TUMAKURU:SHAKTHI PEETA FOUNDATION
ಭೂಮಿಯ ಮೇಲೆ, ಅದರಲ್ಲೂ ಭಾರತ/ಕರ್ನಾಟಕ ರಾಜ್ಯದಲ್ಲಿ, ಹುಟ್ಟುವ ಪ್ರತಿಯೊಂದು ಪ್ರಭೇಧಗಳ ಕಳೆ- ಬೆಳೆ ಉಪಯೋಗ/ಅನುಪಯೋಗ ಸಂಶೋಧನೆಗಳ ವೈಜ್ಞಾನಿಕ ‘ನಾಲೇಡ್ಜ್ ಬ್ಯಾಂಕ್/ ಮ್ಯೂಸಿಯಂ/ಸೆಂಟರ್ ಆಫ್ ಎಕ್ಸ್‍ಲೆನ್ಸ್ ಪ್ರಭೇಧಗಳು’ ಮಾಡಲು ಸಂಗ್ರಹಿಸ ಬೇಕಾದ ಮಾಹಿತಿಗಳು.
ಈ ಬಗ್ಗೆ ಮಾಹಿತಿ ಸಂಗ್ರಹಿಸುವವರ ಲಕ್ಷಾಂತರ ಮಂದಿ ಜ್ಞಾನಿಗಳು ಇರುತ್ತಾರೆ. ಅವರೆಲ್ಲರನ್ನೂ ವರಧಿಗಳ ಸಹಿತ ಒಂದೇ ವೇದಿಕೆಗೆ ತರುವ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ರಚಿಸುತ್ತಿರುವ ‘ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್’ ಮೂಲಕ ಅವರನ್ನು ಗುರುತಿಸಿ, ಗೌರವಿಸಿ, ಸನ್ಮಾನ ಮಾಡುವ ಪ್ರಯತ್ನವನ್ನು ಸರ್ಕಾರಗಳ ಜೊತೆಗೂಡಿ, ಕೃಷಿ ಆಶ್ರಮಗಳು ಮಾಡಲು ಚಿಂತನೆ ನಡೆಸುತ್ತಿವೆ.
ಅಧ್ಯಯನ ಸಂಶೋಧನೆ ಮಾಹಿತಿ ಸಂಗ್ರಹಿಸಲು ಅಗತ್ಯವಿರುವ ಅನುದಾವನ್ನು ಸರ್ಕಾರಗಳಿಂದ ಮಂಜೂರು ಮಾಡಿಸಿ ಕೊಡುವ ಕೆಲಸವನ್ನು ಮಾಡಲಾಗುವುದು.
ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ, ಬಯೋಡೈವರ್ಸಿಟಿ ಮ್ಯಾನೇಜ್ ಕಮಿಟಿಗಳು, ಆಯಾ ಪ್ರದೇಶದಲ್ಲಿರುವ ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು, ಹಕೀಮರು ಮತ್ತು ನಾಲೇಡ್ಜ್ ಬಲ್ ಪರ್ಸನ್‍ಗಳ ಸಹಾಯ ಪಡೆದು ಪಟ್ಟಿ ನೀಡುವುದು ಅಗತ್ಯವಾಗಿದೆ.
ಪ್ರಾಯೋಗಿಕವಾಗಿ 1008 ಪ್ರಭೇಧಗಳನ್ನು ಶಕ್ತಿಪೀಠ ಕ್ಯಾಂಪಸ್‍ನಲ್ಲಿ ಬೆಳೆಸುವ ಕೆಲಸ ಪ್ರಗತಿಯಲ್ಲಿದೆ.
1. ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿದ ಪ್ರಭೇಧಗಳ ಪಟ್ಟಿ.
2. ಕೃಷಿ ಇಲಾಖೆಯ ವ್ಯಾಪ್ತಿಗೆ ಸೇರಿದ ಪ್ರಭೇಧಗಳ ಪಟ್ಟಿ.
3. ತೋಟಗಾರಿಕಾ ಇಲಾಖೆಯ ವ್ಯಾಪ್ತಿಗೆ ಸೇರಿದ ಪ್ರಭೇಧಗಳ ಪಟ್ಟಿ.
4. ಆಯುಷ್ ಇಲಾಖೆಯ ವ್ಯಾಪ್ತಿಗೆ ಸೇರಿದ ಪ್ರಭೇಧಗಳ ಪಟ್ಟಿ.
