23rd August 2025
Share

TUMAKURU:SHAKTHIPEETA FOUNDATION

  ದಿನಾಂಕ:19.08.2025 ರಂದು  ಶಕ್ತಿಭವನದಲ್ಲಿ ಮಂಡ್ಯದ ರಾಧಾಕೃಷ್ಣ, ಮೈಸೂರಿನ ಹರ್ಷ, ತಿಪಟೂರಿನ ನವೀನ್, ಸುಹೃತ್ ಜೊತೆಗೆ ಹಲವಾರು ಮಂದಿ ಆನ್‍ಲೈನ್‍ನಲ್ಲಿ ಸಂಪರ್ಕ ಪಡೆದರುÀ.  ಸಭೆಯ ಪಲಿತಾಂಶ, ಇಂದು 21.08.2025 ನೇ ಗುರುವಾರ ಬೆಳಿಗ್ಗೆ 7.41 ರಿಂದ ಮಾದರಿ ಕೃಷಿ ಗುರುಕುಲ, ಕೃಷಿ ಗುರುಕುಲ ನಾಲೇಡ್ಜ್ ಬ್ಯಾಂಕ್, ಕೃಷಿ ಗುರುಕುಲ  ಮಾನಿಟರಿಂಗ್ ಸೆಲ್ , ಕೃಷಿ ಗುರುಕುಲ ಮ್ಯೂಸಿಯಂ, ಕರಡು ಸಿಲಬಸ್ ಪ್ರತಿಯನ್ನು ಕಾಲಮಿತಿ ಗಡುವಿನೊಳಗೆ, ಅಂದರೆ ಮುಂದಿನ 24 ಗಂಟೆಯಲ್ಲಿ, 48 ಗಂಟೆಯಲ್ಲಿ, 72 ಗಂಟೆಯಲ್ಲಿ, ಮುಗಿಯುವವರೆಗೂ ಬೇರೆ ಕಡೆ ಗಮನ ಹರಿಸದೇ ಇರಲು ಕಟ್ಟು ನಿಟ್ಟಿನ ಶಕ್ತಿಪೀಠ ಕಠೀಣ ವೃತ ‘ ಅರಂಭವಾಗಿದೆ.

ತುಮಕೂರಿನ ಶಕ್ತಿಭವನದಲ್ಲಿ ಕುಳಿತು ನನ್ನ ಎಲ್ಲಾ ಐಡಿಯಾಗಳನ್ನು, ಮೈಸೂರಿನಲ್ಲಿ ಕುಳಿತಿರುವ ಡಿ.ಎನ್.ಹರ್ಷರವರಿಗೆ ಡಿಜಿಟಲ್ ಮೂಲಕ ರವಾನಿಸುತ್ತಿದ್ದೇನ. ಹರ್ಷರವರ ಜ್ಞಾನವನ್ನೂ ಬಳಸಿಕೊಂಡು, ನನ್ನ ಪರಿಕಲ್ಪನೆಯ ಅಂಶಗಳ ಆಧಾರದ ಮೇಲೆ ಕರಡು ಪ್ರತಿ ಸಿದ್ಧಪಡಿಸಲು ಆರಂಭಿಸಿದ್ದಾರೆ.

   ನಾನು ನಿಮ್ಮ ಕಾಲಮಿತಿ ಗಡುವಿನೊಳಗೆ ಪೂರ್ಣಗೊಳಿಸುತ್ತೇನೆ, ಇಲ್ಲಿಯೇ ಕುಳಿತು ಟೈಪ್ ಮಾಡಿಕೊಂಡು, ನಿಮ್ಮ ಬಳಿ ಬರುತ್ತೇನೆ, ಅಂತಿಮಗೊಳಿಸಿ ನಿಮ್ಮ ಶಕ್ತಿಭವನದಿಂದ ಹೊರಬರುತ್ತೇನೆ ಎಂದಾಗ ನನಗೂ ಖುಷಿಯಾಗಿದೆ. ನಂತರ ಪ್ರವಾಸ, ಅಧ್ಯಯನ ವರಧಿಗಳ ಮಾಹಿತಿ ಸಂಗ್ರಹ, ಜ್ಞಾನಿಗಳ ಭೇಟಿ ಇರಲಿದೆ.

