13th September 2025
Share

TUMAKURU:SHAKTHI PEETA FOUNDATION

ಕೃಷಿ ಆಶ್ರಮಗಳ ನಿಯೋಗಕ್ಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್.ಎಸ್.ಬೋಸರಾಜ್ ರವರು ನೀಡಿರುವ ಸಲಹೆ ಮೇರೆಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕರ ಜೊತೆ ಸಮಾಲೋಚನೆ ಮಾಡುವ ಮುನ್ನ ಹಲವಾರು ಹಂತದ ಸಿದ್ಧತೆ, ಪ್ರಜಾ ಪ್ರಭುತ್ವದ ಮಾರ್ಗದಲ್ಲಿ, ಪಾರದರ್ಶಕವಾಗಿ ನಡೆಯ ಬೇಕಿದೆ.

ಕೇಂದ್ರ ಸರ್ಕಾರ ‘ನ್ಯಾಷನಲ್ ರೀಸರ್ಚ್ ಫೌಂಡೇಷನ್’ ಸ್ಥಾಪಿಸಿ, ಒಂದು ಲಕ್ಷ ಕೋಟಿ ಅನುದಾನದ ಯೋಜನೆ ರೂಪಿಸುತ್ತಿದೆ.

ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ  ರೀಸರ್ಚ್ ಫೌಂಡೇಷನ್’ ಸ್ಥಾಪಿಸಲು ಸಿದ್ಧತೆ ನಡೆಸಿದೆ.

 ಕೃಷಿ ಆಶ್ರಮಗಳ ಪ್ರಮುಖರು, ಒಂದೊಂದು ನಿರ್ಧಿಷ್ಠ ಬೆಳೆ/ಕಳೆವಾರು ಸಂಶೋಧನೆ, ಮ್ಯೂಸಿಯಂ, ನಾಲೇಡ್ಜ್ ಬ್ಯಾಂಕ್, ಪ್ರಸ್ತಾವನೆಗಳನ್ನು ಸಲಿಸಬೇಕಿದೆ.

ಸರ್ಕಾರ ಸಂಶೋಧನೆ ಪಾಲಿಸಿ ಪ್ರಕಾರ, ಈ ಪ್ರಸ್ತಾವನೆಯನ್ನು ಪರಿಗಣಿಸಲು ಒಂದು ಮಾರ್ಗದರ್ಶಿ ಸೂತ್ರ ಸಿದ್ಧಪಡಿಸ ಬೇಕಿದೆ. ಉನ್ನತ ಮಟ್ಟದ ಸಮಿತಿಗಳ ಮಟ್ಟದಲ್ಲಿ, ಈ ಬಗ್ಗೆ ಸಾಕಷ್ಟು ಕಸರತ್ತು ನಡೆಸಿ, ಒಂದು ನಿರ್ಧಾರಕ್ಕೆ ಬಂದು ಸಚಿವ ಸಂಪುಟದ ಅನುಮೋದನೆ ಮಾಡಿ ‘ಗೆಜಿಟ್ ನೋಟಿಫೀಕೇಷನ್ ‘ ಮಾಡಬೇಕಿದೆ.

ಕೃಷಿ ಆಶ್ರಮಗಳು ಸಲ್ಲಿಸುವ ಪ್ರಸ್ತಾವನೆ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸುವಾಗ ಗಮನಿಸಬೇಕಾದ ಒಂದು ಅಂಶವಾಗಲಿದೆ, ಎಲ್ಲಾ ಪ್ರಕ್ರೀಯೆಗಳು ಪೂರ್ಣಗೊಂಡ, ನಂತರ ನಿಯಾಮುನುಸಾರ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ಘೋಷಣೆ ಮಾಡಬೇಕಿದೆ.

ಕೃಷಿ ಆಶ್ರಮಗಳ ಪ್ರಸ್ತಾವನೆ ಸ್ವೀಕಾರ ಆಗಬಹುದು ಅಥವಾ ತಿರಸ್ಕಾರ ಆಗಬಹುದು, ಅದು ಸರ್ಕಾರದ ನಿರ್ಧಾರ, ನಮ್ಮದು ಸಲಹೆ ಮಾತ್ರ.

ಒಂದು ಸಾಮಾನ್ಯ ಪ್ರಸ್ತಾವನೆ ಕರಡು ಪ್ರತಿ ಸಿದ್ಧಪಡಿಸಿ, 344 ಕೃಷಿ ಆಶ್ರಮಗಳ ಪ್ರಮುಖರು ಅಥವಾ ಸಂಚಾಲಕರ ಹೆಸರಿನಲ್ಲಿ ಸಲ್ಲಿಸೋಣ, ಸರ್ಕಾರಗಳ ಮೇಲೆ ಒತ್ತಡ ತರೋಣ, ಒಂದು ವೇಳೆ ಇದು ಜಾರಿಯಾದರೇ ಅದಕ್ಕಿಂತ ಸಂತೋಷ ಇನ್ನೇನಿದೆ’.

