13th December 2025
Share

TUMAKURU: SHAKTHI PEETA FOUNDATION

ರೈತರು ದೇಶದ ಬೆನ್ನೆಲುಬು, ಶೇ 80 ರಷ್ಟು ಇರುವ ರೈತರ ಸಂಶೋಧನೆಗಳಿಗೆ ಆಧ್ಯತೆ ನೀಡಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್.ಎಸ್.ಬೋಸರಾಜ್ ರವರು ಘೋóಷಣೆ ಮಾಡಿದರು.

ದಿನಾಂಕ:07.08.2025 ರಂದು ಬೆಂಗಳೂರಿನ ವಿಕಾಸ ಸೌಧದ ಅವರ ಕಚೇರಿಯಲ್ಲಿ, ರಾಜ್ಯದ 344 ಕೃಷಿ ಆಶ್ರಮಗಳ ಪರವಾಗಿ ಭೇಟಿ ಮಾಡಿದ್ದ ನಿಯೋಗದೊಂದಿಗೆ ಮಾತನಾಡುತ್ತಾ ಹೇಳಿದರು.

ನಿಯೋಗದಲ್ಲಿ ನನ್ನ ಜೊತೆ ಡಾ.ನಾಗಭೂಷಣ್, ಡಾ.ಜಗನ್ನಾಥ್ ರಾವ್, ಮಹೇಶ್‍ಕುಮಾರ್, ಶಿವಣ್ಣ, ಸಿದ್ದೇಶ್, ಲಂಭೋದರ್ ಭಟ್, ಸುಹೃತ್, ಮಧೂರನಾಥ್  ಇದ್ದರು.

ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್‍ಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಬೇಡಿಕೆಗಳ ಬಗ್ಗೆ, ಕರ್ನಾಟಕ ಸಂಶೋಧನೆ ಪಾಲಿಸಿ ಅಡಿಯಲ್ಲಿ, ಬರುವ ಪ್ರಸ್ತಾವನೆಗಳ ಬಗ್ಗೆ, ತಮ್ಮ ಇಲಾಖೆಯ ನಿರ್ಧೇಶಕರಾದ ಸದಾಶಿವ ಪ್ರಭು ರವರೊಂದಿಗೆ ಚರ್ಚಿಸಿ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು, ಅವರ ಆಪ್ತ ಕಾರ್ಯದರ್ಶಿ ವೀರಭಧ್ರ ಹಂಚಿನಾಳ ಮತ್ತು ಓಎಸ್‍ಡಿ ರುದ್ರೇಶ್ ರವರಿಗೆ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದರು.

ಹಳ್ಳಿಯ ರೈತರ ಸಂಶೋಧನೆಗಳನ್ನು ಗಮನಿಸಿದರೆ, ಯಾವುದೇ ವಿಜ್ಞಾನಿಗೂ ಕಡಿಮೆ ಇರುವುದಿಲ್ಲ, ಆದರೆ ಅವರನ್ನು ಗುರುತಿಸಿ, ಬೆನ್ನು ತಟ್ಟಿ ಪ್ರೋತ್ಸಾಹ ನೀಡುವುದರ ಜೊತೆಗೆ ನಿರಂತರವಾಗಿ ಮಾನಿಟರಿಂಗ್ ಮಾಡುವ ವ್ಯವಸ್ಥೆ ಆಗಬೇಕಿದೆ. ಟ್ರೆಡಿಷನಲ್ ನಾಲೇಡ್ಜ್ ಉಳಿಸುವ ಕರ್ತವ್ಯ ನಮ್ಮದಾಗಿದೆ ಎಂದರು.

ಸ್ವಾತಂತ್ರ್ಯಕ್ಕೆ ಮೊದಲು, 1947 ರಿಂದ 2025 ರವರೆಗೆ ಆಗಿರುವ ಸಂಶೋಧನೆಗಳು ಮತ್ತು 2047 ರವರೆಗೂ ಆಗಬೇಕಿರುವ ಸಂಶೋಧನೆಗಳ ನಾಲೇಡ್ಜ್ ಬ್ಯಾಂಕ್ ಮಾಡುವುದು ಸಹ ಒಳ್ಳೆಯ ಪ್ರಸ್ತಾವನೆ. ಎಲ್ಲಾ ವಿಶ್ವ ವಿದ್ಯಾನಿಲಯಗಳ ಸಹಭಾಗಿತ್ವದಲ್ಲಿ, ಕಾಲೇಜು ವಿದ್ಯಾರ್ಥಿಗಳ ನೇತೃತ್ವದಲ್ಲಿ, ಒಂದು ಆಂದೋಲನ ರೂಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಕೃಷಿಕರು ವಿಜ್ಞಾನ ಸಚಿವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸುತ್ತಿರುವುದು ದೇಶಕ್ಕೆ ಮಾದರಿಯಾಗಿದೆ, ತಮ್ಮ ಅಮೂಲ್ಯವಾದ ಸಮಯವನ್ನು ನೀಡಿ, ಪ್ರತಿಯೊಂದು ಅಂಶಗಳ ಬಗ್ಗೆ ಪ್ರತಿಕ್ರೀಯೆ ನೀಡಿದ್ದÀಕ್ಕೆ ನಿಯೋಗದ ಸದಸ್ಯರು ಹೃದಯ ತುಂಬಿ ಅಭಿನಂದಿಸಿದರು.