ದಿನಾಂಕ:20.08.2025 ರಂದು ಡಾ.ನಾಗಭೂಷಣ್,ಡಾ.ಜಗನ್ನಾಥ್, ಡಾ ರೂಪ ರವರೊಂದಿಗೆ ನಿವೃತ್ತ ಉಪಕುಲಪತಿಯವರಾದ  ವಿಷ್ಣುಕಾಂತ್ ಎಸ್ ಚಟ್‍ಪಲ್ಲಿ ರವರ ಬಳಿ ನಿಯೋಗ ಹೋಗಿ, ಅವರ ಧರ್ಮಪತ್ನಿಯವರ ಆತಿಥ್ಯದೊಂದಿಗೆ,  ಕೃಷಿ ಗುರುಕುಲದ ಬಗ್ಗೆ ಸಮಾಲೋಚನೆ ನಡೆಸಿದೆವು.

ನಾನು ನನ್ನ ಎಂದಿನ ಧಾಟಿಯಲ್ಲಿ ಮುಂದೆ ಬರಬಹುದಾದ ತೊಂದರೆಗಳ ಬಗ್ಗೆಯೇ ಮಾತನಾಡಿದೆ, ನಿಯೋಗದಲ್ಲಿ ಇರುವವರು ಏನಂದು ಕೊಂಡರೋ ಗೊತ್ತಿಲ್ಲ, ವಿಷ್ಣುಕಾಂತ್ ರವರು ನಾನು ಮನಸ್ಸಿನಲ್ಲಿ ಬಯಸಿದ ಉತ್ತರವನ್ನೇ ಕೊಟ್ಟಿದ್ದು ನಿಜಕ್ಕೂ ಸಮಾಧಾನವಾಯಿತು.

ಕೊನೆಗೆ ಅವರು ಹೇಳಿದ ಮಾತು ನಾನು ನಿಮ್ಮ ತಂಡದೊಂದಿಗೆ, ಒಂದು ದಿನ ಸಂಪೂರ್ಣ ಇರುತ್ತೇನೆ, ನಿಮ್ಮ ಎಲ್ಲರ ಅಭಿಪ್ರಾಯಗಳಿಗೂ, ನಾನು ನನ್ನ ಅಭಿಪ್ರಾಯಗಳನ್ನು ಮಂಡಿಸುತ್ತೇನೆ, ಎಂಬ ಮಾತು ಅರ್ಥಗರ್ಭಿತವಾಗಿತ್ತು.

ಅವರೊಂದಿಗೆ ಸಂವಾದ ನಡೆಸುವ ವೇಳೆಗೆ ಒಂದು ಕರಡು ಪ್ರತಿ ಇರಲೇ ಬೇಕು, ಎಂಬ ದೃಷ್ಟಿಯಿಂದ ನಾವು ವೃತ ಆರಂಭಿಸಿರುವ ಬಗ್ಗೆ, ಡಾ.ನಾಗಭೂಷಣ್ ರವರೊಂದಿಗೆ ವಿಷಯ ಹಂಚಿಕೊಂಡಾಗ, ಅವರು ಸಂಗ್ರಹ ಮಾಡಿರುವ ಎಲ್ಲರ ಅಭಿಪ್ರಾಯಗಳನ್ನು ಹರ್ಷರವರಿಗೆ ರವಾನಿಸುತ್ತೇನೆ ಎಂದಿದ್ದಾರೆ.

ಹರ್ಷರವರು ಶಕ್ತಿಭವನಕ್ಕೆ ಬರುವಾಗ ಕೃಷಿ ಗುರುಕುಲ ಆರಂಭಿಸಲು ಇಚ್ಚಿಸುವವರನ್ನು ಆಹ್ವಾನಿಸಿ, ಇಲ್ಲಿಯೇ ಎಲ್ಲರೂ ಸೇರಿ ಅಡುಗೆ ಮಾಡಿಕೊಂಡು, ಇಲ್ಲಿಯೇ ಮಲಗಿ, ಪೂರ್ಣಗೊಳಿಸಿ ಹೊರನಡೆಯುವ ದೃಢ ನಿರ್ಧಾರ ಮಾಡಲಾಗಿದೆ.

ಆದ್ದರಿಂದ ತಮ್ಮ ಕೃಷಿ ಗುರುಕುಲ ಜ್ಞಾನದಾನ ಮಾಡಲು ಬಹಿರಂಗ ಮನವಿ.ಹರ್ಷ ಬರುವಾಗ ತಮ್ಮನ್ನೂ ಡಿಜಿಟಲ್ ಮೂಲಕ ಆಹ್ವಾನಿಸಲಾಗುವುದು. ಬಟ್ಟೆ ಬರೆ, ಹೊದಿಕೆ ರೆಡಿ ಮಾಡಿಕೊಂಡಿರುವುದು ಒಳ್ಳೆಯದು.