1.            ಕೃಷಿ ಆಶ್ರಮಗಳ ಕರಡು ಪ್ರಸ್ತಾವನೆ.

2.            ಬೆಳೆ/ಕಳೆವಾರು, ಸಂಶೋಧನೆ, ಮ್ಯೂಸಿಯಂ, ಸ್ಟಾರ್ಟ್ ಅಫ್ ಕರಡು ಪ್ರಸ್ತಾವನೆ.

3.            ಕೃಷಿ ಆಶ್ರಮಗಳ ರಾಜ್ಯ ಮಟ್ಟದ ಕಚೇರಿ ಕರಡು ಪ್ರಸ್ತಾವನೆ

4.            ಕೃಷಿ ಆಶ್ರಮಗಳ ರಾಜ್ಯ ಮಟ್ಟದ ಮೌಲ್ಯವರ್ಧಿತ ಉತ್ಪನ್ನಗಳ ಗುಣಮಟ್ಟ, ಸಂಶೋಧನೆ ಮ್ಯೂಸಿಯಂ ಕರಡು ಪ್ರಸ್ತಾವನೆ.

5.            ಕೃಷಿ ಆಶ್ರಮಗಳ ರಾಜ್ಯ ಮಟ್ಟದ  ಕ್ಯಾಂಪಸ್ ಕರಡು ಪ್ರಸ್ತಾವನೆ

6.            ವಿವಿಧ ಇಲಾಖಾವಾರು ಆರ್ ಅಂಡ್ ಡಿ ಸೆಲ್ ಕರಡು ಪ್ರಸ್ತಾವನೆ.

7.            ಬಯೋಡೈವರ್ಸಿಟಿ ಮ್ಯಾನೇಜ್‍ಮೆಂಟ್ ಕಮಿಟಿಯಲ್ಲಿ ಕೃಷಿ ಆಶ್ರಮಗಳ ಪ್ರಮುಖರನ್ನು ಸೇರ್ಪಡೆ ಮಾಡುವ ಕರಡು ಪ್ರಸ್ತಾವನೆ.

8.            ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಲ್ಲಿ, ಹೊಸದಾಗಿ ಸೇರ್ಪಡೆ ಮಾಡುವ ಅಂಶಗಳು ಮತ್ತು ಕೃಷಿ ಆಶ್ರಮಗಳು ಅವೇರ್‍ನೆಸ್ ಮಾಡುವ ಕರಡು ಪ್ರಸ್ತಾವನೆ.

9.            ಆರ್ ಅಂಡ್ ಡಿ ಮಾನಿಟರಿಂಗ್ ಸೆಲ್ ಕರಡು ಪ್ರಸ್ತಾವನೆ.

10.         ಹಾಲಿ ಇರುವ ವಿವಿಧ ಹಂತದ ವಿಜ್ಞಾನ ಕೇಂದ್ರಗಳಲ್ಲಿ ಟ್ರೆಡಿÀಷನಲ್ ನಾಲೇಡ್ಜ್ ಅಳವಡಿಕೆ ಕರಡು ಪ್ರಸ್ತಾವನೆ.

11.         ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ರೈತ ವಿಜ್ಞಾನಿಗಳ ಮತ್ತು ಅಗ್ರಿ ಟೂರಿಸಂ ಸಮಾವೇಶದ ಕರಡು ಪ್ರಸ್ತಾವನೆ.

12.         ಕೃಷಿ ಆಶ್ರಮಗಳಲ್ಲಿ ಕಾರ್ಯಗಾರ ನಡೆಸುವ, ಅರ್ಹರನ್ನು ಗುರುತಿಸಿ ಮಾನಿಟರಿಂಗ್ ಮಾಡುವ ಹಾಗೂ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಮಾಡುವ ಬಗ್ಗೆ ಕರಡು ಪ್ರಸ್ತಾವನೆ.

13.         ಕರ್ನಾಟಕ ರಾಜ್ಯದ ಜಲಸಂಗ್ರಹಾಗಾರಗಳ ಸುತ್ತ ಮುತ್ತ ಅಥವಾ ಸರ್ಕಾರಿ ಜಮೀನು/ ಖಾಸಗಿ ಜಮೀನುಗಳಲ್ಲಿ ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣ ಮಾಡಿ, ಒಂದೇ ದಿನ ಗಿಡ ಹಾಕಿ ದಾಖಲೆ ಮಾಡುವ ಕರಡು ಪ್ರಸ್ತಾವನೆ.

14.         ನಾಲೇಡ್ಜ್ ಬ್ಯಾಂಕ್ @ 2047 ಕರಡು ಪ್ರಸ್ತಾವನೆ.

