TUMAKURU:SHAKTHI PEETA FOUNDATION
ಸ್ವಾತಂತ್ರ್ಯ ಬಂದು 100 ವರ್ಷಗಳತ್ತ ದಾಪುಗಾಲು ಇಡುತ್ತಿದೆ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪರಿಕಲ್ಪನೆ, ವಿಕಸಿತ ಭಾರತ @ 2047, ರೈತರ ದ್ವಿಗುಣವಾಗ ಬೇಕು ಎಂಬುದಾಗಿದೆ.
ಆದರೇ ವಿಪರ್ಯಾಸ ಎಂದರೆ, ಇದೂವರೆಗೂ ಭೂಮಿಯ ಮೇಲೆ ಹುಟ್ಟುವ ಕಳೆ- ಬೆಳೆಗಳ ಬಗ್ಗೆ ಮಾಹಿತಿ ಒಂದೇ ಕಡೇ ಎಲ್ಲೂ ಇಲ್ಲವಂತೆ. ಆದರೇ ಎಲ್ಲದರ ಬಗ್ಗೆಯೂ ಒಂದಲ್ಲ ಒಂದು ಕಡೆ ಸಂಶೋಧನೆ ಆಗಿಯೇ ಇರುತ್ತದೆ.
ಎಲ್ಲಾ ಕಳೆ- ಬೆಳೆಗಳ ಬಗ್ಗೆ ಜ್ಞಾನಿಗಳು ಸಾಕಷ್ಟು ಜನರು ಇದ್ದಾರೆ, ಅವರ ಸಂಶೋದನೆಗಳು, ಅಧ್ಯಯನ ವರಧಿಗಳು, ಅನುಭವಗಳನ್ನು ಒಂದೇ ರೂಪ್ ನಡಿ ತರುವ ಕೆಲಸವನ್ನು ‘ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್’ ಮಾಡುವುದು ಅಗತ್ಯವಾಗಿದೆ.
ನಿರ್ಧಿಷ್ಟ ಕಳೆ-ಬೆಳೆ ಯಾವ ಇಲಾಖೆಯಡಿ ಬರುತ್ತದೆಯೋ, ಆ ಇಲಾಖೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಬೇಕಿದೆ. ಜೊತೆಗೆ ಕೇಂದ್ರ ಸರ್ಕಾರವೂ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಮೂಲಕ ಮತ್ತು ವಿವಿಧ ಇಲಾಖೆಗಳ ಯೋಜನೆಗಳಿಂದ, ರಾಜ್ಯ ಸರ್ಕಾರದ ಮೂಲಕ, ಯಾವುದಾದರೊಂದು ವಿಶ್ವ ವಿದ್ಯಾನಿಲಯದ ಮುಖಾಂತರ, ಕೃಷಿ ಆಶ್ರಮಗಳಿಗೆ ಬಿಡುಗಡೆ ಮಾಡುವುದು ಸೂಕ್ತವಾಗಿದೆ. ಇದು ಪ್ರಜಾ ಪ್ರಭುತ್ವದ ಹಾದಿಯೂ ಆಗಿದೆ.
ಇದು ರೈತ ವಿಜ್ಞಾನಿಗಳ ಸಂಶೋಧನೆಗೆ ಅನೂಕೂಲವಾಗಲಿದೆ. ಸರ್ಕಾರ ರೈತ ವಿಜ್ಞಾನಿಗಳನ್ನು ಗುರುತಿಸಿ, ಪ್ರೋತ್ಸಾಹ ನೀಡುವುದು ಒಳ್ಳೆಯ ಬೆಳವಣಿಗೆ, ಈ ಹಿನ್ನಲೆಯಲ್ಲಿ ಕೃಷಿ ಆಶ್ರಮಗಳು ಒಂದು ಕರಡು ಪ್ರಸ್ತಾವನೆ ಸಿದ್ಧಪಡಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲ್ಲಿಸಲು ಕೆಲವು ಅಂಶಗಳನ್ನು ಪಟ್ಟಿ ಮಾಡಲಾಗಿದೆ.
ಇನ್ನೂ ಯಾವುದಾದರೂ ವಿಷಯ ಸೇರ್ಪಡೆ ಅಗತ್ಯವಿದ್ದರೆ ಅಥವಾ ಯಾವುದಾದರೂ ಅಂಶ ಅನಗತ್ಯವಾಗಿದ್ದರೆ, ಸಲಹೆ, ಮಾರ್ಗದರ್ಶನ ನೀಡಲು ಬಹಿರಂಗ ಮನವಿ.
ನೇರಲೆ ಬೆಳೆ ಹಾಕಿರುವ ಕಡೆ, ಕೃಷಿ ಆಶ್ರಮಗಳಿಗೆ ಇಷ್ಟ ಪಡುವ ಬೆಳೆ ಅಥವಾ ಕಳೆ ಹಾಕಬೇಕಿದೆ. ಅರಣ್ಯ ಇಲಾಖೆ ಇರುವ ಕಡೆ, ಕೃಷಿ ಆಶ್ರಮಗಳು ಆಯ್ಕೆ ಮಾಡಿಕೊಳ್ಳುವ ಕಳೆ-ಬೆಳೆ ಯಾವ ಇಲಾಖೆಗೆ ಬರುತ್ತದೆಯೋ, ಆ ಇಲಾಖೆ ಸೇರ್ಪಡೆ ಮಾಡಬೇಕಿದೆ.
ಇದರಿಂದ ಕೃಷಿ ಆಶ್ರಮಗಳಿಗೆ ದೇಶ- ವಿದೇಶಗಳ ಜನರು ಭೇಟಿ ನೀಡುವ ಅವಕಾಶಗಳು ಹೆಚ್ಚುತ್ತವೆ, ನಿರ್ಧಿಷ್ಟ ಬೆಳೆ ಬಗ್ಗೆ ಆಸಕ್ತಿ ಇರುವ ರಾಜ್ಯದ, ದೇಶದ ರೈತರಿಗೂ ವರದಾನವಾಗಲಿದೆ. ಯಾವ ಬೆಳೆಗೆ ಎಷ್ಟು ನೀರಿನ ಅಗತ್ಯವಿದೆ ಎಂಬ ಅರಿವು ಸಹ ಬಹಳ ಮುಖ್ಯವಾಗಲಿದೆ.



