TUMAKURU:SHAKTHIPEETA FOUNDATION
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್.ಎಸ್.ಬೋಸರಾಜ್ ರವರೊಂದಿಗೆ ಸಮಾಲೋಚನೆ ನಡೆಸಿದಾಗ, ಅವರ ಸಲಹೆ ಮೇರೆಗೆ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಿ, ನಿರ್ದೇಶಕರೊಂದಿಗೆ ಸಮಾಲೋಚನೆ ನಡೆಸುವ ಸಂಭಂಧ ನಡೆದ ಪೂರ್ವಭಾವಿ ಸಭೆಯಲ್ಲಿ ವಾರ್ಷಿಕ, ಪಂಚವಾರ್ಷಿಕ, ಹೀಗೆ 2047 ರವರೆಗೆ ಕಾಲಮಿತಿ ನಿಗಧಿ ಹಾಕಿಕೊಂಡು ಕೈಗೊಳ್ಳಬೇಕಾದ ಯೋಜನೆಗಳ ಪಟ್ಟಿ ಅಂತಿಮಗೊಳಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ದಿನಾಂಕ:11.08.2025 ರಂದು ಬೆಂಗಳೂರಿನ ಮಲ್ಲೇಶ್ವರಂನ ಅರಣ್ಯ ಭವನದಲ್ಲಿರುವ ವನಲೋಕದಲ್ಲಿ ಡಾ.ಜಗನ್ನಾಥ್‍ರವರ ಅಧ್ಯಕ್ಷತೆಯಲ್ಲಿ ಮದ್ಯಾಹ್ನ 2 ಗಂಟೆಗೆ ಕೃಷಿ ಆಶ್ರಮಗಳ ಸಭೆ ನಡೆಯಿತು. ಈ ಸಭೆಯಲ್ಲಿ ನನ್ನ ಜೊತೆ ಡಾ.ಸಂತೋóಷ್, ಡಾ.ಪ್ರಭು, ಶ್ರೀವತ್ಸ, ಮಧುರನಾಥ್, ಸುಹೃತ್ ಇದ್ದರು.
2047 ರವರೆಗೆ ಕೈಗೊಳ್ಳಬೇಕಾದ ಎಲ್ಲಾ ಯೋಜನೆಗಳ ಬಗ್ಗೆ ವಿವರವಾದ ಸಮಾಲೋಚನೆ ನಡೆಯಿತು. ಸುಮಾರು 21 ವಿಷಯಗಳ 150 ಅಂಶಗಳ ಬಗ್ಗೆ ಚರ್ಚೆ ಮಾಡಲಾಗಿದೆ.
ದಿನಾಂಕ:14.08.2025 ರಂದು ಬೆಂಗಳೂರಿನ ಮಲ್ಲೇಶ್ವರಂನ ಅರಣ್ಯ ಭವನದಲ್ಲಿರುವ ವನಲೋಕದಲ್ಲಿ ಮದ್ಯಾಹ್ನ 2 ಗಂಟೆಗೆ ಕೃಷಿ ಆಶ್ರಮಗಳ ಸಭೆ ನಡೆಯಲಿದೆ. ಆಸಕ್ತ ಕೃಷಿ ಆಶ್ರಮಗಳು ಭಾಗವಹಿಸಿ ಸಭೆಗೆ ಭಾಗವಹಿಸಲು ಡಾ.ಬಿ.ಎಂ.ನಾಗಭೂಷಣ್ ರವರು ಮನವಿ ಮಾಡಿದ್ದಾರೆ.