TUMAKURU:SHAKTHIPEETA FOUNDATION
ಕೃಷಿ ಆಶ್ರಮಗಳು ನೊಂದಾವಣೆಯಾಗಿಲ್ಲ, ಕಾರಣ ಒಂದು ಕುಟುಂಬ ಕೃಷಿ ಆಶ್ರಮ ಆರಂಭಿಸಲು ಅರ್ಹತೆ ಪಡೆದಿರುವುದರಿಂದ ನೊಂದಾವಣೆ ಅಗತ್ಯವಿಲ್ಲ. ರಾಜ್ಯ ಮಟ್ಟದಲ್ಲೂ ಯಾವುದೇ ಸಂಸ್ಥೆ ನೊಂದಾವಣೆ ಮಾಡದೇ ಇರುವುದರಿಂದ, ಕೃಷಿ ಆಶ್ರಮಗಳು ನಡೆಸುವ ಎಲ್ಲಾ ಕಾರ್ಯಕ್ರಮಗಳ, ಸಭೆಗ¼, ಅಧ್ಯಯನ ಪ್ರವಾಸಗಳ, ಸರ್ಕಾರಗಳೊಂದಿಗೆ ನಡೆಸುವ ವ್ಯವಹಾರಗಳ,ಸಂಪೂರ್ಣ ಲೆಕ್ಕ ಮತ್ತು ಡಿಜಿಟಲ್ ದಾಖಲೆಗಳನ್ನು ‘ವನಲೋಕ ಫೌಂಡೇಷನ್’ ಮೂಲಕ ನಡೆಸಲು ದಿನಾಂಕ:18.08.2025 ರಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಡಾ.ಜಗನ್ನಾಥ್ ರವರು ‘ಕೃಷಿ ಆಶ್ರಮಗಳ ರಾಜ್ಯ ಮಟ್ಟದ ಖರ್ಚು ವೆಚ್ಚ- ಡಿಜಿಟಲ್ ದಾಖಲೆ ಸಮಿತಿ’ ಯ ಅಧ್ಯಕ್ಷರಾಗಿರಲಿ, ಡಾ. ನಾಗಭೂಷಣ್ ರವರು ಸಿ.ಇ.ಓ ರವರಾಗಿರಲಿ, ಡಾ.ಸಂತೋಷ್ ರವರು ಖಜಾಂಚಿಯಾಗಿರಲಿ ಎಂಬುದು ಬಹುತೇಕ ಕೃಷಿ ಆಶ್ರಮಗಳ ಅಭಿಪ್ರಾಯವಾಗಿದೆ.
ಯಾರು ಯಾವುದೇ ರೀತಿಯ ಖರ್ಚುವೆಚ್ಚಗಳನ್ನು ಮಾಡಿದರೂ ದಾಖಲೆ ಇರಬೇಕು, ‘ತಿಪ್ಪೆಗೆ ಎಸೆದರೂ ಲೆಕ್ಕದಲ್ಲಿ ಎಸೆಯಿರಿ’ ಎಂದು ನಮ್ಮ ಪೂರ್ವಜರು ಗಾದೆಯಂತೆ ಹೇಳುತ್ತಾರೆ.
ಯಾವ ದಿನಾಂಕದಿಂದ ಆರಂಭಿಸಬೇಕು, ಇಲ್ಲಿಯವರೆಗೂ ಆಗಿರುವ ಎಲ್ಲಾ ಖರ್ಚುವೆಚ್ಚಗಳನ್ನು, ಯಾರ್ಯಾರು ಯಾವ್ಯಾವುದಕ್ಕೆ ಎಷ್ಟು ಭರಿಸಿರುತ್ತಾರೆ ಎಂಬ ಬಗ್ಗೆ ಒಂದು ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಬೇಕು. ಲೆಕ್ಕ ವiತ್ತು ಸಭೆ, ಕಾರ್ಯಕ್ರಮ, ಅಧ್ಯಯನ ವರದಿಗಳನ್ನು ಲಿಖಿತ ರೂಪದಲ್ಲಿ ನೀಡುವುದು ಸೂಕ್ತವಾಗಿದೆ.
ಪ್ರವಾಸ ಭತ್ಯೆ, ದಿನ ಭತ್ಯೆ, ಸಭೆ ಭತ್ಯೆ, ಪೋಟೋ, ವೀಡಿಯೋ, ಮಾದ್ಯಮಗಳ ವರಧಿ, ಇತ್ಯಾದಿ ನಿರ್ಧಿಷ್ಟ ಮೊತ್ತವನ್ನು ನಿಗಧಿ ಮಾಡಲಾಗುವುದು. ರಾಜ್ಯಮಟ್ಟದ ಸಭೆ, ವಿವಿಧ ಉಪಸಮಿತಿಗಳ ಸಭೆ ಆಯೋಜಿಸುವ ಮುನ್ನ ‘ರಾಜ್ಯ ಮಟ್ಟದ ಕೃಷಿ ಆಶ್ರಮಗ¼ ಮಾನಿಟರಿಂಗ್ ಸೆಲ್‍ನಲ್ಲಿ ಅಫ್ ಲೋಡ್ ಮಾಡಿ, ಸಿ.ಇ.ಓ ರವರಿಂದ ಲಿಖಿತ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ’.
ಪ್ರತಿಯೊಬ್ಬರೂ ಮೂರು ಅಂಶಗಳನ್ನು ಗಮನದಲ್ಲಿ ಇಟ್ಟು ಕೊಳ್ಳಬೇಕು, 20 ರೂಪಾಯಿಯ ಚಾಪಾ ಕಾಗದದಲ್ಲಿ ವನಲೋಕಫೌಂಡೇಷನ್ ಜೊತೆ, ಎಂ.ಓ.ಯು ಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ.
1. ಉಚಿತ ಸೇವೆ ಮಾಡುವವರನ್ನು ಜ್ಞಾನದಾನಿಗಳೆಂದು ಘೋಶಿಸ ಬಹುದು.
2. ನಾವು ಈಗ ನಮ್ಮ ಹಣವನ್ನು ಖರ್ಚು ಮಾಡುತ್ತೇವೆ, ಹಣ ಬಂದಾಗ ನಮ್ಮ ಹಣವನ್ನು ಬಡ್ಡಿ ರಹಿತವಾಗಿ ನೀಡಿ ಅಥವಾ ಹಣ ಬರದೇ ಇದ್ದಲ್ಲಿ ದಾನ ಎಂದು ಪರಿಗಣಿಸಿ ಎಂಬುವವರನ್ನು ಹೂಡಿಕೆ ದಾನಿಗಳೆಂದು ಘೋಶಿಸ ಬಹುದು.
3. ನಾವು ಸೇವೆ ಮಾಡಿದ ಒಂದು ವಾರದೊಳಗೆ ಹಣ ನೀಡಿ ಎಂಬುವವರನ್ನು ಸಲಹಾಗಾರರೆಂದು ಘೋಶಿಸ ಬಹುದು.
‘1008 ಕೃಷಿ ಆಶ್ರಮ ವಾಟ್ಸ್ ಅಫ್ ಗ್ರೂಪ್’ ನಲ್ಲಿರುವ 506 ಜನ ಸದಸ್ಯರುಗಳು ಸೂಕ್ತ ಸಲಹೆ, ಅಭಿಪ್ರಾಯ ನೀಡಲು ಬಹಿರಂಗ ಮನವಿ ಮಾಡಲಾಗಿದೆ.