TUMAKURU:SHAKTHIPEETA FOUNDATION
ರಾಜ್ಯದ್ಯಾಂತ ರಚನೆಯಾಗುತ್ತಿರುವ ಕೃಷಿ ಆಶ್ರಮಗಳ ಪರಿಕಲ್ಪನೆಗಳಿಗೆ ಪೂರಕವಾಗಿ
1. ರೈತ
2. ರೈತೋಧ್ಯಮಿ.
3. ರೈತ ಸಂಶೋಧಕ
4. ರೈತ ವಿಜ್ಞಾನಿ
5. ರೈತ ಡಾಕ್ಟರೇಟ್
ಯಾವುದೇ ರೈತರೂ/ವಿವಿಧ ವರ್ಗದ ಜನರೂ ಆರಂಭಿಸುವ, ಕೃಷಿ ಆಶ್ರಮ ಆರಂಭದಿಂದ- ಬೆಸ್ಟ್ ಪ್ರಾಕ್ಟೀಸ್ ಆಗುವವರಿಗೂ, ನಿರಂತರವಾಗಿ ಮಾನಿಟರಿಂಗ್ ಮಾಡುವ, ಯಾವುದೇ ಸಮಸ್ಯೆ ಬಂದರೂ ಒಗ್ಗಟ್ಟಾಗಿ ಎದುರಿಸುವ, ಎಲ್ಲಾ ವಿಧವಾದ ಮಾರ್ಗದರ್ಶನವನ್ನು ಟ್ರಂಕಿ ಬೇಸಿಸ್ ಆಧಾರದಲ್ಲಿ ಪಾರದರ್ಶಕವಾಗಿ, ವೈಜ್ಞಾನಿಕವಾಗಿ, ಸಂಪನ್ಮೂಲ ವ್ಯಕ್ತಿಗಳಿಂದ ನೀಡುವ, ಸರ್ಕಾರಗಳ ಅನುಮೋದಿತ ಸರ್ಟಿಫಿಕೇಟ್ ನೊಂದಿಗೆ, ನೀಡುವ ಸಿಂಗಲ್ ವಿಂಡೋ ವ್ಯÀವಸ್ಥೆಯೊಂದಿಗೆ ವಿಶಿಷ್ಠ ‘ಕೃಷಿ ಗುರುಕುಲ’ ಪದ್ಧತಿಗೆ ‘ಸಿಲಬಸ್ ಮತ್ತು ಮಾರ್ಗದರ್ಶಿ ಸೂತ್ರ’ ಸಿದ್ಧಪಡಿಸಲು, ಡಾ,ನಾಗಭೂಷಣ್ ರವರ ನೇತೃತ್ವದಲ್ಲಿ ಸಲಹಾ ಸಮಿತಿಯನ್ನು ರಚಿಸಲು ದಿನಾಂಕ: 18.08.2025 ರಂದು ಬೆಂಗಳೂರಿನ ವನಲೋಕ ಫೌಂಡೇಷನ್‍ನಲ್ಲಿ ನಡೆದ ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಮಾಡಲಾಗಿದೆ.
ಆಸಕ್ತರು ಅವರೊಂದಿಗೆ ಸಮಾಲೋಚನೆ ನಡೆಸಬಹುದಾಗಿದೆ.
ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ಕನಿಷ್ಠ ಒಬ್ಬರಂತೆ, 31 ಜನರಿಗೆ ವಸತಿ ಸಹಿತ ಪ್ರಥಮ ‘ಕೃಷಿ ಗುರುಕುಲ’ ಆರಂಭಿಸುವವರನ್ನು ಮುಕ್ತವಾಗಿ ಆಹ್ವಾನಿಸಲಾಗಿದೆ. ಪ್ರಾಕ್ಟಿಕಲ್ ರಾಜ್ಯಾದ್ಯಾಂತ ರಚನೆಯಾಗುತ್ತಿರುವ ಕೃಷಿ ಆಶ್ರಮಗಳಲ್ಲಿ ನಡೆಯಲಿದೆ.
ವಯಸ್ಸಿನ ಮಿತಿ ಇಲ್ಲ, ವಿದ್ಯಾರ್ಹತೆ ಮಿತಿ ಇಲ್ಲ, ಬಡವ ಶ್ರೀಮಂತ ಬೇಧ ಭಾವವಿಲ್ಲ, ಲಿಂಗ ಭೇದವಿಲ್ಲ, ಕೃಷಿ ಆಶ್ರಮ ಆರಂಭಿಸುವ ಛಲ, ಬದ್ದತೆ, ಶಿಸ್ತು ಮಾನದಂಡವಾಗ ಬಹುದು.