16th July 2025
Share

TUMAKURU:SHAKTHIPEETA FOUNDATION

ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರ ‘ವಿಕಸಿತ ಭಾರತ @ 2047’ ಪರಿಕಲ್ಪನೆ, ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಕರ್ನಾಟಕ ಅಭಿವೃದ್ಧಿ ಮಾದರಿ’  ಪರಿಕಲ್ಪನೆ, ಮಾನ್ಯ ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರ   ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆ, ಕನ್ನೇರಿ ಶ್ರೀಗಳ ದಿವ್ಯ ಭಾರತ’ ಪರಿಕಲ್ಪನೆ ಹಾಗೂ ಶಕ್ತಿಪೀಠ ಫೌಂಡೇಷನ್‍ನ ನಂಬರ್ ಒನ್ ಕರ್ನಾಟಕ @ 2047’ ಪರಿಕಲ್ಪನೆಗಳಿಗೆ ಪೂರಕವಾಗಿ,    

  ವಿಶ್ವದ 108 ಶಕ್ತಿಪೀಠಗ¼ ದೇವತೆಗಳನ್ನು ಪೂಜಿಸಿ, ರಾಜ್ಯದ್ಯಾಂತ ರಚನೆಯಾಗುತ್ತಿರುವ 1008 ಕೃಷಿ ಆಶ್ರಮಗಳ ಸಂಚಾಲಕತ್ವ/ಸಹಕಾರದೊಂದಿಗೆ, ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಕಾರ್ಯತಂತ್ರ ರೂಪಿಸಲು, ಮಾನಿಟರಿಂಗ್, ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಜನಜಾಗೃತಿ ಮೂಡಿಸುವ ಸಲುವಾಗಿ, ಸ್ಥಾಪಿಸುತ್ತಿರುವ ಬಹುಪಯೋಗಿ ‘ಶಕ್ತಿಪೀಠ ಕ್ಯಾಂಪಸ್’  ಮಾಸ್ಟರ್ ಪ್ಲಾನ್ ಅಂಶಗಳನ್ನು, ಕಾಗದದ ಮೇಲಿನಿಂದ ಭೂಮಿಯ  ಮೇಲೆ ಇಳಿಸುವ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ನಾವು ಭೂಮಿಗೆ ಇಳಿಸಿರುವ ಪ್ರಾತ್ಯಾಕ್ಷಿಕೆಗಳಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ‘ಅನುಮೋದನೆ’ ಪಡೆದು, ಮುಂದೆ ಅನುಷ್ಠಾನಕ್ಕೆ ಕಾಲಮಿತಿ ಯೋಜನೆ ರೂಪಿಸಬೇಕಿದೆ.

  ಇದೂವರೆಗೂ ಶಕ್ತಿಭವನ, ಶಕ್ತಿಪೀಠ ಡಾಟಾ ಪಾರ್ಕ್ ಮತ್ತು ಶಕ್ತಿಪೀಠ ಕ್ಯಾಂಪಸ್ ಪರಿಕಲ್ಪನೆಗಳೊಂದಿಗೆ ನಾಟಕ ಪ್ರಾಕ್ಟೀಸ್’ ಆಗುತ್ತಿತ್ತು, ಈಗ ನಾಟಕ ಗೆಜ್ಜೆ ಪೂಜೆ’ ಹಂತಕ್ಕೆ ತಲುಪಿದೆ, ಇನ್ನೂ ಮುಂದೆ ನಾಟಕ ಪ್ರದರ್ಶನ’ ಮಾಡಲು, ಇಲ್ಲಿಯವೆಗೂ ಆಗಿರುವ ತಪ್ಪುಗಳನ್ನು ಸರಿಪಡಿಸುವ ಕೆಲಸವೂ ಆಗಬೇಕಿದೆ. ಈ ಹಿನ್ನಲೆಯಲ್ಲಿ ಅತ್ಯತ್ತಮ ಕ್ಯಾಂಪಸ್ ನಿರ್ಮಾಣಕ್ಕಾಗಿ ಸಲಹೆಗಳನ್ನು ನೀಡಲು ವಿಶ್ವದ್ಯಾಂತ ಹಲವಾರು ಜ್ಞಾನಿಗಳ ಭೇಟಿ ಜೊತೆಗೆ, ನಮ್ಮ ತಂಡವೂ ಅಧ್ಯಯನಕ್ಕಾಗಿ, ಹಲವಾರು ಸ್ಥಳಗಳಿಗೆ ಭೇಟಿ ನೀಡುವ ಕೆಲಸವೂ ಆರಂಭವಾಗಿದೆ.

 ಶಕ್ತಿಪೀಠ ಫೌಂಡೇಷನ್, ಶಕ್ತಿಪೀಠ,ಜಲಪೀಠ ಮತ್ತು ಅಭಿವೃದ್ಧಿಪೀಠಗಳ ಅಡಿಯಲ್ಲಿ,  ನೇಚರ್ ಈಸ್ ಗಾಡ್’ ತತ್ವದ ಕ್ಯಾಂಪಸ್ ನಿರ್ಮಾಣಕ್ಕಾಗಿ ಹಾಗೂ ನಿರಂತರವಾಗಿ ನಡೆದು ಕೊಂಡು ಹೋಗಲು, ತಾವೂ ತಮ್ಮ ಜ್ಞಾನದಾನ ಮಾಡುವ ಮೂಲಕ ಸಲಹೆ ನೀಡಬಹುದು.

