13th September 2025
Share

TUMAKURU:SHAKTHI PEETA FOUNDATION

 ಕೃಷಿ ಆಶ್ರಮಗಳ ಸಂಚಾಲಕತ್ವದಲ್ಲಿ, ವಿದ್ಯಾರ್ಥಿಗಳ ನೇತೃತ್ವದಲ್ಲಿ, ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆವರೆಗೂ, ರಾಜ್ಯದ ಲೋಕಸಭಾ, ರಾಜ್ಯಸಭಾ, ವಿಧಾನಸಭಾ,ವಿಧಾನಪರಿಷತ್ ಮತ್ತು ದೆಹಲಿ ಪ್ರತಿನಿಧಿಗಳ, ಅವರವರ ವ್ಯಾಪ್ತಿಯ ಕಾರ್ಯಕ್ರಮಗಳಿಗೆ ಪೂರಕವಾಗಿ, ಅವರವರ ಅಧ್ಯಕ್ಷತೆಯಲ್ಲಿ, ವಿಜ್ಞಾನ ಮತ್ತು ಸಂಶೋಧನೆಯ ಅರಿವು ಮೂಡಿಸುವ ಮಹತ್ವದ ಯೋಜನೆಗೆ ಚಾಲನೆ ನೀಡಲು, ಕರ್ನಾಟಕ ರಾಜ್ಯದ ಕೃಷಿ ಆಶ್ರಮಗಳ ನಿಯೋಗ,  ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್.ಎಸ್.ಬೋಸರಾಜ್ ರವರೊಂದಿಗೆ ಸಮಾಲೋಚನೆ ನಡೆಸಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ,  ಸುಮಾರು 6554 ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳು ಇವೆ, ಇವುಗಳ ಜೊತೆಗೆ ಕೃಷಿ ಆಶ್ರಮಗಳು ಕೈ ಜೋಡಿಸಿ, ಶ್ರಮಿಸುವುದು ಸೂಕ್ತವಾಗಿದೆ.

ಈ ಹಿನ್ನಲೆಯಲ್ಲಿ ನಿಯೋಗ ಹೋಗಲು ನಿರ್ಧರಿಸಲಾಗಿದೆ. ನಿಯೋಗದಲ್ಲಿ ಭಾಗವಹಿಸುವ ಕೃಷಿ ಆಶ್ರಮಗಳು ಡಾ.ಬಿ.ಎಂ.ನಾಗಭೂಷಣ್ ರವರನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.