13th September 2025
Share

TUMAKURU:SHAKTHIPEETA FOUNDATION

ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ,  ಸುಮಾರು 6554 ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳು ಇವೆ, ಇವುಗಳ ಜೊತೆಗೆ ಕೃಷಿ ಆಶ್ರಮಗಳು ಕೈ ಜೋಡಿಸಿ, ಶ್ರಮಿಸುವುದು ಸೂಕ್ತವಾಗಿದೆ.

ಈ ಹಿನ್ನಲೆಯಲ್ಲಿ ದಿನಾಂಕ:05.08.2025 ರಂದು ಬೆಂಗಳೂರಿನ ಗ್ರೀನ್ ಪಾತ್‍ನಲ್ಲಿ, ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕೆಗಳ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ, ಕರ್ನಾಟಕದ ಔಷಧಿಗಳ ಸಂರಕ್ಷಣಾ ಪ್ರದೇಶ, ಸಸ್ಯ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಕೃಷಿ ಆಶ್ರಮಗಳು ಮತ್ತು ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು, ಹಕೀಮರು ಮತ್ತು ನಾಲೇಡ್ಜ್ ಬಲ್ ಪರ್ಸನ್ ಗಳನ್ನು ಸಲಹಾ ಸಮಿತಿಗೆ ಸೇರ್ಪಡೆ ಮಾಡಲು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ನಿರ್ಣಯವನ್ನು ಅರಣ್ಯ ಸಚಿವರ ಬಳಿ ಕಳುಹಿಸಲು ಆಗ್ರಹ ಮಾಡಲಾಗಿದೆ.