15.         ಸಂಶೋಧಕ ಎಂದರೆ ಯಾರು ? ರೈತ ಸಂಶೋಧಕ/ವಿಜ್ಞಾನಿ/ಡಾಕ್ಟರೇಟ್ ಘೋಷಣೆ ಬಗ್ಗೆ ಕರಡು ಪ್ರಸ್ತಾವನೆ.

16.         344 (28 ಲೋಕಸಭಾ, 14 ರಾಜ್ಯಸಭಾ, 225 ವಿಧಾನಸಭಾ, 75 ವಿಧಾನ ಪರಿಷತ್, ಇಬ್ಬರು ದೆಹಲಿ ವಿಶೇó ಪ್ರತಿ ನಿಧಿ ಸೇರಿ) ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ, ಅವರವರ ಕಾರ್ಯಕ್ಷೇತ್ರ ವ್ಯಾಪ್ತಿಯ ಆರ್ ಅಂಡ್ ಡಿ ಸಲಹಾ ಸಮಿತಿ ರಚನೆ ಕರಡು ಪ್ರಸ್ತಾವನೆ.

17.         ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಲ್ಲಿರುವ, 115 ಅಧ್ಯಯನ ಪೀಠಗಳಿಗೆ, ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಿ, ನಿರಂತರವಾಗಿ 2047 ರವರೆಗೆ ಮಾನಿಟರಿಂಗ್ ಮಾಡುವ ಕರಡು ಪ್ರಸ್ತಾವನೆ.

18.         ಸೆಪ್ಟೆಂಬರ್ ತಿಂಗಳಿನಲ್ಲಿ, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿರುವ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀoದ ಸಹಭಾಗಿತ್ವದಲ್ಲಿ, ಕೃಷಿ ಆಶ್ರಮಗಳ ಸಲ್ಲಿಸುವ, ವಿವಿಧ ಪ್ರಸ್ತಾವನೆಗಳ ಬಗ್ಗೆ ರಾಜ್ಯ ಮಟ್ಟದ ಕಾರ್ಯಾಗಾರ ನಡೆಸುವ ಕರಡು ಪ್ರಸ್ತಾವನೆ.

ದಿನಾಂಕ:11.08.2025 ರಂದು ಬೆಂಗಳೂರಿನ ಅರಣ್ಯ ಭವನದಲ್ಲಿ ಇರುವ, ವನಲೋಕ ಫೌಂಡೇಷನ್ ಕಚೇರಿಯಲ್ಲಿ, ಮಧ್ಯಾಹ್ನ 2 ಗಂಟೆಗೆ ನಡೆಯುವ ಕೃಷಿ ಆಶ್ರಮಗಳ ಸಭೆಯಲ್ಲಿ, ಮೇಲ್ಕಂಡ ಪ್ರಸ್ತಾವನೆಗಳ ಅಗತ್ಯ ಮತ್ತು ಇನ್ನೂ ಯಾವುದಾದರೂ ಸೇರ್ಪಡೆ ಮಾಡುವ ಬಗ್ಗೆ ಚರ್ಚೆ ಮಾಡಿ, ವಿವಿಧ ಪ್ರಸ್ತಾವನೆಗಳಿಗೆ ಸಂಚಾಲಕರನ್ನು ಕೃಷಿ ಆಶ್ರಮಗಳ ಹರಿಕಾರರಾದ ಡಾ.ಬಿ.ಎಂ.ನಾಗಭೂಷಣ್ ರವರು ಪ್ರಕಟಸಲಿದ್ದಾರೆ, ಈಗಾಗಲೇ ಪ್ರಕ್ರಿಯೇ ಆರಂಭಿಸಿದ್ದಾರೆ.

ಆಸಕ್ತರು ಸಭೆಗೆ ಆಗಮಿಸಲು ಡಾ.ಬಿ.ಎಂ.ನಾಗಭೂಷಣ್ ರವರು ಬಹಿರಂಗ ಮನವಿ ಮಾಡಿದ್ದಾರೆ.

ಯಾರಾದರೂ ಕೃಷಿ ಆಶ್ರಮಗಳ ಆಂದೋಲನದಲ್ಲಿ ಭಾಗವಹಿಸಲು ಇಚ್ಚಿಸಿದಲ್ಲಿ, ಮುಕ್ತ ಅವಕಾಶವಿದೆ. ಕಡ್ಡಾಯವಾಗಿ ಸಾವಯವ ಕೃಷಿ, ಸಾವಯವ ತಾರಸಿ ಕೃಷಿ, ಸಾವಯವ ಹಿತ್ತಲ ಕೃಷಿ, ಸಾವಯವ ಸಮುದಾಯ ಕೃಷಿ ಮಾಡುವುದು ಕಡ್ಡಾಯ. ಉಚಿತವಾಗಿ ತಮ್ಮ ಜ್ಞಾನದಾನ ಮಾಡುವವರಿಗೂ ಮುಕ್ತ ಅವಕಾಶವಿದೆ.