5. ಪಶು ಸಂಗೋಪನಾ ಇಲಾಖೆಯವರಿಂದ ಮೇವು ಪ್ರಭೇಧಗಳ ಪಟ್ಟಿ.
6. ಯಾವುದೇ ಇಲಾಖೆಯ ವ್ಯಾಪ್ತಿಗೆ ಸೇರದ ಪ್ರಭೇಧಗಳ ಪಟ್ಟಿ.
7. ದೇವರ ಹೆಸರಿನಲ್ಲಿ ಪೂಜಿಸುವ ಧಾರ್ಮಿಕ ಗಿಡಗಳ/ವನಗಳ ಅಧಿಕೃತ ಮಾಹಿತಿ.
8. ಯಾವ ದಿಕ್ಕಿನಲ್ಲಿ ಯಾವ ಪ್ರಭೇಧಗಳ ಗಿಡಹಾಕಬೇಕು ಎಂಬ ಅಧಿಕೃತ ಮಾಹಿತಿ.
9. ಯಾವ ಧರ್ಮದ, ಯಾವ ಜಾತಿ, ಉಪಜಾತಿಯವರು ಯಾವ ಪ್ರಭೇಧಗಳ ಗಿಡ ಪೂಜಿಸುತ್ತಾರೆ ಎಂಬ ಅಧಿಕೃತ ಮಾಹಿತಿ.
10. ಮುಜರಾಯಿ ಇಲಾಖೆಯವರಿಂದ ಪೂಜಿಸುವ ಧಾರ್ಮಿಕ ಪ್ರಭೇಧಗಳ ಪಟ್ಟಿ.
11. ಹಜ್ ಮತ್ತು ವಕ್ಟ್ ಇಲಾಖೆಯವರಿಂದ ಪೂಜಿಸುವ ಧಾರ್ಮಿಕ ಪ್ರಭೇಧಗಳ ಪಟ್ಟಿ.
12. ಹಿಂದುಳಿದ ವರ್ಗದ ಇಲಾಖೆಯವರಿಂದ, ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಜನರ ಜಾತಿ ಗಣತಿ ಆಧಾರದಲ್ಲಿ, ಪ್ರತಿಯೊಂದು ಧರ್ಮ/ಜಾತಿ/ಉಪಜಾತಿಯವರು ಪೂಜಿಸುವ ಧಾರ್ಮಿಕ ಪ್ರಭೇಧಗಳ ಪಟ್ಟಿ.
13. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಧಾರ್ಮಿಕ ಪ್ರಭೇಧಗಳು ವಿಜ್ಞಾನ/ಮೌಢ್ಯ/ನಂಬಿಕೆ/ಇತಿಹಾಸ/ಪುರಾಣ ಅಥವಾ ಬೇರೆ ಯಾವ ರೀತಿ ವ್ಯಾಖ್ಯಾನ ಮಾಡಲಾಗುತ್ತಿದೆ ಎಂಬ ಮಾಹಿತಿ.
14. ಅಳಿವಿನಂಚಿನಲ್ಲಿರುವ ಪ್ರಭೇದಗಳ ಪಟ್ಟಿ.
15. ದೇಸಿಯ ಪ್ರಭೇಧಗಳ ಪಟ್ಟಿ.
16. ಬೇರೆ ದೇಶಗಳಿಂದ ಆಮದಾಗಿರುವ ಪ್ರಭೇಧಗಳವಾರು/ದೇಶವಾರು ಪ್ರಭೇಧಗಳ ಪಟ್ಟಿ.
17. ಇದೂವರೆಗೂ ಮೇಲ್ಕಂಡ ವಿಷಯಗಳ ಬಗ್ಗೆ, ಸಂಶೋಧನೆ/ಅಧ್ಯಯನ/ಡಾಕ್ಟರೇಟ್ ಮಾಡಿರುವವ ವಿಷಯವಾರು ಆಧಾರಿತ ಪಟ್ಟಿ.
18. ಅನುಭವದ ಆಧಾರದಲ್ಲಿ ಪ್ರಭೇಧಗಳ ಗುರುತಿಸಿರುವವರ ಪಟ್ಟಿ.
19. ಇದೂವರೆಗೂ ಪೇಟೆಂಟ್ ಮಾಡಿಕೊಂಡಿರುವ ಪ್ರಭೇದಗಳ ಪಟ್ಟಿ.
