ಕೆಮಿಕಲ್ ಕೃಷಿಯನ್ನು ಬಿಟ್ಟು, ಸಾವಯವ/ಸಾಂಪ್ರಾದಾಯಕ ಕೃಷಿ ಮಾಡುವುದೇ ‘ಕೃಷಿ ಆಶ್ರಮದ ಪರಿಕಲ್ಪನೆ’, ಜೊತೆಗೆ ಹಲವಾರು ಆಯಾಮಗಳಿಂದ, ಕೇಂದ್ರ ಸರ್ಕಾರದ ‘ನೀತಿ ಆಯೋಗ’ದ ಸಲಹೆಗಳಂತೆ ‘ಗುಡ್ ಗೌರ್ವನೆನ್ಸ್ ಇಂಡೆಕ್ಸ್’ ಆಧಾರದಲ್ಲಿ, 2047 ರ ವೇಳೆಗೆ ಕೃಷಿಕ್ಷೇತ್ರದಲ್ಲಿ ‘ನಂಬರ್ ಒನ್ ಸ್ಥಾನದಲ್ಲಿ, ಕರ್ನಾಟಕ ರಾಜ್ಯ ರಾರಾಜಿಸಲು’ ಪೂರಕವಾದ ಕಾರ್ಯಕ್ರಮಗಳ ಅನುಷ್ಠಾನದ ಕಾಲ ಮಿತಿ ನಿರ್ಧಿಷ್ಟ ಗುರಿ.
ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಮತ್ತು ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಹಾಗೂ ವಿವಿಧ ಇಲಾಖೆಗಳ ಯೋಜನೆಗಳ ಸದ್ಭಳಕೆಗೆ ಚಿಂತನೆ
1. ಕೃಷಿ ಆಶ್ರಮ: ಪಂಚಭೂತಗಳ ಸಂರಕ್ಷಣೆಯೊಂದಿಗೆ ಸಾವಯವ ಕೃಷಿ/ಕಾಡು ಕೃಷಿಯೊಂದಿಗೆ ಬಯೋಡೈವರ್ಸಿಟಿ ಸೃಷ್ಠಿ.
2. ಕೃಷಿ ಉಧ್ಯಮ: ಮೌಲ್ಯವರ್ಧನೆ, ಗ್ರಾಹಕರಿಗೆ ನೇರ ಸರಬರಾಜು, ದೇಶ ವಿದೇಶಿಗಳಿಗೆ ಮಾರಾಟ ವಹಿವಾಟು.
3. ಕೃಷಿ ಪ್ರವಾಸೋಧ್ಯಮ: ದೇಶ-ವಿದೇಶಗಳ ಜನರ ಆಕರ್ಷಣೆ, ಉಪನ್ಯಾಸ, ಕಾರ್ಯಾಗಾರ.
4. ಕೃಷಿ ಸ್ಟಾರ್ಟ್ ಅಫ್: ತಮ್ಮ ಕನಸುಗಳ ನನೆಸಿನ ಪರಿಕಲ್ಪನೆ
5. ಕೃಷಿ ನಾಲೇಡ್ಜ್ ಬ್ಯಾಂಕ್: ಸ್ವಾತಂತ್ರ್ಯ ಪೂರ್ವ, 1947 ರಿಂದ 2025 ರವರೆಗಿನ ಆರ್ ಅಂಡ್ ಡಿ ಫಿಸಿಕಲ್/ಡಿಜಿಟಲ್/ಹ್ಯೂಮನ್ ಲೈಬ್ರರಿ ಹಾಗೂ 2047 ರ ವರೆಗೆ ಕೈಗೊಳ್ಳಬೇಕಾದ ಸಂಶೋಧನೆಗಳ ಪಟ್ಟಿ.
ಒಂದು ಕೃಷಿ ಆಶ್ರಮದ ರೈತರ ಜೊತೆ, ಅವರು ಇಚ್ಚಿಸುವ, ಒಬ್ಬರು ಡಾಕ್ಟರೇಟ್ ಪಡೆದಿರುವವರು ಹಾಗೂ ಒಬ್ಬರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧಿಕಾರಿಗಳ ಹಾಗೂ ನೂರಾರು ನಾಲೆಡ್ಜ್‍ಬಲ್ ಪರ್ಸನ್ ಮತ್ತು ವಿದ್ಯಾರ್ಥಿಗಳ ‘ಜ್ಞಾನ ಸಹಭಾಗಿತ್ವ’ ಇರಲೇ ಬೇಕೆಂಬುದು ಕೃಷಿ ಆಶ್ರಮದ ಹರಿಕಾರರ ಆಲೋಚನೆಯಾಗಿದೆ.
