TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಅಧ್ಯಕ್ಷರಾದ ಡಾ. ಮಹ್ಮದ್ ಷರೀಪ್ ರವರೊಂದಿಗೆ, ಅವರ ದೂರದೃಷ್ಠಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಅವರೊಬ್ಬ ಕಂಪನಿಯ ಸಿ.ಇ.ಓ ತರಹ ಕಾರ್ಯನಿರ್ವಹಿಸುತ್ತಿದ್ದಾರೆ, ಅಧಿಕಾರ ಪಡೆದ 2 ತಿಂಗಳು ನಾಲ್ಕು ದಿವಸವಾಗಿದೆ. 3 ತಿಂಗಳೊಳಗೆ ನನ್ನ ಅವಧಿಯಲ್ಲಿ ಏನೇನು ಮಾಡಬೇಕು ಎಂಬ ರೋಡ್ ಮ್ಯಾಪ್ ಸಿದ್ಧಪಡಿಸುತ್ತಿರುವುದಾಗಿ ವಿಷಯ ಹಂಚಿಕೊಂಡರು.
ನಾನು ಅವರೊಂದಿಗೆ ಮಾತನಾಡುತ್ತಾ, ‘ಪಶ್ಚಿಮಘಟ್ಟಗಳ ಮ್ಯೂಸಿಯಂ’ ಸ್ಥಾಪಿಸಲು ಸಲಹೆ ನೀಡಿದಾಗ, ಅವರು ನನ್ನ ಕೈಕುಲಕಿ ಹೇಳಿದ್ದು, ಅದು ಸಹ ಪಟ್ಟಿಯಲ್ಲಿದೆ ಎಂದಾಗ ನನಗೂ ಖುಷಿ ಆಯಿತು.
ಹಾಸನ, ಚಿಕ್ಕ ಮಗಳೂರು,ಉಡುಪಿ,ಶಿವಮೊಗ್ಗ, ಕೊಡಗು, ಬೆಳಗಾವಿ,ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು ಮತ್ತು ಚಾಮರಾಜನಗರ ಈ ಹತ್ತು ಜಿಲ್ಲೆಗಳು ಪಶ್ಚಿಮಘಟ್ಟಗ¼ ವ್ಯಾಪ್ತಿಗೆ ಬರಲಿವೆ. ಈ ವ್ಯಾಪ್ತಿಯ ಕೃಷಿ ಆಶ್ರಮಗಳ ಜ್ಞಾನಿಗಳ ಜೊತೆ ಸಮಾಲೋಚನೆ ನಡೆಸುವ ಸಂಬಂದ ಚರ್ಚೆ ಮಾಡಲಾಗಿದೆ.
ಪಶ್ಚಿಮಘಟ್ಟಗಳ ಬಗ್ಗೆ ಇದೂವರೆಗೂ ಅಧ್ಯಯನ ಮಾಡಿರುವ ಪ್ರತಿಯೊಂದು ಅಧ್ಯಯನ ವರದಿ ಸಂಗ್ರಹ ಮಾಡುವ ಜೊತೆಗೆ, ‘ಪಶ್ಚಿಮಘಟ್ಟಗಳ ನಾಲೇಡ್ಜ್ ಬ್ಯಾಂಕ್’ ಸ್ಥಾಪಿಸಲು ಸಮಾಲೋಚನೆ ನಡೆಸಲಾಗಿದೆ.