TUMAKURU:SHAKTHIPEETA FOUNDATION
ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರು ಭಾರತ ದೇಶದ 2024-25 ರ ತಲಾ ಆದಾಯದಲ್ಲಿ, ಕರ್ನಾಟಕ ರಾಜ್ಯ ನಂಬರ್ ಒನ್ ಆಗಿದೆ. ಇದು ನಮ್ಮ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳಿಂದ ಆಗಿದೆ ಎಂದು ಹೇಳುತ್ತಿದ್ದಾರೆ. ನಿಜಕ್ಕೂ ಇದೊಂದು ಗಂಭೀರ ವಿಚಾರ, ಈ ಬಗ್ಗೆ ಸಾಕಷ್ಟು ಸಂಶೋಧನೆ, ಚರ್ಚೆ ಅಗತ್ಯವಿದೆ.
ರಾಜ್ಯದ ಮುಖ್ಯಮಂತ್ರಿಯವರು ಘೋಷಣೆ ಮಾಡುತ್ತಿರುವುದು ಸುಲಭದ ಮಾತಲ್ಲ. ಆರ್ಥಿಕ ತಜ್ಞರು, ವಿರೋಧ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದು ಸೂಕ್ತವಾಗಿದೆ. ನಿಜವಾದ ಕಾರಣ ಹುಡುಕಿ, ಅರ್ಹರಿಗೆ ನಾಗರೀಕ ಸನ್ಮಾನ ಮಾಡುವುದು, ಕರ್ನಾಟಕ ರಾಜ್ಯದ ಜನತೆಯ ಕರ್ತವ್ಯವಾಗಿದೆ. ಅದೇ ರೀತಿ ಯಾವ ಯಾವ ಅಂಶಗಳಲ್ಲಿ, ಕೇಂದ್ರ ಸರ್ಕಾರ ನೀಡುತ್ತಿರುವ ರ್ಯಾಂಕಿಂಗ್‍ನಲ್ಲಿ, ನಮ್ಮ ರಾಜ್ಯ ಸರ್ಕಾರ ಹಿಂದೆ ಬಿದ್ದಿವೆಯೋ ಅವರಿಗೆ ಮನವರಿಕೆ ಮಾಡುವುದು ಅಷ್ಟೇ ಮುಖ್ಯವಾಗಿದೆ.
ನಮ್ಮ ಸಂಸ್ಥೆ 2047 ರ ವೇಳೆಗೆ ಎಲ್ಲಾ ಅಂಶಗಳಲ್ಲಿಯೂ, ನಂಬರ್ ಒನ್ ಕರ್ನಾಟಕ ಮಾಡಲು ಶ್ರಮಿಸಲು ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಜಾಗೃತಿ ಮಾಡಿಸಲು ಶ್ರಮಿಸುತ್ತಿದೆ. ಈಗಲೇ ನಂಬರ್ ಒನ್ ಆಗಿರುವ ಎಲ್ಲಾ ಅಂಶಗಳಿಗೆ ಖುಷಿ ಪಡಲೇ ಬೇಕು.