23rd August 2025
Share

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್‍ನಲ್ಲಿ 1000 ಪ್ರಭೇದಗಳ ಗಿಡವನ್ನು ಹಾಕಿ, ವೈಜ್ಞಾನಿಕ ಸಂಶೋಧನೆಯೊಂದಿಗೆ ಮೌಲ್ಯವರ್ಧನೆ ಮಾಡುವ  ಗುರಿ ಇದೆ,  999 ನೇ ಪ್ರಭೇದದ ಗಿqವನ್ನು ಕೃಷಿ ಆಶ್ರಮಗಳ ನೇತೃತ್ವ ವಹಿಸಿರುವ ಕನ್ನೇರಿ ಶ್ರಿಗಳಿಂದ ಹಾಕಿಸುವ ಗುರಿ ಹೊಂದಲಾಗಿದೆ.

ದಿನಾಂಕ:01.08.2025 ರಂದು ನಡೆಯ ಬೇಕಿದ್ದ, ಕೃಷಿ ಆಶ್ರಮಗಳ ಸಭೆಯನ್ನು, ವಿವಿಧ ಕಾರಣಗಳಿಂದ ದಿನಾಂಕ:05.08.2025 ಕ್ಕೆ ಕೃಷಿ ಆಶ್ರಮಗಳ ಹರಿಕಾರರಾದ ಡಾ.ಎಂ.ನಾಗಭೂಷಣ್ ರವರು ಮುಂದೂಡಿದ್ದಾರೆ.

ಅಂದಿನಿಂದ ಶಕ್ತಿಪೀಠ ಕ್ಯಾಂಪಸ್‍ನಲ್ಲಿ, ಹಾಲಿ ಇರುವ ಪ್ರಭೇಧಗಳ ಡಿಜಿಟಲ್ ಮರಗಣತಿ ಆರಂಭಿಸಿ, ರಾಜ್ಯದ್ಯಾಂತ ಅಳಿವಿನಂಚಿನಲ್ಲಿ ಇರುವ ಪ್ರಭೇಧಗಳು ಸೇರಿದಂತೆ, 1000 ಪ್ರಭೇದಗಳ ಗಿಡಗಳನ್ನು ಹಾಕುವ ಕೆಲಸ ನಿರಂತರವಾಗಿ ನಡೆಯಲಿದೆ.

ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ ಶಕ್ತಿಪೀಠ ಕ್ಯಾಂಪಸ್‍ನಲ್ಲಿ, ಎಷ್ಟು ಪ್ರಭೇದಗಳ ಗಿಡಗಳನ್ನು ಬೆಳೆಸ ಬಹುದು ಎಂಬುದು ಒಂದು ಯಕ್ಷ ಪ್ರಶ್ನೆಯಾಗಿದೆ, ಈಗ ಹಾಕಿರುವ ಎಷ್ಟು ಗಿಡಗಳು ಹಾಳಾಗಿವೆ, ಎಷ್ಟು ಗಿಡಗಳು ಕೊರಗುತ್ತಿವೆ, ಎಷ್ಟು ಗಿಡಗಳು ಚೆನ್ನಾಗಿ ಬೆಳೆದಿವೆ ಎಂಬ ತಪಾಸಣೆಯೂ ಆರಂಭವಾಗಿದೆ.

ಇದೂವರೆಗೂ ವಿವಿಧ ಗಿಡಗಳನ್ನು ತಂದು ಹಾಕಿರುವವರ ಮಾಹಿತಿಯನ್ನು ಪಾರದರ್ಶಕವಾಗಿ ಪ್ರಕಟಿಸುವ ಆಲೋಚನೆಯೂ ಇದೆ. ಗೌಡನಹಳ್ಳಿ ಗ್ರಾಮ ಪಂಚಾಯಿತಿಯ ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ’ ಯ ಪಾತ್ರದ ಬಗ್ಗೆ ಸರ್ಕಾರಗಳ ಗಮನ ಸೆಳೆಯಲಾಗುವುದು.

1.            ಶಕ್ತಿಪೀಠ ಕ್ಯಾಂಪಸ್‍ನ ಮೊಟ್ಟ ಮೊದಲ ಕೆಲಸ ಒಂದು ಕೋಟಿ ಲೀಟರ್ ಮಳೆ ನೀರು ಸಂಗ್ರಹದ ಗುರಿ ಕಳೆದ 5 ವರ್ಷಗಳಿಂದ ನಿರಂತರವಾಗಿ ಫಲಕೊಟ್ಟಿದೆ,

2.            ಎರಡನೆ ಹಂತದಲ್ಲಿ 1000 ಪ್ರಭೇದಗಳ ಗಿಡಗಳನ್ನು ಹಾಕಿ ಪೋóಷಿಸಲಾಗುವುದು.

