕ್ಷ ಆಶ್ರಮದಂತೆ ರೂಪುಗೊಳ್ಳುತ್ತಿದೆ. ಜಮೀನಿನಗೆ ಹೊಂದಿಕೊಂಡಿರುವ ವಾಣಿ ವಿಲಾಸ ಕಾಲುವೆಯ ಪಕ್ಕದ ವಿಜೆಎನ್‍ಎಲ್ ನಿಗಮದ ಸರ್ಕಾರಿ ಜಮೀನಿನನಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಪರಿಕಲ್ಪನೆಯ ಗ್ರೀನ್ ಕಾರಿಡಾರ್ ಯೋಜನೆಯಡಿ ತನ್ನ ದುಡಿಮೆಯಲ್ಲಿ  ವನ ಆಶ್ರಮ’ ಮಾಡಿರುವ ಶ್ರೀ ರಾಜೇಶ್ ರವರ ಕ್ರಮ ಒಂದು ಮಾದರಿಯಾಗಲಿದೆ.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮನವಿ ಮೇರೆಗೆ, 2015 ರಿಂದ ವಾಣಿ ವಿಲಾಸ ಕಾಲುವೆಯ ಅಕ್ಕ – ಪಕ್ಕ ಸರ್ಕಾರಿ ಜಮೀನು ಸಮೀಕ್ಷೆ ಮಾಡಿಸಲು ಅಂದಿನ ಎಂ.ಡಿ.ಯವರಾದ ಶ್ರೀ ಕೆ.ಜೈಪ್ರಕಾಶ್ ರವರು, ನಂತರದ ಎಂ.ಡಿ. ಶ್ರೀ ಲಕ್ಷ್ಮಣರಾವ್ ಪೇಶ್ವೆರವರು, ಮುಖ್ಯ ಇಂಜಿನಿಯರ್ ಗಳಾಗಿದ್ದ ಶ್ರೀ ಶಿವಕುಮಾರ್ ರವರು, ಶ್ರೀ ರಾಘವನ್ರವರು,  ಬೆಂಗಳೂರಿನ ಪ್ರೀತಿಕ್ಯಾಡ್ ಕಂಪನಿಯ ಶ್ರೀ ವೇದಾನಂದಾಮೂರ್ತಿಯವರ ಮೂಲಕ ಜಿ.ಐ.ಎಸ್ ಆಧಾರಿತ ‘ಸಮೀಕ್ಷೆ ಮಾಡಿಸಿದ್ದಾರೆ.

ಈ ಜಮೀನಿನ£ಲ್ಲಿ ಒತ್ತುವರಿ ಮಾಡಿಕೊಂಡಿರುವ ರೈತರ ಸಹಭಾಗಿತ್ವದಲ್ಲಿಯೇ, ಪ್ರಪಂಚದ ಎಲ್ಲಾ ಪ್ರಭೇಧಗಳ  ಗ್ರೀನ್ ಕಾರಿಡಾರ್’ ನಿರ್ಮಾಣ ಮಾಡಲು ಕಾಲಮಿತಿ ನಿಗಧಿ ಮಾಡಿ ಶ್ರಮಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಸರ್ಕಾರ ಜಮೀನಿನನಲ್ಲಿ ರೈತರು ಹೇಗೆ ಮರಗಿಡ ಬೆಳೆಸ ಬಹುದು ಎಂಬುದಕ್ಕೆ, ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‍ಗಳು, ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ‘ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ’ ನೇತೃತ್ವದಲ್ಲಿ,  ಕೃಷಿ ಆಶ್ರಮಗಳ’ ಸಹಭಾಗಿತ್ವದಲ್ಲಿ ಮಾದರಿಯಾದ ಯೋಜನೆ ರೂಪಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

–              ಕುಂದರನಹಳ್ಳಿ ರಮೇಶ್