TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದ್ಯಾಂತ ರಚಿಸುತ್ತಿರುವ ಕೃಷಿ ಆಶ್ರಮಗಳ ನೇತೃತ್ವದಲ್ಲಿ
ನಾಲೇಡ್ಜ್ ಬ್ಯಾಂಕ್ @ 2047 ಮಾರ್ಗದರ್ಶನದಲ್ಲಿ
ನಂಬರ್ ಒನ್ ಕರ್ನಾಟಕ @ 2047 – ಪ್ರಥಮ ಆತ್ಮಾವಲೋಕನ ಸಭೆ.
ದಿನಾಂಕ:01.08.2025 ನೇ ಶುಕ್ರವಾರ ಸಮಯ: ಬೆಳಿಗ್ಗೆ 10 ಗಂಟೆಯಿಂದ ಆರಂಭ.
ಸ್ಥಳ: ಶಕ್ತಿಪೀಠ ಕ್ಯಾಂಪಸ್, ವಡ್ಡನಹಳ್ಳಿ ಪಕ್ಕ, ಬಗ್ಗನಡು ಕಾವಲ್ – ಪಿನ್ ಕೋಡ್ 577511, ಗೌಡನಹಳ್ಳಿ ಗ್ರಾಮ ಪಂಚಾಯಿತಿ. ಜೆಜಿ ಹಳ್ಳಿ ಹೋಬಳಿ, ಹಿರಿಯೂರು ತಾಲ್ಲೋಕು, ಚಿತ್ರದುರ್ಗ ಜಿಲ್ಲೆ, ಕರ್ನಾಟಕ ರಾಜ್ಯ, ಭಾರತ ದೇಶ.
1. ಶಕ್ತಿಪೀಠ ಕ್ಯಾಂಪಸ್‍ನ ವಿವಿಧ ಕಾಮಗಾರಿಗಳಿಗೆ ಸಲಹೆ, ಮಾರ್ಗದರ್ಶನ ನೀಡುವವರು ಹಾಗೂ ರಾಜ್ಯದ್ಯಾಂತ ರಚಿಸುತ್ತಿರುವ ಕೃಷಿ ಆಶ್ರಮಗಳಿಗೆ, ತಮ್ಮಲ್ಲಿರುವ ಜ್ಞಾನಗಳ ಸಲಹೆ, ಮಾರ್ಗದರ್ಶನ ನೀಡುವವರು, ತಮ್ಮ ಪರಿಣಿತಿ, ತಮಗೆ ನೀಡಬೇಕಾಗಿರುವ ಸೇವಾ ಶುಲ್ಕ ವಿವರಗಳೊಂದಿಗೆ ಬನ್ನಿ.
2. ಶಕ್ತಿಪೀಠ ಕ್ಯಾಂಪಸ್‍ನಲ್ಲಿ 1000 ಪ್ರಭೇದಗಳ ಗಿಡಗಳನ್ನು ಹಾಕುವುದರಿಂದ, ತಮ್ಮ ಪ್ರಧೇಶದಲ್ಲಿ ದೊರೆಯುವ ಪ್ರಭೇದಳ ಮಾಹಿತಿಗಳೊಂದಿಗೆ ಬನ್ನಿ
3. ಅಳಿವಿನಂಚಿನಲ್ಲಿರುವ ಬೀಜ,ಗಿಡ, ಬೇರು. ಬಳ್ಳಿ, ಕಡ್ಡಿಗಳ ಸಹಿತ ಬನ್ನಿ, ತಮ್ಮ ನಿಗಧಿತ ಶುಲ್ಕ ನೀಡಲಾಗುವುದು. ನಾಟಿ ಮಾಡಲು ಜಿಲ್ಲಾವಾರು ನಿರ್ಧಿಷ್ಟ ಸ್ಥಳ ನಿಗಧಿ ಪಡಿಸಲಾಗಿದೆ.
4. ತಮ್ಮ ಕನಸಿನ ಕೃಷಿ ಆಶ್ರಮಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಗ ಬೇಕಾದ ಯೋಜನೆಗಳ ವಿವರಗಳೊಂದಿಗೆ ಬನ್ನಿ.
5. ಪ್ರತಿ ವರ್ಷದ ಆತ್ಮಾವಲೋಕನದ ನಿರ್ಣಯಗಳ ಸಂಚಿಕೆಯನ್ನು, ಭಾಗವಹಿಸಿದವರ ವಿವರ ಮತ್ತು ಗ್ರೂಪ್ ಫೋಟೋ ಸಹಿತ ಹೊರತರಲಾಗುವುದು.
6. ಪ್ರತಿಯೊಂದು ಕೃಷಿ ಆಶ್ರಮಗಳಿಗೆ ರ್ಯಾಂಕಿಂಗ್ ನೀಡಲಾಗುವುದು.(ರೂಪುರೇಷೆ ಬಗ್ಗೆ ಮಾರ್ಗದರ್ಶನ ಮಾಡಿ)
7. ಭಾಗವಹಿಸಿದವರಿಗೆ ಸರ್ಟಿಫೀಕೇಟ್ ನೀಡಲಾಗುವುದು.
- ಗೂಗಲ್ ಫಾರಂನಲ್ಲಿ ನೊಂದಾಯಿಸಿಕೊಂಡಿರುವ ಕೃಷಿ ಆಶ್ರಮಗಳು ಮಾತ್ರ ಭಾಗವಹಿಸ ಬಹುದು.
- ಸಭೆಗೆ ಭಾಗವಹಿಸಲು ಉಚಿತ ನೋಂದಾವಣೆ ಕಡ್ಡಾಯ. ಹೆಚ್ಚಿನ ವಿವರಗಳಿಗೆ
- ಡಾ.ಬಿ.ಎಂ.ನಾಗಭೂಷಣ್ ರವರು, ಮಾರುತಿ ರಾವ್ ರವರು ಮತ್ತು ಸುಹೃತ್ ರವರನ್ನು ಸಂಪರ್ಕಿಸಿ.