ಶಕ್ತಿಪೀಠ:

1.            ವಿಶ್ವದ 108 ಶಕ್ತಿಪೀಠಗಳು, 12 ಜ್ಯೋತಿರ್ಲಿಂಗಗಳು ಸೇರಿದಂತೆ, ಸುಮಾರು 200 ಕ್ಕೂ ಹೆಚ್ಚು ಪ್ರಾತ್ಯಾಕ್ಷಿಕೆ.

ಜಲಪೀಠ:

1.            ಭೂಮಿಯ ಮೇಲೆ ಭಾರತದ ನಕ್ಷೆ, ಒಂದು ಕೋಟಿ ಲೀಟರ್ ನೀರಿನ ಸಾಮಾಥ್ರ್ಯದ, ಕೃತಕವಾಗಿ ನಿರ್ಮಾಣ ಮಾಡಿರುವ ಅರಬ್ಭಿಸಮುದ್ರ, ಬಂಗಾಳಕೊಲ್ಲಿ, ಹಿಂದೂ ಮಹಾಸಾಗರಗಳೊಂದಿಗೆ. ಭಾರತ ದೇಶದ ಉದ್ದೇಶಿತ 30 ನದಿ ಜೋಡಣೆಗಳ ಪ್ರಾತ್ಯಾಕ್ಷಿಕೆಯೊಂದಿಗೆ ಅವಲೋಕನ.

2.            ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಘೋಷಣೆಯಡಿ, ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಾಮಗಳಿಗೂ ನದಿ ನೀರಿನ ಅಲೋಕೇಷನ್ ಹಾಗೂ ರಾಜ್ಯದಲ್ಲಿ ಇರುವ 40000 ಕ್ಕೂ ಹೆಚ್ಚು,  ಕೆರೆ-ಕಟ್ಟೆಗಳು ಸೇರಿದಂತೆ, ಎಲ್ಲಾ ಮಾದರಿಯ ಜಲಸಂಗ್ರಹಾಗಾರಗಳನ್ನು ಗಂಗಾಮಾತೆ ದೇವಾಲಯ ಎಂದು ಘೋಷಣೆಯೊಂದಿಗೆ,  ಅಭಿವೃದ್ಧಿ, ಸಂರಕ್ಷಣೆ ಅವಲೋಕನ.

3.            ಕರ್ನಾಟಕ ರಾಜ್ಯದಲ್ಲಿ ಇರುವ ಎಲ್ಲಾ ಧರ್ಮಗಳ, ಜಾತಿ, ಉಪಜಾತಿಗಳು ಪೂಜಿಸುವ ಧಾರ್ಮಿಕ ಪ್ರಭೇಧಗಳ ಮರಗಿಡಗಳು, ಅಳಿವಿನಂಚಿನಲ್ಲಿರುವ ಪ್ರಭೇಧಗಳು ಮತ್ತು ರೈತರ ಆದಾಯ ದ್ವಿಗುಣಗೊಳ್ಳಲು ಅಗತ್ಯವಿರುವ ವಿವಿಧ ಪ್ರಭೇಧಗಳು ಸೇರಿದಂತೆ 1000 ಜಾತಿಯ ಪ್ರಭೇದಗಳನ್ನು ಶಕ್ತಿಪೀಠ ಕ್ಯಾಂಪಸ್‍ನಲ್ಲಿ ಹಾಕುವ ಮೂಲಕ  ಪ್ರಾತ್ಯಾಕ್ಷಿಕೆ, ಸಂಶೋದನೆ ಮತ್ತು ಅಭಿವೃದ್ಧಿ  ಅವಲೋಕನ. ರಾಜ್ಯದ್ಯಾಂತ ರಚನೆಯಾಗುತ್ತಿರುವ ಪ್ರತಿಯೊಂದು ಕೃಷಿ ಆಶ್ರಮವೂ, ಒಂದೊಂದು ಪ್ರಭೇದಗಳ ಮ್ಯೂಸಿಯಂ, ಸಂಶೋದನೆ, ಪ್ರಾತ್ಯಾಕ್ಷಿಕೆ ಗುರಿ.

ಅಭಿವೃದ್ಧಿ ಪೀಠ:

1.            ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವ ಸ್ರ್ಟಾಟಜಿ.

2.            ನಂಬರ್ ಒನ್ ಕರ್ನಾಟಕ @ 2047, ರಾಜ್ಯದ ಸುಮಾರು 30000 ಗ್ರಾಮಗಳ/ಬಡಾವಣೆಗಳಲ್ಲಿ ಊರಿಗೊಂದು /ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ @2047, ಸಿದ್ಧಪಡಿಸಲು, 30753 ನಾಲೇಡ್ಜ್ ಬ್ಯಾಂಕ್ @ 2047 ರಚನೆ.

3.            ಕರ್ನಾಟಕ ರಾಜ್ಯದ 31 ಜಿಲ್ಲೆಗಳ, 224 ವಿಧಾನಸಭಾ ಕ್ಷೇತ್ರಗಳ, ಭಾರತ ದೇಶದ 36 ರಾಜ್ಯಗಳ, ವಿಶ್ವದ 198/212 ದೇಶಗಳ ಅಭಿವೃದ್ಧಿ, ಸಂಸ್ಕøತಿ, ಇತಿಹಾಸದ ಅವಲೋಕನ.

4.            344 ಚುನಾಯಿತ ಮತ್ತು ನಾಮನಿರ್ದೇಶನ ಪ್ರತಿ ನಿಧಿಗಳ ಕ್ಷೇತ್ರಗಳ ಅಧ್ಯಯನ.

5.            ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಇಲಾಖೆಗಳ, ಯೋಜನೆವಾರು ಸಂಶೋಧನೆಗಳ ಮ್ಯೂಸಿಯಂ.