TUMAKURU:SHAKTHIEETA FOUNDATION
ಕೃಷಿ ಆಶ್ರಮಗಳ ಸಂಚಾಲಕತ್ವದಲ್ಲಿ, ವಿದ್ಯಾರ್ಥಿಗಳ ನೇತೃತ್ವದಲ್ಲಿ, ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆವರೆಗೂ, ರಾಜ್ಯದ ಲೋಕಸಭಾ, ರಾಜ್ಯಸಭಾ, ವಿಧಾನಸಭಾ,ವಿಧಾನಪರಿಷತ್ ಮತ್ತು ದೆಹಲಿ ಪ್ರತಿನಿಧಿಗಳ, ಅವರವರ ವ್ಯಾಪ್ತಿಯ ಕಾರ್ಯಕ್ರಮಗಳಿಗೆ ಪೂರಕವಾಗಿ, ಅವರವರ ಅಧ್ಯಕ್ಷತೆಯಲ್ಲಿ, ವಿಜ್ಞಾನ ಮತ್ತು ಸಂಶೋಧನೆಯ ಅರಿವು ಮೂಡಿಸುವ ಮಹತ್ವದ ಯೋಜನೆಗೆ ಚಾಲನೆ ನೀಡಲು, ಕರ್ನಾಟಕ ರಾಜ್ಯದ ಕೃಷಿ ಆಶ್ರಮಗಳ ನಿಯೋಗ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್.ಎಸ್.ಬೋಸರಾಜ್ ರವರೊಂದಿಗೆ ಸಮಾಲೋಚನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ರಾಜ್ಯದ 344 ಕೃಷಿ ಆಶ್ರಮಗಳು, ವರ್ಷದಲ್ಲಿ ಕನಿಷ್ಠ 4 ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ತಲಾ 132 ನಾಲೇಡ್ಜಬಲ್ ಪರ್ಸನ್‍ಗಳನ್ನು ಗುರುತಿಸಿ, ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆಯ ಕನಿಷ್ಠ ಒಬ್ಬ ರೈತ ವಿಜ್ಞಾನಿ, ಆಯಾ ವ್ಯಾಪ್ತಿಯ ಸಂಶೋಧಕರಿಗೆ, ಅವರ ಉದ್ದೇಶ, ಗುರಿಗಳನ್ನು ತಲುಪಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವು ಪಡೆಯಲು ಸಲಹೆ, ಮಾರ್ಗದರ್ಶನ ನೀಡಲು ಯೋಚಿಸಿದ್ದಾರೆ.
ಕೃಷಿ ಆಶ್ರಮಗಳ ರಾಜ್ಯ ಮಟ್ಟದ ಕಚೇರಿ, ನಾಲೇಡ್ಜಬಲ್ ಪರ್ಸನ್ ಮ್ಯೂಸಿಯಂ ಮತ್ತು ಕ್ಯಾಂಪಸ್ ಸ್ಥಾಪಿಸಿ, ವಿಶ್ವದ ಎಲ್ಲಾ ದೇಶಗಳ, ದೇಶದ ಎಲ್ಲಾ ರಾಜ್ಯಗಳ, ರಾಜ್ಯದ ಎಲ್ಲಾ ಗ್ರಾಮ/ಬಡಾವಣೆಗಳ ಜ್ಞಾನಿಗಳೊಂದಿಗೆ ವಿಚಾರ ವಿನಿಮಯ ಮಾಡುವ ಮೂಲಕ ಕೃಷಿ ಸಂಶೋದನೆಗಳನ್ನು ನಿರಂತರವಾಗಿ ಮಾನಿಟರ್ ಮಾಡಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಜನವರಿ 2026 ರಲ್ಲಿ ಅಂತರರಾಷ್ಟ್ರೀಯ ಮಟ್ಟದ ರೈತ ವಿಜ್ಞಾನಿಗಳ, ನಾಲೇಡ್ಜಬಲ್ ಪರ್ಸನ್‍ಗಳ ಮತ್ತು ಅಗ್ರಿ ಟೂರಿಸಂ ಸಮಾವೇಶ ನಡೆಸಲು ರೂಪುರೇಷೆ ಸಿದ್ದತೆ ಮಾಡುತ್ತಿದ್ದಾರೆ.
ಈ ಮೂಲಕ ಕೃಷಿ ಆಶ್ರಮಗಳ ಗುರಿ ಮತ್ತು ಉದ್ದೇಶಗಳನ್ನು, ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿ, ರೈತ ಸಂಶೋಧನೆ ಆಧಾರಿತ ಮೌಲ್ಯ ವರ್ಧಿತ ಉತ್ಪನ್ನಗಳ ಮಹತ್ವದ ಅರಿವು ಮೂಡಿಸಲು ಮುಂದಾಗಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.

ಬೆಂಗಳೂರಿನ ವನಲೋಕ ಫೌಂಡೇಷನ್‍ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಡಾ. ಬಿ.ಎಂ.ನಾಗಭೂಷಣ್, ಡಾ. ಜಗನ್ನಾಥ್, ಡಾ.ರೂಪ, ಶ್ರೀವಾತ್ಸವ, ರಾಮಚಂದ್ರ ಭಟ್, ಸುಹೃತ್ ಉಜ್ಜನಿ ಇನ್ನೂ ಮುಂತಾದವರು ಭಾಗವಹಿಸಿದ್ದರು