23rd August 2025
Share

TUMAKURU:SHAKTHIPEETA FOUNDATION

ದಿನಾಂಕ:19.08.2025 ರಂದು ಬೆಳಿಗ್ಗೆ 11 ಗಂಟೆಗೆ ತುಮಕೂರಿನ ಶಕ್ತಿಭವನದಲ್ಲಿ ಕೃಷಿ ಆಶ್ರಮಗಳ  ತುರ್ತು ಸಭೆ ನಡೆಯಲಿದೆ. ಈ ಸಭೆಗೆ ಮಂಡ್ಯದಿಂದ ರಾಧಕೃಷ್ಣರವರು, ತಿಪಟೂರಿನಿಂದ ನವೀನ್‍ರವರು, ಮೈಸೂರಿನಿಂದ ಡಿ.ಎನ್.ಹರ್ಷರವರು ಭಾಗವಹಿಸಲಿದ್ದಾರೆ.

ಈ ಸಭೆಯನ್ನು ಆನ್ ಲೈನ್ ಮೂಲಕವೂ ನಡೆಸಲು ಡಾ.ನಾಗಭೂಷಣ್ ರವರು ಸಲಹೆ ನೀಡಿದ್ದಾರೆ, ಸುಹೃತ್‍ರವರು ಆನ್‍ಲೈನ್ ಸಭೆಯನ್ನು ಆಯೋಜಿಸಲಿದ್ದಾರೆ. ಆಸಕ್ತರು ಭಾಗವಹಿಸಲು ಈ ಮೂಲಕ ಕೋರಿದೆ.

ದಿನಾಂಕ:18.08.2025 ರಂದು ಬೆಂಗಳೂರಿನ ವನಲೋP ಫೌಂಡೇಷನ್‍ನಲ್ಲಿ ನಡೆದ ಸಭೆಯಲ್ಲಿನ ಸರ್ವಾನುಮತದ ನಿರ್ಣಯದಂತೆ, ಒಂದೊಂದು ವಿಷಯಗಳನ್ನು ಒಂದೊಂದು ಕೃಷಿ ಆಶ್ರಮಕ್ಕೆ ವಹಿಸಲಾಗಿದೆ. ಅವರು ಅವರಿಗೆ ಹತ್ತಿರವಿರುವ ಅವರ ಕುಟುಂದವರು ಸೇರಿದಂತೆ, ಕನಿಷ್ಠ 8 ಮಂದಿ ಆಸಕ್ತರನ್ನು ಸಲಹಾ ಸಮಿತಿಗೆ ಸೇರ್ಪಡೆ ಮಾಡಿಕೊಳ್ಳಲು ಮುಕ್ತ ಅವಕಾಶ ನೀಡಲು ಚಿಂತನೆ ನಡೆಸಲಾಗಿದೆ.

ಯಾವುದೇ ಕೃಷಿ ಆಶ್ರಮದವರು, ರಾಜ್ಯದ ಯಾವುದೇ ಸ್ಥಳದಲ್ಲಿ ಸಭೆ ನಡೆಸಿದರೂ ಡಾ.ನಾಗಭೂಷಣ್‍ರವರ ಮತ್ತು ಡಾ.ಜಗನ್ನಾಥ್‍ರವರ ಗಮನಕ್ಕೆ ತರುವುದು ಕಡ್ಡಾಯವಾಗಿದೆ. ರಾಜ್ಯದ ಕೃಷಿ ಆಶ್ರಮಗಳ ಮಾನಿಟರಿಂಗ್‍ಸೆಲ್ ತುಮಕೂರಿನ ಶಕ್ತಿಭವನದಲ್ಲಿ ಸ್ಥಾಪಿಸಲು ನಿರ್ಣಯ ಮಾಡಿರುವ ಹಿನ್ನಲೆಯಲ್ಲಿ ಶಕ್ತಿಭವನದ ಕಾರ್ಯಕಲಾಪಗಳನ್ನು ನಿರ್ವಹಣೆ ಮಾಡುತ್ತಿರುವ ಸುಹೃತ್ ರವರಿಗೆ ಮಾಹಿತಿ ಅಫ್‍ಲೋಡ್ ಮಾಡಬೇಕಾಗುತ್ತದೆ.