20. ಇದೂವರೆಗೂ ಜಿಐ ಮಾನ್ಯತೆ ಪಡೆದಿರುವ ಪ್ರಭೇದಗಳ ಪಟ್ಟಿ.
21. ಇದೂವರೆಗೂ ಜಿಐ ಮಾನ್ಯತೆ ಪಡೆಯಲು ಪ್ರಯತ್ನ ಮಾಡುತ್ತಿರುವÀ ಪ್ರಭೇದಗಳ ಪಟ್ಟಿ.
22. ಯಾವ ನರ್ಸರಿಯಲ್ಲಿ/ ಬೀಜಗಳ ಸಂಗ್ರಹದಾರರ ಬಳಿ ಯಾವ ಪ್ರಭೇದಗಳು ದೊರೆಯುತ್ತಿವೆ ಎಂಬ ಪಟ್ಟಿ.
23. ರೈತರಿಗೆ ಹೆಚ್ಚು ಆಧಾಯÀ ತರುವಂತಹ ಪ್ರಭೇಧಗಳ ಪಟ್ಟಿ.
24. ಹೆಚ್ಚು ಆಕ್ಸಿಜಿನ್ ಬಿಡುಗಡೆ ಮಾಡುವ ಪ್ರಭೇಧಗಳ ಪಟ್ಟಿ.
25. ಹೆಚ್ಚು ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುವ ಪ್ರಭೇಧಗಳ ಪಟ್ಟಿ.
26. ತಂಪು ನೀಡುವ ಪ್ರಭೇಧಗಳ ಪಟ್ಟಿ.
27. ವರ್ಷದ ಎಲ್ಲಾ ಕಾಲದಲ್ಲೂ ವಿವಿಧ ಫಲ ನೀಡುವ ಪ್ರಭೇಧಗಳ ಪಟ್ಟಿ.
28. ಪರಲಾವಂಭಿ ಪ್ರಭೇಧಗಳ ಪಟ್ಟಿ.
29. ನೆರಳಿನಲ್ಲಿ ಬೆಳೆಯುವ ಪ್ರಭೇಧಗಳ ಪಟ್ಟಿ.
30. ನೀರನ್ನು ಸಂಗ್ರಹ ಮಾಡುವ ಪ್ರಭೇಧಗಳ ಪಟ್ಟಿ.
31. ಮಣ್ಣಿನ ಸವಕಳಿ ಮಾಡದಂತೆ ತಡೆಯುವ ಪ್ರಭೇಧಗಳ ಪಟ್ಟಿ.
32. ಪ್ರಭೇಧವಾರು ಮೌಲ್ಯವರ್ಧಿತ ಉತ್ಪನ್ನಗಳ ಪಟ್ಟಿ.
33. ಪ್ರಭೇಧವಾರು ನೀರು ಬಳಕೆಯ ವಿಧಾನಗಳ ಮಾಹಿತಿ.
34. ನಾಲೇಡ್ಜ್ ಬ್ಯಾಂಕ್/ಮ್ಯೂಸಿಯಂ/ಸೆಂಟರ್ ಆಫ್ ಎಕ್ಸ್‍ಲೆನ್ಸ್ ಪ್ರಭೇಧಗಳು ಸ್ಥಾಪನೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು.
35. ಪ್ರಪಂಚದಲ್ಲಿ, ದೇಶದಲ್ಲಿ, ರಾಜ್ಯದಲ್ಲಿ, ಈ ಮಾದರಿಯ ನಾಲೇಡ್ಜ್ ಬ್ಯಾಂಕ್/ಮ್ಯೂಸಿಯಂ/ಸೆಂಟರ್ ಆಫ್ ಎಕ್ಸ್‍ಲೆನ್ಸ್ ಪ್ರಭೇಧಗಳು ಇದ್ದಲ್ಲಿ ಮಾಹಿತಿ ಸಂಗ್ರಹಿಸುವುದು.
36. ಪ್ರಭೇಧವಾರು ಔಷಧಿಗಳ ಮಾಹಿತಿ.
37. ಪ್ರಭೇಧವಾರು ಗೊಬ್ಬರ ನೀಡುವ ಮಾಹಿತಿ.
38. ಪ್ರಭೇಧವಾರು ಯಾವ ಕಡೆ ಬೆಳೆಯ ಬಹುದು ಎಂಬ ಮಾಹಿತಿ.