ಮುಂದಿನ ಒಂದು ತಿಂಗಳೊಳಗಾಗಿ, 28-ಲೋಕಸಭಾ/14-ರಾಜ್ಯಸಭಾ/225-ವಿಧಾನ ಸಭಾ/ 75-ವಿಧಾನ ಪರಿಷತ್/ ಇಬ್ಬರು-ದೆಹಲಿ ಪ್ರತಿ ನಿಧಿ ಸೇರಿದಂತೆ, 344 ಜನರ ಕಾರ್ಯವ್ಯಾಪ್ತಿಯಲ್ಲಿ ಕನಿಷ್ಠ ಒಂದೊಂದು, ಕೃಷಿ ಆಶ್ರಮ ಸ್ಥಾಪನೆ ಮಾಡುವವರನ್ನು ಗುರುತಿಸಬೇಕು ಅಥವಾ ಕೃಷಿ ಆಶ್ರಮ ಮಾಡುವವರನ್ನು ಗುರುತಿಸಲು ಸಂಚಾಕಲರನ್ನು ನೇಮಕ ಮಾಡಲು ಕಾಲ ಮಿತಿ ನಿಗಧಿಗೊಳಿಸಿ ನಿರ್ಣಯಿಸಲಾಗಿದೆ.
ಈಗಾಗಲೇ ಕೃಷಿ ಆಶ್ರಮದ ವಾಟ್ಸ್ ಅಫ್ ಗುಂಪಿನಲ್ಲಿ ರೈತರು, ಸಂಶೋದಕರು, ಅಧಿಕಾರಿಗಳು, ಸೇರಿದಂತೆ 504 ಜನರು ಸೇರ್ಪಡೆಯಾಗಿದ್ದಾರೆ, 200 ಜನರು ಗೂಗಲ್ ಫಾರಂನಲ್ಲಿ ಕೃಷಿ ಆಶ್ರಮ ಆರಂಭಿಸಲು ಮುಂದೆ ಬಂದಿದ್ದಾರೆ. ಹಲವಾರು ಜನ ಈಗಾಗಲೇ ಯಶಸ್ವಿಯಾಗಿ ಕೃಷಿ ಆಶ್ರಮ ಗಳನ್ನು ನಡೆಸುತ್ತಿದ್ದಾರೆ. ಇವರೆಲ್ಲರ ಸಹಕಾರ ಶ್ರಮದಿಂದ ಗುರಿ ಮುಟ್ಟುವ ಆಲೋಚನೆ.
ಕರ್ನಾಟಕ ರಾಜ್ಯದ 31 ಜಿಲ್ಲೆ, 224 ವಿಧಾನಸಭಾ ಕ್ಷೇತ್ರವಾರು ಪಟ್ಟಿ ಸಿದ್ಧವಾಗುತ್ತಿದೆ. ಹೊಸದಾಗಿ ಕೃಷಿ ಆರಂಭಿಸುವವರಿಗೆ, ಕಾರ್ಪೋರೇಟ್ ಮಾದರಿಯಲ್ಲಿ, ಅನುಭವಿಗಳಿಂದ ಪಾರದರ್ಶಕವಾಗಿ ಅಗತ್ಯ ತರಬೇತಿ, ಮಾರ್ಗದರ್ಶನ, ಸಲಹೆಗಳನ್ನು ನೀಡಲು ಮಾರ್ಗಸೂಚಿ ಸಿದ್ಧವಾಗುತ್ತಿದೆ.
ಶೀಘ್ರದಲ್ಲಿ ವಸತಿಯೊಂದಿಗೆ, ರಾಜ್ಯ ಮಟ್ಟದ ಕಚೇರಿ/ತರಬೇತಿ, ಮ್ಯೂಸಿಯಂ ಮತ್ತು ಕ್ಯಾಂಪಸ್ ಆರಂಭವಾಗಲಿದೆ.ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ 344 ಕೃಷಿ ಆಶ್ರಮಗಳಲ್ಲೂ ಎಲ್ಲಾ ಸೇವೆ ದೊರೆಯಲಿದೆ. ನಂತರ ಗ್ರಾಮ/ಬಡಾವಣೆ ಮಟ್ಟದಿಂದ ವಿದೇಶಗಳವರೆಗೂ ವಿಸ್ತರಣೆಯಾಗಲಿದೆ.
ಮೇಲ್ಕಂಡ 5 ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಇರುವ ಕೃಷಿಕರು, ಡಾಕ್ಟರೇಟ್ ಪಡೆದಿರುವವರು ಮತ್ತು ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧಿಕಾರಿಗಳು, ಹೆಚ್ಚಿನ ಮಾಹಿತಿಗಾಗಿ ಕೆಳಕಂಡವರನ್ನು ಸಂಪರ್ಕಿಸ ಬಹುದು.
ಡಾ.ಬಿ.ಎಂ.ನಾಗಭೂಷಣ್ – 9916030272
ಮಾರುತಿ ರಾವ್ – 9945111097
ಸುಹೃತ್ ಉಜ್ಜನಿ – 8660946945