3.            ಮೂರನೆ ಹಂತದಲ್ಲಿ ಕೇಂದ್ರ ಸರ್ಕಾರದ 30 ನದಿ ಜೋಡಣೆಗಳ ಪ್ರಾತ್ಯಾಕ್ಷಿಕೆಯನ್ನು, ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಅನುಮೋದನೆ ಪಡೆಯಲಾಗುವುದು.

4.            ನಾಲ್ಕನೆ ಹಂತದಲ್ಲಿ ವಿಶ್ವದ 108 ಶಕ್ತಿಪೀಠಗಳ ನಿಖರವಾದ ಮಾಹಿತಿಯೊಂದಿಗೆ, ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯ ಅನುಮೋದನೆಯೊಂದಿಗೆ ಪ್ರಾತ್ಯಾಕ್ಷಿಕೆ ಸ್ಥಾಪಿಸುವ ಆಲೋಚನೆ ಇದೆ.

5.            ಐದನೆ ಹಂತದಲ್ಲಿ ಕರ್ನಾಟಕ ರಾಜ್ಯದಲ್ಲಿ ವಾಸವಿರುವ ಎಲ್ಲಾ ಧರ್ಮಗಳ/ಜಾತಿ/ಉಪಜಾತಿಗಳ ಪ್ರಮುಖ ಧಾರ್ಮಿಕ ಕೇಂದ್ರಗಳು ಮತ್ತು ಅವರು ಪೂಜಿಸುವ ಮರಗಿಡಗಳ ಮಾಹಿತಿ ಸಂಗ್ರಹ ಮಾಡಲಾಗುವುದು. ದೇವರ ಇಚ್ಚೆಯಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜನಗಣತಿ ಮಾಡುತ್ತಿರುವುದು ಒಂದು ಒಳ್ಳೆಯ ಸುವರ್ಣ ಅವಕಾಶ ದೊರಕಿದೆ.

ನಂಬರ್ ಒನ್ ಕರ್ನಾಟಕ @ 2047 ಅಧ್ಯಯನ, ದಿನಾಂಕ:01.08.2025 ರಿಂದ ಶಕ್ತಿಪೀಠ ಕ್ಯಾಂಪಸ್‍ನಲ್ಲಿ ಇರುವ ಕೊಟ್ಟಿಗೆ ಮನೆ’ ಯಲ್ಲಿ ಆರಂಭವಾಗಿ, ನಿರಂತರವಾಗಿ 2047 ರವರೆಗೂ ನಡೆಯಲು ಪ್ರಪಂಚದ ಮಟ್ಟದ ಒಂದು ವ್ಯವಸ್ಥಿತ ಸಂಘಟನೆಯ ಅಗತ್ಯವಿದೆ.

ಕೃಷಿ ಆಶ್ರಮಗಳ ಸಂಚಾಲಕತ್ವದಲ್ಲಿ, ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳ ವಿದ್ಯಾರ್ಥಿಗಳ ನೇತೃತ್ವದಲ್ಲಿ, ನಾಲೇಡ್ಜ್ ಬ್ಯಾಂಕ್ @ 2047’ ರಚಿಸುವ ಆಲೋಚನೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ, ದಿನಾಂಕ:05.08.2025 ರಂದು ನಡೆಯುವ ಕೃಷಿ ಆಶ್ರಮಗಳ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

31 ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಲು ಮನವಿ ಮಾಡಲಾಗಿದೆ. 31 ಜಿಲ್ಲೆಗಳಿಗೆ ನಿಗಧಿ ಪಡಿಸಿರುವ ವಿಭಾಗದಲ್ಲಿ, ಈಗಾಗಲೇ ಹಾಕಿ ಬೆಳೆಸುತ್ತಿರುವ ಗಿಡಗಳು ಸೇರಿದಂತೆ, ಯಾವ ಪ್ರಭೇದದ ಎಷ್ಟು ಗಿಡಗಳನ್ನು ಹೊಸದಾಗಿ ಹಾಕಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.